ನವ ದೆಹಲಿ: ಟಾಟಾ ಮೋಟಾರ್ಸ್ನ ಯಶಸ್ವಿ ಮಿಡ್ಸೈಜ್ ಎಸ್ಯುವಿ ಹ್ಯಾರಿಯರ್ (Tata Harrier ) ನೂತನ ಆವೃತ್ತಿಯ ಬುಕಿಂಗ್ ಆರಂಭಗೊಂಡಿದೆ. ದೊಡ್ಡ ಗಾತ್ರ, ಅತ್ಯಾಕರ್ಷಕ ಇಂಟೀರಿಯ್, ಬೇಕಾದಷ್ಟು ಸ್ಥಳಾವಕಾಶ ಹೊಂದಿರುವ ಕ್ಯಾಬಿನ್ ಹಾಗೂ ಫೈವ್ ಸ್ಟಾರ್ ಸೇಫ್ಟಿ ರೇಟಿಂಗ್ ಹೊಂದಿರುವ ಈ ಕಾರು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಟೆಕ್ನಾಲಜಿಯೊಂದಿಗೆ ಮಾರುಕಟ್ಟೆಗೆ ಇಳಿದಿದೆ. ಇದು ಆರು ಸ್ಪೀಡ್ನ ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿದೆ. ಜನವರಿಯಲ್ಲಿ ಗ್ರೇಟರ್ ನೋಯ್ಡಾನದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ಈ ಕಾರನ್ನು ಪ್ರದರ್ಶಿಸಲಾಗಿತ್ತು.
ಎಡಿಎಎಸ್ ಟೆಕ್ನಾಲಜಿಯಲ್ಲಿ ಫಾರ್ವರ್ಡ್ ಕೊಲಿಶನ್ ವಾರ್ನಿಂಗ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಟ್ರಾಫೀಕ್ ಸೈನ್ ರೆಕಗ್ನಿಷನ್, ಲೇಜ್ ಡಿಪಾರ್ಚರ್ ವಾರ್ನಿಂಗ್, ಹೈ ಬೀಮ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ರಿಯರ್ ಕ್ರಾಸ್, ಟ್ರಾಫಿಕ್ ಅಲರ್ಟ್, ರಿಯಲ್ ಕೊಲಿಶನ್ ವಾರ್ನಿಂಗ್ ಸೇರಿದಂತೆ ಹಲವು ಫೀಚರ್ಗಳಿವೆ. ಈ ಎಸ್ಯುವಿಯಲ್ಲಿ ಆರು ಏರ್ಬ್ಯಾಗ್ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್, ಆಲ್ ವೀಲ್ ಡಿಸ್ಕ್ ಬ್ರೇಕ್ಗಳಿವೆ.
ಇದನ್ನೂ ಓದಿ : Tata Motors | ಬಿಎಂಟಿಸಿಗೆ 921 ಎಲೆಕ್ಟ್ರಿಕ್ ಬಸ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡ ಟಾಟಾ ಮೋಟಾರ್ಸ್
ಟಾಟಾ ಹ್ಯಾರಿಯರ್ನಲ್ಲಿ ಕ್ರಿಯೊಟೆಕ್ 170 ಟರ್ಬೊ ಚಾರ್ಜ್ಡ್ ಬಿಎಸ್6 ಫೇಸ್2 ಡೀಸೆಲ್ ಎಂಜಿನ್ ಇದೆ. ಇದು 167 ಎಚ್ಪಿ ಪವರ್ ಹಾಗೂ 350 ಎನ್ಎಮ್ ಟಾರ್ಕ್ ಬಿಡಗುಡೆ ಮಾಡುತ್ತದೆ. ಬ್ಲ್ಯಾಕ್, ಬ್ಲ್ಯೂ, ಟ್ರಾಫಿಕ್ ಮಿಸ್ಟ್, ರೆಡ್, ವೈಟ್ ಮತ್ತು ಗ್ರೇ ಬಣ್ಣಗಳಲ್ಲಿ ಕಾರು ಲಭ್ಯವಿದೆ. ಟಾಟಾ ಹ್ಯಾರಿಯರ್ ಎಕ್ಸ್ಯುವಿ 700, ಎಮ್ಜಿ ಹೆಕ್ಟರ್, ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ಗೆ ಪೈಪೋಟಿ ನೀಡಲಿದೆ.