Site icon Vistara News

InGo Flee 2.0 : ಕಡಿಮೆ ಕಾಸಿಗೆ ಸಿಗುವ ಈ ಇವಿ ಬೈಕ್​ಗಿದೆ ಹೆವಿ ಲೋಡ್​ ಕೆಪಾಟಿಸಿ

InGo Flee

ಬೆಂಗಳೂರು: ಮೈಕ್ರೋ ಮೊಬಿಲಿಟಿ ಕಂಪನಿಯಾಗಿರುವ ಇನ್​ಗೊ ಎಲೆಕ್ಟ್ರಿಕ್ ಹೊಚ್ಚ ಹೊಸ ಇನ್​ ಗೊ ಫ್ಲೀ 2.0 (InGo Flee) ಬೈಕ್ ಅನ್ನು ಬಿಡುಗಡೆ ಮಾಡಿದೆ. ಇನ್ ಗೊ ಫ್ಲೀ 2.0 ವಾಹನಕ್ಕೆ62,000 ರೂಪಾಯಿಗೆ ರಸ್ತೆಗೆ ಇಳಿಯಲಿದ್ದು ಸಿಕ್ಕಾಪಟ್ಟೆ ಲೋಡ್ ಎಳೆಯುವ ಕೆಪಾಟಿಸಿ ಇದಕ್ಕಿದೆ. ಇನ್​ಗೊ ಫ್ಲೀ 2.0 ನ ಉನ್ನತ-ಕಾರ್ಯಕ್ಷಮತೆಯನ್ನು ಹೊಂದಿರುವ ಜತೆಗೆ ಶೂನ್ಯ ನಿರ್ವಹಣೆ ವೆಚ್ಚ ಸಾಕು ಎಂದು ಕಂಪಪನಿ ಹೇಳಿದೆ. ತನ್ನ ವರ್ಗದಲ್ಲಿ ಅತಿ ಹೆಚ್ಚು ಲೋಡ್ ಹೊರುವ ಸಾಮರ್ಥ್ಯವನ್ನು ಹೊಂದಿರುವ ಇನ್​ಗೊ ಫ್ಲೀನಲ್ಲಿ 25 ಕೆ.ಜಿ ವಸ್ತು ಕ್ಯಾರಿಯರ್​ನಲ್ಲಿ ಮತ್ತು ಫುಟ್ ಬೋರ್ಡ್ ನಲ್ಲಿ 50 ಕೆ.ಜಿ ಸಾಗಿಸಲು ಸಾಧ್ಯವಿದೆ.

ಐಒಟಿ (Internet of Things) ಮತ್ತು ಟೆಲಿಮ್ಯಾಟಿಕ್ಸ್ ವೈಶಿಷ್ಟ್ಯಗಳ ಮೂಲಕ ರಿಯಲ್ ಟೈಮ್​ ಟ್ರ್ಯಾಂಕಿಂಗ್​, ರಿಮೋಟ್ ಲಾಕಿಂಗ್, ಜಿಯೋ-ಫೆನ್ಸಿಂಗ್ ಹಾಗೂ ಕಳ್ಳತನದ ವೇಳೆ ಅಲರ್ಟ್​ ಆಗುವ ಫೀಚರ್​ಗಳನ್ನು ಇದು ಹೊಂದಿದೆ. ವಾಹನವು ತನ್ನ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದ್ದು, ಚಾರ್ಜಿಂಗ್ ವ್ಯವಸ್ಥೆಯೂ ಅನುಕೂಲಕರವಾಗಿದೆ. 4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ತ್ವರಿತವಾಗಿ ಚಾರ್ಜ್​ ಆಗುವ ವ್ಯವಸ್ಥೆ ಇದರಲ್ಲಿದೆ.

ಇನ್​ಗೋ ಫ್ಲೀ ಫೀಚರ್​ಗಳಿವು

⦁ ರೇಂಜ್​ : 50 ಕಿ.ಮೀ
⦁ ಬ್ಯಾಟರಿ: 1kW, 48V, 23.2Ah
⦁ ಪೀಕ್ ಟಾರ್ಕ್: 65 ಎನ್ಎಂ
⦁ ಸಸ್ಪೆಂಷನ್: ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್, ಹಿಂಭಾಗದಲ್ಲಿ ಹೆವಿ ಡ್ಯೂಟಿ ಶಾಕ್ ಗಳು
⦁ ಅಳತೆಗಳು: 1670 x 685 x 1200 ಮಿಮೀ
⦁ ಗರಿಷ್ಠ ವೇಗ: ಗಂಟೆಗೆ 25 ಕಿ.ಮೀ.
⦁ ಚಾರ್ಜರ್ ಮತ್ತು ಚಾರ್ಜಿಂಗ್​ ಸಮಯ: 54.6V / 6A – 4 ಗಂಟೆಗಳು
⦁ ಚಕ್ರ ಗಾತ್ರ: 10″x3.00″ (ಮುಂಭಾಗ ಮತ್ತು ಹಿಂಭಾಗ)
⦁ ಮ್ಯಾಕ್ಸ್ ಪೇಲೋಡ್: ಫುಟ್ ಬೋರ್ಡ್ ನಲ್ಲಿ 50 ಕೆ.ಜಿ, ಕ್ಯಾರಿಯರ್​ನಲ್ಲಿ 25 ಕೆ.ಜಿ
⦁ ಗ್ರೌಂಡ್ ಕ್ಲಿಯರೆನ್ಸ್: 149 ಎಂಎಂ
⦁ ಮೋಟರ್ & ಕಂಟ್ರೋಲರ್: 250W BLDC ಹಬ್ ಮೋಟರ್​

ಇನ್ನೇನು ವಿಶೇಷತೆ?

ಇನ್​ಗೊ ಫ್ಲೀ 2.0ದಲ್ಲಿ ಎರಡು ಸೀಟ್​ಗಳ ಆಯ್ಕೆಯೂ ಸೇರಿದೆ. ಇನ್​ಗೊ ಫ್ಲೀ 2.0 10-ಇಂಚಿನ ಎಲ್​ಸಿಡಿಯೊಂದಿಗೆ ಬರಲಿದ್ದು ಇದರಲ್ಲಿ ಬ್ಯಾಟರಿ ಗೇಜ್ ಕೂಡ ಇದೆ. ಇದು ಪ್ರಯಾಣದ ಬಗ್ಗೆ ನೈಜ-ಸಮಯದ ಮಾಹಿತಿಯನ್ನು ಒದಗಿಸುತ್ತದೆ. ಸುಧಾರಿತ ಸಸ್ಪೆಂಷನ್ ವ್ಯವಸ್ಥೆಯು ಸವಾರಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. 110 ಎಂಎಂ ಬ್ರೇಕ್ ಡಿಸ್ಕ್​ ಹೊಂದಿರುವ ಹೊಂದಿರುವ ಅಗಲವಾದ ಮುಂಭಾಗದ ಚಕ್ರಗಳು ಉತ್ತಮ ಸುರಕ್ಷತೆ ಒದಗಿಸುತ್ತದೆ. ಮುಂಭಾಗ ಮತ್ತು ಹಿಂಭಾಗದ ಟ್ಯೂಬ್ ಲೆಸ್ ಟೈರ್ ಗಳು ವಾಹನದ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುತ್ತದೆ. 350 ಎಂಎಂ ಅಗಲದ ಅಲ್ಟ್ರಾ-ಕಂಫರ್ಟ್ ಸೀಟ್ ಅನ್ನು ದೀರ್ಘ ಸವಾರಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಇನ್​ಗೊ ಫ್ಲೈ 2.0 ಹೊಸ ಸ್ಟೈಲಿಂಗ್ ಮತ್ತು ಗ್ರಾಫಿಕ್ಸ್ ಪಡೆದುಕೊಂಡಿದೆ. ಇದು ತಾಜಾ ಸೌಂದರ್ಯವನ್ನು ನೀಡುತ್ತದೆ. ಬ್ಯಾಟರಿ ಲೆವೆಲ್ ಇಂಡಿಕೇಷನ್ ಹೊಂದಿರುವ ಚಾರ್ಜರ್​ ಇರಲ್ಲಿದೆ.

ಇದನ್ನೂ ಓದಿ : EXCON 2023: ಎಕ್ಸ್‌ಕಾನ್‌ನಲ್ಲಿ ಟಾಟಾ ಮೋಟರ್ಸ್‌ನ ಎಲ್‌ಎನ್‌ಜಿ ಚಾಲಿತ ವಾಣಿಜ್ಯ ವಾಹನಗಳು ಲಾಂಚ್

ಹೊಸ ವಾಹನದ ಬಗ್ಗೆ ಮಾತನಾಡಿದ ಇನ್​ಗೋ ಎಲೆಕ್ಟ್ರಿಕ್ಸ್​​ನ ಸಿಇಒ ಮತ್ತು ಸಹ-ಸಂಸ್ಥಾಪಕ ನಿಖಿಲ್ ಗೊನ್ಸಾಲ್ವಿಸ್ “ಜನರು ಸುರಕ್ಷಿತವಾಗಿ ಮತ್ತು ತಡೆರಹಿತ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಇನ್​ಗೊ ಫ್ಲೀ 2.0 ಅನ್ನು ವಿನ್ಯಾಸ ಮಾಡಲಾಗಿದೆ. ನಮ್ಮ ಮೊದಲ ಮಾಡೆಲ್​ಗೆ ಹೆಚಚು ಪ್ರತಿಕ್ರಿಯೆಯ ದೊರಕಿದ ಹಿನ್ನೆಲೆಯಲ್ಲಿ ಇನ್​ಗೊ ಫ್ಲೀ 2.0 ಅನ್ನು ಪರಿಚಯಿಸಿದ್ದೇವೆ. ಇದು ಸವಾರನಿಗೆ ಆರಾಮದಾಯಕದ ಜತೆ ಅತ್ಯುತ್ತಮ ಸವಾರಿ ಅನುಭವವನ್ನು ನೀಡುತ್ತದೆ. ಇನ್​ಗೊ ಫ್ಲೀ 2.0 ಸಾರಿಗೆ ಮಾದರಿಯೊಂದನ್ನು ನೀಡುವ ಜತೆಗೆ ಸ್ಥಿರತೆ ಮತ್ತು ಸರಳವಾಗಿರುವ ಪ್ರಯಾಣದ ಆದ್ಯತೆ ನೀಡುವ ಅನುಭವವನ್ನು ಒದಗಿಸುತ್ತದೆ ಎಂದು ಹೇಳಿದರು.

ನಿಖಿಲ್ ಗೊನ್ಸಾಲ್ವಿಸ್ ಮತ್ತು ಮಂಜುನಾಥ್ ಪಂತಂಗಿ ಅವರು 2018 ರಲ್ಲಿ ಸ್ಥಾಪಿಸಿದ ಇನ್​ಗೋ ನಿಜವಾದ ‘ಮೇಡ್ ಇನ್ ಇಂಡಿಯಾ’ ಉತ್ಪನ್ನವಾಗಿದೆ. ಪ್ರತಿಯೊಂದು ಘಟಕವನ್ನು ಸಂಪೂರ್ಣವಾಗಿ ದೇಶದಲ್ಲೇ ತಯಾರಿಸಲಾಗುತ್ತದೆ ಮತ್ತು ತರಿಸಿಕೊಳ್ಳಲಾಗುತ್ತದೆ. ಜಸ್ಟ್​ ಡಯಲ್​ನ ​ ಸಹ-ಸಂಸ್ಥಾಪಕರಾಗಿರುವ ಉದ್ಯಮದ ಅನುಭವಿ ರಮಣಿ ಅಯ್ಯರ್ ಕೂಡ ಈ ತಂಡದಲ್ಲಿದ್ದಾರೆ.

ಗೋಲ್ಡನ್​ ಟ್ರಯಾಂಗಲ್ ವಿನ್ಯಾಸ

ಇನ್​ಗೊ ಫ್ಲೀ ಮೈಕ್ರೋ-ಮೊಬಿಲಿಟಿ ವಾಹನವಾಗಿದೆ. 120 ಕಿ.ಮೀ ವ್ಯಾಪ್ತಿಯಲ್ಲಿ 150 ಕೆ.ಜಿ ತೂಕವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಮಾನವನ ದೇಹದ ಬಯೋಮೆಕಾನಿಕ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಇನ್​ಗೊ ಅನ್ನು ಫ್ಲೀ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಫ್ಲೀ ವಾಹನವು ‘ಗೋಲ್ಡನ್ ಟ್ರಯಾಂಗಲ್ ಅನುಪಾತ’ ಹೊಂದಿದೆ. ಸೀಟ್ ಪೊಸಿಷನಿಂಗ್ ಮತ್ತು ಹಿಪ್ ಪ್ಲೇಸ್ ಮೆಂಟ್ ನ ವಿನ್ಯಾಸವು ಆರಾಮ ಮತ್ತು ಉತ್ತಮ ಸವಾರಿ ಅನುಭವ ನೀಡುತ್ತದೆ.

Exit mobile version