ನವ ದೆಹಲಿ : ಟಾಟಾ ಸಮೂಹದ ಆಧಾರಸ್ತಂಭವಾಗಿರುವ ರತನ್ ಟಾಟಾ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ ಪೋಸ್ಟ್ ಒಂದನ್ನು ಹಾಕಿದ್ದರು. ಅದರಲ್ಲಿ ಅವರು 25 ವರ್ಷಗಳ ಹಿಂದೆ ತಾವು ಬಿಡುಗಡೆ ಮಾಡಿದ್ದ ವಿಶೇಷ ಕಾರಿನ ಚಿತ್ರವನ್ನು ಹಾಕಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟಿಗೆ ಜನಮನ ಸೆಳೆಯಿತು. ಯಾಕೆಂದರೆ ಅವರು ಹಾಕಿರುವ ಚಿತ್ರ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಟಾಟಾ ಇಂಡಿಕಾ.
ಟಾಟಾ ಮೋಟಾರ್ಸ್ನ ಇಂಡಿಕಾ ಕಾರು ಭಾರತೀಯ ಪ್ರಯಾಣಿಕ ವಾಹನಗಳ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಪ್ರಭಾವ ಸೃಷ್ಟಿಸಿತ್ತು. ದೇಶೀಯವಾಗಿ ನಿರ್ಮಾಣಗೊಂಡಿದ್ದ ಕಾರು ಟ್ಯಾಕ್ಸಿ ಚಾಲಕರು ಹಾಗೂ ವಾಣಿಜ್ಯ ವಾಹನಗಳ ಖರೀದಿದಾರರಿಗೆ ದೊಡ್ಡ ಅನುಕೂಲ ಮಾಡಿಕೊಟ್ಟಿತ್ತು. ಕಡಿಮೆ ಬೆಲೆಗೆ ದೊರೆಯುತ್ತಿದ್ದ ಈ ಕಾರು ಹಲವಾರು ಚಾಲಕರ ಕುಟುಂಬವನ್ನು ಪೊರೆದಿದೆ.
25 ವರ್ಷಗಳ ಹಿಂದೆ ಟಾಟಾ ಇಂಡಿಯಾ ಕಾರನ್ನು ಬಿಡುಗಡೆ ಮಾಡಲಾಗಿತ್ತು. ಅದು ದೇಶಿಯ ಕಾರು ಉತ್ಪಾದನಾ ಕ್ಷೇತ್ರದ ಜನುಮದಿನ. ಆ ದಿನ ನನ್ನ ಸ್ಮರಣೆಯಲ್ಲಿದೆ ಹಾಗೂ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ರತನ್ ಟಾಟಾ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ರತನ್ ಟಾಟಾ ಅವರ ಕಾರಿನ ಪಕ್ಕಲ್ಲಿ ನಿಂತಿದ್ದಾರೆ.
ರತನ್ ಟಾಟಾ ಅವರು ಪೋಟೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಅವರು 20 ಲಕ್ಷ ಲೈಕ್ಗಳನ್ನು ಕಂಡಿತ್ತು. ಅಲ್ಲದೆ, ನಾನಾ ರೀತಿಯ ಕಾಮೆಂಟ್ಗಳನ್ನೂ ಪಡೆದುಕೊಂಡಿತ್ತು.
ಇದನ್ನೂ ಓದಿ | Ratan Tata | ರತನ್ ಟಾಟಾ ಬಯೋಪಿಕ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುಧಾ ಕೊಂಗರಾ