ವಿಸ್ತಾರ ನ್ಯೂಸ್, ಬೆಂಗಳೂರು: ಟಾಟಾ ಡೀಲರ್ ಗಳು 2023ರಲ್ಲಿ ತಯಾರಾಗಿ ಮಾರಾಟವಾಗದ ಸ್ಟಾಕ್ ಗಳು ಮತ್ತು ಹೊಸ 2024ರಲ್ಲಿ ತಯಾರಿಸಿದ ಟಿಯಾಗೊ ಇವಿ (Tata Tiago Ev) ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಸ್ಟಾಕ್ ಅವಲಂಬಿಸಿ ಈ ರಿಯಾಯಿತಿಗಳು ಡೀಲರ್ ನಿಂದ ಡೀಲರ್ ಗೆ ಬದಲಾಗುತ್ತಿದೆ. ಸಮಗ್ರ ಕೊಡುಗೆಗಳಲ್ಲಿ ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್ಗಳು ಸೇರಿಕೊಂಡಿವೆ. ಎಲೆಕ್ಟ್ರಿಕ್ ವಾಹನಗಳನ್ನು ಆರಿಸಿಕೊಳ್ಳುವ ಗ್ರಾಹಕರಿಗೆ ನೀಡುವ ಬೋನಸ್ ಕೂಡ ಇದರಲ್ಲಿದೆ.
ಟಿಯಾಗೊ ಇವಿ ಎಂವೈ 2024 ಮಾಡೆಲ್ಗಳಿ ಒಟ್ಟು 35,000 ರೂ.ಗಳವರೆಗೆ ಮತ್ತು ಹಳೆಯ ಮಾಡೆಲ್ಗಳಿ 80,000 ರೂ.ಗಳವರೆಗೆ ರಿಯಾಯಿತಿಯನ್ನು ಪಡೆಯುತ್ತದೆ. 2024 ಮಾಡೆಲ್ಗಳಿಗೆ ಎಲ್ಲಾ ವೇರಿಯೆಂಟ್ಗಳಿಗೆ 15,000 ರೂ.ಗಳ ವಿನಿಮಯ ಬೋನಸ್ ಮತ್ತು 20,000 ರೂ.ಗಳ ಗ್ರೀನ್ ಬೋನಸ್ ಸಿಗಲಿದೆ. ಹಳೆಯ ಟಿಯಾಗೊ ಇವಿ ಮಾಡೆಲ್ಗಳಿಗೆ ಒಟ್ಟು ರಿಯಾಯಿತಿಯು 15,000 ರೂ.ಗಳ ವಿನಿಮಯ ಬೋನಸ್ ಮತ್ತು 65,000 ರೂ.ಗಳವರೆಗೆ ಗ್ರೀನ್ ಬೋನಸ್ ಸಿಗಲಿದೆ. ಟಿಯಾಗೊ ಇವಿ ಎಂಜಿ ಕಾಮೆಟ್, ಸಿಟ್ರನ್ ಇಸಿ 3 ಮತ್ತು ಟಾಟಾ ಪಂಚ್ ಇವಿಗೆ ಪ್ರತಿಸ್ಪರ್ಧಿಯಾಗಿದೆ. ಈ ಕಾರಿನ ಬೆಲೆಯು ರೂ.8.69 ಲಕ್ಷದಿಂದ ರೂ.12.04 ಲಕ್ಷಗಳಾಗಿದೆ.
ಟಿಯಾಗೊ ಇವಿ ಮಿಡ್ ರೇಂಜ್ ಹಾಗೂ ಮತ್ತು ಲಾಂಗ್ ರೇಂಜ್ ಬ್ಯಾಟರಿ ಆಯ್ಕೆಯೊಂದಿಗೆ ಲಭ್ಯವಿದೆ. ಎಂಐಡಿಸಿ ಸೈಕಲ್ನಲ್ಲಿ 250 ಕಿ.ಮೀ ವ್ಯಾಪ್ತಿಯೊಂದಿಗೆ, ಮಿಡ್ ರೇಂಜ್ 19.2 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ ಇದೆ. ಇದು ಮುಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಗೆ ಶಕ್ತಿ ನೀಡುತ್ತದೆ. ಇದು 61 ಬಿಹೆಚ್ ಪಿ ಮತ್ತು 110 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಏತನ್ಮಧ್ಯೆ ಲಾಂಗ್ ರೇಂಜ್ ವೇರಿಯೆಂಟ್ ಎಂಐಡಿಸಿ ಪ್ರಕಾರ 315 ಕಿ.ಮೀ ರೇಂಜ್ ಹೊಂದಿದೆ. ಇದುಜ 24 ಕಿಲೋವ್ಯಾಟ್ ಬ್ಯಾಟರಿಯೊಂದಿಗೆ ರಸ್ತೆಗಿಳಿಯುತ್ತದೆ. 74 ಬಿಹೆಚ್ ಪಿ ಮತ್ತು 114 ಎನ್ಎಂ ಉತ್ಪಾದನೆಯನ್ನು ಇದು ಮಾಡುತ್ತದೆ.
ಟಿಗೋರ್ ಇವಿ ಮೇಲೆ 1.05 ಲಕ್ಷ ರೂ.
ಟಿಯಾಗೊ ಇವಿಗೆ ಜತೆಗೆ ಕಾಂಪ್ಯಾಕ್ಟ್ ಸೆಡಾನ್ ಆಗಿರುವ ಟಿಗೋರ್ ಇವಿ ಒಟ್ಟು 1.05 ಲಕ್ಷ ರೂ.ಗಳವರೆಗೆ ರಿಯಾಯಿತಿ ಪಡೆಯುತ್ತದೆ. 75,000 ರೂ.ಗಳ ಫ್ಲಾಟ್ ಕ್ಯಾಶ್ ಡಿಸ್ಕೌಂಟ್ ಮತ್ತು ಎಲ್ಲಾ ರೂಪಾಂತರಗಳಲ್ಲಿ 30,000 ರೂ.ಗಳ ಎಕ್ಸ್ಚೇಂಜ್ ಬೋನಸ್. ಆದಾಗ್ಯೂ ರಿಯಾಯಿತಿಗಳು 2023ರ ಮಾಡೆಲ್ಗೆ ಈ ತಿಂಗಳ ಅಂತ್ಯದವರೆಗೆ ಮಾತ್ರ ಲಭ್ಯವಿದೆ
ಟಿಗೋರ್ ಇವಿ 315 ಕಿ.ಮೀ ರೇಂಜ್ ಹೊಂದಿದ್ದು, ಇದನ್ನು 26 ಕಿಲೋವ್ಯಾಟ್ ಲಿಥಿಯಂ-ಐಯಾನ್ ಘಟಕವು ಒದಗಿಸುತ್ತದೆ. ಈ ಬ್ಯಾಟರಿಯು 75 ಬಿಹೆಚ್ ಪಿ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟರ್ ಇದೆ. ಟಿಗೋರ್ ಇವಿ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಇದರ ಬೆಲೆಯು ರೂ.12.49 ಲಕ್ಷದಿಂದ ರೂ.13.75 ಲಕ್ಷಗಳಾಗಿದೆ.