ನವ ದೆಹಲಿ: ಟಾಟಾ ಮೋಟಾರ್ಸ್ನ ಮಿನಿ ಎಸ್ಯುವಿ ಕಾರು ಟಾಟಾ ಪಂಚ್ನ (Tata Punch CNG) ಸಿಎನ್ಜಿ ಮಾಡೆಲ್ ಗ್ರೇಟರ್ ನೊಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿದೆ. ಇದಕ್ಕೆ ಐಸಿಎನ್ಜಿ ಎಂದು ಕರೆಯಲಾಗುತ್ತಿದೆ. ವಿಶೇಷ ಏನೆಂದರೆ ಈ ಕಾರಿನಲ್ಲಿ ಎರಡರೆರಡು ಸಿಎನ್ಜಿ ಸಿಲಿಂಡರ್ಗಳನ್ನು ನೀಡಲಾಗಿದ್ದು, ಬೂಟ್ ಸ್ಪೇಸ್ ಕಡಿಮೆಯಾಗದಂತೆ ನೋಡಿಕೊಳ್ಳಲಾಗಿದೆ.
ನೋಟದ ವಿಚಾರಕ್ಕೆ ಬಂದಾಗ ಕಾರು ಪೆಟ್ರೋಲ್ ಅವೃತ್ತಿಯ ಕಾರಿನಂತೆಯೇ ಇದೆ. ಆದರೆ, ಬೂಟ್ ಡೋರ್ನಲ್ಲಿ ಸಿಎನ್ಜಿ ಎಂದು ಬರೆಯಲಾಗಿದೆ. ಇಂಟೀರಿಯರ್ನಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬದಲಾಗಿ ಪೆಟ್ರೋಲ್ ಮತ್ತು ಸಿಎನ್ಜಿ ಇಂಧನವನ್ನು ಬದಲಾಯಿಸಿಕೊಳ್ಳುವುದಕ್ಕೆ ಸಿಎನ್ಜಿ ಬಟನ್ ನೀಡಲಾಗಿದೆ.
ಕಾರಿನಲ್ಲಿ 1.2 ಲೀಟರ್ನ ರೆವಟ್ರಾನ್ ಎಂಜಿನ್ ಇದೆ. ಸಿಎನ್ಜಿ ಬಳಸಿ ಈ ಎಂಜಿನ್ 6000 ಆರ್ಪಿಎಮ್ನಲ್ಲಿ 75.94 ಬಿಎಚ್ಪಿ ಪವರ್ ಬಿಡುಗಡೆ ಮಾಡಿದರೆ, ಗರಿಷ್ಠ 97 ಎನ್ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಇದೇ ಎಂಜಿನ್ ಪೆಟ್ರೋಲ್ ಮೂಲಕ 84.82 ಬಿಎಚ್ಪಿ ಪವರ್ ಹಾಗೂ 113 ಎನ್ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಪಂಚ್ ಸಿಎನ್ಜಿ ಕೇವಲ ಮ್ಯಾನುಯಲ್ ಗೇರ್ಬಾಕ್ಸ್ನಲ್ಲಿ ಮಾತ್ರ ಲಭ್ಯವಿರಲಿದೆ.
ಸುರಕ್ಷತೆಯ ವಿಚಾರಕ್ಕೆ ಬಂದಾಗ ಟಾಟಾ ಮೋಟಾರ್ಸ್ ಅತಿಯಾದ ಕಾಳಜಿ ವಹಿಸಿದೆ. 6 ಏರ್ಬ್ಯಾಗ್ಗಳು, ಥರ್ಮಲ್ ಪ್ರೊಟೆಕ್ಷನ್ ಫೈರ್ ಪ್ರೊಟೆಕ್ಷನ್, ಲೀಕ್ ಡಿಟೆಕ್ಷನ್ ವ್ಯವಸ್ಥೆಯಲ್ಲಿ ಕಲ್ಪಿಸಿದೆ.
ಎಲೆಕ್ಟ್ರಿಕ್ ಸನ್ರೂಫ್, ಪ್ರೊಜೆಕ್ಟರ್ ಹೆಡ್ಲ್ಯಾಂಪ್, 16 ಇಂಚಿನ ಡೈಮಂಡ್ ಕಟ್ ಅಲಾಯ್ವೀಲ್, 7 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿ ಫೀಚರ್ಗಳನ್ನು ನೀಡಲಾಗಿದೆ.
ಇದನ್ನೂ ಓದಿ | Auto Expo 2023 | ವಿಭಿನ್ನ ವಿನ್ಯಾಸದ ಮೂಲಕ ಗಮನ ಸೆಳೆದ ಟಾಟಾದ ಕರ್ವ್; ಇವಿ, ಪೆಟ್ರೋಲ್ ಎಂಜಿನ್ನಲ್ಲಿ ಲಭ್ಯ