Site icon Vistara News

Tata Motors : 50 ಲಕ್ಷ ಕಾರು ಮಾರಾಟದ ಮೈಲುಗಲ್ಲು ದಾಟಿದ ಟಾಟಾ ಮೋಟಾರ್ಸ್​

Tata Motors has crossed the milestone of selling 50 lakh cars

#image_title

ಮುಂಬಯಿ: ಭಾರತದ ಜನಪ್ರಿಯ ಆಟೋಮೊಬೈಲ್​ ಕಂಪನಿ ಟಾಟಾ ಮೋಟಾರ್ಸ್ (Tata Motors)​​ 50 ಲಕ್ಷ ಕಾರು ಉತ್ಪಾದಿಸಿ ಮಾರಾಟ ಮಾಡಿದ ಮೈಲುಗಲ್ಲು ದಾಟಿದೆ. ಕಂಪನಿ ಶೋರೂಮ್​ಗಳಲ್ಲಿ ಹಾಗೂ ಉತ್ಪಾದನಾ ಘಟಕಗಳಲ್ಲಿ ತಿಂಗಳಿಡೀ ಇದರ ಸಂಭ್ರಮಾಚರಣೆ ನಡೆಯಲಿದೆ.

2004ರಲ್ಲಿ ಟಾಟಾ ಕಂಪನಿಯು 10 ಲಕ್ಷ ಕಾರುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಇಳಿಸಿತ್ತು. 2010ರಲ್ಲಿ ಕಂಪನಿಯ 20 ಲಕ್ಷ ಕಾರುಗಳು ಹಾಗೂ 2015ರಲ್ಲಿ 30 ಲಕ್ಷ ಕಾರುಗಳನ್ನು ಉತ್ಪಾದಿಸಿತ್ತು. ಮುಂದಿನ ಮೂರು ವರ್ಷದಲ್ಲಿ 10 ಲಕ್ಷ ಕಾರುಗಳನ್ನು ಉತ್ಪಾದಿಸಿ 40 ಲಕ್ಷ ವಾಹನಗಳ ಗುರಿಯನ್ನು ತಲುಪಿತ್ತು. ಆ ಬಳಿಕ ಕೊರೊನಾ ಸೋಂಕಿನ ಸಮಸ್ಯೆ ಹಾಗೂ ಸೆಮಿ ಕಂಡಕ್ಟರ್​ಗಳ ಕೊರತೆಯಿಂದಾಗಿ ಭಾರತದ ಆಟೋಮೊಬೈಲ್ ಕ್ಷೇತ್ರ ನಲುಗಿತು. ಆದಾಗ್ಯೂ ಕೊರೊನಾ ಬಳಿಕ ಮತ್ತೆ ಚೇತರಿಸಿಕೊಂಡು 50 ಲಕ್ಷ ಕಾರುಗಳ ಗುರಿಯನ್ನು ತಲುಪಿತು.

ಇದನ್ನೂ ಓದಿ : Tata Motors | ಬಿಎಂಟಿಸಿಗೆ 921 ಎಲೆಕ್ಟ್ರಿಕ್​ ಬಸ್​ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡ ಟಾಟಾ ಮೋಟಾರ್ಸ್​

ಟಾಟಾ ಮೋಟಾರ್ಸ್​ನ ಮ್ಯಾನೇಜಿಂಗ್​ ಡೈರೆಕ್ಟರ್​ ಶೈಲೇಶ್ಚಂದ್ರ ಅವರು ಈ ದಾಖಲೆಯ ಕುರಿತು ಮಾತನಾಡಿ, ಇದೊಂದು ಅಪರೂಪದ ಸಾಧನೆಯಾಗಿದೆ. ಪ್ರತಿಯೊಂದು ಮೈಲುಗಳಲ್ಲಿ ನಾವು ಏರಿಳಿತಗಳನ್ನು ಕಂಡಿದ್ದೇವೆ. ನಮ್ಮ ಬ್ರಾಂಡ್​ನ ಕಾರುಗಳ ಬಗ್ಗೆ ಅಭಿಮಾನ ತೋರಿಸಿದ್ದಾರೆ. ಈ ಸಾಧನೆಯ ಹಿಂದೆ ಟಾಟಾ ಮೋಟಾರ್ಸ್​ನ ಎಲ್ಲ ಸಿಬ್ಬಂದಿಯ ಶ್ರಮವಿದೆ. ಹೊಸ ಆವಿಷ್ಕಾರಗಳು ಹಾಗೂ ಹೊಸ ಮಾದರಿಯ ತಾಂತ್ರಿಕತೆಯೊಂದಿಗೆ ಇನ್ನಷ್ಟು ಜನರ ವಿಶ್ವಾಸ ಗಳಿಸಲಿದ್ದೇವೆ ಎಂದ ಹೇಳಿದರು.

Exit mobile version