ಮುಂಬಯಿ | ಟಿಯಾಗೊ ಕಾರಿನ ಕ್ರಾಸ್ಓವರ್ ಮಾದರಿಯ ಟಿಯಾಗೊ NRG ಬಿಡುಗಡೆಗೊಂಡು ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ Tata Motors ಟಿಯಾಗೊ NRG ಕಾರನ್ನು ಮಂಗಳವಾರ ಬಿಡುಗಡೆ ಮಾಡಿದೆ. ಇದರಿಂದಾಗಿ NRG ಮಾದರಿಗೆ ಹೊಸ ಸೇರ್ಪಡೆಯಾಗಿದೆ. ಎನ್‌ಆರ್‌ಯಲ್ಲಿ ಇದುವರೆಗೆ XZ ಹಾಗೂ ಅದರ ಆಟೊಮ್ಯಾಟಿಕ್ ಆವೃತ್ತಿ ಮಾತ್ರ ಇತ್ತು. ಇದೀಗ XTಯ ಮೂಲಕಕ ಎರಡನೇ ಆಯ್ಕೆ ಲಭಿಸಿದೆ.
ಯುವ ಸಮುದಾಯವನ್ನು ಆಕರ್ಷಿಸುವ ಉದ್ದೇಶದಿಂದ XT ಮಾದರಿಯ ಕಾರನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿತ್ತು. ದೊಡ್ಡ ಪ್ರಮಾಣದ ಯಶಸ್ಸು ಸಾಧಿಸದಿದ್ದರೂ ಯುವ ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು. ಆ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ XT ಮಾದರಿಯನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದೆ. ಕಾರಿನ ಎಕ್ಸ್‌ಶೋರೂಮ್ ಬೆಲೆ ೬.೨೪ ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.
ಎನ್‌ಆರ್‌ಜಿ XT ಕಾರಿನಲ್ಲಿ ೧೪ ಇಂಚಿನ ಹೈಪರ್‌ಸ್ಟೈಲ್ ವೀಲ್ ಇದ್ದು, ಹರ್ಮನ್ ತಂತ್ರಜ್ಞಾನ ಹೊಂದಿರುವ ೩.೫ ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಎತ್ತರವನ್ನು ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್‌ಗಳು, ಫಾಗ್ ಲ್ಯಾಂಪ್‌ಗಳನ್ನು ಹೊಂದಿವೆ.
ಟಿಯಾಗೊ XT ಪೆಟ್ರೋಲ್ ವೈವಿಧ್ಯಕ್ಕಾಗಿ ಸಂಸ್ಥೆಯು ಐಚ್ಛಿಕ ರಿದಮ್ ಪ್ಯಾಕ್ ಸೇರಿಸಿದ್ದು ಇದು 7” ಟಚ್‍ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ಹಿಂಬದಿ ಕ್ಯಾಮರಾ ಮತ್ತು 4 ಟ್ವೀಟರ್ ಗಳನ್ನು ಹೊಂದಿದೆ. ಹೊಸ ಟಿಯಾಗೊ XT ಟ್ರಿಮ್‍ನಲ್ಲಿ ಹೆಚ್ಚುವರಿ ರೂ. INR 30,000 ಪಾವತಿಸುವ ಮೂಲಕ ರಿದಮ್ ಪ್ಯಾಕ್ ಪಡೆದುಕೊಳ್ಳಬಹುದು. ಮೇಲಾಗಿ, ಹೊಸ XT ಟ್ರಿಮ್, ಪ್ರಸ್ತುತ ಇರುವ ಒಪಾಲ್ ವ್ಹೈಟ್, ಡೇಟೋನಾ ಗ್ರೇ, ಅರಿಝೋನಾ ಬ್ಲೂ, ಮತ್ತು ಫ್ಲೇಮ್ ರೆಡ್ ಬಣ್ಣದ ಆಯ್ಕೆಗಳ ಜೊತೆಗೆ ಮಿಡ್‍ನೈಟ್ ಪ್ಲಾಟಿನಮ್‍ನ ಪರಿಚಯವನ್ನು ಒಳಗೊಂಡಿದೆ.
ಇದನ್ನೂ ಓದಿ | EV ಉತ್ಪಾದನೆಗೆ ಟಾಟಾ ಹೂಡಿಕೆ ಹೆಚ್ಚಳ