Site icon Vistara News

Tata Altroz EV : ರಸ್ತೆಗಿಳಿಯಲಿದೆ ಟಾಟಾ ಕಂಪನಿಯ ಇನ್ನೊಂದು ಬಲಿಷ್ಠ ಇವಿ ಕಾರು

Tata Altroz EV

ಟಾಟಾ ಮೋಟಾರ್ಸ್​ ತನ್ನ ಇವಿ ವಿಭಾಗವು 2025ರ ವೇಳೆಗೆ ತನ್ನ ಪೋರ್ಟ್​ಪೋಲಿಯೊಗೆ ಇನ್ನೂ ನಾಲ್ಕು ಎಲೆಕ್ಟ್ರಿಕ್ ವಾಹನಗಳನ್ನು ಸೇರ್ಪಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಟಾಟಾ ಆಲ್ಟ್ರೋಜ್ ಇವಿಯನ್ನು (Tata Altroz EV) 2019 ರ ಜಿನೀವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿತ್ತು. ಆದರೆ ಆ ಬಳಿಕ ಅದರ ಬಿಡುಗಡೆ ನಿಧಾನವಾಯಿತು. 2020ರ ಆಟೋ ಎಕ್ಸ್ ಪೋದಲ್ಲಿ ಕ್ಲೋಸ್-ಟು-ಪ್ರೊಡಕ್ಷನ್ ರೂಪದಲ್ಲಿ ನೀಡಲಾಯಿತು. ಆದಾಗ್ಯೂ ಮೊದಲು ಪ್ರದರ್ಶಿಸಿದ ಸುಮಾರು ಐದು ವರ್ಷಗಳ ನಂತರ ಆಲ್ಟ್ರೋಜ್ ಇವಿ ಭಾರತದಲ್ಲಿ ಬಿಡುಗಡೆಯಾಗಲಿದೆ.

ಟಾಟಾ ಆಲ್ಟ್ರೋಜ್ ಇವಿ (Tata Altroz EV) ಬಿಡುಗಡೆ ವಿಳಂಬವೇಕೆ?

ನೆಕ್ಸಾನ್ ಇವಿ ನಂತರ ಬಿಡುಗಡೆಯಾಗುವ ನಿರೀಕ್ಷೆಯಿದ್ದ ಆಲ್ಟ್ರೋಜ್ ಇವಿ (Tata Altroz EV) ಅಭಿವೃದ್ಧಿಯಲ್ಲಿ ಟಾಟಾ ಕೆಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಕಾರಿನ ಫ್ಲ್ಯಾಟ್​ಫಾರ್ಮ್​​ ಕೆಳಗೆ ಬ್ಯಾಟರಿ ಪ್ಯಾಕ್ ಅಳವಡಿಸುವ ಸಮಸ್ಯೆ ಎದುರಾಗಿತ್ತು. ಇದು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸುಮಾರು 20 ಎಂಎಂ ಕಡಿಮೆ ಮಾಡುತ್ತಿತ್ತು. ಅಂದರೆ 145 ಎಂಎಂಗೆ ಇಳಿಸುತ್ತದೆ. ಈ ನಷ್ಟವನ್ನು ಸರಿದೂಗಿಸಲು ಆಲ್ಟ್ರೊಜ್ ಕಾರಿನ ಎತ್ತರ ಏರಿಸುವುದು ಕಂಪನಿಗೆ ಉತ್ತಮ ಆಯ್ಕೆಯಾಗಿರಲಿಲ್ಲ. ಏಕೆಂದರೆ ಅದು ಹ್ಯಾಚ್ ಬ್ಯಾಕ್​ನ ನೋಟವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಸಂಪೂರ್ಣವಾಗಿ ಕ್ರಾಸ್ಒವರ್ ನಂತೆ ಕಾಣುವಂತೆ ಮಾಡುತ್ತಿತ್ತು.

ಇದನ್ನೂ : Tata Punch : ಟಾಟಾ ಪಂಚ್​​ ಫೇಸ್​ಲಿಫ್ಟ್ ಗೆ ಕಾಯುತ್ತಿದ್ದವರಿಗೆ ನಿರಾಸೆ ಖಚಿತ

ಟಾಟಾ ಆಲ್ಟ್ರೋಜ್ ಇವಿ (Tata Altroz EV) 2025 ರಲ್ಲಿ ರಸ್ತೆಗೆ

ಬಹಳ ಸಮಯದವರೆಗೆ, ಆಲ್ಟ್ರೋಜ್ ಇವಿ (Tata Altroz EV) ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಬದಲಿಗೆ ಟಿಯಾಗೊ ಇವಿ ಮತ್ತು ಪಂಚ್ ಇವಿಯನ್ನು ಹೊರತಂದಿತು ಕಂಪನಿ. ಆದಾಗ್ಯೂ, ಟಾಟಾ ಪಂಚ್ ಇವಿ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್ ನ ಪ್ಯಾಸೆಂಜರ್ ವೆಹಿಕಲ್ಸ್ ಬಿಸಿನೆಸ್ ನ ಎಂಡಿ ಶೈಲೇಶ್ ಚಂದ್ರ, ಆಲ್ಟ್ರೋಜ್ ಇವಿ ಬಿಡುಗಡೆ ಯೋಜನೆಯಲ್ಲಿದೆ. ಮುಂದಿನ ವರ್ಷ ಬರಲಿದೆ ಎಂದು ಹೇಳಿದ್ದಾರೆ. ಆಕ್ಟಿ.ಇವಿ ಆರ್ಕಿಟೆಕ್ಚರ್ ಆಧಾರದ ಮೇಲೆ ಮುಂಬರುವ ಐದು ಮಾದರಿಗಳಲ್ಲಿ ಪಂಚ್​​ಮೊದಲನೆಯದ್ದು . ಕರ್ವ್ ನಂತರದ ಸ್ಥಾನ ಪಡೆಯುತ್ತದೆ. ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಹ್ಯಾರಿಯರ್ ಕೂಡ ಬರಲಿದೆ. ನಂತರ ನಾವು 2025ರಲ್ಲಿ ಸಿಯೆರಾ ಮತ್ತು ಆಲ್ಟ್ರೋಜ್ ಬಿಡುಗಡೆ ಆಗಲಿದೆ. ಹೀಗಾಗಿ ಟಾಟಾ ಬ್ಯಾಟರಿ ಪ್ಯಾಕೇಜಿಂಗ್ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಿದೆ ಎಂದು ಹೇಳಬಹುದು.

ಟಾಟಾ ಆಲ್ಟ್ರೋಜ್ ಇವಿ (Tata Altroz EV) ಬ್ಯಾಟರಿ ರೇಂಜ್​

ಆಲ್ಟ್ರೋಜ್ ಇವಿ (Tata Altroz EV) ಪಂಚ್ ಇವಿಯಂತೆಯೇ ಅದೇ ಪ್ಲಾಟ್ ಫಾರ್ಮ್ ಮತ್ತು ಆರ್ಕಿಟೆಕ್ಟ್​ ಆಧರಿಸಿದೆ ಎಂದು ಪರಿಗಣಿಸಿದರೆ ಒಂದೇ ರೀತಿಯ ಗಾತ್ರದ ಬ್ಯಾಟರಿ ಪ್ಯಾಕ್ ಗಳನ್ನು (25 ಕಿಲೋವ್ಯಾಟ್-35 ಕಿಲೋವ್ಯಾಟ್) ನಾವು ನೋಡಬಹುದು. ಅದೇ ರೀತಿಯ ಎಆರ್​ಎಐ-ರೇಟೆಡ್ ರೇಂಜ್​ಗಳು 315 ರಿಂದ 421 ಕಿ.ಮೀ. ಇದಲ್ಲದೆ, ಆಲ್ಟ್ರೋಜ್ ಇವಿಯ ಮೋಟರ್ ನ ಔಟ್ ಪುಟ್ ಗಳು ಪಂಚ್ ಇವಿಯ 82-122 ಬಿಹೆಚ್ ಪಿಗೆ ಸಮಾನಾಗಿದೆ. ಅವುಗಳ ಐಸಿಇ ಸಹವರ್ತಿಗಳಂತೆ, ಆಲ್ಟ್ರೋಜ್ ಮತ್ತು ಪಂಚ್ ಇವಿಗಳ (ರೂ. 10.99 ಲಕ್ಷ-15.49 ಲಕ್ಷ, ಎಕ್ಸ್ ಶೋರೂಂ ಬೆಲೆಗೆ ಸಿಗಲಿದೆ.

Exit mobile version