Site icon Vistara News

Tata Nexon EV: ಕೇವಲ 200 ರೂ. ಖರ್ಚಿನಲ್ಲಿ ಈ ಕಾರು 323 ಕಿ.ಮೀ ದೂರ ಸಾಗುತ್ತದೆ!

Tata Nexon EV

ಕೇವಲ 200 ರೂಪಾಯಿಯಲ್ಲಿ ದೆಹಲಿಯಿಂದ 323 ಕಿಲೋ ಮೀಟರ್ ದೂರದ ನೈನಿತಾಲ್‌ಗೆ (Delhi to Nainital) ಹೋಗಬಹುದು! ಅದು ಹೇಗೆ ಅಂತೀರಾ? ಟಾಟಾ ನೆಕ್ಸಾನ್ ಇವಿ (Tata Nexon EV) ಕಾರಿನಲ್ಲಿ! ಹೌದು, ಅತ್ಯಂತ ಕಡಿಮೆ ಬೆಲೆಯಲ್ಲಿ 323 ಕಿಲೋ ಮೀಟರ್ ದೂರದವರೆಗೆ ಪ್ರಯಾಣ ನಡೆಸಲು ಸಾಧ್ಯ ಎನ್ನುವ ಭರವಸೆಯನ್ನು ನೀಡುತ್ತಿದೆ ಈ ಕಾರು.

ಭಾರತದ ಸುಪ್ರಸಿದ್ಧ ಆಟೋಮೊಬೈಲ್ ತಯಾರಕ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ತಯಾರಿಸಿದ ಎಲೆಕ್ಟ್ರಿಕ್ ಎಸ್‌ಯುವಿ (EV SUV) ಭಾರತದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಪೂರೈಸಲು ಈ ಕಾರನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಎಲೆಕ್ಟ್ರಿಕ್ ಎಸ್‌ಯುವಿ ಎಂದೇ ಪರಿಗಣಿಸ6ಲಾಗಿದೆ. ಟಾಟಾ ನೆಕ್ಸಾನ್ ಇವಿಯು ಹಲವಾರು ವೈಶಿಷ್ಟ್ಯವನ್ನು ಹೊಂದಿದ್ದು, ಇದರ ಸಂಪೂರ್ಣ ವಿವರ ಇಲ್ಲಿದೆ.


ವಿನ್ಯಾಸ ಹೇಗಿದೆ?

ಹೊರಾಂಗಣದ ಟಾಟಾ ನೆಕ್ಸಾನ್ ಇವಿ ವಿನ್ಯಾಸವು ಅತ್ಯಂತ ಆಕರ್ಷಕ ಮತ್ತು ಆಧುನಿಕವಾಗಿದೆ. ಈ ಎಸ್‌ಯುವಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಮುಂಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸ್ಪೋರ್ಟಿ ಹಾಗೂ ಸ್ಟ್ರಾಂಗ್ ಲುಕ್‌ನೊಂದಿಗೆ ಬರಲಿದೆ. ಇದಲ್ಲದೆ, ಕಾರು ಬ್ಲ್ಯಾಕ್‌-ಔಟ್ ರೂಫ್ ಮತ್ತು ಸ್ಪೋರ್ಟಿ ವೀಲ್ಸ್‌ಗಳನ್ನು ಹೊಂದಿರುತ್ತದೆ.

ಒಳಾಂಗಣವು ಪ್ರೀಮಿಯಂ ಫಿನಿಶಿಂಗ್‌ನೊಂದಿಗೆ ಡ್ಯುಯಲ್-ಟೋನ್ ಬಣ್ಣದ ಥೀಮ್ ಹೊಂದಿದೆ. ಇದು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್- ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಪುಶ್-ಬಟನ್ ಸ್ಟಾರ್ಟ್‌ನಂತಹ ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.


ಬ್ಯಾಟರಿ ಪವರ್‌

ಟಾಟಾ ನೆಕ್ಸಾನ್ ಇವಿ 30.2 ಕೆಡಬ್ಲ್ಯೂ ಎಚ್ ಲಿಥಿಯಂ- ಐಯಾನ್ ಬ್ಯಾಟರಿಯನ್ನು ಹೊಂದಿದೆ. ಒಂದು ಸಂಪೂರ್ಣ ಚಾರ್ಜ್‌ನಲ್ಲಿ ಸುಮಾರು 325-400 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಆದರೆ ನೈಜ ಕ್ಷಮತೆ ಚಾಲನಾ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ದೂರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು.

ವೇಗದ ಚಾರ್ಜರ್ ಅನ್ನು ಬಳಸಿದರೆ ನೆಕ್ಸಾನ್ ಇವಿ ಅನ್ನು ಶೇ. 0-80ರಷ್ಟು ಚಾರ್ಜ್ ಮಾಡಲು ಸುಮಾರು 60 ನಿಮಿಷಗಳು ಬೇಕಾಗುತ್ತದೆ. ಹೋಮ್ ಚಾರ್ಜರ್‌ನೊಂದಿಗೆ ಸಂಪೂರ್ಣವಾಗಿ ಚಾರ್ಜ್ ಮಾಡಲು ಇದು ಸುಮಾರು 8- 9 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.


ಕಾರ್ಯಕ್ಷಮತೆ ಹೇಗಿದೆ?

ನೆಕ್ಸಾನ್ ಇವಿ 129 ಪಿಎಸ್ ಪವರ್ ಮತ್ತು 245 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುವ ಪರ್ಮನೆಂಟ್‌ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್ ಅನ್ನು ಹೊಂದಿದೆ. ಈ ಎಸ್‌ಯುವಿ ಸುಮಾರು 9.9 ಸೆಕೆಂಡುಗಳಲ್ಲಿ 0-100 MPHನಿಂದ ವೇಗವನ್ನು ಹೆಚ್ಚಿಸಬಹುದು. ಇದು ಅದರ ವರ್ಗದಲ್ಲಿ ತ್ವರಿತ ಎಸ್‌ಯುವಿ ಆಗಿರುತ್ತದೆ.


ವೈಶಿಷ್ಟ್ಯಗಳು ಏನೇನು?

ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್ , ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಐಸೊಫಿಕ್ಸ್ ಮೌಂಟ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಜಿಯೋ ಫೆನ್ಸಿಂಗ್, ಸ್ಥಳ ಟ್ರ್ಯಾಕಿಂಗ್, ರಿಮೋಟ್ ಡಯಾಗ್ನೋಸ್ಟಿಕ್ಸ್ ಇತ್ಯಾದಿಗಳನ್ನು ಒಳಗೊಂಡಂತೆ ಝಡ್ ಕನೆಕ್ಷನ್ ಅಪ್ಲಿಕೇಶನ್ ಮೂಲಕ 35ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳು ಲಭ್ಯವಿದೆ. 7 ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಯನ್ನು ಇದು ಬೆಂಬಲಿಸುತ್ತದೆ.

ಬೆಲೆ ಎಷ್ಟು?

ಟಾಟಾ ನೆಕ್ಸಾನ್ ಇವಿ ಬೆಲೆಗಳು ವಿವಿಧ ಮಾಡೆಲ್‌ಗಳನ್ನು ಅವಲಂಬಿಸಿ ಬದಲಾಗುತ್ತವೆ. ಆದರೆ ಸಾಮಾನ್ಯವಾಗಿ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 14 ಲಕ್ಷ ರೂ. ನಿಂದ 17 ಲಕ್ಷ ರೂ.ವರೆಗೆ ಲಭ್ಯವಿದೆ. ಭಾರತದಲ್ಲಿ ಲಭ್ಯವಿರುವ ಎಂಜಿ ಝಡ್ ಎಸ್‌ಇವಿ ಮತ್ತು ಹುಂಡೈ ಕೋನಾ ಎಲೆಕ್ಟ್ರಿಕ್‌ನಂತಹ ಇತರ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಟಾಟಾ ನೆಕ್ಸಾನ್ ಇವಿ ಸ್ಪರ್ಧೆ ನೀಡುವಂತಿದೆ.

ಇದನ್ನೂ ಓದಿ: Best Selling Cars: ಜುಲೈನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳು ಯಾವವು?

ಟಾಟಾ ನೆಕ್ಸಾನ್ ಇವಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿದೆ. ಕೈಗೆಟುಕುವ ಬೆಲೆ, ದೀರ್ಘ-ಶ್ರೇಣಿಯ ಮತ್ತು ಟಾಟಾದ ವಿಶ್ವಾಸಾರ್ಹತೆಯಿಂದಾಗಿ ಈ ಕಾರು ಗ್ರಾಹಕರಲ್ಲಿ ಬಹಳ ಜನಪ್ರಿಯವಾಗಿದೆ. ಪರಿಸರ ಪ್ರಜ್ಞೆಯುಳ್ಳವರಿಗೆ ಮತ್ತು ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಆಲೋಚನೆಯಲ್ಲಿರುವವರಿಗೆ ಈ ಕಾರು ಉತ್ತಮ ಆಯ್ಕೆಯಾಗಿದೆ ಎನ್ನುತ್ತಾರೆ ವಾಹನ ಪರಿಣತರು.

Exit mobile version