ಬೆಂಗಳೂರು: ವೈಯಕ್ತಿಕ ಬಳಕೆಗೆ ಕಾರನ್ನು ಆಯ್ಕೆಮಾಡುವಾಗ ಗ್ರಾಹಕರ ಆದ್ಯತೆಗಳನ್ನು ಆರಿಯುವ ನಿಟ್ಟಿನಲ್ಲಿ ಇತ್ತೀಚೆಗೆ ಸ್ಕೋಡಾ ಆಟೋ ಇಂಡಿಯಾ ಸಮೀಕ್ಷೆಯೊಂದನ್ನು ಆಯೋಜಿಸಿತ್ತು. NIQ BASES ಸಂಸ್ಥೆ ಈ ಸಮೀಕ್ಷೆಯನ್ನು ನಿರ್ವಹಿಸಿತ್ತು. ಅದರ ಪ್ರಕಾರ ಭಾರತ 10ರಲ್ಲಿ 9 ಗ್ರಾಹಕರು ಎಲ್ಲಾ ಕಾರುಗಳು ಸುರಕ್ಷತಾ ರೇಟಿಂಗ್ ಅನ್ನು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕಾರಿನ ಸುರಕ್ಷತೆ ಕುರಿತ ಗ್ರಾಹಕರ ಒಲವು ಬಹಿರಂಗವಾಗಿದೆ. ಸಮೀಕ್ಷೆಯ ಪ್ರಕಾರ ಗ್ರಾಹಕರು ಗಮನಹರಿಸುವ ಪ್ರಮುಖ ಎರಡು ವೈಶಿಷ್ಟ್ಯಗಳೆಂದರೆ, ಕ್ರ್ಯಾಶ್-ರೇಟಿಂಗ್‌ಗಳು ಮತ್ತು ಕಾರು ಹೊಂದಿರುವ ಏರ್‌ಬ್ಯಾಗ್‌ಗಳ ಸಂಖ್ಯೆ. ಮೂರನೇ ಆಯ್ಕೆ ಕಾರಿನ ಮೈಲೇಜ್.
ಪ್ರತಿಕ್ರಿಯಿಸಿದವರಲ್ಲಿ ಸುಮಾರು 67% ರಷ್ಟು ಮಂದಿ ಪ್ರಸ್ತುತ ಕಾರು ಮಾಲೀಕರಾಗಿದ್ದು ಅವರು 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಕಾರನ್ನು ಹೊಂದಿದ್ದಾರೆ. ಸುಮಾರು 33% ಜನರು ಸ್ವಂತ ಕಾರನ್ನು ಹೊಂದಿಲ್ಲ, ಆದರೆ ಒಂದು ವರ್ಷದೊಳಗೆ 5 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕಾರನ್ನು ಖರೀದಿಸಲು ಉದ್ದೇಶಿಸಿದ್ದಾರೆ. 18 ರಿಂದ 54 ವರ್ಷ ವಯಸ್ಸಿನರ ನಡುವೆ ಸಮೀಕ್ಷೆಯನ್ನು ನಡೆಸಲಾಯಿತು, 80% ಪುರುಷರು ಮತ್ತು 20% ಮಹಿಳೆಯರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಕಾರಿನ ಕ್ರ್ಯಾಶ್ ರೇಟಿಂಗ್ ಆಯ್ಕೆ 22.3%ರಷ್ಟು ಅಂಕಗಳನ್ನು ಪಡೆದರೆ, ನಂತರ ಸ್ಥಾನದಲ್ಲಿ 21.6% ಸ್ಕೋರ್ನೊಂದಿಗೆ ಏರ್‌ಬ್ಯಾಗ್‌ಗಳ ಆಯ್ಕೆಗಳಿವೆ. ಕಾರು ಖರೀದಿಸುವಾಗ 15.0%ರಷ್ಟು ಪ್ರಾಮುಖ್ಯತೆಯನ್ನು ಮೈಲೇಜ್ಗೆ ನೀಡಲಾಗಿದೆ.
ಕ್ರ್ಯಾಶ್ ಟೆಸ್ಟಿಂಗ್ಗೆ ಆದ್ಯತೆ
5 ಸ್ಟಾರ್ ಕ್ರ್ಯಾಶ್ ರೇಟಿಂಗ್‌ಗೆ ಗರಿಷ್ಠ ಗ್ರಾಹಕ ಆದ್ಯತೆ ನೀಡಿದ್ದಾರೆ. 22.2% ಅಂಕಗಳು ಕ್ರ್ಯಾಶ್ ರೇಟಿಂಗ್‌ಗೆ ನೀಡಲಾಗಿದೆ. 4-ಸ್ಟಾರ್ ರೇಟಿಂಗ್‌ಗೆ 21.3% ಅಂಕಗಳು ದೊರೆತಿವೆ. ಶೂನ್ಯದ ಕ್ರ್ಯಾಶ್ ರೇಟಿಂಗ್ ಕೇವಲ 6.8% ಸ್ಕೋರ್ ಲಭಿಸಿದೆ. ಕ್ರ್ಯಾಶ್ ಟೆಸ್ಟ್‌ಗಳಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ಗಳ ಇರುವಿಕೆಯ ಬಗ್ಗೆ 76% ಮಂದಿಗೆ ಗೊತ್ತಿದೆ. ಭಾರತದ 30% ರಷ್ಟು ಗ್ರಾಹಕರು ಮಾತ್ರ ಮಕ್ಕಳ / ಹಿಂಬದಿ ಸಹಪ್ರಯಾಣಿಕರ ಸುರಕ್ಷತೆಯ ಬಗ್ಗೆ ಅರಿವು ಹೊಂದಿದ್ದಾರೆ.
ಸಮೀಕ್ಷೆ ಕುರಿತು ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ Petr Šolc ಅವರು ಮಾತನಾಡುತ್ತಾ ಸುರಕ್ಷತೆಯೆಂಬುದು ಸ್ಕೋಡಾ ಕಂಪನಿಯ ಡಿಎನ್‌ಎ ಆಗಿದೆ. ಸುರಕ್ಷಿತ ಕಾರುಗಳನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ . ಕ್ರ್ಯಾಶ್-ಟೆಸ್ಟ್‌ಗಳು ಮತ್ತು ಸುರಕ್ಷತೆ ವಿಚಾರದಲ್ಲಿ ನಾವು 50 ವರ್ಷಗಳ ಪರಂಪರೆಯನ್ನು ಹೊಂದಿದ್ದೇವೆ. 2008ರಿಂದ ಪ್ರತಿ ಸ್ಕೋಡಾ ಕಾರನ್ನು ಜಾಗತಿಕವಾಗಿ ಮತ್ತು ಭಾರತದಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಕ್ರ್ಯಾಶ್-ಟೆಸ್ಟ್ ಮಾಡಿಸಲಾಗಿದೆ. ಹೆಚ್ಚಿನ ಸುರಕ್ಷತಾ ರೇಟಿಂಗ್‌ಗಳನ್ನು ಹೊಂದಿರುವ ಮಾದರಿಗಳನ್ನು ಹೊಂದಿರುವ ಟಾಪ್-3 ಬ್ರ್ಯಾಂಡ್‌ಗಳಲ್ಲಿ ಸ್ಕೋಡಾ ಕೂಡ ಸ್ಥಾನ ಪಡೆದುಕೊಂಡಿದೆ. ಸ್ಕೋಡಾ ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಬ್ರ್ಯಾಂಡ್ ಅನ್ನು ಬೆಳೆಯಲು ನೆರವಾಗಿದೆ ಎಂದು ಹೇಳಿದರು.
NIQ BASES ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಅಮೃತಾ ಶ್ರೀವಾಸ್ತವ ಅವರು ಮಾತನಾಡುತ್ತಾ, ಆಯ್ಕೆ ವಿಧಾನದ ಆಧಾರದ ಮೇಲೆ NIQ BASES ಸೊಲ್ಯೂಷನ್ – FPO (ಫೀಚರ್ ಪ್ರೈಸ್ ಆಪ್ಟಿಮೈಸರ್) ಅನ್ನು ಬಳಸಿಕೊಂಡು ಮಾಡಿದ ಸಮೀಕ್ಷೆಯಲ್ಲಿ ಹೆಚ್ಚಿನ ಗ್ರಾಹಕರು ಸುರಕ್ಷತಾ ವೈಶಿಷ್ಟ್ಯವನ್ನು ಪ್ರಮುಖ ಅಂಶವಾಗಿ ತೆಗೆದುಕೊಂಡಿದ್ದಾರೆ. ಸಮೀಕ್ಷೆಯು ಭಾರತದಾದ್ಯಂತ 10 ರಾಜ್ಯಗಳಲ್ಲಿ 1,000 ಜನರನ್ನು ಒಳಗೊಂಡಿದೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ/ತೆಲಂಗಾಣ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ದೆಹಲಿ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಸಮೀಕ್ಷೆ ಮಾಡಲಾಗಿದೆ ಎಂದರು.
ಇದನ್ನೂ ಓದಿ : Harley-Davidson : ಐಷಾರಾಮಿ ಹಾರ್ಲೆ ಡೇವಿಡ್ಸನ್ ಬೈಕ್ ಕೇವಲ 2.29 ಲಕ್ಷ ರೂಪಾಯಿಗೆ ಭಾರತದಲ್ಲಿ ಬಿಡುಗಡೆ
ಗ್ಲೋಬಲ್ NCAP ಪ್ರಧಾನ ಕಾರ್ಯದರ್ಶಿ ಅಲೆಜಾಂಡ್ರೊ ಫುರಸ್ ಮಾತನಾಡಿ 2014ರಿಂದ ಗ್ಲೋಬಲ್ NCAP ಸುರಕ್ಷಿತ ಕಾರುಗಳಿಗಾಗಿ ಭಾರತದಲ್ಲಿ ಮಾರುಕಟ್ಟೆ ಬದಲಾವಣೆಯನ್ನು ಪ್ರೋತ್ಸಾಹಿಸುತ್ತಿದೆ. ಇತ್ತೀಚಿನ ಸಮೀಕ್ಷೆಯು ಗ್ರಾಹಕರು ಖರೀದಿಯ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸುರಕ್ಷತೆಯನ್ನು ಆದ್ಯತೆಯಾಗಿ ನೋಡುತ್ತಾರೆ ಎಂದು ತೋರಿಸುತ್ತದೆ. ಸುರಕ್ಷತೆಯು ಕಾರುಗಳನ್ನು ಮಾರಾಟ ಮಾಡುವುದರ ಮೂಲಕ ಜೀವ ಉಳಿಸುವ ಕಾರ್ಯಗಳು ನಡೆಯುತ್ತವೆ ಎಂದು ಹೇಳಿದ್ದಾರೆ.
ಗ್ರಾಹಕರ ಬೇಡಿಕೆಗಳೇನು?
ರೂಫ್ ಟಾಪ್, ವೆಂಟಿಲೇಟೆಡ್/ನಾನ್ ವೆಂಟಿಲೇಟೆಡ್ ಸೀಟ್‌ಗಳು, ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ, ಬಿಲ್ಡ್ ಕ್ವಾಲಿಟಿ, ಕ್ರ್ಯಾಶ್ ರೇಟಿಂಗ್, ಇಂಧನ x ಇಂಧನ ದಕ್ಷತೆ, ಸೇರಿದಂತೆ ಹಲವಾರು ಫೀಚರ್ಗಳನ್ನು ಗ್ರಾಹಕರು ಕೇಳುತ್ತಾರೆ ಮೇಲಿನ 10 ವೈಶಿಷ್ಟ್ಯಗಳಲ್ಲಿ, ಕ್ರ್ಯಾಶ್ ರೇಟಿಂಗ್, ಏರ್‌ಬ್ಯಾಗ್‌ಗಳ ಸಂಖ್ಯೆ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿಯನ್ನು ಸುರಕ್ಷತಾ ವೈಶಿಷ್ಟ್ಯಗಳಾಗಿ ಪರಿಗಣಿಸಲಾಗಿದೆ.