ನವ ದೆಹಲಿ : ಬ್ರೇಕ್ನಲ್ಲಿ ತಾಂತ್ರಿಕ ಸಮಸ್ಯೆ ಇದ್ದ ಕಾರನ್ನು ಮಾರಾಟ ಮಾಡಿದ್ದಲ್ಲದೆ, ದುರಸ್ತಿ ನೆಪದಲ್ಲಿ ಗ್ರಾಹಕರ ಸಮಯ ಮತ್ತು ಹಣ ವ್ಯರ್ಥವಾಗುವಂತೆ ಮಾಡಿದ ಬಿಎಂಡಬ್ಲ್ಯು ಕಾರು (BMW Car) ಕಂಪನಿಗೆ, ಪೂರ್ತಿ ಹಣವನ್ನು ಬಡ್ಡಿ ಸಮೇತ ವಾಪಸ್ ನೀಡುವಂತೆ ನವ ದೆಹಲಿಯ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ. ಇದರ ಜತೆಗೆ ಕಾನೂನು ಹೋರಾಟದ ವೆಚ್ಚ, ಬ್ಯಾಂಕ್ ಬಡ್ಡಿಯನ್ನೂ ವಾಪಸ್ ಮಾಡುವಂತೆ ಹೇಳಿದೆ.
ಕಾರು ಮಾಲೀಕ ಹಾಗೂ ಕಂಪನಿ ನಡುವೆ 2015ರಲ್ಲಿ ಆರಂಭಗೊಂಡಿದ್ದ ಕಾನೂನು ಸಮರಕ್ಕೆ ಇದೀಗ ಕೊನೆಯಾಗಿದ್ದು, ಮಾಲೀಕರು ಕಾರು ಖರೀದಿ ಮಾಡುವ ವೇಳೆ ನೀಡಿದ್ದ ಅಷ್ಟೂ ಮೊತ್ತವನ್ನು ವಾಪಸ್ ಪಡೆಯಲಿದ್ದಾರೆ.
ಬ್ರೇಕಿಂಗ್ ವ್ಯವಸ್ಥೆಯಲ್ಲಿನ ಸಮಸ್ಯೆ
ಪ್ರೀತಮ್ ಪಾಲ್ ಎಂಬುವರು 2015ರಲ್ಲಿ ಬಿಎಂಡಬ್ಲ್ಯು ಕಾರನ್ನು ಖರೀದಿ ಮಾಡಿದ್ದರು. ಕಾರು ಮನೆಗೆ ತಂದ ಸ್ವಲ್ಪ ದಿನದಲ್ಲೇ ಬ್ರೇಕ್ ಒತ್ತುವಾಗ ವಿಚಿತ್ರ ಸದ್ದು ಹೊರ ಬಂದಿತ್ತು. ಹೀಗಾಗಿ ಅವರು ಕಂಪನಿಗೆ ಮಾಹಿತಿ ನೀಡಿದ್ದರು. ಬಿಎಂಡಬ್ಲ್ಯು ಸಿಬ್ಬಂದಿ ಕಾರನ್ನು ಸರ್ವಿಸ್ ಸ್ಟೇಷನ್ನಲ್ಲಿ 10 ದಿನ ಇಟ್ಟುಕೊಂಡು ಸಮಸ್ಯೆ ಪರಿಹಾರವಾಗಿದೆ ಎಂದು ಹೇಳಿ ವಾಪಸ್ ಕೊಟ್ಟಿದ್ದರು. ಆದರೂ ಸದ್ದು ಕೊನೆಯಾಗಿರಲಿಲ್ಲ. ಈ ಮಾಹಿತಿಯನ್ನು ಅವರು ಈ ಮೇಲ್ ಮೂಲಕ ಕಂಪನಿಗೆ ತಿಳಿಸಿದ್ದಾರೆ. ಬಳಿಕ ದುರಸ್ತಿ ನೆಪದಲ್ಲಿ ಇನ್ನಷ್ಟು ದಿನ ಕಾರನ್ನು ಸರ್ವಿಸ್ ಸ್ಟೇಷನ್ನಲ್ಲಿ ಇಟ್ಟಿದ್ದರು. ಆದರೂ ವಿಚಿತ್ರ ಸದ್ದು ಕಡಿಮೆಯಾಗಿರಲಿಲ್ಲ.
ಸಮಸ್ಯೆ ಬಗೆಹರಿಯದ ಕಾರಣ ಬಿಎಂಡ್ಬ್ಲು ಅರ್&ಡಿ ತಂಡದ ಜತೆ ಜಂಟಿ ಟೆಸ್ಟ್ ರೈಡ್ ಮಾಡಲಾಗಿತ್ತು. ಈ ವೇಳೆ ಮುಂಬದಿಯ ಬ್ರೇಕ್ನ ಡಿಸ್ಕ್ನಲ್ಲಿ ಸಮಸ್ಯೆ ಇರುವುದು ಗೊತ್ತಾಗಿತ್ತು. ಮತ್ತೆ ಕಾರನ್ನು ತೆಗೆದುಕೊಂಡು ಹೋಗಿ ರಿಪೇರಿ ಮಾಡಲಾಗಿತ್ತು.
ಹಲವು ಪ್ರಯತ್ನಗಳ ಬಳಿಕವೂ ಸದ್ದು ಕಡಿಮೆಯಾಗದ ಕಾರಣ ಮತ್ತು ಬ್ರೇಕಿಂಗ್ ವ್ಯವಸ್ಥೆ ಸುಧಾರಣೆಯಾಗಿರಲಿಲ್ಲ. ಜತೆಗೆ ಬಿಎಂಡಬ್ಲ್ಯು ಕಾರು ಕಂಪನಿಯೂ ಪ್ರೀತಮ್ ಪಾಲ್ ಅವರು ಇಮೇಲ್ಗಳಿಗೆ ಪ್ರತಿಕ್ರಿಯೆ ಕೊಡದೇ ನಿರ್ಲಕ್ಷ್ಯ ಮಾಡಿದ್ದರು. ಏತನ್ಮಧ್ಯೆ, ಕಾರಿನ ಬ್ರೇಕ್ ಸಮಸ್ಯೆಯಿಂದ ಎರಡು ಟೈರ್ಗಳೂ ಸ್ಫೋಟಗೊಂಡಿದ್ದವು. ಬೇಸತ್ತ ಅವರು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಇದನನ್ನೂ ಓದಿ | HUD Display | ಹೊಸ ಕಾರುಗಳಲ್ಲಿರುವ ಎಚ್ಯುಡಿ ಡಿಸ್ಪ್ಲೆ ಎಂದರೇನು? ಇಲ್ಲಿದೆ ವಿವರಣೆ