ನವ ದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟರ್ ಶಿಖರ್ ಧವನ್ (Shikhar Dhawan) ಅವರಿಗೆ ಮುಂಬವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಂಡಕ್ಕೆ ಆಯ್ಕೆಯಾಗಿಲ್ಲ. ಆದಾಗ್ಯೂ ಅವರು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಕಾರೊಂದನ್ನು ಖರೀದಿಸಿ ಸಂಭ್ರಮಿಸುತ್ತಿದ್ದಾರೆ. ಹೈ ಎಂಡ್ ಕಾರುಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ಅವರ ಬಳಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿವೆ. ಅವರ ಐಷಾರಾಮಿ ಕಾರುಗಳ ಸಾರಿಗೆ ಇತ್ತೀಚಿನ ಸೇರ್ಪಡೆ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ. ತಮ್ಮ ಹೊಸ ಕಾರಿನ ಬಗ್ಗೆ ಇನ್‌ಸ್ಟಾಗ್ರಾಮ್ ರೀಲ್ ಮಾಡಿ ಹಂಚಿಕೊಂಡಿದ್ದಾರೆ ಅವರು. ಇದು ಇತ್ತೀಚಿನ ಪೀಳಿಗೆಯ ರೇಂಜ್ ರೋವರ್ ಆಟೋಬಯೋಗ್ರಫಿ ಕಾರಾಗಿದ್ದು. ಬಾಲಿವುಡ್ ನಟರು ಸೇರಿದಂತೆ ಸೆಲೆಬ್ರಿಟಿಗಳ ನೆಚ್ಚಿನ ಕಾರೆನಿಸಿದೆ.
ಧವನ್ ಅವರು ಖರೀದಿ ಮಾಡಿರುವ ರೇಂಜ್ ರೋವರ್ ಕಾರಿನ ವೇರಿಯೆಂಟ್ ಮತ್ತು ಅದರ ಬೆಲೆಯ ಬಗ್ಗೆ ಎಲ್ಲೂ ಮಾಹಿತಿ ಸಿಕ್ಕಿಲ್ಲ. ಆದರೆ, ರೇಂಜ್ ರೋವರ್ ಆಟೋಬಯೋಗ್ರಫಿಯ ಬೇಸ್ ವೇರಿಯೆಂಟ್ ಬೆಲೆಯು 3.5 ಕೋಟಿ ರೂಪಾಯಿ. ಟಾಪ್ ಎಂಡ್ ಕಾರಿನ ಬೆಲೆ 4 ಕೋಟಿ ರೂಪಾಯಿ.
ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಹಿಂದಿನ ಕಾರುಗಳಿಗೆ ಹೋಲಿಸಿದರೆ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಆಧುನಿಕ ನೋಟವನ್ನು ಕಾಣಸಿಗುತ್ತದೆ. ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು, ಎಲ್ಇಡಿ ಲೈಟ್‌ಗಳು ಮತ್ತು ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ. ಮರುವಿನ್ಯಾಸಗೊಳಿಸಿದ ಬಂಪರ್ ಪ್ರೀಮಿಯಂ ಸ್ಪರ್ಶವನ್ನು ನೀಡುತ್ತದೆ. ರೇಂಜ್ ರೋವರ್ ವೆಲಾರ್‌ನಲ್ಲಿ ಕಂಡುಬರುವ ಫ್ಲಶ್-ಫಿಟ್ಟಿಂಗ್ ವಿನ್ಯಾಸವಿದೆ. ಸುಧಾರಿತ ಡೋರ್ ಹ್ಯಾಂಡಲ್ ಗಳನ್ನು ಹೊಂದಿದ್ದರೂ ಎಸ್‌ಯುವಿ ತನ್ನ ಸೈಡ್ ಪ್ರೊಫೈಲ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಲಕ್ಸುರಿ ಕ್ಯಾಬಿನ್
ಹೊಸ ರೇಂಜ್ ರೋವರ್ ಕಾರಿನ ಇಂಟೀರಿಯರ್ ಸಂಪೂರ್ಣ ಬದಲಾಗಿದೆ. ಐಷಾರಾಮಿ ವಾತಾವರಣವನ್ನು ಕಾಪಾಡಿಕೊಳ್ಳುವ ಜತೆಗೆ ಇದುವರೆಗಿನ ವಿಶೇಷ ಫೀಚರ್‌ಗಳನ್ನು ಹೊಂದಿದೆ. ಇದು ಮೆರಿಡಿಯನ್‌ನಿಂದ 35 ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಚಕ್ರದ ಕಂಪನಗಳು, ಎಂಜಿನ್ ಶಬ್ದ, ಟೈರ್ ಶಬ್ದ, ರಸ್ತೆ ಶಬ್ದ ಮತ್ತು ಹಾಗೂ ಸುತ್ತಮುತ್ತಲಿನ ಶಬ್ದಗಳ ವಿರುದ್ಧ ತರಂಗದ ಧ್ವನಿಯನ್ನು ಬಿಡುವ ಮೂಲಕ ಪ್ರತಿರೋಧಿಸುತ್ತದೆ.
ಹೊಸ ರೇಂಜ್ ರೋವರ್ ಫ್ಲೋಟಿಂಗ್ ಟೈಪ್, ಆಲ್ ಡಿಜಿಟಲ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಬೃಹತ್ 13.1-ಇಂಚಿನ ಟಚ್‌ಸ್ಕ್ರೀನ್ ಪರದೆಯೊಂದಿಗೆ ಕಾರಿನ ಸಮಗ್ರ ವಾಹನ ಮಾಹಿತಿ ನೀಡುತ್ತದೆ. ಕಾರಿನಲ್ಲಿ ಹೆಡ್-ಅಪ್ ಡಿಸ್‌ಪ್ಲೆ , ಮಲ್ಟಿ-ಝೋನ್ ಕ್ಲೈಮೇಟ್ ಕಂಟ್ರೋಲ್, 4-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಹೊಂದಿದೆ.
ಇದನ್ನೂ ಓದಿ : IPL 2023: ಚಿರತೆಯಂತೆ ಜಿಗಿದು ಕ್ಯಾಚ್ ಪಡೆದ ಶಿಖರ್ ಧವನ್; ವಿಡಿಯೊ ವೈರಲ್
ಹೊಸ ರೇಂಜ್ ರೋವರ್ ಕಾರನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಪೆಟ್ರೋಲ್ ವೇರಿಯೆಂಟ್‌ಗಳು 4.4-ಲೀಟರ್ ಎಂಜಿನ್ ಹೊಂದಿದ್ದು 523 ಬಿಎಚ್‌ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಡೀಸೆಲ್ ವೇರಿಯೆಂಟ್‌ಗಳು 3.0-ಲೀಟರ್ ಎಂಜಿನ್ ಹೊಂದಿದ್ದು. 346 ಪಿಎಸ್ ಪವರ್ ಹಾಗೂ 700 ಎನ್ಎಂ ಟಾರ್ಕ್ ಬಿಡುಗಡೆ ಗೊಳಿಸುತ್ತದೆ.
ಧವನ್ ಬಳಿಯಿರುವ ಕಾರುಗಳು
ಧವನ್ ಮರ್ಸಿಡಿಸ್ ಬೆಂಝ್ ಜಿಎಲ್ ಕ್ಲಾಸ್ ಮತ್ತು ಬಿಎಂಡಬ್ಲ್ಯು ಎಂ8 ಕಾರುಗಳನ್ನು ಹೊಂದಿದ್ದಾರೆ. ಶಿಖರ್ ಧವನ್ ನಯವಾದ ಮೆಟಾಲಿಕ್ ಕಪ್ಪು ಬಣ್ಣವನ್ನು ಆರಿಸಿಕೊಂಡಿದ್ದಾರೆ. ಇದು ಕಾರಿಗೆ ಸೌಂದರ್ಯಕ್ಕೆ ಪೂರಕವಾಗಿದೆ. ಕೂಪ್ ಎಂ8 ಕೂಪ್ ವಿಭಿನ್ನ ವಿನ್ಯಾಸವನ್ನು ಹೊಂದಿದೆ, ಇದು ಅದರ ಎರಡು ಬಾಗಿಲುಗಳ ಕಾರಾಗಿದೆ. ಎಂ8 ಕೂಪ್ 20-ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಚಾವಣಿ ಸೇರಿದಂತೆ ಬಹುತೇಕ ಕಡೆ ಕಾರ್ಬನ್ ಪೈಬರ್ ಬಳಸಲಾಗಿದೆ.