Site icon Vistara News

Tata Punch CNG : ಟಾಟಾ ಪಂಚ್​ ಸಿಎನ್​ಜಿ ಕಾರಿನಲ್ಲಿ ಇರಲಿದೆ ಸನ್​ರೂಫ್​, ಇನ್ನೇನಿವೆ ವೈಶಿಷ್ಟ್ಯಗಳು?

Tata Punch CNG

ನವ ದೆಹಲಿ: ಟಾಟಾ ಮೋಟಾರ್ಸ್ ಮುಂಬರುವ ವಾರಗಳಲ್ಲಿ ಮೈಕ್ರೊ ಎಸ್​ಯುವಿ ಪಂಚ್ ಸಿಎನ್​ಜಿ (Tata Punch CNG) ಆವೃತ್ತಿಯನ್ನು ರಸ್ತೆಗೆ ಇಳಿಸಲಿದೆ. ಈ ಮೂಲಕ ತನ್ನ ಸಿಎನ್​ಜಿ ಆವೃತ್ತಿಯ ಕಾರುಗಳ ಸಂಖ್ಯೆಯನ್ನು ಹೆಚ್ಚಿಸಲಿದೆ. ಟಾಟಾ ಪಂಚ್ ಸಿಎನ್​​ಜಿಯ ಉತ್ಪಾದನೆಯು ಆರಂಭಗೊಂಡಿದೆ. ಇದು ಟಾಟಾದ ಇತರ ಸಿಎನ್ ಜಿ ಚಾಲಿತ ಕಾರುಗಳಾದ ಟಿಯಾಗೊ ಸಿಎನ್ ಜಿ, ಟಿಗೋರ್ ಸಿಎನ್ ಜಿ ಮತ್ತು ಆಲ್ಟ್ರೋಜ್ ಸಿಎನ್​​ಜಿ ಸಾಲಿಗೆ ಸೇರಿಕೊಳ್ಳಲಿದೆ.

ಆಟೋ ಎಕ್ಸ್​ಪೊ 2023 ರಲ್ಲಿ ಸಿಎನ್​​ಜಿ ಪಂಚ್​ ಕಾರನ್ನು ಪರಿಚಯಿಸಲಾಗಿತ್ತು. ಆದರೆ, ಕಾರಿನ ಮೂಲಕ ಸ್ವರೂಪದಲ್ಲಿ ಯಾವುದೇ ಬದಲಾವಣೆ ಇಲ್ಲದೇ ಕೇವಲ ಸಿಎನ್​ಜಿ ಕಿಟ್​ ನೀಡುವ ಯೋಜನೆ ಅದಾಗಿತ್ತು. ಆದರೆ, ಈ ಕಾರು ರಸ್ತೆಗಿಳಿಯುವ ಮೊದಲು ಕೆಲವೊಂದು ಹೆಚ್ಚಿನ ಫೀಚರ್​ಗಳನ್ನು ಪಡೆದುಕೊಳ್ಳಲಿವೆ ಎಂದು ಹೇಳಲಾಗುತ್ತಿದೆ. ವಿಶೇಷವೆಂದರೆ, ಪಂಚ್ ಸಿಎನ್​​ಜಿ ಕಾರು ಸಿಂಗಲ್-ಪ್ಯಾನ್ ಸನ್​ರೂಫ್ ಪಡೆಯುತ್ತಿದೆ. ಇದು ಟಾಟಾ ಆಲ್ಟ್ರೋಜ್​ನಿಂದ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಆಲ್ಟ್ರೋಜ್ ಸಿಎನ್​​ಜಿಯಂತೆಯೇ ಟಾಟಾ ಪಂಚ್ ಸಿಎನ್​​​ಜಿ ವಿಶಿಷ್ಟವಾದ ಡ್ಯುಯಲ್ ಸಿಲಿಂಡರ್ ಸೆಟಪ್ ಅನ್ನು ಹೊಂದಿರುತ್ತದೆ. ಇದನ್ನು ಬೂಟ್ ಕಂಪಾರ್ಟ್​​ಮೆಂಟ್​ ಫ್ಲೋರ್​​ನ ಕೆಳಗೆ ಬುದ್ಧಿವಂತಿಕೆಯಿಂದ ಇರಿಸಲಾಗುತ್ತದೆ. ಈ ವ್ಯವಸ್ಥೆಯು ಪಂಚ್ ಸಿಎನ್​​ಜಿಗೆ ಪ್ರಾಯೋಗಿಕ ಮತ್ತು ಸಾಕಷ್ಟು ಬೂಟ್ ಸ್ಪೇಸ್ ನೀಡುತ್ತದೆ. ಸಿಎನ್ ಜಿ-ಚಾಲಿತ ಕಾರುಗಳಿಗಿಂತ ಭಿನ್ನವಾಗಿ ಸಿಎನ್​​ಜಿ ಟ್ಯಾಂಕ್ ಲಭ್ಯವಿರುವ ಬೂಟ್ ಸ್ಪೇಸ್ ಗಮನಾರ್ಹವಾಗಿ ಹೆಚ್ಚು ಕೊಡುತ್ತದೆ. ಆಲ್ಟ್ರೋಜ್ ಸಿಎನ್​​ಜಿಯಂತೆ ಹೊಸ ಪಂಚ್ ಸಿಎನ್​​ಜಿ ಕೂಡ ಎರಡು 30-ಲೀಟರ್ ಸಿಎನ್ ಜಿ ಟ್ಯಾಂಕ್ ಗಳನ್ನು ಹೊಂದಿರುತ್ತದೆ, ಇದು ಗರಿಷ್ಠ 60 ಲೀಟರ್ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ : Kia Seltos : ಕಿಯಾ ಸೆಲ್ಟೋಸ್​ ಫೇಸ್​ಲಿಫ್ಟ್​ ಕಾರಿನ ಮೈಲೇಜ್​ ವಿವರ ಬಹಿರಂಗ

ಟಾಟಾ ಪಂಚ್​​ನ ಸಿಎನ್​​ಜಿ ರೂಪಾಂತರಗಳು ಈಗಾಗಲೇ ರಸ್ತೆಯಲ್ಲಿರುವ 1.2-ಲೀಟರ್ ಮೂರು ಸಿಲಿಂಡರ್ ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಸಿಎನ್​​ಜಿ ಮೋಡ್​​ನಲ್ಲಿ, ಪಂಚ್ 77 ಬಿಎಚ್​​ಪಿ ಪವರ್ ಮತ್ತು 97 ಎನ್ಎಂ ಟಾರ್ಕ್ ನೀಡುತ್ತದೆ . ಪ್ರತಿಸ್ಪರ್ಧಿಗಳಿಗಿಂತ ಒಂದು ಅನುಕೂಲವೆಂದರೆ ಪಂಚ್ ಸಿಎನ್​ಜಿ ನೇರವಾಗಿ ಸಿಎನ್​ಜಿ ಮೋಡ್ ನಲ್ಲಿ ಎಂಜಿನ್​ ಸ್ಟಾರ್ಟ್​ ಮಾಡುವ ಆಯ್ಕೆಯನ್ನು ನೀಡುತ್ತದೆ. ಈ ವೈಶಿಷ್ಟ್ಯವನ್ನು ಪ್ರಸ್ತುತ ಇತರ ಪ್ರತಿಸ್ಪರ್ಧಿಗಳು ಕಂಪನಿಗಳು ನೀಡುತ್ತಿಲ್ಲ.

ಇನ್ನೇನಿವೆ ವಿಶೇಷತೆಗಳು

ಸನ್​ರೂಫ್​ ಹೊರತಾಗಿ ಹೊಸ ಪಂಚ್ ಸಿಎನ್ ಜಿ ತನ್ನ ಪೆಟ್ರೋಲ್ ಚಾಲಿತ ಆವೃತ್ತಿಯ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳುತ್ತದೆ. ಇದರಲ್ಲಿ 7 ಇಂಚಿನ ಟಚ್​​ಸ್ಕ್ರೀನ್ ಇನ್ಫೋಟೈನ್​ಮೆಂಟ್​ ಸಿಸ್ಟಮ್​. ಇನ್ಸ್ ಟ್ರೂಮೆಂಟ್ ಕನ್ಸೋಲ್ ನಲ್ಲಿ 7-ಇಂಚಿನ ಟಿಎಫ್​ಟಿ ಎಂಐಡಿ, ಆಟೋಮ್ಯಾಟಿಕ್​ ಕ್ಲೈಮೇಟ್​ ಕಂಟ್ರೋಲ್, ಪುಶ್ ಸ್ಟಾರ್ಟ್-ಸ್ಟಾಪ್ ಬಟನ್ ಮತ್ತು ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವೀಲ್ ಸೇರಿವೆ. ಪಂಚ್ ಸಿಎನ್​ಜಿಯಲ್ಲಿರುವ ಏಕೈಕ ವಿಶಿಷ್ಟ ಅಂಶವೆಂದರೆ ಬೂಟ್ ಡೋರ್​ ಮೇಲೆ ಹಾಕಿರುವ ‘ಐ-ಸಿಎನ್ ಜಿ’ ಬ್ಯಾಡ್ಜ್.

ಮಾರುಕಟ್ಟೆಯಲ್ಲಿ, ಟಾಟಾ ಪಂಚ್ ಸಿಎನ್​​ಜಿ ಹ್ಯುಂಡೈ ಕಂಪನಿಯ ಹೊಸ ಎಕ್ಸ್​ಟೆರ್​ ಸಿಎನ್​​ಜಿಯಿಂದ ಸ್ಪರ್ಧೆಯನ್ನು ಎದುರಿಸಲಿದೆ. ಇದನ್ನು ಇತ್ತೀಚೆಗೆ ಪಂಚ್ ಮತ್ತು ಸಿಟ್ರೋಯನ್​ ಸಿ3 ಗೆ ನೇರ ಪ್ರತಿಸ್ಪರ್ಧಿಯಾಗಿ ಬಿಡುಗಡೆ ಮಾಡಲಾಗತ್ತು/ ಹೆಚ್ಚುವರಿಯಾಗಿ, ಪಂಚ್ ಸಿಎನ್​​ಜಿ ಇದೇ ಬೆಲೆಗೆ ಲಭಿಸುವ ಸಿಎನ್​​ಜಿ ಚಾಲಿತ ಹ್ಯಾಚ್ ಬ್ಯಾಕ್ ಗಳಾದ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಬಲೆನೊ, ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಮತ್ತು ಟಾಟಾದ ಆಲ್ಟ್ರೋಜ್ ಗೆ ಪ್ರತಿಸ್ಪರ್ಧಿಯಾಗಲಿದೆ.

Exit mobile version