ನವ ದೆಹಲಿ: ಇದೀಗ ಮಾರುಕಟ್ಟೆಗೆ ಇಳಿಯುತ್ತಿರುವ ಸ್ಕೂಟರ್ಗಳೆಲ್ಲವೂ ಅದ್ಭುತ ಫೀಚರ್ಗಳನ್ನು ಹೊಂದಿವೆ. ರೈಡಿಂಗ್ ಮೋಡ್, ಡಿಜಿಟಲ್ ಸ್ಕ್ರೀನ್ ಮತ್ತು ಮೊಬೈಲ್ ಚಾರ್ಜರ್ ಸೇರಿದಂತೆ ಅತ್ಯಾಕರ್ಷಕ ಫೀಚರ್ಗಳನ್ನು ಹೊಂದಿವೆ. ಹೊಸ ಪೀಳಿಗೆಯ ಸವಾರರು ಇಂಥ ಫೀಚರ್ಗಳಿಗೆ ಬೇಡಿಕೆ ಇಡುವ ಕಾರಣ ಕಂಪನಿಗಳು ಜಿದ್ದಿಗೆ ಬಿದ್ದು ಫೀಚರ್ಗಳನ್ನು ನೀಡುತ್ತಿವೆ. ಈ ರೀತಿಯಾಗಿ ಹೊಸ ಹೊಸ ಫೀಚರ್ಗಳನ್ನು ನೀಡಿರುವ ಹೊರತಾಗಿಯೂ ಒಂದು ಲಕ್ಷ ರೂಪಾಯಿ ಒಳಗೆ ದೊರೆಯುವ ಸ್ಕೂಟರ್ಗಳು ಯಾವುದೆಂದು ನೋಡೋಣ.
ಟಿವಿಎಸ್ ಜುಪಿಟರ್ (TVS Jupiter)
ಟಿವಿಎಸ್ ಜುಪಿಟರ್ನಲ್ಲಿ ಹಲವಾರು ಸಿಕ್ಕಾಪಟ್ಟೆ ಫೀಚರ್ಗಳೊಂದಿಗೆ ಮಾರುಕಟ್ಟೆಗೆ ಇಳಿದಿದೆ. ಡಿಜಿಟಲ್ ಸ್ಪೀಡೋಮೀಟರ್, ಐಟಚ್ ಸ್ಟಾರ್ಟ್, ಮೊಬೈಲ್ ಚಾರ್ಜರ್, ಅಜೆಸ್ಟೆಬಲ್ ವಿಂಡ್ಸ್ಕೀನ್, ಗ್ಯಾಸ್ ಚಾರ್ಜ್ಡ್ ರಿಯರ್ ಸಸ್ಪೆನ್ಷನ್ ಇದು ಹೊಂದಿದೆ. ಟ್ಯೂಬ್ಲೆಸ್ ಟೈರ್, ಬ್ಲೂಟೂಥ್ ಕನೆಕ್ಷನ್ ಇದರಲ್ಲಿದೆ. ಈ ಸ್ಕೂಟರ್ ಭಾರತದಲ್ಲಿ 83,605 ರೂಪಾಯಿಂದ ಆರಂಭಗೊಂಡು 90,405 ರೂಪಾಯಿಯೊಳಗೆ ಲಭ್ಯವಾಗುತ್ತದೆ. (ಎಕ್ಸ್ಶೋರೂಮ್).
ಸುಜುಕಿ ಆಕ್ಸೆಸ್ 125 (Suzuki Access 125)
ಈ ಸ್ಕೂಟರ್ ಭಾರತದಲ್ಲಿ ಲಭ್ಯವಿರುವ ಅತಿ ಹೆಚ್ಚು ಫೀಚರ್ಗಳನ್ನು ಹೊಂದಿರುವ ಸ್ಕೂಟರ್ ಆಗಿದೆ. ಎಲ್ಇಡಿ ಹೆಡ್ಲೈಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಷನ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಸ್ವಿಚ್ ಹೊಂದಿದೆ. ಈ ಸ್ಕೂಟರ್ಗೆ 79, 400 ರೂಪಾಯಿಂದ ಆರಂಭಗೊಂಡು 85,500 ರೂಪಾಯಿ ತನಕ ಇದೆ.
ಟಿವಿಎಸ್ ಎನ್ಟಾರ್ಕ್ 125 (TVS Ntorq 125)
ಟಿವಿಎಸ್ನ ಪವರ್ಫುಲ್ ಹಾಗೂ ಅತ್ಯಾಕರ್ಷಕ ಸ್ಕೂಟರ್ ಇದಾಗಿದೆ. ಇದರಲ್ಲಿ T ಶೇಪ್ ಹೊಂದಿರುವ ಟೇಲ್ ಲ್ಯಾಂಪ್, ಬ್ಯಾಟ್ವಿಂಗ್ ಎಲ್ಇಡಿ ಡಿಆರ್ಎಲ್ಗಳಿವೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ಗೆ ಬ್ಲೂಟೂತ್ ಕನೆಕ್ಟ್ ಮಾಡಲು ಸಾಧ್ಯವಿದೆ. ಟೆಲಿಸ್ಕೋಪಿಕ್ ಸಸ್ಪೆನ್ಷನ್ ಇದರ ಮತ್ತೊಂದು ಫೀಚರ್. ಇದರ ಆರಂಭಿಕ ಎಕ್ಸ್ಶೋರೂಮ್ ಬೆಲೆ 84, 836 ರೂಪಾಯಿ.
ಹೀರೋ ಡೆಸ್ಟಿನಿ 125 (Hero Destini 125)
ಅನಲಾಗ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಇ3ಎಸ್ ಫ್ಯುಯಲ್ ಸೇವಿಂಗ್ ಟೆಕ್ನಾಲಜಿ, ಫ್ರಂಟ್ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಈ ಸ್ಕೂಟರ್ನಲ್ಲಿದೆ. ಇದರ ಆರಂಭಿಕ ಬೆಲೆ 78, 988 ರೂಪಾಯಿ.
ಹೀರೋ ಮಯೀಸ್ಟ್ರೋ ಎಡ್ಜ್ 125 (Hero Maestro Edge 125)
ಈ ಸ್ಕೂಟರ್ನ ಬೆಲೆ 79,356 ರೂಪಾಯಿಂದ ಆರಂಭಗೊಂಡು 83,806 ರೂಪಾಯಿ ತನಕ ಇದೆ. ಇದು ಡಿಸ್ಕ್ ಬ್ರೇಕ್, ಅಲಾಯ್ ವೀಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿ ಫೀಚರ್ಗಳನ್ನು ಹೊಂದಿದೆ. ಎಲ್ಜಿಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಬ್ಲೂಟೂತ್ ಕನೆಕ್ಟಿವಿಟಿಯನ್ನು ಇದು ಹೊಂದಿದೆ. ಇದರಲ್ಲಿ ಟರ್ನ್ಬೈ ಟರ್ನ್ ನ್ಯಾವಿಗೇಷನ್ ಕೂಡ ಇದೆ.
ಯಮಹಾ ರೇ ಝಡ್ ಆರ್- 125 ಹೈಬ್ರಿಡ್ (Yamaha Ray ZR 125 Hybrid)
ಇದು ಸ್ಮಾರ್ಟ್ ಮೋಟಾರ್ ಜನರೇಟರ್ ಹೊಂದಿರುವ ಬೈಕ್. ಇದು ಬ್ಯಾಟರಿ ಮೂಲಕವೂ ಚಾರ್ಜ್ ಆಗುತ್ತದೆ. ಇದು 8.2 ಬಿಎಚ್ಪಿ ಪವರ್ ಹಾಗೂ 10.3 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಪಾಸ್ ಸ್ವಿಚ್, ಫ್ರಂಟ್ ಡಿಸ್ಕ್ ಬ್ರೇಕ್, ಫುಲ್ ಡಿಜಿಟಲ್ ಸ್ಕ್ರಿನ್, ಬ್ಲೂಟೂತ್ ಕನೆಕ್ಟಿವಿಟಿಯನ್ನು ಇದು ಹೊಂದಿದೆ. ಇದರ ಬೆಲೆ 83,730 ರೂಪಾಯಿಂದ ಆರಂಭಗೊಳ್ಳುತ್ತದೆ.
ಹೋಂಡಾ ಆಕ್ಟಿವಾ ಎಚ್ ಸ್ಮಾರ್ಟ್ (Honda Activa H- Smart)
ಹೋಂಡಾ ಕಂಪನಿಯ ಜನಪ್ರಿಯ ಸ್ಕೂಟರ್ ಎಚ್ ಸ್ಮಾರ್ಟ್ ಹಲವಾರು ಫೀಚರ್ಗಳನ್ನು ಹೊಂದಿವೆ. ಪ್ರಮುಖವಾಗಿ ಇದು ಸ್ಮಾರ್ಟ್ ಕಿ ಫೀಚರ್ ಜತೆಗೆ ಮಾರುಕಟ್ಟೆಗೆ ಇಳಿದಿದೆ. ಸ್ಮಾರ್ಟ್ ಫೈಂಡ್, ಸ್ಮಾರ್ಟ್ ಲಾಕ್, ಸ್ಮಾರ್ಟ್ ಸೇಫ್ ಇತ್ಯಾದಿ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ ಸ್ಮಾರ್ಟ್ ಎಂಜಿನ್ ಇಮ್ಮೊಬಿಲೈಸರ್ ಕೂಡ ಇದೆ. ಜತೆಗೆ ಅಲಾಯ್ ವೀಲ್ ಕೂಡ ನೀಡಲಾಗಿದೆ. ಇದರ ಆರಂಭಿಕ ಬೆಲೆ 81, 348 ರೂಪಾಯಿ.