Site icon Vistara News

Tata Nexon : ಟಾಟಾ ನೆಕ್ಸಾನ್ ಇವಿ​ ಡಾರ್ಕ್​ ಎಡಿಷನ್​ ಬಿಡುಗಡೆ, ಏನಿದೆ ಇದರಲ್ಲಿ ವಿಶೇಷ?

tata-nexon-ev-dark-edition-launched-what-is-special-about-it

#image_title

ಬೆಂಗಳೂರು: ಟಾಟಾ ಮೋಟಾರ್ಸ್​​ನ ಜನಪ್ರಿಯ ಎಲೆಕ್ಟ್ರಿಕ್​ ಕಾರು ನೆಕ್ಸಾನ್​ ಇವಿಯ ಡಾರ್ಕ್ ಎಡಿಷನ್​ ಭಾರತದಲ್ಲಿ ಸೋಮವಾರ ಬಿಡುಗಡೆಯಾಗಿದೆ. ನೆಕ್ಸಾನ್​ ಡಾರ್ಕ್​ ಎಡಿಷನ್​ ಎರಡು ಆವೃತ್ತಿಗಳಲ್ಲಿ ಭಾರತದಲ್ಲಿ ಲಭ್ಯವಿದೆ. ಜಡ್​ಎಕ್ಸ್​ ಪ್ಲಸ್​ ಎಲ್​ಯುಎಕ್ಸ್​ 19.04 ಲಕ್ಷ ರೂಪಾಯಿಗೆ ಲಭ್ಯವಿದ್ದರೆ, ಜಡ್​ಎಕ್ಸ್​ ಪ್ಲಸ್​ ಎಲ್​ಯುಎಕ್ಸ್​ 7.2 ಕಿಲೋ ವ್ಯಾಟ್​ ಫಾಸ್ಟ್​ ಚಾರ್ಜಿಂಗ್​ ಇರುವ ಕಾರು 19.54 ಲಕ್ಷ ರೂಪಾಯಿಗೆ ಲಭ್ಯವಿದೆ. ಎರಡೂ ಎಕ್ಸ್​ಶೋರೂಮ್​ ಬೆಲೆಯಾಗಿದೆ. ನೆಕ್ಸಾನ್​ ಇವಿ ಕಾರು ಒಂದು ಬಾರಿ ಚಾರ್ಜ್​ ಮಾಡಿದರೆ 453 ಕಿಲೋ ಮೀಟರ್ ದೂರಕ್ಕೆ ಸಾಗುತ್ತದೆ. ಅಂತೆಯೇ ಹೊಸ ಮಾಡೆಲ್​ನಲ್ಲಿ 10.25 ಇಂಚಿನ ಇನ್ಫೋಟೈನ್​ಮೆಂಟ್​ ಸಿಸ್ಟಮ್ ನೀಡಲಾಗಿದೆ. ಹಾಗಾದರೆ ಈ ಕಾರಿನ ವಿಶೇಷತೆಗಳೇನು ಎಂಬುದನ್ನು ನೋಡೋಣ.

ಕಾರಿನ ಇಂಟೀಯರ್​ ಹೇಗಿದೆ?

10.25 ಇಂಚಿನ ಟಚ್​ ಸ್ಕ್ರೀನ್​​ ಇನ್ಫೋಟೈನ್​ಮೆಂಟ್​​ ಸಿಸ್ಟಮ್​ ಕಾರಿಗೆ ಇಂಟೀರಿಯರ್​ನಲ್ಲಿ ಕೊಟ್ಟಿರುವ ದೊಡ್ಡ ಅಪ್​ಡೇಟ್​. ಇದು ಹರ್ಮನ್​ ಕಂಪನಿಯ ಇನ್ಪೋಟೈನ್​ಮೆಂಟ್​ ಸಿಸ್ಟಮ್​ ಆಗಿದೆ. ರಿಯರ್​ ವ್ಯೂ ಕ್ಯಾಮೆರಾ, ಎಚ್​ಡಿ ಡಿಸ್​ಪ್ಲೇ, ಆರು ಪ್ರಾದೇಶಿಕ ಭಾಷೆಗಳಲ್ಲಿ ವಾಯ್ಸ್ ಅಸಿಸ್ಟ್​​ ಸಿಸ್ಟಮ್​, ವೈರ್​ಲೆಸ್​ ಆಂಡ್ರಾಯ್ಡ್​ ಆಟೋ ಮತ್ತು ಆ್ಯಪಲ್​ ಕಾರ್​ ಪ್ಲೇ ಸೌಲಭ್ಯವಿದೆ ಈ ಸಿಸ್ಟಮ್​​ನಲ್ಲಿ. ಡಾರ್ಕ್ ಥೀಮ್​ನ ಡೋರ್​ಗಳು, ಜ್ಯುವೆಲ್ಡ್​ ಕಂಟ್ರೋಲ್​ ನಾಬ್​, ಇವಿ ಬ್ಲ್ಯೂ ಹೈಲೈಟ್​ ಸ್ವಿಚ್​ಗಳು, ಗ್ಲಾಸಿ ಪಿಯಾನೊ ಬ್ಲ್ಯಾಕ್​ ಡ್ಯಾಶ್​ ಬೋರ್ಡ್​​, ಲೆದರ್​ ಸ್ಟೀರಿಂಗ್ ಕಾರನ್ನು ಅತ್ಯಾಕರ್ಷಕಗೊಳಿಸಿದೆ.

ನೆಕ್ಸಾನ್​ ಇವಿ ಮ್ಯಾಕ್ಸ್ ಡಾರ್ಕ್​ ಕಾರಿನಲ್ಲಿ ಎಲೆಕ್ಟ್ರಾನಿಕ್ ಪಾರ್ಕಿಂಗ್​ ಬ್ರೇಕ್​, ಆಟೋ ಹೋಲ್ಡ್​, ಲೆದರ್​ ವೆಂಟಿಲೇಟೆಡ್ ಸೀಟ್​, ಏರ್​ ಫ್ಯೂರಿಫೈಯರ್​, ವೈರ್​ಲೆಸ್​ ಸ್ಮಾರ್ಟ್​ಫೋನ್ ಚಾರ್ಜರ್​, ಕ್ರೂಸ್ ಕಂಟ್ರೋಲ್​, ಆಟೋ ಡಿಮ್ಮಿಂಗ್ ಐವಿಆರ್​ಎಮ್​, ಎಲೆಕ್ಟ್ರಿಕ್​ ಸನ್​ರೂಫ್​ ಮತ್ತು ಆಟೋ ಹೆಡ್​​ಲ್ಯಾಂಪ್​ ಫೀಚರ್​​ಗಳನ್ನು ನೀಡಲಾಗಿದೆ. ರೇನ್​ ಸೆನ್ಸ್ ವೈಪರ್​, ಆಟೋ ಟೆಂಪರೇಚರ್ ಕಂಟ್ರೋಲ್​, ಕೂಲ್ಡ್​ ಗ್ಲವ್​ ಬಾಕ್ಸ್, ರಿಯರ್​ ಎಸಿ ವೆಂಟ್ಸ್, ಸ್ಮಾರ್ಟ್​ ಕಿ ಪುಶ್​ ಬಟನ್​, ಎಲೆಕ್ಟ್ರಿಕ್ ಒವಿಆರ್​ಎಮ್, ರಿಯರ್ ವೈಪರ್​ ವಾಶರ್​, ಡಿಫಾಗರ್​ ಹಾಗೂ ಗ್ರಾಫಿಕ್​ ಡಿಸ್​ಪ್ಲೇ ನೀಡಲಾಗಿದೆ.

ಎಕ್ಸ್​ಟೀರಿಯರ್​ ಹೇಗಿದೆ?

ಟಾಟಾ ನೆಕ್ಸಾನ್​ ಬ್ಲ್ಯಾಕ್​ ಎಡಿಷನ್​ ಕಾರು ಮಿಡ್​ನೈಟ್​ ಬ್ಲ್ಯಾಕ್​ ಹಾಗೂ ಚಾರ್ಕೊಲ್​ ಗ್ರೇ ಅಲಾಯ್​ ವೀಲ್​ನೊಂದಿಗೆ ಲಭ್ಯವಿದೆ. ಪ್ರೊಜೆಕ್ಟರ್​ ಹೆಡ್​ಲ್ಯಾಂಪ್​ ಹಾಗೂ ಟ್ರೈ ಆರೋ ಎಲ್​ಇಡಿ ಟೇಲ್​ ಲ್ಯಾಂಪ್​, ಸ್ಟೇನ್​ ಬ್ಲ್ಯಾಕ್​ ಹ್ಯುಮಾನಿಟಿ ಲೈನ್​, ಶಾರ್ಕ್​ ಫಿನ್ ಆಂಟೆನಾ, ರೂಪ್​ ಟೇಲ್​ ಡಾರ್ಕ್ ಬ್ಯಾಜಿಂಗ್​ ಫೆಂಡರ್​ಗಳಿವೆ.

ಡಾರ್ಕ್​ ಎಡಿಷನ್​ ಕುರಿತು ಮಾತನಾಡಿದ ಮಾರ್ಕೆಂಟಿಂಗ್​ ಹಾಗೂ ಸಶೇ್ಲಸ್ ವಿಭಾಗದ ಮುಖ್ಯಸ್ಥ ವಿವೇಕ್​ ಶ್ರೀವಾಸ್ತವ, ನೆಕ್ಸಾನ್​ ಇವಿ ಬ್ರಾಂಡ್​ ಕಿರು ಅವಧಿಯಲ್ಲಿ 50 ಸಾವಿರಕ್ಕೂ ಅಧಿಕ ಗ್ರಾಹಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಎಲೆಕ್ಟ್ರಿಕ್​ ವಾಹನಗಳ ಮಾರುಕಟ್ಟೆಯಲ್ಲಿ ಕ್ರಾಂತಿ ಸೃಷ್ಟಿಯಾಗಿದೆ. ಇದರ ಯಶಸ್ಸಿನೊಂದಿಗೆ ಡಾರ್ಕ್​ ಎಡಿಷನ್​ ಕಾರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

Exit mobile version