Site icon Vistara News

Auto Expo 2023 | ಟಾಟಾ ಹ್ಯಾರಿಯರ್​ ಇವಿ ಆಟೋ ಎಕ್ಸ್​ಪೊದಲ್ಲಿ ಅನಾವರಣ, 2024ಕ್ಕೆ ಮಾರುಕಟ್ಟೆಗೆ

harrier EV

ನವ ದೆಹಲಿ : ಟಾಟಾ ಮೋಟಾರ್ಸ್​​ ತನ್ನ ಜನಪ್ರಿಯ ಎಸ್​ಯುವಿ ಕಾರು ಹ್ಯಾರಿಯರ್​ನ ಎಲೆಕ್ಟ್ರಾನಿಕ್​ ಅವತಾರವನ್ನು ನವ ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್​ಪೋದಲ್ಲಿ (Auto Expo 2023) ಅನಾವರಣ ಮಾಡಿದೆ. ಈ ಕಾರು ಭಾರತೀಯ ಮಾರುಕಟ್ಟೆಗೆ 2024ರಲ್ಲಿ ಬರಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಟಾಟಾ ನೆಕ್ಸಾನ್​ ಇವಿ ಯಶಸ್ಸಿನ ಬಳಿಕ ಟಾಟಾ ಮೋಟಾರ್ಸ್​​ನ ಎಲೆಕ್ಟ್ರಿಕ್​ ವಿಭಾಗವು ಟಿಗೋರ್​ ಹಾಗೂ ಟಿಯಾಗೊದ ಇವಿ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬ್ಯಾಟರಿ ಚಾಲಿತ ಎಸ್​ಯುವಿಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಹ್ಯಾರಿಯರ್ ಅನ್ನು ಮಾರುಕಟ್ಟೆಗೆ ಬಿಡಲು ಮುಂದಾಗಿದೆ.

ಸಫಾರಿ ಬಳಿಕ ಟಾಟಾ ಮೋಟಾರ್ಸ್ ರಸ್ತೆಗೆ ಇಳಿಸಿದ ಪೂರ್ಣ ಪ್ರಮಾಣದ ಎಸ್​ಯುವಿ ಎಂದರೆ ಹ್ಯಾರಿಯರ್​. ದೊಡ್ಡ ಗಾತ್ರ ಹಾಗೂ ಹೊಸ ವಿನ್ಯಾಸದ ಮೂಲಕ ಇದು ಜನಪ್ರಿಯತೆ ಗಳಿಸಿಕೊಂಡಿತ್ತು. ಅದರದ್ದೇ ಬ್ಯಾಟರಿ ಚಾಲಿತ ಆವೃತ್ತಿಯನ್ನು ಬಿಡುಗಡೆ ಮಾಡುವ ಮೂಲಕ ಇವಿ ಮಾರುಕಟ್ಟೆಯಲ್ಲಿ ಸ್ಥಾನ ಭದ್ರಗೊಳಿಸುವುದು ಟಾಟಾದ ಯೋಜನೆಯಾಗಿದೆ.

ಆಟೋ ಎಕ್ಸ್​ಪೋದಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ಹ್ಯಾರಿಯರ್​ ಕಾರು ದಹ್ಯ ಎಂಜಿನ್​ ಹೊಂದಿರುವ ಕಾರಿಗಿಂತ ಭಿನ್ನವಾಗಿದೆ. ಮುಂಬದಿಯ ಪ್ಯಾನೆಲ್​ ಮುಚ್ಚಿದಂತಿದ್ದು ಗ್ರಿಲ್​ಗಳನ್ನು ತೆಗೆಯಲಾಗಿದೆ. ಎಲ್​ಇಡಿ ಹೆಡ್​ಲೈಟ್,​ ಡೆ ರನ್ನಿಂಗ್​ ಲೈಟ್​ ಭಿನ್ನ ರೀತಿಯಲ್ಲಿ ಕಾಣಿಡುತ್ತದೆ. ಕಾರಿನ ಬದಿಯ ನೋಟವೂ ವಿಶೇಷವಾಗಿದೆ. ಬಂಪರ್​, ಸ್ಕಿಡ್​ ಪ್ಲೇಟ್​ ಹಾಗೂ ಹೆಚ್ಚು ಸ್ಪೋರ್ಟಿ ಲುಕ್​ ಹೊಂದಿದೆ.

ಕ್ಯಾಬಿನ್​ ಕೂಡ ಪ್ರೀಮಿಯಮ್​ ಲುಕ್​ ಹೊಂದಿದ್ದು, ವಿಭಿನ್ನ ತಾಂತ್ರಿಕತೆ ಹಾಗೂ ಫೀಚರ್​ಗಳಿಂದ ತುಂಬಿಕೊಂಡಿದೆ. ಕಾರಿನ ಪವರ್​ ಹಾಗೂ ರೇಂಜ್​ ಕುರಿತು ಇನ್ನೂ ಮಾಹಿತಿ ಪ್ರಕಟಗೊಂಡಿಲ್ಲ.

ಇದನ್ನೂ ಓದಿ | Tata Motors | ಜೆಟ್​ ಆವೃತ್ತಿಯ ಎಸ್​ಯುವಿ ಕಾರುಗಳನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್​

Exit mobile version