Site icon Vistara News

Tata Cars Price Hike : ಎರಡನೇ ಬಾರಿ ಏರಿಕೆಯಾಯ್ತು ಟಾಟಾ ಕಾರುಗಳ ಬೆಲೆ: ಏನು ಕಾರಣ?

Tata Motors cars are expensive from today

#image_title

ಬೆಂಗಳೂರು: ವೇರಿಯೆಂಟ್​ಗಳು ಹಾಗೂ ಮಾಡೆಲ್​ಗಳನ್ನು ಅವಲಂಬಿಸಿ ಟಾಟಾ ಕಾರುಗಳ ಬೆಲೆಯನ್ನು ಸರಾಸರಿ 0.6% ರಷ್ಟು ಹೆಚ್ಚಿಸಲು (Tata Cars Price Hike) ಟಾಟಾ ಮೋಟಾರ್ಸ್​​ ನಿರ್ಧರಿಸಿದೆ. ಏಪ್ರಿಲ್​ 1ರಿಂದ ಈ ಬೆಲೆ ಏರಿಕೆ ಅನ್ವಯವಾಗಲಿದೆ. ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅದರ ಹೊರೆಯನ್ನು ನಿರ್ವಹಿಸಲು ಬೆಲೆ ಏರಿಕೆ ಮಾಡುತ್ತಿರುವುದಾಗಿ ಕಂಪನಿ ಹೇಳಿದೆ. ಟಾಟಾ ಮೋಟಾರ್ಸ್​​ನ ಪ್ರಮುಖ ಕಾರು ಮಾದರಿಗಳಾದ ಟಿಯಾಗೊ, ಟಿಗೋರ್, ಪಂಚ್​, ಹ್ಯಾರಿಯರ್, ನೆಕ್ಸಾನ್ ಮತ್ತು ಸಫಾರಿ ಮೇ 1 ರಿಂದ ದುಬಾರಿಯಾಗಲಿವೆ.

ಟಾಟಾ ಮೋಟಾರ್ಸ್​ ಈ ಕುರಿತು ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು ಬೆಲೆ ಏರಿಕೆಗೆ ಕಾರಣವನ್ನು ವಿವರಿಸಿದೆ. ಕೇಂದ್ರ ಸರಕಾರ ವಾಯು ಮಾಲಿನ್ಯ ನಿಯಂತ್ರಣಾ ಮಾನದಂಡವನ್ನು ಬದಲಾಯಿಸಿದೆ. ಹೀಗಾಗಿ ಕಾರು ಉತ್ಪಾದನೆ ವೇಳೆ ಹೆಚ್ಚುವರಿ ಹಣವನ್ನು ವಿನಿಯೋಗಿಸಬೇಕಾಗುತ್ತಿದೆ. ಆ ನಷ್ಟವನ್ನು ತಪ್ಪಿಸಲು ಬೆಲೆಯನ್ನು ಏರಿಕೆ ಮಾಡಲಾಗುತ್ತಿದೆ ಎಂದು ಹೇಳಿದೆ.

2023 ರ ಏಪ್ರಿಲ್ 1 ರಂದು ಜಾರಿಗೆ ಬಂದ ಬಿಎಸ್ 6 ಫೇಸ್ 2 ಎಮಿಷನ್ ಮಾನದಂಡಗಳಿಗೆ ಪೂರಕವಾಗಿ ಎಂಜಿನ್​ಗಳನ್ನು ತಯಾರಿಸುತ್ತಿದ್ದಾರೆ. ಎಲ್ಲಾ ವಾಹನ ತಯಾರಕರು ಇ 20 ಫ್ಯೂಯಲ್-ರೆಡಿ ಕಾಂಪ್ಲೈಂಟ್ ಮಾದರಿಗಳನ್ನು ಬಿಡುಗಡೆ ಮಾಡಲು ಶ್ರಮ ವಹಿಸುತ್ತಿದೆ. ಹೀಗಾಗಿ ಬಹುತೇಕ ಎಲ್ಲ ಕಂಪನಿಗಲು ಬೆಲ ಏರಿಕೆ ಮಾಡಿದೆ.

ಫೆಬ್ರವರಿಯಲ್ಲಿ ಬೆಲೆ ಹೆಚ್ಚಿದ ನಂತರ ಟಾಟಾ ಕಂಪನಿಯು ತನ್ನ ಪ್ರಯಾಣಿಕ ವಾಹನಗಳಿಗೆ ಇದು ಎರಡನೇ ಬೆಲೆ ಏರಿಕೆ ಮಾಡುತ್ತಿದೆ. ವಾಹನ ತಯಾರಕ ಕಂಪನಿಯು ತನ್ನ ಆಂತರಿಕ ದಹನ ಎಂಜಿನ್ (ಐಸಿಇ) ಪ್ರಯಾಣಿಕರ ವಾಹನಗಳ ಪೋರ್ಟ್​ಪೋಲಿಯೊದಲ್ಲಿ ಸರಾಸರಿ 1.2% ರಷ್ಟು ಬೆಲೆಗಳನ್ನು ಹೆಚ್ಚಿಸಿತ್ತು.

ಕಳೆದ ತಿಂಗಳು ಟಾಟಾ ಮೋಟಾರ್ಸ್ ತನ್ನ ಕಮರ್ಷಿಯಲ್ ವೆಹಿಕಲ್ ಗಳ ಮೇಲೆ 5% ವರೆಗೆ ಬೆಲೆ ಹೆಚ್ಚಳವನ್ನು ಘೋಷಿಸಿತ್ತು.

ಟಾಟಾ ಮೋಟಾರ್ಸ್​​ನ ಆಲ್ಟ್ರೋಜ್​ ಸಿಎನ್​ಜಿ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು

ಟಾಟಾ ಮೋಟಾರ್ಸ್​ ತನ್ನ ಪ್ರೀಮಿಯಮ್​ ಹ್ಯಾಚ್​ ಬ್ಯಾಟ್​ ಆಲ್ಟ್ರೋಜ್​ ಸಿಎನ್​ಜಿ ಕಾರಿನ ಬುಕಿಂಗ್​ ಇತ್ತೀಚೆಗೆ ಆರಂಭಿಸಿದೆ. 21 ಸಾವಿರ ರೂಪಾಯಿ ಪಾವತಿ ಮಾಡಿ ಕಾರ್​ ಬುಕ್​ ಮಾಡಿಕೊಳ್ಳಬಹುದು ಎಂದು ಹೇಳಿದೆ. ಆದರೆ ಕಾರಿನ ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲ. ಆದರೂ ಹೊಸ ತಾಂತ್ರಿಕತೆ ಹಾಗ ಬೂಟ್​ ಸ್ಪೇಸ್​ನಿಂದಾಗಿ ಈ ಕಾರು ಜನರ ಮನಸ್ಸನ್ನು ಗೆಲ್ಲುವ ಸಾಧ್ಯತೆಗಳಿವೆ.

ವರ್ಷದ ಆರಂಭದಲ್ಲಿ ಗ್ರೇಟರ್​ ನೊಯ್ದಾದಲ್ಲಿ ನಡೆದ ಆಟೋ ಎಕ್ಸ್​ಪೋದಲ್ಲಿ ಈ ಸಿಎನ್​ಜಿ ಆಲ್ಟ್ರೋಜ್​ ಅನ್ನು ಪರಿಚಯ ಮಾಡಲಾಗಿತ್ತು. ಈ ವೇಳೆ ಡ್ಯುಯಲ್ ಸಿಲಿಂಡರ್​ ಮೂಲಕ ಬೂಟ್​ ಸ್ಪೇಸ್​ ಕಡಿಮೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿತ್ತು. ಇದೇ ಕಾರಣಕ್ಕೆ ಕಾರು ಹೆಚ್ಚು ಆಕರ್ಷಣೆಗೆ ಒಳಗಾಗಲಿದೆ. ಈ ಕಾರಿನಲ್ಲಿ ಏನೇನು ವಿಶೇಷತೆಗಳು ಇರಬಹುದು ಎಂಬುದನ್ನು ನೋಡೋಣ.

ಬುಕಿಂಗ್ ಆರಂಭಗೊಂಡಿದೆ

ಟಾಟಾ ಮೋಟಾರ್ಸ್​ ಆಲ್ಟ್ರೋಜ್​ ಸಿಎನ್​ಜಿ ಕಾರಿನ ಬುಕಿಂಗ್ ಮಾತ್ರ ಆರಂಭಿಸಿದೆ. ಬೆಲೆ ಇನ್ನೂ ಪ್ರಕಟಿಸಿಲ್ಲ. ಹೀಗಾಗಿ ಬುಕ್ ಮಾಡುವ ಮೊದಲು ರಿಯಲ್​ ಟೈಮ್​ ಎಕ್ಸ್​ಪೀರಿಯನ್ಸ್​ ಪಡೆಯಲು ಸಾಧ್ಯವಿಲ್ಲ. ಕಾರಿನ ಬೂಟ್​ಸ್ಪೇಸ್​ ನಷ್ಟವಾಗದ ಹಾಗೆ ನೋಡಿಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಆದರೂ ಪೆಟ್ರೋಲ್​ ಕಾರಿನಷ್ಟು ಸಿಗದು. ಕಾರಿನ ಬಗ್ಗೆ ಆಸಕ್ತಿ ಇದ್ದರೆ 21 ಸಾವಿರ ರೂಪಾಯಿ ಪಾವತಿ ಮಾಡಿ ಬುಕ್​ ಮಾಡಬಹುದು.

ಡ್ಯುಯಲ್​ ಸಿಲಿಂಡರ್​ ಟೆಕ್ನಾಲಜಿ

ಸಿಎನ್​ಜಿ ಕಾರುಗಳಲ್ಲಿ ಸಿಂಗಲ್​ ಸಿಲಿಂಡರ್​ಗಳನ್ನು ಬಳಸಲಾಗುತ್ತದೆ. ಟಾಟಾ ಮೋಟಾರ್ಸ್​ ಅದರ ಬದಲಾಗಿ ಎರಡು ಸಿಲಿಂಡರ್​ಗಳನ್ನು ಬಳಸಿಕೊಂಡಿದೆ. ಪ್ರತಿಯೊಂದು ಸಿಲಿಂಡರ್​ 30 ಲೀಟರ್​ ಸಾಮರ್ಥ್ಯವನ್ನು ಹೊಂದಿದೆ. ಸಿಂಗಲ್​ ಸಿಲಿಂಡರ್​ ಬಳಸುವುದರಿಂದ ಬೂಟ್​ ಸ್ಪೇಸ್ ಹೆಚ್ಚು ಲಭ್ಯವಿದೆ. ಸಿಎನ್​ಜಿ ಆಲ್ಟ್ರೋಜ್​ನಲ್ಲಿ 300 ಲೀಟರ್​​ ಬೂಟ್​ ಸ್ಪೇಸ್ ನೀಡುತ್ತೇವೆ ಎಂದು ಟಾಟಾ ಮೋಟಾರ್ಸ್​ ಹೇಳಿದೆ. ಹೀಗಾಗಿ ಪ್ರತಿಸ್ಪರ್ಧಿ ಕಾರುಗಳಾದ ಮಾರುತಿ ಸುಜುಕಿ ಬಲೆನೊ ಹಾಗೂ ಟೊಯೊಟಾ ಗ್ಲಾಂಜಾಕ್ಕೆ ಹೋಲಿಸಿದರೆ ಬೂಟ್ ಸ್ಪೇಸ್​ನಲ್ಲಿ ಗೆಲುವು ಗ್ಯಾರಂಟಿ.

ಇದನ್ನೂ ಓದಿ : Tata Motors : ಕಾರುಗಳ ಎಂಜಿನ್​​ಗಳನ್ನು ಅಪ್​ಗ್ರೇಡ್​ ಮಾಡಿದ ಟಾಟಾ ಮೋಟಾರ್ಸ್​​

ಟಾಟಾ ಮೋಟಾರ್ಸ್​ ಐಸಿಎನ್​ಜಿ ಸಿಂಗಲ್​ ಅಡ್ವಾನ್ಸ್ಡ್​ ಇಸಿಯು ತಾಂತ್ರಿಕತೆ ಇದೆ. ಇದು ಡೈರೆಕ್ಟ್​​ ಸ್ಟಾರ್ಟ್​ ಸಿಎನ್​ಜಿ ಮೋಡ್​ ಹೊಂದಿದೆ. ಇದು ನೇರವಾಗಿ ಸಿಎನ್​ಜಿ ಮೂಲಕವೇ ಸ್ಟಾರ್ಟ್​​ ಆಗುತ್ತದೆ. ಅದೇ ರೀತಿ ಗ್ಯಾಸ್​ ಲೀಕೇಜ್​ ಡಿಟೆಕ್ಷನ್​, ಮೈಕ್ರೋ ಸ್ವಿಚ್​ ವ್ಯವಸ್ಥೆಯೂ ಇದೆ. ರೀಫಿಲ್​ ಮಾಡುವ ವೇಳೆ ಕಾರಿನ ಎಂಜಿನ್ ಬಂದ್ ಆಗುತ್ತದೆ.

ಕಲರ್​ ಆಯ್ಕೆಗಳು

ಟಾಟಾ ಮೋಟಾರ್ಸ್​ ಆಲ್ಟ್ರೋಜ್​ ಸಿಎನ್​ಜಿಯಲ್ಲಿ ನಾಲ್ಕು ವೇರಿಯೆಂಟ್​ಗಳನ್ನು ನೀಡಿದೆ. ಎಕ್​ಇ, ಎಕ್ಸ್​ಎಮ್​ಪ್ಲಸ್, ಎಕ್ಸ್​ಝಡ್​, ಮತ್ತು ಎಕ್ಸ್​ಝಡ್​ ಪ್ಲಸ್​ ಅಯ್ಕೆಯಲ್ಲಿ ಲಭ್ಯವಿದೆ. ಒಪೆರಾ ಬ್ಲ್ಯು, ಡೌನ್​ಟೌನ್​ ರೆಡ್​, ಆರ್ಕೆಡ್​ ಗ್ರೇ ಮತ್ತು ಅವೆನ್ಯೂ ವೈಟ್​ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಆಲ್ಟ್ರೂಜ್​ ಐ ಸಿಎನ್​ಜಿ ಫೀಚರ್​ಗಳು

ಲೆದರೆಟ್​ ಸೀಟ್​ಗಳು, ಐಆರ್​ಎ ಕನೆಕ್ಟೆಡ್​ ಟೆಕ್ನಾಲಜಿ, ಕ್ರೂಸ್​ ಕಂಟ್ರೋಲ್​, ಆಟೋ ಮ್ಯಾಟಿಕ್​ ಹೆಡ್​ ಲ್ಯಾಂಪ್​ ಸೇರಿದಂತೆ ಹಲವು ಫೀಚರ್​ಗಳು ಲಭ್ಯವಿದೆ. ಎಲೆಕ್ಟ್ರಿಕ್​ ಸನ್​ರೂಫ್​, ಇನ್​ಸ್ಟ್ರುಮೆಂಟ್ ಕ್ಲಸ್ಟರ್ ಕೂಡ ಹೊಸದಾಗಿದ್ದು ಹೊಸ ಫೀಚರ್​ಗಳನ್ನು ಹೊಂದಿದೆ.

Exit mobile version