Site icon Vistara News

Tata Altroz : ಟಾಟಾ ಆಲ್ಟ್ರೋಜ್​ನಲ್ಲಿ ಎರಡು ಹೊಸ ವೇರಿಯೆಂಟ್​ಗಳ ಪರಿಚಯ; ಏನೇನಿವೆ ಫೀಚರ್​ಗಳು?

Tata Altroz

ಬೆಂಗಳೂರು: ಟಾಟಾ ಮೋಟಾರ್ಸ್ ತನ್ನ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನಲ್ಲಿ ಎಕ್ಸ್ ಎಂ ಮತ್ತು ಎಕ್ಸ್ ಎಂ (ಎಸ್) ಎಂಬ ಎರಡು ಹೊಸ ವೇರಿಯೆಂಟ್​​ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ ಇದು 1.2 ಪೆಟ್ರೋಲ್-ಮ್ಯಾನುವಲ್ ಪವರ್ ಟ್ರೇನ್​​ನೊಂದಿಗೆ ಮಾತ್ರ ಲಭ್ಯವಿದೆ. ದೆಹಲಿಯ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.6.90 ಲಕ್ಷ ಮತ್ತು ರೂ.7.35 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಈ ಹೊಸ ಟ್ರಿಮ್​ಗಳು ಸನ್​ರೂಫ್​, ಎತ್ತರ ಸರಿಹೊಂದಿಸಬಹುದಾದ ಡ್ರೈವರ್ ಸೀಟ್ ಸೇರಿದಂತೆ ಹಲವು ಹೊಸ ಫೀಚರ್​ಗಳನ್ನು ಹೊಂದಿದೆ. ಇದಲ್ಲದೆ, ಆಲ್ಟ್ರೋಜ್​ನ ಇತರ ವೇರಿಯೆಂಟ್​ಗಳು ಕೂಡ ಸ್ಟ್ಯಾಂಡರ್ಡ್ ಆಗಿ ಹೊಸ ಫೀಚರ್​ಗಳನ್ನು ಪಡೆದುಕೊಳ್ಳುತ್ತದೆ.

ಆಲ್ಟ್ರೋಜ್​ ಎಕ್ಸ್ ಎಂ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್​​ಗಳು, ಎತ್ತರವನ್ನು ಸರಿಹೊಂದಿಸಬಹುದಾದ ಡ್ರೈವರ್ ಸೀಟ್, ಎಲೆಕ್ಟ್ರಿಕಲ್ ಆಗಿ ಸರಿಹೊಂದಿಸಬಹುದಾದ ವಿಂಗ್ ಮಿರರ್​ಗಳು ಮತ್ತು ವ್ಹೀಲ್ ಕವರ್ ಹೊಂದಿರುವ 16 ಇಂಚಿನ ಸ್ಟೀಲ್ ವ್ಹೀಲ್ ಸೇರಿದಂತೆ ಹಲವು ಫೀಚರ್​ಗಳೊಂದಿಗೆ ರಸ್ತೆಗಿಳಿದಿದೆ. ಮತ್ತೊಂದೆಡೆ, ಎಕ್ಸ್ಎಂ (ಎಸ್) ಟ್ರಿಮ್, ಎಕ್ಸ್ಎಂ ವೇರಿಯೆಂಟ್​ಗಿಂತ ಹೆಚ್ಚುವರಿಯಾಗಿ ಸನ್​ರೂಫ್​ ಸಹ ಪಡೆಯುತ್ತದೆ. 9 ಇಂಚಿನ ಟಚ್ ಸ್ಕ್ರೀನ್ ಎರಡೂ ವೇರಿಯೆಂಟ್​ಗಳಲ್ಲಿ ಆಯ್ಕೆಯನ್ನೂ ನೀಡಲಾಗಿದೆ.

ಆಲ್ಟ್ರೋಜ್ ನ ಎಲ್ಲಾ ಪೆಟ್ರೋಲ್-ಮ್ಯಾನುವಲ್ ವೇರಿಯೆಂಟ್​ಗಳು ಈಗ ನಾಲ್ಕು ಪವರ್ ವಿಂಡೋಸ್ ಮತ್ತು ಕಿ ಲೆಸ್ ಎಂಟ್ರಿಯನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಲಿವೆ ಎಂಬುದಾಗಿ ಟಾಟಾ ಮೋಟಾರ್ಸ್ ಘೋಷಿಸಿದೆ. ಹೆಚ್ಚುವರಿಯಾಗಿ, ಎಕ್ಸ್ಇ, ಎಕ್ಸ್ಎಂ +, ಎಕ್ಸ್ಎಂ+ (ಎಸ್) ಮತ್ತು ಎಕ್ಸ್​ಟಿ ವೇರಿಯೆಂಟ್​ಗಳ ಪೆಟ್ರೋಲ್-ಮ್ಯಾನುವಲ್ ಕಾನ್ಫಿಗರೇಶನ್ ಸಹ ಹೊಸ ಫೀಚರ್​ಗಳನ್ನು ಪಡೆಯುತ್ತವಎ. ಅವು ಈ ಕೆಳಗಿನಂತಿವೆ:

ಎಕ್ಸ್ಇ ಫಾಲೋ-ಮಿ-ಹೋಮ್ ಲ್ಯಾಂಪ್​​ಗಳನ್ನು ಹೊಂದಿದ್ದರೆ, ಎಕ್ಸ್ಎಂ + ಮತ್ತು ಎಕ್ಸ್ಎಂ + (ಎಸ್) ಟ್ರಿಮ್​​ಗಳು ಈಗ ರಿವರ್ಸ್ ಕ್ಯಾಮೆರಾ, ಎತ್ತರ ಸರಿಹೊಂದಿಸಬಹುದಾದ ಡ್ರೈವರ್ ಸೀಟ್ ಮತ್ತು ಕ್ರೂಸ್ ಕಂಟ್ರೋಲ್ ಜತೆ ಬರುತ್ತದೆ. ಕೊನೆಯದಾಗಿ, ಎಕ್ಸ್ ಟಿ ಟ್ರಿಮ್ ಎತ್ತರವನ್ನು ಸರಿಹೊಂದಿಸಬಹುದಾದ ಡ್ರೈವರ್ ಸೀಟ್, 16 ಇಂಚಿನ ಹೈಪರ್ ಸ್ಟೈಲ್ ವೀಲ್​ಗಳು ಮತ್ತು ಹಿಂಭಾಗದ ಡಿಫಾಗರ್​ ಸಹ ಪಡೆಯುತ್ತದೆ.

ಇದನ್ನೂ ಓದಿ : KIA Seltos : ಕಿಯಾ ಸೆಲ್ಟೋಸ್​ನ ಫೇಸ್​ಲಿಫ್ಟ್​ ಬೆಲೆ ಅನಾವರಣ; ಎಷ್ಟಿದೆ, ಫೀಚರ್​ ಇತ್ಯಾದಿ ಮಾಹಿತಿ ಇಲ್ಲಿದೆ

ಪ್ರತಿಸ್ಪರ್ಧಿ ಯಾರು?

ಟಾಟಾ ಆಲ್ಟ್ರೊಜ್ ಕಾರಿಗೆ ಹ್ಯುಂಡೈ ಐ20 ಕಾರು ನೇರ ಪ್ರತಿಸ್ಪರ್ಧಿ. ಐ20ಯ ಬೆಲೆ ರೂ.7.46 ಲಕ್ಷ ರೂಪಾಯಿಂದ ಆರಂಭಗೊಂಡು 11.88 ಲಕ್ಷ ರೂಪಾಯಿ ತನಕ ಇದೆ. ಮಾರುತಿ ಸುಜುಕಿ ಬಲೆನೊ ಕೂಡ ಆಲ್ಟ್ರೋಜ್​ ಇರುವ ಸೆಗ್ಮೆಂಟ್​ನಲ್ಲಿ ಪ್ರಭಾವ ಹೊಂದಿದೆ. ಅದರ ಬೆಲೆ .6.61 ಲಕ್ಷ-9.88 ಲಕ್ಷ ರೂಪಾಯಿ ತನಕ ಇದೆ. ಟೊಯೊಟಾ ಗ್ಲಾಂಝಾ ರೂ.6.81 ಲಕ್ಷ-10.00 ಲಕ್ಷ ರೂಪಾಯಿ ಆಲ್ಟ್ರೋಜ್​ಗೆ ಪೈಪೋಟಿ ನೀಡುತ್ತದೆ.

ಬೆಲೆ ಏರಿಕೆ ಮಾಡಿರುವ ಟಾಟಾ

ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಎಲ್ಲಾ ಸೀರಿಸ್​ನ ಕಾರುಗಳ ಬೆಲೆಯನ್ನು ಶೇಕಡಾ 0.6 ರಷ್ಟು ಹೆಚ್ಚಿಸಿತ್ತು. ಆದಾಗ್ಯೂ, ಜುಲೈ 16, 2023 ಕ್ಕಿಂತ ಮೊದಲು ಬುಕ್ ಮಾಡಿದ ಎಲ್ಲಾ ಕಾರುಗಳು ಮತ್ತು ಎಸ್​ಯುವಿಗಳಿಗೆ ಈ ಬೆಲೆ ಏರಿಕೆಯಿಂದ ವಿನಾಯಿತಿ ನೀಡಲಾಗಿದೆ.

Exit mobile version