Site icon Vistara News

Nissan One : ಎಲ್ಲ ಸೇವೆ ಒಂದೇ ಕಡೆ; ಹೊಸ ಡಿಜಿಟಲ್​​ ವೇದಿಕೆ ಆರಂಭಿಸಿದ ನಿಸ್ಸಾನ್​

Nissan Magnite

ಬೆಂಗಳೂರು: ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎನ್ಎಂಐಎಲ್) ತನ್ನ ಹೊಸ ವೆಬ್ ಪ್ಲಾಟ್ ಫಾರ್ಮ್ ನಿಸ್ಸಾನ್ ಒನ್ ಅನ್ನು ಬಿಡುಗಡೆ ಮಾಡಿದೆ. ಇದು ನಿಸ್ಸಾನ್ ಒನ್ ಡಿಜಿಟಲ್ ಪ್ಲಾಟ್ ಫಾರ್ಮ್ ಆಗಿದ್ದು, ಇದರ ಮೂಲಕ ಗ್ರಾಹಕರು ಆರಂಭಿಕ ವಿಚಾರಣೆ, ಟೆಸ್ಟ್ ಡ್ರೈವ್ ಬುಕಿಂಗ್, ಕಾರ್ ಆಯ್ಕೆ ಮತ್ತು ಬುಕಿಂಗ್, ಸರ್ವೀಸ್​​ ಸೇರಿದಂತೆ ಹಲವು ಸೇವೆಗಳನ್ನು ಪಡೆದುಕೊಳ್ಳಬಹುದು.

ಇದು ಕಂಪನಿಯ ಹೊಸ ಡಿಜಿಟಲ್​ ಪ್ಲಾಟ್ ಫಾರ್ಮ್ ಎಂದು ಕಂಪನಿ ತಿಳಿಸಿದೆ. ನಿಸ್ಸಾನ್ ಒನ್ ಮೂಲಕ ನಿಸ್ಸಾನ್ ಕಂಪನಿ ಆಟೋಮೋಟಿವ್ ಇಂಡಸ್ಟ್ರಿಯಲ್ಲಿ ಮಹತ್ವದ ಸಾಧನೆ ಮಾಡಿದಂತಾಗಿದೆ. ಗ್ರಾಹಕರ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸುಲಭವಾಗಿ ಬಳಸಬಹುದಾದ ವೇದಿಕೆ ಇದಾಗಿದೆ. ಇದು ಇತ್ತೀಚೆಗಷ್ಟೇ ಹೊಸ ಮ್ಯಾಗ್ನೈಟ್‌ ವೇರಿಯಂಟ್ ಬಿಡುಗಡೆ ಮಾಡಿದ ಬಳಿಕ ನಿಸ್ಸಾನ್ ನ ನೆಟ್‌ವರ್ಕ್ ವಿಸ್ತರಣೆ ಮತ್ತು ವ್ಯಾಪಾರ ಅಭಿವೃದ್ಧಿ ಯೋಜನೆಯ ಭಾಗವಾಗಿದೆ. ನಿಸ್ಸಾನ್ ಒನ್ ಆರಂಭವಾಗಿರುವುದರಿಂದ ಇನ್ನು ಮುಂದೆ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರು ವಿಭಿನ್ನ ವೆಬ್‌ಸೈಟ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಅವಶ್ಯಕತೆ ಇಲ್ಲ ಎಂದು ಕಂಪನಿ ಹೇಳಿದೆ.

ನಿಸ್ಸಾನ್ ಕಂಪನಿಯು ನಿಸ್ಸಾನ್ ಒನ್ ನ ಭಾಗವಾಗಿ ‘ರೆಫರ್ & ಅರ್ನ್’ ಎಂಬ ಪ್ಲಾನ್ ಪರಿಚಯಿಸಿದೆ. ಅದನ್ನು ಅಸ್ತಿತ್ವದಲ್ಲಿರುವ ನಿಸ್ಸಾನ್ ಗ್ರಾಹಕರಿಗೆ ವಿಶೇಷ ಪ್ರಯೋಜನ ಮತ್ತು ಬಹುಮಾನ ನೀಡಲು ಸಿದ್ದಪಡಿಸಲಾಗಿದೆ. ಹೊಸ “ರೆಫರ್ & ಅರ್ನ್” ಪ್ಲಾನ್ ಬಳಸಿ ಅಸ್ತಿತ್ವದಲ್ಲಿರುವ ಗ್ರಾಹಕರು ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ನಿಸ್ಸಾನ್ ಕಾರು ಖರೀದಿಸಲು ರೆಫರ್ ಮಾಡಬಹುದಾಗಿದೆ. ಆ ಮೂಲಕ ಬಹುಮಾನ ಪಡೆಯಬಹುದಾಗಿದೆ.

ಇದನ್ನೂ ಓದಿ : Tata Nexon EV : ಟಾಟಾ ನೆಕ್ಸಾನ್ ಇವಿ, ಟಿಯಾಗೊ ಇವಿ ಬೆಲೆಯಲ್ಲಿ ಲಕ್ಷಗಟ್ಟಲೆ ಇಳಿಕೆ

ಈ ಕುರಿತು ಮಾತನಾಡಿದ ನಿಸ್ಸಾನ್ ಮೋಟಾರ್ ಇಂಡಿಯಾದ ಮಾರ್ಕೆಟಿಂಗ್, ಪ್ರೊಡಕ್ಟ್ ಮತ್ತು ಕಸ್ಟಮರ್ ಎಕ್ಸ್ ಪೀರಿಯನ್ಸ್ ಡೈರೆಕ್ಟರ್ ಮೋಹನ್ ವಿಲ್ಸನ್, ” 100,000 ಮ್ಯಾಗ್ನೈಟ್ ಮಾರಾಟದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಗ್ರಾಹಕರು ನಮ್ಮ ಬ್ರ್ಯಾಂಡ್ ಅನ್ನು ಬಳಸುವ ವಿಧಾನವನ್ನು ಪರಿವರ್ತಿಸುವ ವೇದಿಕೆಯಾದ ನಿಸ್ಸಾನ್ ಒನ್ ಅನ್ನು ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದ್ದಾರೆ.

ನಿಸ್ಸಾನ್ ಮೋಟಾರ್ ಇಂಡಿಯಾ ಇತ್ತೀಚೆಗೆ ಚೆನ್ನೈನಲ್ಲಿರುವ ಅಲೈಯನ್ಸ್ ಸ್ಥಾವರದಿಂದ (RNAIPL) ಭಾರತೀಯ ಮಾರುಕಟ್ಟೆಗೆ 100,000ನೇ ಮ್ಯಾಗ್ನೈಟ್ ಕಾರನ್ನು ಯಶಸ್ವಿಯಾಗಿ ಡೆಲಿವರಿ ಮಾಡಿದೆ. ಈ ಸಾಧನೆಯು ಉತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಿಸುವ ಕಂಪನಿಯ ಬದ್ಧತೆಗೆ ಸಾಕ್ಷಿಯಾಗಿದೆ.

Exit mobile version