Site icon Vistara News

Affordable Bikes in India : ಕಡಿಮೆ ಬೆಲೆಗೆ ದೊರೆಯುವ ಭಾರತದ ಟಾಪ್ 5 ಬೈಕ್​ಗಳು ಇವು

Motorcycle

ಬೆಂಗಳೂರು : ಭಾರತದಲ್ಲಿ ಕಡಿಮೆ ಬೆಲೆಯ ಮೋಟಾರ್​ ಸೈಕಲ್​ಗಳಿಗೆ ಹೆಚ್ಚು ಬೇಡಿಕೆ (Affordable Bikes in India). ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಬೆಲೆಯ ಅತಿ ಹೆಚ್ಚು ಮಾರಾಟವಾಗುತ್ತದೆ. ಕಡಿಮೆ ಬೆಲೆ ಹಾಗೂ ಅತಿ ಕಡಿಮೆ ನಿರ್ವಹಣಾ ವೆಚ್ಚ ಕಾರಣಗಳಿಗೆ ಈ ಮಾದರಿಯ ಬೈಕ್​ಗಳಿಗೆ ಅತಿ ಹೆಚ್ಚು ಬೇಡಿಕೆ ಇರುತ್ತದೆ. ಭಾರತದಲ್ಲಿ ಪ್ರಸ್ತುತ ಮಾರಾಟವಾಗುತ್ತಿರುವ ಟಾಪ್ 5 ಅತ್ಯಂತ ಕೈಗೆಟುಕುವ ಬೈಕುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಇಲ್ಲಿ ಕೊಟ್ಟಿರುವ ಪಟ್ಟಿಯುವ ಮುಂಬಯಿಯ ಎಕ್ಸ್​ಶೋ ರೂಮ್ ಬೆಲೆಯಾಗಿದೆ. ಹೀಗಾಗಿ ಎಲ್ಲ ಕಡೆಯೂ ಇದೇ ಬೆಲೆ ಎಂದು ಹೇಳಲಾಗುವುದಿಲ್ಲ. ನಗರದಿಂದ ನಗರಕ್ಕೆ ಹಾಗೂ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಅಂದ ಈ ಪಟ್ಟಿಯಲ್ಲಿರುವ ಹೋಂಡಾ ಶೈನ್​ 100 ಈ ಸೆಗ್ಮೆಂಟ್​ಗೆ ಹೊಸ ಸೇರ್ಪಡೆ. ಜತೆಗೆ ಇದರ ಎಕ್ಸ್ ಶೂರೂಮ್ ಬೆಲೆ ಮುಂಬಯಿಯದ್ದು ಮಾತ್ರ ಲಭ್ಯವಿದೆ. ಹೀಗಾಗಿ ಉಳಿದ ಬೆಲೆಯನ್ನು ಅದೇ ನಗರಕ್ಕೆ ಹೋಲಿಕೆ ಮಾಡಲಾಗಿದೆ.

ಬಜಾಜ್ ಪ್ಲಾಟಿನಾ 100- 67,808 ರೂ.

ಪ್ಲಾಟಿನಾ 100 ಬಜಾಜ್ ಕಂಪನಿಯ ಅತ್ಯಂತ ಕೈಗೆಟುಕುವ ಮಾದರಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಮೋಟಾರ್ ಸೈಕಲ್ ಇದು. ಬಜಾಜ್ ನ ಸಿಗ್ನೇಚರ್ ಡಿಟಿಎಸ್-ಐ ತಂತ್ರಜ್ಞಾನವನ್ನು ಹೊಂದಿರುವ 102 ಸಿಸಿ ಮೋಟರ್ ನಿಂದ ಇದರಲ್ಲಿದೆ. ಫ್ಯೂಯಲ್-ಇಂಜೆಕ್ಷನ್ ವ್ಯವಸ್ಥೆ ಪಡೆಯದ ಏಕೈಕ ಬೈಕ್ ಕೂಡ ಹೌದು. ಬದಲಿಗೆ ಇದು ಬಜಾಜ್ ನ ಇ-ಕಾರ್ಬ್ ಅನ್ನು ಹೊಂದಿದೆ. ಈ ಎಂಜಿನ್ 7.9 ಬಿ ಹೆಚ್ ಪಿ ಪವರ್ ಮತ್ತು 8.3 ಎನ್ ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಸೆಗ್ ಮೆಂಟಿನಲ್ಲಿ ಪ್ಲಾಟಿನಾದ ವಿಶಿಷ್ಟ ಲಕ್ಷಣವೆಂದರೆ ಅದರ ಎಲ್ ಇಡಿ ಡೇ ರನ್ನಿಂಗ್ ಲೈಟ್​.

ಹೋಂಡಾ ಶೈನ್ 100- 64,900 ರೂ.

ಕಡಿಮೆ ಬೆಲೆಯ ಬೈಕ್​ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ಬೈಕ್​ ಹೋಂಡಾ ಶೈನ್ 100. ಹೋಂಡಾ ಶೈನ್ 100 ಬೈಕ್ ಸೀರಿಸ್​ನ ಅತ್ಯಂತ ಸರಳ ಬೈಕ್ ಇದಾಗಿದೆ. ಆಟೋ ಚೋಕ್ ಸಿಸ್ಟಂ ಮತ್ತು ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್ ಫೀಚರ್​ ಹೊಂದಿದೆ. ಇದು ಈ ಸೆಗ್ಮೆಂಟ್​ನಲ್ಲಿ ಒಬಿಡಿ -2 ಎ ಕಾಂಪ್ಲೈಂಟ್ ಮತ್ತು ಇ 20 ಹೊಂದಿಕೆಯಾಗುವ ಏಕೈಕ ಮೋಟಾರ್ ಸೈಕಲ್. ಇದು​​ 7.61 ಬಿಹೆಚ್ ಪಿ, 8.05 ಎನ್ಎಂ ಟಾಕ್​ ಬಿಡುಗಡೆ ಮಾಡುವ 99.7 ಸಿಸಿ ಎಂಜಿನ್ ಹೊಂದಿದೆ. ಇದು ಎಲೆಕ್ಟ್ರಿಕ್ ಸ್ಟಾರ್ಟರ್ ಅನ್ನು ಹೊಂದಿದೆ. ಇದು ದೇಶದ ಅತ್ಯಂತ ಕೈಗೆಟುಕುವ ಸೆಲ್ಫ್-ಸ್ಟಾರ್ಟ್ ಮೋಟಾರ್ ಸೈಕಲ್ ಆಗಿದೆ.

ಇದನ್ನೂ ಓದಿ : Hyundai Creta : ಭಾರತದಲ್ಲಿ 10 ಲಕ್ಷ ದಾಟಿದ ಹ್ಯುಂಡೈ ಕ್ರೆಟಾ ಮಾರಾಟ

ಟಿವಿಎಸ್ ಸ್ಪೋರ್ಟ್- 61,500 ರಿಂದ 69,873 ರೂ.

ಎಂಜಿನ್ ವಿಚಾರಕ್ಕೆ ಬಂದಾಗ 109.7 ಸಿಸಿ ಎಂಜಿನ್ ಸೆಗ್ಮೆಂಟ್​ನ ಇತರ ಬೈಕುಗಳಿಗಿಂತ ಸ್ವಲ್ಪ ಹೆಚ್ಚಿನ ಶಕ್ತಿ ಹೊಂದಿದೆ. ಟಿವಿಎಸ್ ಸ್ಪೋರ್ಟ್ ಇನ್ನೂ ದೇಶದ ಮೂರನೇ ಅತ್ಯಂತ ಕೈಗೆಟುಕುವ ಮೋಟಾರ್ ಸೈಕಲ್​. ಕಿಕ್ ಸ್ಟಾರ್ಟರ್ ನೊಂದಿಗೆ ಬರುವ ಮೂಲ ಮಾದರಿಯನ್ನು ಇದು ಹೊಂದಿದೆ. ಅದೇ ರೀತಿ ಸೆಲ್ಫ್-ಸ್ಟಾರ್ಟ್ ಆವೃತ್ತಿಗಳು 69,873 ರೂ.ಗಳವರೆಗೆ ಬೆಲೆ ಹೊಂದಿದೆ. ಇದು 8.3 ಬಿಹೆಚ್ ಪಿ ಮತ್ತು 8.7 ಎನ್ಎಂ ಟಾರ್ಕ್​ ಬಿಡುಗಡೆ ಮಾಡುತ್ತದೆ.

ಹೀರೋ ಎಚ್ಎಫ್ ಡೀಲಕ್ಸ್ 59,998 ರಿಂದ 68,768 ರೂ.

    100 ಸಿಸಿ ಸೆಗ್ಮೆಂಟ್​ನಲ್ಲಿ ಮಾರುಕಟ್ಟೆ ನಾಯಕ ಹೀರೋ ಮೋಟೊಕಾರ್ಪ್. ಕಂಪನಿಗೆ ಈ ಪ್ರಖ್ಯಾತಿ ಉಳಿಸಿಕೊಳ್ಳುವುದಕ್ಕೆ ಸಹಾಯ ಮಾಡುವ ಬೈಕುಗಳಲ್ಲಿ ಎಚ್ ಎಫ್ ಡೀಲಕ್ಸ್ ಕೂಡ ಒಂದು ಇದರಲ್ಲಿ 97 ಸಿಸಿ ‘ಸ್ಲೋಪರ್’ ಎಂಜಿನ್ ಇದೆ. ಈಗ ಹೀರೋನ ಐ 3 ಎಸ್ ಸ್ಟಾಪ್-ಸ್ಟಾರ್ಟ್ ತಂತ್ರಜ್ಞಾನವನ್ನು ಈ ಬೈಕ್​ಗೆ ಅಳವಡಿಸಲಾಗಿದೆ. ಟಿವಿಎಸ್ ಸ್ಪೋರ್ಟ್ ನಂತೆ, ಬೇಸ್​ಮಾಡೆಲ್​ಗಳಲ್ಲಿ ಕಿಕ್​ ಸ್ಟಾರ್ಟ್​ ಸೌಕರ್ಯ ಇದ್ದರೆ ಟಾಪ್ ಎಂಡ್​ ಬೈಕ್​ನ್ಲಿ ಎಲೆಕ್ಟ್ರಿಕ್ ಸ್ಟಾರ್ಟರ್ ಇದೆ.

    ಹೀರೋ ಎಚ್ಎಫ್ 100 59,068 ರೂ.

    ಸರಳತೆಯಿಂದಾಗಿ ಹೀರೋ ಹೆಚ್ ಎಫ್ 100 ಬೈಕ್ ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಕೈಗೆಟುಕುವ ಬೈಕ್ ಆಗಿದೆ. ಇದು ಎಚ್ ಎಫ್ ಡೀಲಕ್ಸ್ ನಂತೆಯೇ 97 ಸಿಸಿ ಎಂಜಿನ್ ಅನ್ನು ಹೊಂದಿದೆ. 8 ಬಿಹೆಚ್ ಪಿ ಮತ್ತು 8.05 ಎನ್ಎಂ ಟಾರ್ಕ್​ ಬಿಡುಗಡೆ ಮಾಡುತ್ತದೆ. ಐ 3 ಎಸ್ ಸ್ಟಾಪ್-ಸ್ಟಾರ್ಟ್ ತಂತ್ರಜ್ಞಾನ ಇದರಲ್ಲಿ ಇಲ್ಲ. ಇದು ಕೇವಲ ಕಿಕ್-ಸ್ಟಾರ್ಟರ್ ನೊಂದಿಗೆ ಕೇವಲ ಒಂದೇ ಒಂದು ವೇರಿಯೆಂಟ್​ನಲ್ಲಿ ಲಭ್ಯ.

    Exit mobile version