Site icon Vistara News

Rahul Gandhi : ರಾಹುಲ್ ಗಾಂಧಿಯ ಬಳಿಯಿದೆ ಕೆಟಿಎಂ 390 ಬೈಕ್​; ಅದರ ವಿಶೇಷತೆಗಳೇನು?

Rahul Gandhi

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇತ್ತೀಚೆಗೆ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್​​ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಾವು ಕೆಟಿಎಂ ಡ್ಯೂಕ್​ 390 ಬೈಕ್​ನ ಮಾಲೀಕ ಎಂಬುದಾಗಿ ಹೇಳಿಕೊಂಡಿದ್ದಾರೆ. ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ಬೈಕ್ ಮೆಕ್ಯಾನಿಕ್​ಗಳೊಂದಿಗೆ ಸಂಭಾಷಣೆ ನಡೆಸುವ ವಿಡಿಯೊದಲ್ಲಿ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ವೀಡಿಯೊದಲ್ಲಿ, ರಾಹುಲ್ ಗಾಂಧಿ ತಮ್ಮ ಬೈಕನ್ನು ಹೇಗೆ ಸರ್ವೀಸ್ ಮಾಡಬೇಕೆಂದು ಎಂಬುದನ್ನು ಕಲಿಯುತ್ತಾರೆ.

ಮೆಕ್ಯಾನಿಕ್ ಜೊತೆಗಿನ ಸಂಭಾಷಣೆಯ ಸಮಯದಲ್ಲಿ, ರಾಹುಲ್ ಗಾಂಧಿ ತಮ್ಮ ಬಳಿ ಕೆಟಿಎಂ ಡ್ಯೂಕ್​ 390 ಮೋಟಾರ್ ಸೈಕಲ್ ಇದೆ ಎಂದು ಹೇಳುತ್ತಾರೆ. ಆದಾಗ್ಯೂ, ಭದ್ರತಾ ಪ್ರೋಟೋಕಾಲ್​ಗಳ ಕಾರಣಕ್ಕೆ ಅದನ್ನು ಸವಾರಿಗಾಗಿ ಹೊರತೆಗೆಯಲು ಆಗುತ್ತಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ಅವರು ಕೆಟಿಎಂ ಆರ್ ಸಿ390 ಅಥವಾ ಕೆಟಿಎಂ 390 ಡ್ಯೂಕ್ ಅನ್ನು ಹೊಂದಿದ್ದಾರೆಯೇ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿಲ್ಲ. ನನ್ನ ಬಳಿ ಕೆಟಿಎಂ 390 ಇದೆ, ಆದರೆ ನನ್ನ ಭದ್ರತಾ ಸಿಬ್ಬಂದಿ ಅದನ್ನು ಬಳಸಲು ನನಗೆ ಅವಕಾಶ ನೀಡದ ಕಾರಣ ಅದು ಬಳಕೆಯಾಗದೆ ಉಳಿದಿದೆ ಎಂದಷ್ಟೇ ರಾಹುಲ್ ಗಾಂಧಿ ಹೇಳುತ್ತಾರೆ.

ಕೆಟಿಎಂ 390 ಡ್ಯೂಕ್ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರ ರೂ.2.97 ಲಕ್ಷ ರೂಪಾಯಿ. ಈ ಬೈಕ್ 373.27 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒಹೆಚ್​​ಸಿ ಎಂಜಿನ್ ಹೊಂದಿದೆ. ಇದು 9000 ಆರ್​ಪಿಎಂನಲ್ಲಿ 43 ಬಿಎಚ್​​ಪಿ ಪವರ್​ ಬಿಡುಗಡೆ ಮಾಡುತ್ತದೆ ಹಾಗೂ 37 ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6ಸ್ಪೀಡಿನ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಕೆಟಿಎಂ ಆರ್​ಸಿ 390 ಬೈಕ್​ ಕೂಡ ಅದೇ ಎಂಜಿನ್​ ಹೊಂದಿದ್ದು ಅಷ್ಟೇ ಪವರ್​ ಬಿಡಗುಡೆ ಮಾಡುತ್ತದೆ. ಇದು ಆರು ಸ್ಪೀಡ್​​ನ ಬಾಕ್ಸ್ ಹೊಂದಿದೆ.

ಇದನ್ನೂ ಓದಿ : Rahul Gandhi: ‘ಕೈ’ ಕೆಸರಾದರೆ ಬಾಯಿ ಮೊಸರು; ಗದ್ದೆಗೆ ಇಳಿದು, ಟ್ರ್ಯಾಕ್ಟರ್‌ ಓಡಿಸಿ, ನಾಟಿ ಮಾಡಿದ ರಾಹುಲ್‌ ಗಾಂಧಿ

ರಾಹುಲ್ ಗಾಂಧಿ ರಾಯಲ್ ಎನ್​ಫೀಲ್ಡ್​ ಬುಲೆಟ್ ಅನ್ನು ರಿಪೇರಿ ಮಾಡುವ ಮೆಕ್ಯಾನಿಕ್​ಗಳೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಅದರಲ್ಲಿ ಅವರು ಲೇಹ್-ಲಡಾಖ್​ಗೆ ಮೋಟಾರ್​ ಸೈಕಲ್​ನಲ್ಲಿ ಪ್ರಯಾಣಿಸುವ ಬಯಕೆ ವ್ಯಕ್ತಪಡಿಸಿದ್ದನ್ನು ಕಾಣಬಹುದು. ಹೋಂಡಾ ಮೋಟಾಸೈಕಲ್​ನ ಸರ್ವಿಸ್​ ಮಾಡುತ್ತಿದ್ದ ಇಬ್ಬರು ಮೆಕ್ಯಾನಿಕ್​ಗಳ ಜತೆ ರಾಹುಲ್​ ಗಾಂಧಿ ಮಾತನಾಡುತ್ತಿರುವುದನ್ನು ಕಾಣಬಹುದು.

Exit mobile version