Site icon Vistara News

Porsche Car : ಈ ಬಾಲಿವುಡ್ ನಟನ ಬಳಿ ಒಂದಲ್ಲ, ಎರಡಲ್ಲ, ಮೂರು ಪೋರ್ಶೆ ಕಾರುಗಳಿವೆ

Porsche Car

ನವ ದೆಹಲಿ: ಹಿಂದಿ ಧಾರಾವಾಹಿ ‘ಬಡೇ ಅಚ್ಚೆ ಲಗ್ತೆ ಹೈ’ ಸೇರಿದಂತೆ ಹಲವಾರು ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿರುವ ನಟ ರಾಮ್ ಕಪೂರ್ ಕಾರು ಪ್ರೇಮಿ ಎಂಬುದು ಹಲವರಿಗೆ ಗೊತ್ತಿಲ್ಲದ ವಿಚಾರ. ಅವರ ಕಾರುಗಳ ಸಂಗ್ರಹದಲ್ಲಿ, ಮೂರು ಪೋರ್ಶೆ ಕಾರುಗಳಿವೆ ಎಂಬುದೂ ವಿಶೇಷ. ಇತ್ತೀಚೆಗೆ, ಕಪೂರ್ ಅವರು ತಮ್ಮ ಸಂಗ್ರಹಕ್ಕೆ ಪೋರ್ಶೆ 992 ಟರ್ಬೊ ಎಸ್ ಕಾರನ್ನು ಸೇರ್ಪಡೆಗೊಳಿಸಿದ್ದಾರೆ. ಅದರ ಚಿತ್ರವನ್ನು ಅವರು ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಕಾರನ್ನು 911 ಟರ್ಬೊ ಎಸ್ ಎಂದು ಕರೆಯಲಾಗುತ್ತದೆ ಮತ್ತು ಭಾರತದಲ್ಲಿ ಇದರ ಬೆಲೆ 3.6 ಕೋಟಿ ರೂಪಾಯಿ.

ಕಪೂರ್ ತಮ್ಮ ಹೊಸ ಕಾರನ್ನು ಮುಂಬೈನ ರಸ್ತೆಗಳಲ್ಲಿ ಓಡಿಸುತ್ತಿರುವುದು ಕಂಡುಬಂದಿದೆ. ಬಿಳಿ ಬಣ್ಣದ ಶೇಡ್​ ಹೊಂದಿರುವ ಟಾಪ್-ಆಫ್-ಲೈನ್ ವೇರಿಯೆಂಟ್​ನ ಪೋರ್ಷೆ 992 ಟರ್ಬೊ ಎಸ್ ಕಾರನ್ನು ಅವರು ಚಲಾಯಿಸಿಕೊಂಡು ಹೋಗುತ್ತಿದ್ದರು ಇದು ಹಳದಿ ಬಣ್ಣದ ಬ್ರೇಕ್ ಕ್ಯಾಲಿಪರ್ ಹೊಂದಿದ್ದು. 10-ಸ್ಪೋಕ್ ಅಲಾಯ್ ವೀಲ್​ಗಳನ್ನೂ ಹೊಂದಿದೆ. ಟ್ರಾಫಿಕ್ ಸಿಗ್ನಲ್ ಓಪನ್ ಆದ ಬ​ ಳಿಕ ಕಪೂರ್ ಖಾಲಿ ರಸ್ತೆಯಲ್ಲಿ ತಮ್ಮ 992 ಟರ್ಬೊ ಎಸ್ ಕಾರನ್ನು ವೇಗವಾಗಿ ಓಡಿಸುತ್ತಿರುವುದು ಕಂಡು ಬಂತು ಎಂದು ಆಟೋಮೊಬೈಲ್​ ವೆಬ್​ಸೈಟ್ ಒಂದು ವರದಿ ಮಾಡಿದೆ.

ಕಾರಿನ ವಿಶೇಷತೆ ಏನು?

911 ನ ಟರ್ಬೊ ಎಸ್ ವೇರಿಯೆಂಟ್​ ಪೋರ್ಶೆಯಲ್ಲಿ ಲಭ್ಯವಿರುವ ಅತ್ಯಂತ ಸುಧಾರಿತ ಮಾಡೆಲ್​. 560 ಬಿಎಚ್​ಪಿ ಗರಿಷ್ಠ ಶಕ್ತಿಯನ್ನು ಹೊಂದಿರುವ ಈ ಸ್ಪೋರ್ಟ್ಸ್ ಕಾರು ಸ್ಪೋರ್ಟ್ ಕ್ರೋನೊ ಪ್ಯಾಕ್ ಸೇರಿದಂತೆ ಕಾರ್ಯಕ್ಷಮತೆಯ ಫೀಚರ್​ಗಳನ್ನು ಹೊಂಇದೆ. ಗರಿಷ್ಠ ವೇಗವನ್ನು 17.4 ಪಿಎಸ್ಐನಿಂದ 19.6 ಪಿಎಸ್ಐಗೆ ಹೆಚ್ಚಿಸುವ ಮೂಲಕ 20 ಸೆಕೆಂಡುಗಳ ಅಡ್ರಿನಾಲಿನ್ ಬ್ಲಾಸ್ಟ್​ ನೀಡುವ ಅವಕಾಶ ಈಕಾರಿನಲ್ಲಿದೆ ಈ ಅವಧಿಯಲ್ಲಿ 750 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತಿದೆ ಆಟೋಮ್ಯಾಟಿಕ್ ಸ್ಟಾರ್ಟ್- ಸ್ಟಾಪ್ ವೈಶಿಷ್ಟ್ಯದೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಪಿಡಿಕೆ ಟ್ರಾನ್ಸ್ ಮಿಷನ್ ಟರ್ಬೊ ಎಸ್ ನ ಕಾರ್ಯಕ್ಷಮತೆಗೆ ಪೂರಕವಾಗಿದೆ.

ಪೋರ್ಶೆ 911 ನ ಟರ್ಬೊ ಎಸ್ ವೇರಿಯೆಂಟ್​ ಕೇವಲ 3.1 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗ ಪಡೆಯುತ್ತದೆ. ಟಾಪ್ ಸ್ಪೀಡ್ ಅನ್ನು ಗಂಟೆಗೆ 318 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ. ಹಬ್ ವೀಲ್ ಲಾಕ್ ಗಳೊಂದಿಗೆ 20-ಇಂಚಿನ ವೀಲ್​ ಹೊಂದಿದೆ. ನಾಲ್ಕು-ಚಕ್ರಗಳ ಸ್ಟೀರಿಂಗ್ ಸಿಸ್ಟಮ್ ಇದು ಹೊಂದಿದ್ದು ವೇಗದ ಸವಾರಿ ವೇಳೆ ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ತಿರುವು ಪಡೆಯಲೂ ಅನುಕೂಲಕರವಾಗಿದೆ.

ಇದನ್ನೂ ಓದಿ : Royal Enfield : ಆಗಸ್ಟ್​ ಅಂತ್ಯಕ್ಕೆ ರಾಯಲ್ ಎನ್​ಫೀಲ್ಡ್​ನ ಹೊಸ ಬುಲೆಟ್​ ಬಿಡುಗಡೆ; ಅದರ ವಿವರ ಇಲ್ಲಿದೆ

4 ಪಾಯಿಂಟ್ ಡೇಟೈಮ್ ರನ್ನಿಂಗ್ ಲ್ಯಾಂಪ್​​ಗಳೊಂದಿಗೆ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್​​ಗಳು ಮತ್ತು ಕ್ಯಾಮೆರಾ ಆಧಾರಿತ ಮುಖ್ಯ ಬೀಮ್ ಕಂಟ್ರೋಲ್ ಸಿಸ್ಟಮ್ ಸೇರಿವೆ. ಮೂರು-ಹಂತದ ಸ್ಪಾಯ್ಲರ್​ ಮೂಲಕ ಡೌನ್ ಫೋರ್ಸ್ ತಾಂತ್ರಿಕತೆ ಇದೆ.

ರಾಮ್​ ಕಪೂರ್​ ಬಳಿಯಿರುವು ಇತರ ಪೋರ್ಶೆ ಕಾರುಗಳು ಯಾವುವು?

ರಾಮ್ ಕಪೂರ್ 2021ರಲ್ಲಿ ಪೋರ್ಷೆ 911 ಕ್ಯಾರೆರಾ ಎಸ್ ಅನ್ನು 2 ಕೋಟಿ ರೂ.ಗೆ ಖರೀದಿಸಿದ್ದರು.. ಪೋರ್ಷೆ ಕ್ಯಾರೆರಾ ಎಸ್ ಕಾರು 3.0-ಲೀಟರ್ ಫ್ಲಾಟ್-ಸಿಕ್ಸ್ ಬಾಕ್ಸರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಟ್ವಿನ್-ಟರ್ಬೋಚಾರ್ಜ್ 450 ಬಿಎಚ್​​ಪಿ ಹಾಗೂ 530 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 8-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದೆ.

2013ರಲ್ಲಿ, ರಾಮ್​ಕಪೂರ್ ಅವರು ಪೋರ್ಶೆ 911 ಕ್ಯಾರೆರಾ ಎಸ್ ಕ್ಯಾಬ್ರಿಯೋಲೆಟ್ ಅಥವಾ ಸರಳವಾಗಿ ಹೇಳುವುದಾರೆ 911 ಕನ್ವರ್ಟಿಬಲ್ ಎಂದು ಕರೆಯಲ್ಪಡುವ ಕಾರು ಖರೀದಿಸಿದ್ದರು/ ಅವರು ಅನೇಕ ವರ್ಷಗಳಿಂದ ಕಾರನ್ನು ಹೊಂದಿದ್ದರು. ಆದರೆ ಅವರು ಇನ್ನೂ ಆ ಮಾಡೆಲ್​ ಇಟ್ಟುಕೊಂಡಿದ್ದಾರೆಯೇ ಎಂಬುದು ಖಾತರಿಯಿಲ್ಲ.

ಇನ್ಯಾವ ಕಾರುಗಳಿವೆ

ರಾಮ್​ ಕಪೂರ್ ಅವರ ಬಳಿ ಫೆರಾರಿ ಪೋರ್ಟೊಫಿನೊ ಎಂ ಕಾರಿದೆ. ಇದರ ಬೆಲೆ 4.5 ಕೋಟಿ ರೂಪಾಯಿ. ಲ್ಯಾಂಡ್ ರೋವರ್​ ರೇಂಜ್ ರೋವರ್ ಕಾರು, ಬಿಎಂಡಬ್ಲ್ಯು ಎಕ್ಸ್5, ಮರ್ಸಿಡಿಸ್-ಎಎಂಜಿ ಜಿ 63 ಎಸ್ ಯುವಿ ಕಾರನ್ನೂ ಹೊಂದಿದ್ದಾರೆ.

Exit mobile version