Site icon Vistara News

Royal Enfield | ಸೂಪರ್‌ ಮೀಟಿಯೋರ್ 650 ಬೈಕ್‌ನ ಟೀಸರ್‌ ಬಿಡುಗಡೆ, ಡಿಸೆಂಬರ್‌ನಲ್ಲಿ ರಸ್ತೆಗಿಳಿಯುವ ಸೂಚನೆ

ನವ ದೆಹಲಿ: ರಾಯಲ್‌ ಎನ್‌ಫೀಲ್ಡ್‌ (Royal Enfield) ಮುಂದಿನ ದಿನಗಳಲ್ಲಿ ಆರು ಹೊಸ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಈ ಮೋಟಾರ್‌ಸೈಕಲ್‌ನ ಅಭಿಮಾನಿಗಳು ಖರೀದಿಗೆ ತುದಿಗಾಲಲ್ಲಿ ನಿಂತಿದ್ದರೆ. ಅದರಲ್ಲೊಂದು ಬೈಕ್‌ ಸೂಪರ್‌ ಮೀಟಿಯೋರ್‌ ೬೫೦. ಇದರ ಟೀಸರ್‌ ಅನ್ನು ಕಂಪನಿಯು ಬಿಡುಗಡೆ ಮಾಡಿದ್ದು, ಬೈಕ್‌ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ. ಬೈಕ್‌ನ ಪೂರ್ತಿ ವಿನ್ಯಾಸವನ್ನು ಅನಾವರಣ ಮಾಡದೇ ಕೇವಲ ಹಿಂಬದಿಯನ್ನು ಮಾತ್ರ ತೋರಿಸಲಾಗಿದೆ. ಈ ಬೈಕ್‌ನ ಸಂಪೂರ್ಣ ಮಾಹಿತಿ ನವೆಂಬರ್‌ ೮ರಿಂದ ನಡೆಯಲಿರುವ ಇಂಟರ್‌ನ್ಯಾಷನಲ್‌ ಮೋಟಾರ್‌ಸೈಕಲ್‌ ಆಂಡ್‌ ಆಕ್ಸೆಸರೀಸ್‌ ಎಕ್ಸಿಬಿಷನ್‌ನಲ್ಲಿ ಅನಾವರಣಗೊಳ್ಳಲಿದೆ.

ಸೂಪರ್‌ ಮೀಟಿಯೋರ್‌ ಕ್ರೂಸರ್‌ ಬೈಕ್‌ ಆಗಿದ್ದು, ಇಂಟರ್‌ಸೆಪ್ಟರ್‌ ೬೫೦ ಹಾಗೂ ಕಾಂಟಿನೆಂಟಲ್‌ ೬೫೦ ಬೈಕ್‌ಗಿಂತ ಮೇಲಿನ ಸ್ಥಾನದಲ್ಲಿ ನಿಲ್ಲಿಲಿದೆ. ರಾಯಲ್‌ ಎನ್‌ಫೀಲ್ಡ್‌ನ ೬೫೦ ಟ್ವಿನ್ಸ್‌ ಎಂಜಿನ್ ಅನ್ನು ಈ ಬೈಕ್‌ನಲ್ಲಿ ಬಳಸಿಕೊಂಡಿರುವುದು ಬಹುತೇಕ ಖಚಿತ. ಈ ಎಂಜಿನ್‌ ೬೪೮ ಸಿಸಿಯದ್ದಾಗಿದ್ದು, ಪ್ಯೂಯಲ್‌ ಇಂಜೆಕ್ಟೆಡ್‌ ೪ ಸ್ಟ್ರೋಕ್‌ ಪ್ಯಾರೆಲಲ್‌ ಟ್ವಿನ್‌ ಮೋಟಾರ್‌ ಹೊಂದಿದೆ. ಇದಲ್ಲಿ ಆಯಿಲ್‌ ಕೂಲ್ಡ್‌ ವ್ಯವಸ್ಥೆ ಇರಲಿದೆ. ಇದು ಗರಿಷ್ಠ ೪೭ ಎಚ್‌ಪಿ ಪವರ್‌ ಹಾಗೂ ೫೨ ಎನ್‌ಎಮ್‌ ಟಾರ್ಕ್ಯೂ ಬಿಡುಗಡೆ ಮಾಡಲಿದೆ. ೬ ಸ್ಪೀಡ್‌ನ ಗೇರ್‌ ಬಾಕ್ಸ್‌ ಹಾಗೂ ಸ್ಲಿಪ್‌ ಅಸಿಸ್ಟ್‌ ಕ್ಲಚ್‌ ಬಳಸಿಕೊಳ್ಳುವ ಸಾಧ್ಯತೆಗಳಿವೆ. ರಾಯಲ್‌ ಎನ್‌ಫೀಲ್ಡ್‌ನ ೬೫೦ ಎಂಜಿನ್‌ಗಳು ಈಗಾಗಲೇ ನಯವಾದ ಸವಾರಿ, ಗರಿಷ್ಠ ಪವರ್‌ ಹಾಗೂ ವೇಗ ವೃದ್ಧಿಯ ವಿಚಾರದಲ್ಲಿ ಖ್ಯಾತಿ ಗಳಿಸಿಕೊಂಡಿದೆ.

ಟೀಸರ್‌ನಲ್ಲಿ ಬಿಡುಗಡೆ ಮಾಡಿರುವ ಚಿತ್ರದ ಪ್ರಕಾರ ಹಿಂಬದಿಯಲ್ಲಿ ಎಲ್‌ಇಡಿ ಲೈಟ್‌ಗಳನ್ನು ಬಳಸಿಕೊಳ್ಳಲಾಗಿದೆ. ಮೀಟಿಯೋರ್‌ ೩೫೦ಯಲ್ಲಿ ಬಳಸಲಾಗಿರುವ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಹಾಗೂ ಇನ್ನಿತರ ಫೀಚರ್‌ಗಳನ್ನು ಈ ಬೈಕ್‌ನಲ್ಲಿ ಬಳಸಿಕೊಂಡಿರುವ ಸಾಧ್ಯತೆಗಳಿವೆ.

ಈ ಮೋಟಾರ್ ಸೈಕಲ್‌ನಲ್ಲಿ ಎಸ್‌ಜಿ ೬೫೦ಯಲ್ಲಿ ಬಳಸಲಾಗಿರುವ ಎಲ್‌ಇಡಿ ಲ್ಯಾಂಪ್‌ಗಳನ್ನು ಬಳಸಿರಬಹುದು ಎನ್ನಲಾಗಿದೆ. ರೆಟ್ರೊ ಲುಕ್‌ ಹೊಂದಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ | Honda SP 125 | ಮೇಡ್‌ ಇನ್‌ ಇಂಡಿಯಾ ಬೈಕ್‌ಗಳು ನ್ಯೂಜಿಲೆಂಡ್‌, ಆಸ್ಟ್ರೇಲಿಯಾಗೆ ಯಾನ!

Exit mobile version