Site icon Vistara News

Tork Motors : ಬೆಂಗಳೂರಿನಲ್ಲಿ ಎಕ್ಸ್​ಪೀರಿಯನ್ಸ್​ ಝೋನ್​ ಆರಂಭಿಸಿದ ಟಾರ್ಕ್​ ಮೋಟಾರ್ಸ್​

Tork Motor

ಬೆಂಗಳೂರು: : ಭಾರತದ ಮೊದಲ ವಿದ್ಯುತ್‌ಚಾಲಿತ ಮೋಟರ್‌ಸೈಕಲ್ ತಯಾರಿಕಾ ಕಂಪನಿ ಟಾರ್ಕ್‌ ಮೋಟರ್ಸ್, ಬೆಂಗಳೂರಿನಲ್ಲಿ ತನ್ನ ಮೊದಲ ಅನುಭವ ವಲಯ (Experience Zone) ಉದ್ಘಾಟಿಸಿದ್ದು, ಈ ಮೂಲಕ ಕರ್ನಾಟಕ ರಾಜ್ಯ ಪ್ರವೇಶಿಸಿರುವುದಾಗಿ ಘೋಷಿಸಿದೆ. ಜಯನಗರದ 5ನೇ ಬ್ಲಾಕ್‌ನಲ್ಲಿರುವ ಈ 3S ಸೌಲಭ್ಯವು ಬ್ರ್ಯಾಂಡ್‌ನ ಕ್ರೇಟಸ್‌–ಆರ್‌(KRATOS-R) ಮೋಟರ್‌ ಸೈಕಲ್‌ಗೆ ನೆಲೆಯಾಗಿದೆ. ಇಲ್ಲಿ ಪ್ರದೇಶದ ಗ್ರಾಹಕರಿಗೆ ಮಾರಾಟ ಮತ್ತು ಮಾರಾಟದ ನಂತರದ ಸರ್ವೀಸ್‌ಗಳು ಲಭ್ಯವಾಗಲಿದೆ.

ಈ ಹೊಸ ಸೌಲಭ್ಯವು ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಹಾಲಿ ಮತ್ತು ಸಂಭಾವ್ಯ ಹೊಸ ಗ್ರಾಹಕರ ಅಗತ್ಯಗಳನ್ನೆಲ್ಲ ಪೂರೈಸಲಿದೆ. ರಾಜ್ಯದಲ್ಲಿ ಟಾರ್ಕ್‌ ಮೋಟರ್ಸ್‌ನ ವಹಿವಾಟು ವಿಸ್ತರಿಸಲು ಸಹಾಯ ಮಾಡಲಿದೆ. ಗ್ರಾಹಕರು ಕ್ರೇಟಸ್‌–ಆರ್‌– ಗೆ ಹತ್ತಿರವಾಗಲಿದೆ.

ಟಾರ್ಕ್‌ ಮೋಟರ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಕಪಿಲ್ ಶೆಲ್ಕೆ ಅವರು ಮಾತನಾಡಿ, ‘ಬೆಂಗಳೂರಿನಲ್ಲಿ ನಮ್ಮ ಮೊದಲ ಅನುಭವ ವಲಯವನ್ನು ಆರಂಭಿಸುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ನಗರವು ದೇಶದ ‘ತಂತ್ರಜ್ಞಾನ ರಾಜಧಾನಿ’ ಎಂದೇ ಶ್ಲಾಘನೆಗೆ ಒಳಗಾಗಿದೆ. ಜೊತೆಗೆ ಇದೊಂದು ದ್ವಿಚಕ್ರ ವಾಹನ ಚಾಲಕರ ನಗರವೂ ಆಗಿದೆ. ಇದು ನಮಗೆ ಅತ್ಯಂತ ಮಹತ್ವದ ಮಾರುಕಟ್ಟೆಯಾಗಿದೆ. ಭಾರತದ ಮೋಟರ್‌ಸೈಕಲ್‌ಸವಾರರಿಗಾಗಿ ಕ್ರೇಟಸ್‌–ಆರ್‌ಅನ್ನು ಭಾರತದಲ್ಲಿಯೇ ಸಂಪೂರ್ಣವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದ್ದು, ಈ ನಗರದ ಉತ್ಸಾಹವನ್ನು ಗೌರವಿಸುತ್ತದೆ. ವ್ಯಾಪಕ ಬಗೆಯ ಸವಾರರ ಬಳಕೆಗೆ ವಿದ್ಯುತ್‌ಚಾಲಿತ ಮೋಟರ್‌ಸೈಕಲ್‌ಸುಲಭವಾಗಿ ಲಭ್ಯವಾಗುವ ರೀತಿಯಲ್ಲಿ ಇರುವ ಈ ಕ್ರೇಟಸ್‌–ಆರ್‌, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಉಲ್ಲಾಸದಾಯಕ ಕಾರ್ಯಕ್ಷಮತೆಯನ್ನು ಸಂಯೋಜಿಸುತ್ತದೆ. ಇದು ನಗರದ ತಂತ್ರಜ್ಞಾನ ಪ್ರೇಮಿಗಳು ಮತ್ತು ಮೋಟರ್‌ಸೈಕಲ್ ಉತ್ಸಾಹಿಗಳಿಗೆ ಖಂಡಿತವಾಗಿಯೂ ಪ್ರೇರಣೆ ನೀಡಲಿದೆ ಎಂಬುದು ನಮ್ಮ ನಂಬಿಕೆಯಾಗಿದೆ’ ಎಂದು ಹೇಳಿದ್ದಾರೆ.

ಮಾರುಕಟ್ಟೆಗೆ ಈ ಮೋಟರ್‌ಸೈಕಲ್ ಬಿಡುಗಡೆಯಾದಾಗಿನಿಂದ ಹೊಸ ಅಲೆಯ ಜನಪ್ರಿಯತೆ ಸೃಷ್ಟಿಸಿದೆ. ಗಮನ ಸೆಳೆಯುವ ವಿನ್ಯಾಸ, ಸವಾರರ ಅಗತ್ಯಗಳನ್ನೆಲ್ಲ ಈಡೇರಿಸುವ ಮತ್ತು ಸಮರ್ಥ ಚಾಸಿಸ್‌ಒಳಗೊಂಡಿದೆ. ಇದು ಪ್ರೀಮಿಯಂ ಕಮ್ಯೂಟರ್ ಮೋಟರ್‌ಸೈಕಲ್ ಆಗಿದ್ದು, ಅದರ ಅತ್ಯಾಕರ್ಷಕ ನಿಲುವಿನ ಕಾರಣಕ್ಕೆ ಗಮನ ಸೆಳೆಯುವುದರ ಜೊತೆಗೆ ಉತ್ತಮ ಕಾರ್ಯಕ್ಷಮತೆ ಮತ್ತು ನಿರ್ವಹಣೆಯನ್ನೂ ನೀಡಲಿದೆ.

180 ಕಿಲೋ ಮೀಟರ್ ರೇಂಜ್​

ತಂತ್ರಜ್ಞಾನದ ವಿಷಯದಲ್ಲಿ, ಈ ಮೋಟರ್‌ಸೈಕಲ್ 4.0 ಕೆಡಬ್ಲ್ಯುಎಚ್‌ಲಿ ಅಯಾನ್ ಬ್ಯಾಟರಿ ಪ್ಯಾಕ್ (ಐಪಿ 67 ರೇಟೆಡ್) ಹೊಂದಿದ್ದು, ಇತ್ತೀಚೆಗೆ ಪೇಟೆಂಟ್ ಪಡೆದಿರುವ 9ಕೆಡಬ್ಲ್ಯು ‘ಆ್ಯಕ್ಸಿಯಲ್ ಫ್ಲಕ್ಸ್’ ಮೋಟರ್‌ಗೆ ವಿದ್ಯುತ್‌ ಪೂರೈಸುತ್ತದೆ. ಇದು ಶೇಕಡಾ 96ರಷ್ಟು ದಕ್ಷತೆಯ 38ಎನ್‌ಎಂ ಗರಿಷ್ಠ ಟಾರ್ಕ್ ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಮೂರು ಮಾದರಿಗಳಾದ- ಇಕೊ, ಸಿಟಿ ಮತ್ತು ಸ್ಪೋರ್ಟ್, ಸವಾರರು ತಮ್ಮ ಸವಾರಿ ಶೈಲಿಗಳ ಆಧಾರದ ಮೇಲೆ ಈ ಪ್ಯಾಕೇಜ್‌ನ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಐಡಿಸಿ ಶ್ರೇಣಿಯು 180 ಕಿಮೀ (ಇಕೊ ಮೋಡ್‌ನಲ್ಲಿ) ಇದ್ದರೆ, ಕ್ರೇಟಸ್‌–ಆರ್‌ಪ್ರತಿ ಗಂಟೆಗೆ 105 ಕಿಮೀ (ಸ್ಪೋರ್ಟ್ ಮೋಡ್‌ನಲ್ಲಿ) ಗರಿಷ್ಠ ವೇಗ ತಲುಪುವ ಸಾಮರ್ಥ್ಯ ಹೊಂದಿದೆ. ಇದು ರಿವರ್ಸ್ ಮೋಡ್ ಅನ್ನು ಸಹ ಪಡೆಯುತ್ತದೆ.

ಈ ವರ್ಷದ ಆರಂಭದಲ್ಲಿ, ಕ್ರೇಟಸ್‌–ಆರ್‌ ಗಮನಾರ್ಹ ಬದಲಾವಣೆಗಳೊಂದಿಗೆ ಹೊಸ ರೂಪ ಪಡೆದಿತ್ತು. ಮೋಟರ್‌ಸೈಕಲ್ ಈಗ ಸಂಪೂರ್ಣವಾಗಿ ಕಪ್ಪು ಮೋಟರ್ ಮತ್ತು ಬ್ಯಾಟರಿ ಪ್ಯಾಕ್ ಜೊತೆಗೆ ಹೆಚ್ಚುವರಿ ಆಕರ್ಷಣೆಗಳನ್ನು ಮತ್ತು ಸೊಗಸಾದ ವಿನ್ಯಾಸಗಳನ್ನು ಹೊಂದಿದೆ. ವೇಗದ ಚಾರ್ಜಿಂಗ್ ಪೋರ್ಟ್‌ನೊಂದಿಗೆ ಬರುತ್ತದೆ. ಈ ಮೋಟರ್‌ಸೈಕಲ್ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ : Maruti Suzuki Baleno : ಬಲೆನೊ ಸಿಗ್ಮಾ ವೇರಿಯೆಂಟ್​ಗೆ ಇನ್ನಷ್ಟು ಫೀಚರ್​ಗಳಿಗೆ ಸೇರ್ಪಡೆ, ಯಾವುದೆಲ್ಲ ಅದು?

ಸಮಾನ ಮಾಸಿಕ ಕಂತು (ಇಎಂಐ) ಆಯ್ಕೆಗಳಡಿ ತಿಂಗಳಿಗೆ 2,999 ರೂಪಾಯಿಯಿಂದ ಕಂತು ಪ್ರಾರಂಭವಾಗುತ್ತದೆ. ಕ್ರೇಟಸ್‌–ಆರ್‌ ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡಲು ಟಾರ್ಕ್‌ಮೋಟರ್ಸ್ ಪ್ರಮುಖ ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಹಾಲಿ ಗ್ರಾಹಕರು ತಮ್ಮ ಬಳಿ ಇರುವ ಮೋಟರ್‌ಸೈಕಲ್ ಅನ್ನು ನಿರ್ದಿಷ್ಟ ಮೊತ್ತಪಾವತಿಸುವ ಮೂಲಕ ನವೀಕರಿಸಬಹುದು. ಕಂಪನಿಯ ಅಧಿಕೃತ ಅಂತರ್ಜಾಲ ತಾಣ www.booking.torkmotors.com ಗೆ ಭೇಟಿ ನೀಡಿ ಗ್ರಾಹಕರು ತಮ್ಮ ಕ್ರೇಟಸ್‌–ಆರ್‌ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು, ಮಾರುಕಟ್ಟೆಗೆ ಪರಿಚಯಿಸಿದ ದಿನದಿಂದ, ಕಂಪನಿಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಈ ವಿದ್ಯುತ್‌ಚಾಲಿತ ಮೋಟರ್‌ಸೈಕಲ್‌ಗೆ ಹಲವಾರು ಬುಕಿಂಗ್‌ಗಳ ಮೂಲಕ ಅಗಾಧ ಪ್ರತಿಕ್ರಿಯೆ ಕಂಡುಬಂದಿದೆ. ಕಂಪನಿಯು ಬೆಂಗಳೂರಿನಲ್ಲಿ ತನ್ನ ವಹಿವಾಟಿನ ವೇಗ ಮುಂದುವರಿಸುವ ಗುರಿ ಹೊಂದಿದೆ.

Exit mobile version