Site icon Vistara News

Tata Punch CNG : ಎಕ್ಸ್​ಟೆರ್​ ಸಿಎನ್​ಜಿಗೆ ಪಂಚ್​ ಕೊಡಲು ಬಂದಿದೆ ಟಾಟಾ ಪಂಚ್; ಬೆಲೆ ಮತ್ತಿತರ ವಿವರ ಇಲ್ಲಿದೆ

Tata Punch CNG

ನವ ದೆಹಲಿ: ಟಾಟಾ ಮೋಟಾರ್ಸ್ ಪಂಚ್ ಸಿಎನ್​ಜಿ ಕಾರನ್ನು (Tata Punch CNG) ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಾರಿನ ಆರಂಭಿಕ ಬೆಲೆ 7.10 ಲಕ್ಷ ರೂಪಾಯಿ. ಟಾಪ್ ವೇರಿಯೆಂಟ್​ನ ಬೆಲೆ (ಎಕ್ಸ್ ಶೋರೂಂ, ದೆಹಲಿ) 9.68 ಲಕ್ಷ ರೂಪಾಯಿ. ಪಂಚ್ ಸಿಎನ್​ಜಿ ಪ್ಯೂರ್, ಅಡ್ವೆಂಚರ್ ಮತ್ತು ಎಕ್ಸ್ ಪ್ರೂಟೆಡ್ ಎಂಬ ಮೂರು ಟ್ರಿಮ್​​ಗಳಲ್ಲಿ ಲಭ್ಯವಿದೆ. ನಂತರದ ಎರಡು ವೇರಿಯೆಂಟ್​ಗಳನ್ನು ಸಾಮಾನ್ಯ ಪಂಚ್ ನೊಂದಿಗೆ ನೀಡಲಾಗುವಂತೆ ಆಯ್ಕೆಯ ಪ್ಯಾಕೇಜ್​ಗಳನ್ನೂ ಪಡೆಯುತ್ತದೆ. ಆದಾಗ್ಯೂ, ಟಾಟಾ ಟಾಪ್- ಸ್ಪೆಕ್ ಕ್ರಿಯೇಟಿವ್ ಟ್ರಿಮ್​ನಲ್ಲಿ ಕಿಟ್ ಅನ್ನು ನೀಡುತ್ತಿಲ್ಲ. ಟಿಯಾಗೊ, ಟಿಗೋರ್ ಮತ್ತು ಆಲ್ಟ್ರೊಜ್ ನಂತರ ಸಿಎನ್​​ಜಿ ಸರಣಿಯಲ್ಲಿ ಇದು ನಾಲ್ಕನೇ ಕಾರಾಗಿದೆ.

ಪಂಚ್ ಸಿಎನ್​ಜಿ ಪೆಟ್ರೋಲ್ ಪಂಚ್​ನಲ್ಲಿರುವ 1.2 ಲೀಟರ್ ಮೂರು ಸಿಲಿಂಡರ್ ಎಂಜಿನ್​ನೊಂದಿಗೆ ಬರುತ್ತಿದೆ. ಈ ಎಂಜಿನ್ ಪೆಟ್ರೋಲ್​ನಲ್ಲಿ 86 ಬಿಎಚ್​ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಸಿಎನ್​ಜಿಯೊಂದಿಗೆ ಇದು 73.4 ಬಿಎಚ್​​ಪಿ ಮತ್ತು 103 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಾಟಾದ ಸಿಎನ್​​ಜಿ ಕಾರುಗಳನ್ನು ಟಾಟಾದ ಉಳಿದ ಕಾರುಗಳಂತೆಯೇ ಸಿಎನ್​ಜಿ ಮೂಲಕ ನೇರವಾಗಿ ಸ್ಟಾರ್ಟ್​ ಮಾಡಬಹುದು. ಈ ವೈಶಿಷ್ಟ್ಯವನ್ನು ಮಾರುತಿ ಅಥವಾ ಹ್ಯುಂಡೈ ಕಾರುಗಳು ನೀಡುವುದಿಲ್ಲ.

ಇದನ್ನೂ ಓದಿ : mercedes benz : 90 ಲಕ್ಷ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಕ್ರಿಕೆಟಿಗ ಉನಾದ್ಕಟ್​, ಇಲ್ಲಿದೆ ವಿಡಿಯೊ

ಪಂಚ್ ಸಿಎನ್ ಜಿ ಟಾಟಾ ಮೋಟಾರ್ಸ್ ನ ಡ್ಯುಯಲ್ ಸಿಲಿಂಡರ್ ಸೆಟಪ್ ಅನ್ನು ಹೊಂದಿದೆ. ಈಗಾಗಲೇ ಆಲ್ಟ್ರೊಜ್ ಸಿಎನ್​ಜಿಯಲ್ಲಿ ಈ ತಾಂತ್ರಿಕತೆ ಇದೆ. ದೊಡ್ಡ 60 ಲೀಟರ್ ಟ್ಯಾಂಕ್ ಅನ್ನು ಎರಡು ಸಣ್ಣ ಟ್ಯಾಂಕ್​ಗಳಾಗಿ ಸಮಾನವಾಗಿ ವಿಂಗಡಿಸಲಾಗಿದೆ. ಸಿಎನ್​​ಜಿ ಟ್ಯಾಂಕ್​ ಅನ್ನು ಬೂಟ್ ಫ್ಲೋರ್ ಅಡಿಯಲ್ಲಿ ಇರಿಸಲಾಗಿದೆ. ಪಂಚ್ ಸಿಎನ್​ಜಿ 210 ಲೀಟರ್ ಬೂಟ್ ಸ್ಪೇಸ್​ ಹೊಂದಿದೆ. ಇದು ಪೆಟ್ರೋಲ್ ಚಾಲಿತ ಪಂಚ್​ಗಿಂತ 156 ಲೀಟರ್ ಕಡಿಮೆ.

ಫೀಚರ್​ಗಳು

ಇತರ ಟಾಟಾ ಸಿಎನ್​ಜಿ ಕಾರು ಮಾದರಿಗಳಂತೆ ಟೈಲ್​ಗೇಟ್ ನಲ್ಲಿ ‘ಐಸಿಎನ್ ಜಿ’ ಬ್ಯಾಡ್ಜ್ ಅನ್ನು ಸೇರಿಸಿದೆ. ಅದನ್ನು ಹೊರತುಪಡಿಸಿ ಇನ್ಯಾವುದೇ ಬಾಹ್ಯ ವಿನ್ಯಾಸ ಬದಲಾವಣೆಗಳನ್ನು ಮಾಡಿಲ್ಲ. ಅಂತೆಯೇ, ಪಂಚ್ ಸಿಎನ್​​ಜಿಯ ಒಳಾಂಗಣದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ.

ಟಾಪ್- ವೇರಿಯೆಂಟ್​ನಲ್ಲಿ ಪಂಚ್ ಸಿಎನ್ ಜಿ 7.0-ಇಂಚಿನ ಟಚ್ ಸ್ಕ್ರೀನ್ ಮತ್ತು ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಂಪರ್ಕ ಹೊಂದಿದೆ 16-ಇಂಚಿನ ಅಲಾಯ್ ವೀಲ್​ಗಳು, ಎಂಜಿನ್ ಸ್ಟಾರ್ಟ್ / ಸ್ಟಾಪ್ ಬಟನ್, ಆಟೋಮ್ಯಾಟಿಕ್​ ಕ್ಲೈಮೇಟ್​ ಕಂಟ್ರೋಲ್, ಆಟೊ ಪ್ರೊಜೆಕ್ಟರ್ ಹೆಡ್ ಲ್ಯಾಂಪ್​ಗಳು, ಎತ್ತರ-ಸರಿಹೊಂದಿಸಬಹುದಾದ ಡ್ರೈವರ್ ಸೀಟ್ ಮತ್ತು ಸನ್​​ರೂಫ್​ನಂತ ಫೀಚರ್​ಗಳನ್ನು ನೀಡಲಾಗಿದೆ.

ಪಂಚ್ ಸಿಎನ್​​ಜಿ ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಎಕ್​​ಟೆರ್​ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಇದು ಬಿಡುಗಡೆಯಿಂದಲೂ ಸಿಎನ್​​ಜಿ ಪವರ್ ಟ್ರೈನ್​ನೊಂದಿಗೆ ಬಂದಿತ್ತು. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.24 ಲಕ್ಷದಿಂದ ರೂ.8.97 ಲಕ್ಷಗಳಾಗಿದೆ.

Exit mobile version