ನವ ದೆಹಲಿ: ಟಾಟಾ ಮೋಟಾರ್ಸ್ಗೆ ಹೊಸ ಮಾರುಕಟ್ಟೆ ಸೃಷ್ಟಿಸಿಕೊಟ್ಟ ಟಿಯಾಗೊದ (Tata Tiago) ಸಿಎನ್ಜಿ ವೇರಿಯೆಂಟ್ ಮತ್ತೊಂದು ಬಾರಿ ಅಪ್ಡೇಟ್ ಆಗಿದೆ. ಜತೆಗೆ ಅದರ ಸೆಡಾನ್ ವರ್ಷನ್ ಕೂಡ ಅಪ್ಡೇಟ್ ಆಗಿದೆ. ಇನ್ನೀಗ ಈ ಎರಡು ಕಾರುಗಳು ಹೊಸ ಟ್ವಿನ್ ಸಿಲಿಂಡರ್ ಐಸಿಎನ್ಜಿ ಸೆಟಪ್ನೊಂದಿಗೆ ರಸ್ತೆಗಿಳಿಯಲಿದೆ. ಪ್ರೀಮಿಯಮ್ ಹ್ಯಾಚ್ ಬ್ಯಾಕ್ ಆಲ್ಟ್ರೋಜ್ ಸಿಎನ್ ಜಿಯಲ್ಲಿ ಮೊದಲು ಪರಿಚಯಿಸಲಾದ ಈ ತಾಂತ್ರಿಕತೆಯನ್ನು ಸುಧಾರಿತ ಇಂಧನ ದಕ್ಷತೆಯೊಂದಿಗೆ ಟಿಯಾಗೊ ಮತ್ತು ಟಿಗೋರ್ಗೆ ನೀಡಲಾಗಿದೆ. ಹೊಸ ಟಿಯಾಗೊ ಐಸಿಎನ್ಜಿ ಬೆಲೆಯನ್ನು 6.55 ರೂಪಾಯಿಯಾದರೆ ಅದರ ಸೆಡಾನ್ ಟಿಗೋರ್ ಐಸಿಎನ್ಜಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 7.80 ಲಕ್ಷ ರೂಪಾಯಿ.
ಇದೀಗ ಬಿಡುಗಡೆಗೊಂಡಿರುವ ಟಾಟಾ ಟಿಯಾಗೊ ಐಸಿಎನ್ ಜಿ ಮತ್ತು ಟಿಗೋರ್ ಐಸಿಎನ್ ಜಿ ಅತ್ಯಾಧುನಿಕ ಟ್ವಿನ್ ಸಿಲಿಂಡರ್ ತಂತ್ರಜ್ಞಾನ ಹೊಂದಿದೆ. ಸಾಂಪ್ರದಾಯಿಕ ಒಂದೇ ದೊಡ್ಡ 60 ಲೀಟರ್ ಸಾಮರ್ಥ್ಯದ ಸಿಲಿಂಡರ್ ಅನ್ನು ಬೂಟ್ ಫ್ಲೋರ್ ಕೆಳಗೆ ಎರಡು ಸಮಾನವಾಗಿ ವಿಂಗಡಿಸಿ ಅಳವಡಿಸಲಾಗಿದೆ. ಈ ಹೊಸ ವ್ಯವಸ್ಥೆಯು ಲಭ್ಯವಿರುವ ಬೂಟ್ ಸ್ಥಳವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ/ ಇದು ಪರಿಸರ ಸುಸ್ಥಿರತೆ ಮತ್ತು ಪ್ರಾಯೋಗಿಕತೆ ಎರಡನ್ನೂ ಬಯಸುವ ದೈನಂದಿನ ಪ್ರಯಾಣಿಕರಿಗೆ ಅಗತ್ಯ ಸುಧಾರಣೆಯಾಗಿದೆ.
ಆರು ಮತ್ತು 4 ವೇರಿಯೆಂಟ್ಗಳು
ಟಾಟಾ ಟಿಯಾಗೊ ಐಸಿಎನ್ಜಿಯಿಂದ ಪ್ರಾರಂಭಿಸಿ, ಹ್ಯಾಚ್ ಬ್ಯಾಕ್ ಈಗ ಆರು ವಿಭಿನ್ನ ವೇರಿಯೆಂಟ್ಗಳಲ್ಲಿ ಲಭ್ಯವಿದೆ,. ಎಂಟ್ರಿ ಲೆವೆಲ್ ಟಿಯಾಗೊ ಐಸಿಎನ್ ಜಿ ಎಕ್ಸ್ ಇ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 6,54,900 ರೂಪಾಯಿಗಳಾದರೆ, ಎಕ್ಸ್ಎಮ್ ಕಾರಿನ ಬೆಲೆಯು ರೂ.6,89,900ಗಳಾಗಿದೆ. ಟಾಪ್ ಎಂಡ್ ಝಡ್ + ಬೆಲೆ 8,09,900 ರೂಪಾಯಿಗಳು, ಎಕ್ಸ್ ಝಡ್ + ಡಿಟಿ ಮತ್ತು ಎಕ್ಸ್ ಟಿ ಎನ್ಆರ್ಜಿ ಬೆಲೆ ಕ್ರಮವಾಗಿ 8,19,900 ರೂ. ಮತ್ತು 7,64,900 ರೂಪಾಯಿಗಳಾಗಿದೆ. ಎಕ್ಸ್ ಝಡ್ ಎನ್ಆರ್ಜಿ ವೇರಿಯೆಂಟ್ 8,09,900 ರೂ.ಗಳ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಬಹು ಆಯ್ಕೆಗಳೊಂದಿಗೆ, ಗ್ರಾಹಕರು ತಮ್ಮ ಆದ್ಯತೆಗಳು ಮತ್ತು ಬಜೆಟ್ಗೆ ಸೂಕ್ತ ವೇರಿಯೆಂಟ್ ಆಯ್ಕೆ ಮಾಡಬಹುದು.
ಇದನ್ನೂ ಓದಿ : Maruti Suzuki Alto : ಎಲ್ಲರ ಮೆಚ್ಚಿನ ಆಲ್ಟೊ ಕಾರು 23 ವರ್ಷಗಳಲ್ಲಿ 45 ಲಕ್ಷ ಮಾರಾಟ!
ಟಾಟಾ ಟಿಗೋರ್ ಐಸಿಎನ್ಜಿ ನಾಲ್ಕು ವಿಭಿನ್ನ ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಟಿಗೋರ್ ಐಸಿಎನ್ಜಿ ಎಕ್ಸ್ಎಂ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 7,79,900 ರೂಪಾಯಿ. ಎಕ್ಸ್ಝಡ್ ಕಾರಿನ ಬೆಲೆಯು 8,19,900 ರೂಪಾಯಿ. ಎಕ್ಸ್ ಝಡ್+ ವೇರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 8,84,900 ರೂಪಾಯಿ. ಎಕ್ಸ್ ಝಡ್+ ಎಲ್ಪಿ ವೇರಿಯೆಂಟ್ ಬೆಲೆಯು 8,94,900 ರೂಪಾಯಿ.
ಪವರ್ಟ್ರೇನ್ ಹೇಗಿದೆ?
ಪವರ್ ಟ್ರೇನ್ ಗೆ ಸಂಬಂಧಿಸಿದಂತೆ ಟಾಟಾ ಟಿಯಾಗೊ ಮತ್ತು ಟಿಗೋರ್ ಐಸಿಎನ್ ಜಿ ಮಾದರಿಗಳು ಒಂದೇ ರೀತಿಯ 1.2-ಲೀಟರ್, ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 86 ಬಿಎಚ್ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್ ಜಿ ಮೋಡ್ ನಲ್ಲಿ,ಪವರ್ ಔಟ್ ಪುಟ್ 73 ಬಿಎಚ್ಪಿ ಹಾಗೂ ಗರಿಷ್ಠ ಟಾರ್ಕ್ 95 ಎನ್ಎಂ ಬಿಡುಗಡೆ ಮಾಡುತ್ತದೆ.
ಪಂಚ್ ಕೂಡ ಬಿಡುಗಡೆ
ಟಾಟಾ ಮೋಟಾರ್ಸ್ ಜನಪ್ರಿಯ ಮಿನಿ-ಎಸ್ ಯುವಿಯ ಪಂಚ್ಹೊಸ ಮತ್ತು ಬಹುನಿರೀಕ್ಷಿತ ಸಿಎನ್ ಜಿ ಪುನರಾವರ್ತನೆಯನ್ನು ಸಹ ಬಿಡುಗಡೆ ಮಾಡಿದೆ. ಹೊಸದಾಗಿ ಬಿಡುಗಡೆಯಾದ ಟಾಟಾ ಪಂಚ್ ಸಿಎನ್ ಜಿ ಐದು ವಿಭಿನ್ನ ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಅವುಗಳೆಂದರೆ ಪ್ಯೂರ್, ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಬ್ಸರ್ಪ್ಟೆಡ್ ಮತ್ತು ಅಬ್ಸರ್ಟೆಡ್ ಡ್ಯಾಜಿಲ್ ಎಸ್. ಈ ರೂಪಾಂತರಗಳ ಬೆಲೆಯು 7.10 ಲಕ್ಷ ರೂಪಾಯಿಯಿಂದ ಆರಂಭಗೊಡು 9.68 ಲಕ್ಷಗ ರೂಪಾಯಿ.