Site icon Vistara News

EV Scooters : ಓಲಾ ಎಸ್ 1 ಪ್ರೊ ಜೆನ್ 2 ಸ್ಕೂಟರ್ ಬಿಡುಗಡೆ

Ola Scooter

ನವ ದೆಹಲಿ: ಓಲಾ ಎಲೆಕ್ಟ್ರಿಕ್ ಹೊಸ ಸುದ್ದಿಯೊಂದನ್ನು ಕೊಟ್ಟಿದೆ. ಅದೇನೆಂದರೆ ಹೊಸ ಎಂಟ್ರಿ ಲೆವೆಲ್ ಉತ್ಪನ್ನವಾದ ಎಸ್ 1 ಎಕ್ಸ್ ಬಿಡುಗಡೆ. ಇದಲ್ಲದೆ, ಇದು ಎರಡನೇ ತಲೆಮಾರಿನ ಎಸ್ 1 ಪ್ರೊ ಅನ್ನು ಸಹ ಹೊರತಂದಿದೆ, ಇದರ ಬೆಲೆ 1.48 ಲಕ್ಷ ರೂ. ಎರಡನೇ ತಲೆಮಾರಿನ ಎಸ್ 1 ಪ್ರೊ ಅನ್ನು ಹೊಸ ಎಸ್ 1 ಎಕ್ಸ್ ಮತ್ತು ಎಸ್ 1 ಏರ್ ಆಧಾರಿತ ಅದೇ ಜೆನ್ 2 ಪ್ಲಾಟ್ ಫಾರ್ಮ್​ನಲ್ಲಿ ನಿರ್ಮಿಸಲಾಗಿದೆ.

ಹೊಸ ಪ್ಲಾಟ್ ಫಾರ್ಮ್​​ನಲ್ಲಿ ನಿರ್ಮಿಸಲಾಗುತ್ತಿರುವುದರಿಂದ, ಕಂಪನಿಯು ತನ್ನ ಚೊಚ್ಚಲ ಉತ್ಪನ್ನಕ್ಕಿಂತ ಹಲವಾರು ಸುಧಾರಣೆಗಳನ್ನು ನೀಡಿದೆ ಎಂದು ಹೇಳುತ್ತದೆ. ಮೋಟರ್ ಬದಲಾವಣೆಯ ಇದರಲ್ಲಿ ಪ್ರಮುಖವಾದದ್ದು. ಇದು ಈ ಹಿಂದೆ 5.5 ಕಿಲೋವ್ಯಾಟ್ ನಿರಂತರ ಮತ್ತು 8.5 ಕಿಲೋವ್ಯಾಟ್ ಗರಿಷ್ಠ ಔಟ್​ಪುಟ್​ ನೀಡುತ್ತಿತ್ತು. ಹೊಸ ಮೋಟಾರ್​ 5 ಕಿಲೋವ್ಯಾಟ್ ನಿರಂತರ ಮತ್ತು 11 ಕಿಲೋವ್ಯಾಟ್ ಗರಿಷ್ಠ ಔಟ್​ಪುಟ್​ ನೀಡುತ್ತದೆ. ಇದರ ಪರಿಣಾಮವಾಗಿ, ಟಾಪ್ ಸ್ಪೀಡ್ 116 ಕಿ.ಮೀ ನಿಂದ 120 ಕಿ.ಮೀ ಗೆ ಏರಿದೆ. 0-40 ಕಿ.ಮೀ ವೇಗ ಪಡೆಯುವ ಸಮಯವು 2.9 ಸೆಕೆಂಡುಗಳಿಂದ 2.6 ಸೆಕೆಂಡುಗಳಿಗೆ ಇಳಿದಿದೆ.

ಓಲಾ ಎಸ್ 1 ಪ್ರೊ ಜೆನ್ 2 ಶ್ರೇಣಿ

ಬ್ಯಾಟರಿ ಸಾಮರ್ಥ್ಯವು ಒಂದೇ ಆಗಿದ್ದರೂ, 4 ಕಿಲೋವ್ಯಾಟ್​​ನ ಓಲಾ ಬ್ಯಾಟರಿ ಪ್ಯಾಕ್ ಮತ್ತು ದಕ್ಷತೆಯಲ್ಲಿ ಸುಧಾರಣೆಗಳನ್ನು ಮಾಡಿದೆ ಎಂದು ಹೇಳಲಾಗಿದೆ ಇದರ ಪರಿಣಾಮವಾಗಿ, ರೇಂಜ್​ಗಳ ಅಂಕಿಗಳು ಸ್ವಲ್ಪ ಹೆಚ್ಚಳವನ್ನು ಕಂಡಿವೆ. ಪ್ರಮಾಣೀಕೃತ ರೇಂಜ್​ 181 ಕಿ.ಮೀ.ನಿಂದ 195 ಕಿ.ಮೀ.ಗೆ ಏರಿದೆ. ಇಕೋ ಮೋಡ್ ನಲ್ಲಿ ನೈಜ ವ್ಯಾಪ್ತಿಯು 170 ಕಿ.ಮೀ.ನಿಂದ 180 ಕಿ.ಮೀ.ಗೆ ಏರಿದೆ. ಆದಾಗ್ಯೂ, ಚಾರ್ಜಿಂಗ್ ಸಮಯವು ಒಂದೇ ಆಗಿರುತ್ತದೆ – 6.5 ಗಂಟೆಗಳಲ್ಲಿ 0-100 ಪ್ರತಿಶತ ಚಾರ್ಜ್​ ಆಗುತ್ತದೆ.

ಇದನ್ನೂ ಓದಿ : TVS Bike : ಸೆಪ್ಟೆಂಬರ್​ 5ಕ್ಕೆ ಲಾಂಚ್​ ಆಗಲಿದೆ ಟಿವಿಎಸ್​ನ ಹೊಸ ಬೈಕ್​, ಕುತೂಹಲ ಮೂಡಿಸಿ ಘೋಷಣೆ

ಓಲಾ ಎಸ್ 1 ಪ್ರೊ ಜೆನ್ 2

ಜೆನ್ 2 ಅಪ್​ಡೇಟ್​ನಲ್ಲಿ ಚಾಸಿಸ್ ಬದಲಾವಣೆ ಮಾಡಲಾಗಿದೆ. ಇದರಲ್ಲಿ ಸಿಂಗಲ್-ಸೈಡೆಡ್ ಫ್ರಂಟ್ ಸಸ್ಪೆಂಷನ್ ನಿಂದ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ ಅಪ್​ಡೇಟ್​ ಮಾಡಲಾಗಿದ . ಹೊಸ ಫ್ರೇಮ್ ಎಂದರೆ ಸ್ಪೈನ್​ ಸೆಕ್ಷನ್​ ವಿಭಾಗವು ಕಣ್ಮರೆಯಾಗಿದೆ. ಈಗ ಫ್ಲಾಟ್ ಫ್ಲೋರ್ ಬೋರ್ಡ್ ಅನ್ನು ನೀಡಲಾಗಿದೆ. ಜೊತೆಗೆ 121 ಕೆಜಿಯಿಂದ 116 ಕೆಜಿಗೆ ಸ್ವಲ್ಪ ತೂಕವನ್ನು ಕಡಿಮೆ ಮಾಡಲಾಗಿದೆ. ನಕಾರಾತ್ಮಕವೆಂದರೆ ಬೂಟ್ ಸ್ಪೇಸ್ 2 ಲೀಟರ್ ಗಳಷ್ಟು ಕುಸಿದಿದೆ. ಆದಾಗ್ಯೂ 34-ಲೀಟರ್ ಬೂಟ್ ಸ್ಪೇಸ್​ ಇನ್ನೂ ಉಳಿಸಲಾಗಿದೆ.

ಓಲಾ ಎಸ್ 1 ಪ್ರೊ ಜೆನ್ 2 ಬೆಲೆ, ವಿತರಣೆ

ಎರಡನೇ ತಲೆಮಾರಿನ ಎಸ್ 1 ಪ್ರೊ ಬೆಲೆ 1.48 ಲಕ್ಷ ರೂಪಾಯಿಗಳು. ಮೊದಲ ತಲೆಮಾರಿನ ಮೋಟಾರ್​ಗಿಂತ 8,000 ರೂ ಹೆಚ್ಚಳ. ಬುಕಿಂಗ್ ತೆರೆದಿದ್ದು ಸೆಪ್ಟೆಂಬರ್ ಮಧ್ಯದಿಂದ ವಿತರಣೆಗಳು ಪ್ರಾರಂಭವಾಗಲಿವೆ ಎಂದು ಓಲಾ ತಿಳಿಸಿದೆ.

Exit mobile version