Site icon Vistara News

Jeep Compass : ಇನ್ನು ಮುಂದೆ ಕಂಪಾಸ್ ಪೆಟ್ರೋಲ್​ ಎಂಜಿನ್​ ಲಭ್ಯವಿರುವುದಿಲ್ಲ; ಯಾಕೆ ಗೊತ್ತೇ?

The Compass petrol engine will no longer be available; Do you know why?

#image_title

ನವ ದೆಹಲಿ : ಪವರ್​ಫುಲ್​ ಎಸ್​ಯುವಿ (Jeep Compass) ಜೀಪ್​ ಕಂಪಾಸ್​ನ 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್​ ಭಾರತದಲ್ಲಿ ಏಪ್ರಿಲ್​ ಬಳಿಕ ಜಾರಿಗೆ ಬಂದಿರುವ ಬಿಎಸ್ 6 ಹಂತ2ದ ಮಾಲಿನ್ಯ ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸುತ್ತಿಲ್ಲ. ಹೀಗಾಗಿ ಕಂಪನಿಯು ಕಂಪಾಸ್ ಪೆಟ್ರೋಲ್ ಎಂಜಿನ್​ ಕಾರುಗಳನ್ನು ಮಾರಾಟವನ್ನು ಸ್ಥಗಿತಗೊಳಿಸಿದೆ. ಕಂಪನಿಯು ಡಿಸೆಂಬರ್ 2022ರಲ್ಲಿ ಮ್ಯಾನುಯಲ್​ ಪೆಟ್ರೋಲ್​ ಕಾರುಗಳನ್ನು ಹಂತಹಂತವಾಗಿ ನಿಲ್ಲಿಸಿತ್ತು. ಕೊನೆಯಲ್ಲಿ ಪೆಟ್ರೋಲ್ ಎಂಜಿನ್ ಡಿಸಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿತ್ತು. ಅದರ ಮಾರಾಟವನ್ನು ಇದೀಗ ನಿಲ್ಲಿಸಲಾಗಿದೆ. ವೆಬ್​ಸೈಟ್​ ಹಾಗೂ ಶೋರೂಮ್​ಗಳ ಮಾರಾಟ ಪಟ್ಟಿಯಲ್ಲಿ ಈ ಕಾರುಗಳು ಲಭ್ಯವಿಲ್ಲ. ಪೆಟ್ರೊಲ್​ ಎಂಜಿನ್​ಗಳ ಮಾರಾಟ ನಿಲ್ಲಿಸಿರುವ ಕಾರಣ ಕಂಪಾಸ್ ಡೀಸೆಲ್​ ಮಾತ್ರ ಮುಂದುವರಿಯಲಿದೆ.

ಜಾಗತಿಕವಾಗಿ ಕಟ್ಟುನಿಟ್ಟಾದ ಮಾಲಿನ್ಯ ಮಾನದಂಡಗಳು ಜಾರಿಗೆ ಬಂದಿರುವ ಕಾರಣ ಜೀಪ್ ಈಗಾಗಲೇ ಜಾಗತಿಕವಾಗಿ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್​​ ಉತ್ಪಾದನೆಯನ್ನು ನಿಲ್ಲಿಸಿದೆ. ಈ ಎಂಜಿನ್ ದಕ್ಷಿಣ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಲಭ್ಯವಿತ್ತು. 2020ರಲ್ಲಿ ಫೇಸ್ ಲಿಫ್ಟೆಡ್ ಕಂಪಾಸ್ ಬಂದಾಗ ಪರಿಣಾಮಕಾರಿ 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಕೆ ಮಾಡಲಾಯಿತು. ಆದಾಗ್ಯೂ, ಫೇಸ್ ಲಿಫ್ಟೆಡ್ ಮಾದರಿಯಲ್ಲಿ 1.4 ಲೀಟರ್ ಎಂಜಿನ್​ ಮುಂದುವರಿದ ಕೆಲವೇ ಮಾರುಕಟ್ಟೆಗಗಳಲ್ಲಿ ಭಾರತವೂ ಒಂದಾಗಿತ್ತು. ಭಾರತದಲ್ಲಿ ಆ ವೇಳೆ ಬಿಎಸ್​6 ಮಾನದಂಡ ಇತ್ತು. ಇದೀಗ ಹೊಸ ಮಾನದಂಡಗಳು ಬಂದಿರುವ ಕಾರಣ ಪೆಟ್ರೋಲ್​ ಎಂಜಿನ್​ ಪೂರೈಕೆ ಸ್ಥಗಿತವಾಗಲಿದೆ.

ಇದನ್ನೂ ಓದಿ : Hyundai Exter : ಹ್ಯುಂಡೈ ನೂತನ ಎಸ್​ಯುವಿ ಎಕ್ಸ್​ಟೆರ್​ ಅನಾವರಣ, ಬುಕಿಂಗ್ ಆರಂಭ

ಭಾರತದಲ್ಲಿ ಕಂಪಾಸ್​ನ ಮಾರಾಟದಲ್ಲಿ ಪೆಟ್ರೋಲ್ ಎಂಜಿನ್​ ಪಾಳು ಶೇಕಡಾ 50ರಿಂದ 60ರಷ್ಟಿತ್ತು. ಯಾಕೆಂದರೆ ಡೆಲ್ಲಿ ಸೇರಿದಂತೆ ಕೆಲವು ಮೆಟ್ರೋನಗರಗಳಲ್ಲಿ ಇದು ಒಟ್ಟು ಮಾರಾಟದ 80 ಪ್ರತಿಶತ ಹೆಚ್ಚಾಗಿದೆ. ಕಂಪಾಸ್ ತಿಂಗಳಿಗೆ ಸರಾಸರಿ 650 ಯೂನಿಟ್​​ಗಳು ಮಾರಾಟವಾಗುತ್ತಿದ್ದವರು.ಅ ದರಲ್ಲಿ ಪೆಟ್ರೋಲ್ ಮಾಡೆಲ್​ಗಳ ಪಾಲು ತಿಂಗಳಿಗೆ 350-400 ಯುನಿಟ್​​ಗಳಷ್ಟಿವೆ. ಇದೀಗ ಪೆಟ್ರೋಲ್​ ಎಂಜಿನ್​ ಮಾರಾಟ ಸ್ಥಗಿತಗೊಂಡಿರುವ ಕಾರಣ ಗ್ರಾಹರಿಗೆ ಆಯ್ಕೆ ಇಲ್ಲದಂತಾಗಿದೆ. ಏತನ್ಮಧ್ಯೆ, ಭಾರತದಲ್ಲಿ 2.4-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್​ನ ಕಂಪಾಸ್​ ಉತ್ಪಾದನೆಯಾಗಿ ವಿದೇಶಗಳಿಗೆ ರಫ್ತು ಆಗುತ್ತದೆ. ಇದು ಕೂಡ ಈಗ ಭಾರತದ ಮಾರುಕಟ್ಟೆಗೆ ಸೂಕ್ತವಾಗಿಲ್ಲ.

ಮೂರು ವರ್ಷ ಬೇಕು

ಹೊಸ ಮಾನದಂಡಗಳಿಗೆ ಬೇಕಾದ ಎಂಜಿನ್​ಗಳನ್ನು ತಯಾರಿಸಲು ಕಂಪನಿಯೊಂದು ಮೂರು ವರ್ಷ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಭಾರತದಲ್ಲಿ 1.3 ಲೀಟರ್​​ನ ಪೆಟ್ರೋಲ್​ ಎಂಜಿನ್​ ತಯಾರಿಸಬಹುದಾಗಿತ್ತು. ಹೀಗಾಗಿ ಭಾರತದಲ್ಲಿ ಕಂಪಾಸ್​ನ ಪೆಟ್ರೋಲ್​ ಎಂಜಿನ್​ ಸಿಗಬೇಕಾದರೆ ಮೂರು ವರ್ಷ ಕಾಯಬೇಕಾಗುತ್ತದೆ. ಹೀಗಾಗಿ 2026ರಲ್ಲಿ ಕಾರು ಲಭ್ಯವಾಗಲಿದೆ.

2.0 ಲೀಟರ್​ ಡೀಸೆಲ್​ ಎಂಜಿನ್​ ಕೂಡ ಸ್ಥಗಿತ

ಪೆಟ್ರೋಲ್ ವೇರಿಯೆಂಟ್​ನ ಜತೆಗೆ ಜೀಪ್ 2.0-ಲೀಟರ್ ಡೀಸೆಲ್ ಎಂಜಿನ್ ಮತ್ತು 4×4 ಡ್ರೈವ್ ಟ್ರೇನ್ ಕೂಡ ಸ್ಥಗಿತವಾಗಲಿದೆ. ಜೀಪ್ ಇಂಡಿಯಾ ವೆಬ್​ಸೈಟ್​​ನನ ಪಟ್ಟಿಯಿಂದ ಈ ಮಾಡೆಲ್​ ಅನ್ನು ತೆಗೆದುಹಾಕಲಾಗಿದೆ. ಆದಾಗ್ಯೂ ಕೆಲವು ವಿತರಕರು ಮಾರಾಟವಾಗದ ಸ್ಟಾಕ್ ಅನ್ನು ನೀಡುತ್ತಿದೆ.

ಜೀಪ್ ಇಂಡಿಯಾಗೆ ಪರಿಣಾಮವೇನು?

ಭವಿಷ್ಯದಲ್ಲಿ ಭಾರತದಲ್ಲಿ ಬ್ರಾಂಡ್​ನ ಪ್ರಮುಖ ಬ್ರಾಂಡ್​​ಗಳಾದ ಕಂಪಾಸ್ ಮತ್ತು ಮೆರಿಡಿಯನ್ ಏಕೈಕ ಡೀಸೆಲ್ ಎಂಜಿನ್​ನೊಂದಿಗೆ ಮಾತ್ರ ಮುಂದುವರಿಯಲಿದೆ. ಅದೇ ರೀತಿ ಗ್ರ್ಯಾಂಡ್ ಚೆರೋಕಿ ಮತ್ತು ರಾಂಗ್ಲರ್ ಪೆಟ್ರೋಲ್ ಎಂಜಿನ್​ನಲ್ಲಿ ಮಾತ್ರ ಲಭ್ಯವಿದೆ. ಪೆಟ್ರೋಲ್ ಮಾಡೆಲ್​​ಗಳು ಕಂಪಾಸ್ ಮಾರಾಟದಲ್ಲಿ ಹೆಚ್ಚು ಪಾಲು ಪಡೆದಿದ್ದ ಕಾರಣ ಪರಿಮಾಣಗಳು ಗಮನಾರ್ಹ ಕುಸಿತ ಕಾಣಬಹುದು.

Exit mobile version