ಬೆಂಗಳೂರು,: ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (Tata Motors) ಸೋಮವಾರ ಎಸ್‌ಯುವಿ ವಿನ್ಯಾಸದಲ್ಲಿ ಹೊಸ ಭಾಷ್ಯ ಬರೆಯಲಿರುವ ಟಾಟಾ ಕರ್ವ್ (Tata Curvv) ಐಸಿಇ ಮತ್ತು ಇವಿಯನ್ನು ಅನಾವರಣಗೊಳಿಸಿದೆ. ಅತ್ಯಾಕರ್ಷಕ ಫಿಲಾಸಫಿ, ರೂಪ ಮತ್ತು ಕಾರ್ಯ ನಿರ್ವಹಣೆ ಹೊಂದಿರುವ ಟಾಟಾ ಕರ್ವ್ ಭಾರತದ ಮೊದಲ ಎಸ್‌ಯುವಿ ಕೂಪ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಹೊಸ ಕಾಲದ ಎಸ್‌ಯುವಿ ವಿನ್ಯಾಸವನ್ನು ಪ್ರದರ್ಶಿಸುವ ಕರ್ವ್ ನಲ್ಲಿ ಎಸ್‌ಯುವಿಯ ದೃಢತೆ ಮತ್ತು ನೈಜವಾದ ಕೂಪ್ ನ ಸೌಂದರ್ಯ ಮತ್ತು ಸ್ಪೋರ್ಟಿ ಸಿಲೂಯೆಟ್ ವಿನ್ಯಾಸವಿದೆ. ಆಗಸ್ಟ್ 7ರಂದು ಈ ಹೊಚ್ಚ ಹೊಸ ಟಾಟಾ ಕರ್ವ್ ಬಿಡುಗಡೆ ಆಗಲಿದ್ದು, ಟಾಟಾ ಮೋಟಾರ್ಸ್‌ನ ಮಲ್ಟಿ- ಪವರ್‌ಟ್ರೇನ್ ತಂತ್ರಕ್ಕೆ ಅನುಗುಣವಾಗಿ ಬಿಡುಗಡೆಗೊಳ್ಳಲಿದೆ. ಮೊದಲು ಟಾಟಾ ಕರ್ವ್ ಇವಿ ಆವೃತ್ತಿ ಬಿಡುಗಡೆಯಾಗಲಿದ್ದು, ಅದರ ಬೆನ್ನಲ್ಲಿ ಶೀಘ್ರದಲ್ಲಿಯೇ ಐಸಿಐ ಆವೃತ್ತಿಗಳು ರಸ್ತೆಗೆ ಇಳಿಯಲಿವೆ.
ಟಾಟಾ ಕರ್ವ್ ಅನಾವರಣದ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶೈಲೇಶ್ ಚಂದ್ರ, “ಟಾಟಾ ಮೋಟಾರ್ಸ್ ಭಾರತೀಯ ಎಸ್‌ಯುವಿ ಕ್ಷೇತ್ರದ ಪರಿವರ್ತಕ ಸಂಸ್ಥೆಯಾಗಿದೆ. ನಾವು ಸದಾ ಆಕರ್ಷಕ ವಿನ್ಯಾಸ, ಅತ್ಯುತ್ತಮ ರೋಡ್ ಪ್ರೆಸೆನ್ಸ್ ಮತ್ತು ಅತ್ಯಪೂರ್ವ ಕಾರ್ಯಕ್ಷಮತೆ ಹೊಂದಿರುವ ಕೆಟಗರಿಯಲ್ಲೇ ಕಾರುಗಳನ್ನು ನೀಡುತ್ತಾ ಬಂದಿದ್ದೇವೆ. ಸಿಯೆರಾ, ಸಫಾರಿ, ನೆಕ್ಸಾನ್, ಪಂಚ್ ಮತ್ತು ಹ್ಯಾರಿಯರ್ ಮಾರುಕಟ್ಟೆಯಲ್ಲಿಯೇ ವಿಶೇಷ ವಿನ್ಯಾಸದ ಎಸ್‌ಯುವಿಗಳನ್ನು ಟಾಟಾ ತನ್ನ ಪೋರ್ಟ್ಪೋಲಿಯೊದಲ್ಲಿ ಹೊಂದಿರುವುದೇ ಅದಕ್ಕೆ ಸಾಕ್ಷಿ. ಈ ಪರಂಪರೆಯನ್ನು ಮುಂದುವರಿಸಲು ಹಾಗೂ ಬಲಪಡಿಸಲು ನಾವು ಮಧ್ಯಮ ಎಸ್‌ಯುವಿ ಮಿಡ್ವೇರಿಯೆಂಟ್ನಲ್ಲಿ ಮೊದಲ ಎಸ್‌ಯುವಿ ಕೂಪ್ ಆಗಿರುವ ಟಾಟಾ ಕರ್ವ್ ಅನ್ನು ಅನಾವರಣಗೊಳಿಸುತ್ತಿದ್ದೇವೆ. ಕೂಪ್ ದೇಹ ರಚನೆಯುಳ್ಳ ಇದರ ವಿಶಿಷ್ಟ ವಿನ್ಯಾಸವು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲಿದೆ ಎಂದು ನುಡಿದರು.
ಮುಂದುವರಿ ಅವರು ಟಾಟಾ ಕರ್ವ್ ಮಲ್ಟಿ ಪವರ್ ಟ್ರೇನ್ ಗಳಲ್ಲಿ ಲಭ್ಯವಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ದೊರೆಯಲಿದೆ. ಕರ್ವ್ ಮೂಲಕ ನಾವು ಮಧ್ಯಮ ಎಸ್‌ಯುವಿ ಬಯಸುವ ಗ್ರಾಹಕರ ಅಗತ್ಯಗಳನ್ನು ಪೂರೈಸಲಿದ್ದೇವೆ ಎಂದು ಹೇಳಿದರು.
ವಿಶೇಷತೆ ಏನು?
ಟಾಟಾ ಕರ್ವ್ ಆಕರ್ಷಕ ವಿನ್ಯಾಸ, ಉತ್ತಮ ಪ್ರಾಯೋಗಿಕತೆ ಮತ್ತು ಉಲ್ಲಾಸದಾಯಕ ಕಾರ್ಯಕ್ಷಮತೆ ಪರಿಪೂರ್ಣ ಮಿಶ್ರಣವಾಗಿದೆ. ಕರ್ವ್ ಎಸ್‌ಯುವಿ ಕೂಪ್ , ಮಿಡ್- ಎಸ್‌ಯುವಿ ಮಾರುಕಟ್ಟೆಯ ಸಾಂಪ್ರದಾಯಿಕ ಬಾಕ್ಸ್ ವಿನ್ಯಾಸಕ್ಕೆ ವ್ಯತಿರಿಕ್ತವಾಗಿದೆ. ಇದು ದೃಢವಾದ ಏರೋ ಡೈನಾಮಿಕ್ ಥೀಮ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ವಿಭಿನ್ನವಾಗಿ ಕಾಣಿಸುತ್ತದೆ. ಕರ್ವ್ ನ ಇಳಿಜಾರಾದ ಮೇಲ್ಛಾವಣಿಯು ವಿಂಡ್ ರೆಸಿಸ್ಟೆನ್ಸ್ ಗುಣ ಹೊಂದಿದೆ. ಅದರ ದೊಡ್ಡ ಚಕ್ರಗಳು, ದೃಢವಾದ ಶೈಲಿ, ಡಿಪಾರ್ಚರ್ ಆಂಗಲ್ ಮತ್ತು ಜಾಸ್ತಿ ಇರುವ ಗ್ರೌಂಡ್ ಕ್ಲಿಯರೆನ್ಸ್ ಟಾಟಾ ಕರ್ವ್ ಗೆ ಬ್ಯಾಲೆನ್ಸ್ ಡ್ ಲುಕ್ ಹೊಂದಿದೆ. ಈ ಎಸ್‌ಯುವಿ ಕೂಪ್ ಎರಡು ಹೊಸ ಬಣ್ಣದ ಶೇಡ್ನಲ್ಲಿ ಬಿಡುಗಡೆ ಆಗಲಿದೆ. ಆ ಬಣ್ಣಗಳು ಹೀಗಿವೆ: ಕರ್ವ್.ಇವಿಯಲ್ಲಿ ವರ್ಚುವಲ್ ಸನ್‌ರೈಸ್ ಬಣ್ಣ ಮತ್ತು ಕರ್ವ್ ಇಸಿಇಯಲ್ಲಿ ಗೋಲ್ಡ್ ಎಸೆನ್ಸ್ ಬಣ್ಣ.
ಲಾಂಗ್ ಡ್ರೈವ್‌ಗಳಿಗೆ ಹೋಗಲು ಇಷ್ಟಪಡುವ ಭಾರತೀಯ ಕುಟುಂಬಗಳಿಗಾಗಿ ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿರುವ ಮತ್ತು ಎಸ್‌ಯುವಿ ಕೂಪ್ ವಿನ್ಯಾಸ ಹೊಂದಿರುವ ಟಾಟಾ ಕರ್ವ್ ಆಧುನಿಕ ಮತ್ತು ಅತ್ಯುತ್ತ ಇಂಟೀರಿಯರ್ ಅನ್ನು ಹೊಂದಿದೆ. ವಿಶಾಲವಾದ ಕ್ಯಾಬಿನ್ ಸ್ಪೇಸ್ ಲಭ್ಯವಿದೆ ಮತ್ತು ಎಸ್‌ಯುವಿ ಕೂಪ್ ದೇಹ ರಚನೆ ಇರುವುದರಿಂದ ಸ್ಟೋರೇಜ್ ಗೆ ಜಾಸ್ತಿ ಸ್ಥಳ ಇಲ್ಲ ಎಂದು ಭಾವಿಸಬೇಕಾಗಿಲ್ಲ. ಇದರ ಪ್ಯಾನೋರಾಮಿಕ್ ಗ್ಲಾಸ್ ರೂಫ್ ಕ್ಯಾಬಿನ್‌ಗೆ ನೈಸರ್ಗಿಕ ಬೆಳಕು ಬೀಳಲು ಅನುವು ಮಾಡಿಕೊಡುತ್ತದೆ. ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬೂಟ್ ಸ್ಪೇಸ್ ಅಥವಾ ಸ್ಟೋರೇಜ್ ಜಾಗ ನೀಡಲಾಗಿದೆ.
ಇದನ್ನು ಓದಿ: Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ
ಟಾಟಾ ಕರ್ವ್ ಶಕ್ತಿಯುತ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಅವುಗಳ ಜೊತೆಗೆ ಕೆಟಗರಿಯಲ್ಲಿಯೇ ಉತ್ತಮ ಅನ್ನಿಸುವ ಲಾಂಗ್ ಡ್ರೈವಿಂಗ್ ರೇಂಜ್ ಒದಗಿಸುವ ಎಲೆಕ್ಟ್ರಿಕ್ ವೇರಿಯಂಟ್ ಗಳು ಲಭ್ಯವಾಗಲಿದೆ. ಸುಧಾರಿತ ಇನ್ಫೋಟೇನ್ ಮೆಂಟ್, ದೊಡ್ಡ ಸ್ಕ್ರೀನ್ ಗಳು ಮತ್ತು ಕನೆಕ್ಟೆಡ್ ಕಾರ್ ಟೆಕ್ನಾಲನಜಿ ಹೊಂದಿರುವ ಟಾಟಾ ಕರ್ವ್ ಈ ವಿಭಾಗದಲ್ಲಿಯೇ ಹೊಚ್ಚ ಹೊಸತಾಗಿ ಪರಿಚಯಿಸಲಾಗಿರುವ ಹಲವಾರು ಫೀಚರ್ ಗಳನ್ನು ಹೊಂದಿದೆ.