ಬೆಂಗಳೂರು: ರಾಯಲ್ ಎನ್ಫೀಲ್ಡ್ (Royal Enfield) ಕಂಪನಿಯು ವಿಭಿನ್ನವಾದ ಎಲೆಕ್ಟ್ರಿಕ್ ಮೋಟಾರ್ಸೈಕಲ್ಗಳ ತಯಾರಿಗೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಚೆನ್ನೈನಲ್ಲಿರುವ ಉತ್ಪಾದನಾ ಘಟಕದಲ್ಲಿ ಈಗಾಗಲೇ ಉತ್ಪನ್ನ ಅಭಿವೃದ್ಧಿ ಆರಂಭಿಸಲಾಗಿದೆ. ಜತೆಗೆ ಪೂರೈಕೆದಾರ ವ್ಯವಸ್ಥೆಯನ್ನು ರಚಿಸಲು ಹೂಡಿಕೆಯನ್ನೂ ಆರಂಭಿಸಲಾಗಿದೆ ಎಂದು ಸಿಇಒ ಬಿ ಗೋವಿಂದರಾಜನ್ ಹೇಳಿದ್ದಾರೆ. ಐಷರ್ ಮೋಟಾರ್ಸ್ ಜತೆ ಇವಿ ಬೈಕ್ಗಳ ಉತ್ಪಾದನೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಂತೆಯೇ ವಿವಿಧ ಅಂಶಗಳನ್ನು ಕೇಂದ್ರೀಕರಿಸಿ 1,000 ಕೋಟಿ ರೂ.ಗಳ ಹೂಡಿಕೆಯನ್ನು ಘೋಷಿಸಲಾಗಿದೆ.
ಚೆನ್ನೈನ ಉತ್ಪಾದನಾ ಘಟಕದಲ್ಲಿ ಒಂದು ಭಾಗವನ್ನು ಎಲೆಕ್ಟ್ರಿಕ್ ಬೈಕ್ಗಳ ಉತ್ಪಾದನೆಗೆ ಬಳಸುವುದೇ ಕಂಪನಿಯ ಯೋಜನೆಯಾಗಿದೆ. ಇವಿ ಬೈಕ್ಗಳ ತಯಾರಿ ಯೋಜನೆಯಲ್ಲಿ ನಾವು ಸ್ಥಿರವಾದ ಪ್ರಗತಿ ಸಾಧಿಸುತ್ತಿದ್ದೇವೆ. ರಾಯಲ್ ಎನ್ಫೀಲ್ಡ್ ಇವಿ ಪ್ರಯಾಣವು ಈಗ ಟಾಪ್ ಗೇರ್ನಲ್ಲಿದೆ ಎಂದು ನಾನು ಹೇಳಬಲ್ಲೆ. ರಾಯಲ್ ಎನ್ಫೀಲ್ಡ್ ಡಿಎನ್ ಎ ಹೊಂದಿರುವ ವಿಶಿಷ್ಟ ಮೋಟಾರ್ ಸೈಕಲ್ ಗಳನ್ನು ರಚಿಸುವುದು ನಮ್ಮ ಉದ್ದೇಶ ಎಂದು ಗೋವಿಂದರಾಜನ್ ಹೇಳಿದ್ದಾರೆ.
ಕಂಪನಿಯು ಅತ್ಯಂತ ಸಮರ್ಥ ತಂಡವನ್ನು ನಿಯೋಜಿಸಿದೆ ಮತ್ತು ಉತ್ಪನ್ನ ಅಭಿವೃದ್ಧಿ, ಉತ್ಪನ್ನ ಕಾರ್ಯತಂತ್ರ ಮತ್ತು ಉತ್ಪನ್ನ ಪರೀಕ್ಷೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಬಹಳ ಆಳವಾದ ಹೂಡಿಕೆಗಳನ್ನು ಮಾಡಲು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
“ಪ್ರಸ್ತುತ, ನಾವು ಎಲೆಕ್ಟ್ರಿಕ್ ವಾಹನಗಳ ಮೇಲೆ ದೃಢವಾದ ದೀರ್ಘಕಾಲೀನ ಉತ್ಪನ್ನ ಮತ್ತು ತಂತ್ರಜ್ಞಾನ ಮಾರ್ಗಸೂಚಿಯನ್ನು ಹಾಕಿಕೊಂಡಿದ್ದೇವೆ. ಪೂರೈಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಾಗಿದೆ ಎಂಬುದಾಗಿ ಗೋವಿಂದರಾಜನ್ ಹೇಳಿದರು.
ಪ್ರಸ್ತುತ ಸಾಕಷ್ಟು ಮೂಲಮಾದರಿಗಳು ಮತ್ತು ಪರೀಕ್ಷೆಗಳು ನಡೆಯುತ್ತಿವೆ. ನಾವು ತುಂಬಾ ಬದ್ಧರಾಗಿದ್ದೇವೆ ಎಂದು ಗೋವಿಂದರಾಜನ್ ಹೇಳಿದರು.
ಇದನ್ನೂ ಓದಿ : Maruti Suzuki WagonR : ಮಾರುತಿ ಸುಜುಕಿ ವ್ಯಾಗನ್‌ಆರ್ 30 ಲಕ್ಷ ಸೇಲ್ಸ್ ದಾಖಲೆ
ಕಂಪನಿಯು ಅತ್ಯಂತ ಸಮರ್ಥ ತಂಡವನ್ನು ನಿಯೋಜಿಸಿದೆ ಮತ್ತು ಉತ್ಪನ್ನ ಅಭಿವೃದ್ಧಿ, ಉತ್ಪನ್ನ ಕಾರ್ಯತಂತ್ರ ಮತ್ತು ಉತ್ಪನ್ನ ಪರೀಕ್ಷೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಬಹಳ ಆಳವಾದ ಹೂಡಿಕೆಗಳನ್ನು ಮಾಡಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು.
ಯೋಜನೆಯ ಬಗ್ಗೆ ಮಾತನಾಡಿದ ಐಷರ್ ಮೋಟಾರ್ಸ್ ಸಿಇಒ ಸಿದ್ಧಾರ್ಥ ಲಾಲ್, 2023-24ರ ಹಣಕಾಸು ವರ್ಷದಲ್ಲಿ ರಾಯಲ್ ಎನ್ಫೀಲ್ಡ್ಗಾಗಿ 1,000 ಕೋಟಿ ರೂಪಾಯಿಗಳ ವೆಚ್ಚವನ್ನು ಮಂಡಳಿ ಅನುಮೋದಿಸಿದೆ ಎಂದು ಹೇಳಿದರು. ಕಂಪನಿಯು ಇವಿ ಉತ್ಪಾದನೆ, ಇವಿ ಉತ್ಪನ್ನ ಅಭಿವೃದ್ಧಿ ಮತ್ತು ನಮ್ಮ ಆಂತರಿಕ ದಹನ ಎಂಜಿನ್ ಪೋರ್ಟ್ಪೊಲಿಯೋಗೆ ಹೂಡಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ದೇಶೀಯ ಮಾರುಕಟ್ಟೆಯ ವ್ಯಾಪ್ತಿಯ ವಿಸ್ತರಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಂಪನಿಯು ಪ್ರಸ್ತುತ ಭಾರತದಾದ್ಯಂತ ಸುಮಾರು 2,100 ರಿಟೇಲ್ ಶೋರೂಮ್ಗಳನ್ನು ಹೊಂದಿದೆ. ಇರದಲ್ಲಿ ಸ್ಟುಡಿಯೋ ಮಳಿಗೆಗಳು ಮತ್ತು ಡೀಲರ್ಶಿಪ್ ಶೋರೂಮ್ಗಳು ಸೇರಿಕೊಂಡಿವೆ ಎಂದು ಗೋವಿಂದರಾಜನ್ ಹೇಳಿದರು.