Site icon Vistara News

Tata Nexon: ಹೊಸ 10.25 ಇಂಚಿನ ಟಚ್ ಸ್ಕ್ರೀನ್​ನೊಂದಿಗೆ ಬರುತ್ತಿದೆ ನೆಕ್ಸಾನ್​ ಇವಿ

Nexon Ev touchscreen

#image_title

ಮುಂಬಯಿ: ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ ಮ್ಯಾಕ್ಸ್ ಎಕ್ಸ್ ಝಡ್ + ಲುಕ್ಸ್ ಟ್ರಿಮ್ ಅನ್ನು ಅಪ್​ಗ್ರೇಡ್​ ಮಾಡಿದೆ. ಈಗ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಆವೃತ್ತಿಯ ಬಳಿಕದ ಆವೃತ್ತಿಗಳು 10.25 ಇಂಚಿನ ಟಚ್ ಸ್ಕ್ರೀನ್​ನೊಂದಿಗೆ ರಸ್ತೆಗಿಳಿಯಲಿದೆ. 3.3 ಕಿಲೋವ್ಯಾಟ್ ಚಾರ್ಜರ್ ಹೊಂದಿರುವ ಎಕ್ಸ್ ಝಡ್ + ಲುಕ್ಸ್ ನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.18.79 ಲಕ್ಷ ರೂಪಾಯಿ. ಟಾಟಾ ಮೋಟಾರ್ಸ್ ಈ ಟ್ರಿಮ್ ಅನ್ನು 7.2 ಕಿಲೋವ್ಯಾಟ್ ಚಾರ್ಜರ್ ನೊಂದಿಗೆ 19.29 ಲಕ್ಷ ರೂಪಾಯಿಗೆ ನೀಡುತ್ತಿದೆ.

ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಆವೃತ್ತಿಯೊಂದಿಗೆ ಪರಿಚಯಿಸಲಾದ ಹೊಸ 10.25 ಇಂಚಿನ ಟಚ್ ಸ್ಕ್ರೀನ್ ಅನ್ನು ಈ ಹೊಸ ಟ್ರಿಮ್​​ಗೆ ಸೇರಿಸಲಾಗಿದೆ. ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ, ಸುಧಾರಿತ ರಿವರ್ಸ್ ಕ್ಯಾಮೆರಾ ಮತ್ತು ಇಂಟಿಗ್ರೇಟೆಡ್ ವಾಯ್ಸ್ ಅಸಿಸ್ಟೆಂಟ್ ಇತರ ಫೀಚರ್​​ಗಳನ್ನು ಸೇರಿಸಲಾಗಿದೆ.

ಟಾಟಾ ಮೋಟಾರ್ಸ್ ಹೊಸ ಟಚ್ ಸ್ಕ್ರೀನ್ ಅನ್ನು ಮೊದಲು ಹ್ಯಾರಿಯರ್ ಮತ್ತು ಸಫಾರಿ ಎಸ್​​ಯುವಿಗಳ ರೆಡ್ ಡಾರ್ಕ್ ಆವೃತ್ತಿಗಳೊಂದಿಗೆ ಪರಿಚಯಿಸಿತ್ತು. ಆದರೆ ನೆಕ್ಸಾನ್ ರೆಡ್ ಡಾರ್ಕ್ ಆವೃತ್ತಿಯೊಂದಿಗೆ ಕೊಟ್ಟಿರಲಿಲ್ಲ. ಹ್ಯಾರಿಯರ್​ ಮತ್ತು ಸಫಾರಿ ಎಸ್​​ಯುವಿಗಳು ಹೊಸ ಟಚ್ ಸ್ಕ್ರೀನ್ ಜತೆಗೆ ಎಡಿಎಎಸ್ ಸುರಕ್ಷತಾ ಫೀಚರ್​ ಅನ್ನು ಪಡೆದುಕೊಂಡಿದೆ. ಇಡೀ ನೆಕ್ಸಾನ್ ಸೀರಿಸ್​ಗೆ ಇದು ಇನ್ನೂ ಎಂಟ್ರಿಯಾಗಿಲ್ಲ.

ನೆಕ್ಸಾನ್ ಇವಿ ಮ್ಯಾಕ್ಸ್ ಪವರ್ ಟ್ರೇನ್

ನೆಕ್ಸಾನ್ ಇವಿ ಮ್ಯಾಕ್ಸ್ 40.5 ಕಿಲೋವ್ಯಾಟ್ ಬ್ಯಾಟರಿ ಹೊಂದಿದೆ. ಇದು ಎಆರ್​ಎಐ ಪ್ರಕಾರ 453 ಕಿ.ಮೀ ರೇಂಜ್​ ಹೊಂದಿದೆ. ನೈಜ ಸವಾರಿಯ ಪರೀಕ್ಷೆಯಲ್ಲಿ ಇದು ಸರಾಸರಿ 266 ಕಿ.ಮೀ ಎಂದು ಒಡುತ್ತಿದೆ. ಸಿಂಗಲ್ ಎಲೆಕ್ಟ್ರಿಕ್ ಮೋಟರ್​ನಿಂದ ಮುಂಭಾಗದ ಚಕ್ರಗಳಿಗೆ ಪವರ್ ನೀಡಲಾಗುತ್ತದೆ. ಇದು 143 ಬಿಹೆಚ್​ಪಿ ಪವರ್​ ಮತ್ತು 250 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ.

ಇದನ್ನೂ ಓದಿ : Hyundai Motor : ಹ್ಯುಂಡೈ ಎಕ್ಸ್​ಟೆರ್​ ಕಾರಿನ ಹಿಂಭಾಗದ ವಿನ್ಯಾಸ ಬಹಿರಂಗ

ಇದು ಸ್ಟ್ಯಾಂಡರ್ಡ್ ಆಗಿ ಎರಡು ಚಾರ್ಜರ್ ಗಳನ್ನು ಪಡೆಯುತ್ತದೆ. 3.3 ಕಿಲೋವ್ಯಾಟ್ ಮತ್ತು 7.2 ಕಿಲೋವ್ಯಾಟ್ ಚಾರ್ಜರ್​ಗಳು. ಮೊದಲನೆಯದನ್ನು ಬಳಸಿಕೊಂಡು, ಬ್ಯಾಟರಿಯನ್ನು 15 ಗಂಟೆಗಳಲ್ಲಿ ಶೇಕಡಾ 10-100 ಚಾರ್ಜ್ ಮಾಡಬಹುದು. ಆದರೆ ಎರಡನೆಯ ಚಾರ್ಜರ್​​ನೊಂದಿಗೆ 0-100 ಪ್ರತಿಶತದಿಂದ ಚಾರ್ಜ್ ಮಾಡಲು 6.5 ಗಂಟೆ ಸಾಕು. ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ 50 ಕಿಲೋವ್ಯಾಟ್ ಡಿಸಿ ಫಾಸ್ಟ್ ಚಾರ್ಜಿಂಗ್ ಸಪೋರ್ಟ್​ ಮಾಡುತ್ತದೆ. ಇದು ಟಾಟಾ ಪ್ರಕಾರ, 56 ನಿಮಿಷಗಳಲ್ಲಿ 0-80 ಪ್ರತಿಶತದಷ್ಟು ಬ್ಯಾಟರಿಯನ್ನು ರೀಚಾರ್ಜ್​ ಮಾಡುತ್ತದೆ.

ಪ್ರತಿಸ್ಪರ್ಧಿಗಳು

ನೆಕ್ಸಾನ್ ಇವಿ ಮ್ಯಾಕ್ಸ್ ಹೊಸದಾಗಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್​ಯುವಿಗೆ 400ಗೆ ಪೈಪೋಟಿ ನೀಡುತ್ತದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15.99 ಲಕ್ಷದಿಂದ ರೂ.19.19 ಲಕ್ಷ ರೂಪಾಯಿಗಳು.

Exit mobile version