Site icon Vistara News

EV Bike | ಶೀಘ್ರ ರಸ್ತೆಗೆ ಪ್ಯೂರ್ ಇವಿ ಕಂಪನಿಯ ಇಕೊಡ್ರಿಫ್ಟ್​ ಎಲೆಕ್ಟ್ರಿಕ್​ ಬೈಕ್​

EV bikes

ಬೆಂಗಳೂರು : ಬ್ಯಾಟರಿ ಚಾಲಿತ ದ್ವಿ ಚಕ್ರ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಕಂಪನಿಗಳ ಉತ್ಸಾಹವೂ ಹಿಗ್ಗುತ್ತಿದೆ. ಅಂತೆಯೇ ಹೈದರಾಬಾದ್ ಮೂಲದ ಸಂಸ್ಥೆ ಪ್ಯೂರ್​ ಇವಿ ಹೊಚ್ಚ ಹೊಸ ಎಲೆಕ್ಟ್ರಿಕ್​ ಬೈಕ್​ ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ. ಅದು ಒಂದು ಬಾರಿ ಚಾರ್ಜ್​ ಮಾಡಿದರೆ ಅದು 135 ಕಿಲೊ ಮೀಟರ್​ ಸಾಗುತ್ತದೆ ಎಂದು ಕಂಪನಿ ಹೇಳಿದೆ. ಬೈಕ್​ಗೆ ಇಕೊಡ್ರಿಫ್ಟ್​ ಎಂದು ಹೆಸರು ಇಡಲಾಗಿದ್ದು, 2023ರ ಜನವರಿ ಆರಂಭದಲ್ಲಿ ಮಾರುಕಟ್ಟೆಗೆ ಪರಿಚಯಗೊಳ್ಳಲಿದೆ. ಇದು ಸಂಪೂರ್ಣವಾಗಿ ಭಾರತದಲ್ಲೇ ತಯಾರದ ಬೈಕ್​ ಎಂದು ಹೇಳಲಾಗಿದೆ.

ಬೈಕ್​ನಲ್ಲಿ 3 ಕಿಲೋ ವ್ಯಾಟ್​​ನ ಬ್ಯಾಟರಿ ಇರಲಿದ್ದು, ಕಂಪನಿಯೇ ಬ್ಯಾಟರಿ ಪ್ಯಾಕ್​ ಅನ್ನು ತಯಾರಿಸಿದೆ. ಬೈಕ್ ಗರಿಷ್ಠ 75 ಕಿಲೋ ಮೀಟರ್​ ವೇಗದಲ್ಲಿ ಸಾಗಲಿದ್ದು ದೈನಂದಿನ ಪ್ರಯಾಣಕ್ಕೆ ಪೂರಕವಾಗಿ ನಿರ್ಮಾಣ ಮಾಡಲಾಗಿದೆ.

ಹೈದರಾಬಾದ್ ಮೂಲದ ಈ ಕಂಪನಿಯು ಭಾರತದಾದ್ಯಂತ 100 ಡೀಲರ್​ಶಿಪ್​ ಹೊಂದಿದೆ. ಈ ಶೋರೂಮ್​ಗಳಿಗೆ ತೆರಳಿ ಬೈಕ್​ನ ಟೆಸ್ಟ್​ ರೈಡ್ ಮಾಡಬಹುದು. ಅದೇ ರೀತಿ ಸೇಲ್​ ಹಾಗೂ ಆಫ್ಟರ್ ಸೇಲ್​ ಸೇವೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಯು ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ರೆಡ್​, ಬ್ಲಾಕ್​, ಗ್ರೇ ಮತ್ತು ಬ್ಲೂ ಬಣ್ಣದಲ್ಲಿ ಇಕೊಡ್ರಿಫ್ಟ್​ ಬೈಕ್​ಗಳು ಮಾರಾಟವಾಗಲಿವೆ.

ಪ್ಯೂರ್ ಇವಿ ಕಂಪನಿಯು ಅದಾಗಲೇ ಇಟ್ರಿಸ್ಟ್​ 350 ಎಂಬ ಬೈಕ್​ ಅನ್ನು ಮಾರುಕಟ್ಟೆಗೆ ಇಳಿಸಿದೆ. ಅದು ಗರಿಷ್ಠ 85 ಕಿಲೋ ಮೀಟರ್​ ವೇಗದಲ್ಲಿ ಸಾಗುತ್ತದೆ. ಇದರಲ್ಲಿ 3.5 ಕಿಲೋವ್ಯಾಟ್​ ಸಾಮರ್ಥ್ಯದ ಬ್ಯಾಟರಿಯಿದ್ದು, 6 ಗಂಟೆಗಳ ಅವಧಿಯಲ್ಲಿ ಪೂರ್ಣ ಚಾರ್ಜ್​ ಆಗುತ್ತದೆ. ಇದು 90 ಕಿಲೋಮೀಟರ್​ನಿಂದ 140 ಮೀಟರ್​ ದೂರಕ್ಕೆ ಸಾಗುತ್ತದೆ. ಇದರಲ್ಲಿ ಡ್ರೈವ್​, ಕ್ರಾಸ್ ಓವರ್​ ಮತ್ತು ಥ್ರಿಲ್​ ಎಂಬ ಮೂರು ರೈಡಿಂಗ್​ ಮೋಡ್​ಗಳಿವೆ.

ಇದನ್ನೂ ಓದಿ | MG Motor | ಭಾರತದಲ್ಲಿ ಅಗ್ಗದ ದರದ ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆಗೆ ಇಳಿಸುವ ಸೂಚನೆ ಕೊಟ್ಟ ಎಮ್‌ಜಿ ಮೋಟಾರ್‌

Exit mobile version