ಬೆಂಗಳೂರು: ನೇಕೇಡ್ ಸ್ಟ್ರೀಟ್ ಬೈಕ್ಗಳ ಕ್ರೇಜ್ ಭಾರತೀಯರಲ್ಲಿ ಜಾಸ್ತಿಯಾಗುತ್ತಿದೆ. ಈ ಬೆಳವಣಿಗೆಯನ್ನು ಪರಿಗಣಿಸಿರುವ ಭಾರತೀಯ ಮೂಲದ ಪ್ರಮುಖ ಮೋಟಾರ್ ಸೈಕಲ್ ಕಂಪನಿ ಟಿವಿಎಸ್ ಮೋಟಾರ್ ಅಪಾಚೆಯ ಆರ್ಟಿಆರ್ 310 ಬೈಕ್ (TVS Apache RTR 310) ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಟಿವಿಎಸ್ ಕಂಪನಿಯ (TVS Motors) 310 ಸೆಗ್ಮೆಂಟ್ನಲ್ಲಿ ಆರ್ಆರ್ ಎಂಬ ಬೈಕ್ ಅನ್ನು ಹಿಂದೆ ಬಿಡುಗಡೆ ಮಾಡಿತ್ತು. ಅದರ ಮುಂದುವರಿದ ರೂಪವಾಗಿ ಅತ್ಯಾಕರ್ಷಕ ಆರ್ಟಿಆರ್ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ನ ಆರಂಭಿಕ ಬೆಲೆ 2.43 ಲಕ್ಷ ರೂಪಾಯಿ. (ಎಕ್ಸ್ ಶೋ ರೂಮ್). ಅಂದರೆ ಆರ್ಆರ್ 310 ಬೈಕ್ಗಿಂತ 29,000 ರೂಪಾಯಿ ಕಡಿಮೆ. ಆರ್ಆರ್ ಸ್ಪೋರ್ಟ್ಸ್ ಬೈಕ್ ಆಗಿದ್ದು, ಆರ್ಟಿಆರ್ ನೇಕೇಡ್ ಸ್ಟ್ರೀಟ್ ಬೈಕ್.
ಹೊಸ ಅಪಾಚೆ ಆರ್ಟಿಆರ್ 310 ಬೈಕಿನಲ್ಲಿ ಅಪಾಚೆ ಆರ್ ಆರ್ 310 ಮತ್ತು ಬಿಎಂಡಬ್ಲ್ಯು 310 ಎಸ್ ಬೈಕುಗಳಲ್ಲಿ ಅಳವಡಿಸಲಾಗಿರುವ 312 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 35.6 ಬಿ ಹೆಚ್ಪಿ ಪವರ್ ಮತ್ತು 28.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಕೊಡಲಾಗಿದೆ.
ಟಿವಿಎಸ್ ಅಪಾಚೆ ಆರ್ ಟಿಆರ್ 310ನ ಹೊಸತನಗಳೇನು?
ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ ಇದು ಆರ್ ಆರ್ 310 ಅನ್ನು ಹೋಲುತ್ತದೆ. ಆದರೆ, ಲೈಟ್ವೇಟ್ ಟ್ರೆಲಿಸ್ ಫ್ರೇಮ್ನಲ್ಲಿ ನಿರ್ಮಿಸಲಾಗಿದೆ. ಆದಾಗ್ಯೂ, ಹಿಂಭಾಗದ ಸಬ್ ಫ್ರೇಮ್ ವಿಭಿನ್ನವಾಗಿದೆ ಹಾಗೂ ಸ್ಪೋರ್ಟಿ ಲುಕ್ ಹೊಂದಿದೆ. ಪಿಲಿಯನ್ ಸೀಟ್ ಮತ್ತು ಟೈಲ್ ವಿಭಾಗದ ಕಡೆಗೆ ಎತ್ತರ ಮಾಡಲಾಗಿದೆ ಆರ್ ಟಿಆರ್ ಅನ್ನು ಅಪ್ ಸೈಡ್-ಡೌನ್ ಫೋರ್ಕ್ / ಮೊನೊಶಾಕ್ ಸೆಟ್ ಅಪ್ನಲ್ಲಿ ಇಡಲಾಗಿದೆ. ಸ್ಟ್ಯಾಂಡರ್ಡ್ ಬೈಕ್ ಹಿಂಭಾಗದ ಪ್ರಿಲೋಡ್ ಹೊಂದಾಣಿಕೆಯನ್ನು ಮಾತ್ರ ಹೊಂದಿದೆ. ಇದು ಡ್ಯುಯಲ್ ಕಾಂಪೌಂಡ್ ರೇಡಿಯಲ್ ಟೈರ್ನೊಂದಿಗೆ ನೀಡಲಾಗಿದೆ. ಆರ್ ಟಿಆರ್ 310 ಬೈಕಿನಲ್ಲಿ ಐದು ರೈಡಿಂಗ್ ಮೋಡ್ ಗಳಿವೆ.
ಇದನ್ನೂ ಓದಿ : Hyundai i20 : ಹೊಸ ಐ20 ಕಾರಿನ ಬೆಲೆ 47 ಸಾವಿರ ರೂಪಾಯಿ ಕಡಿಮೆ; ಗ್ರಾಹಕರಿಗೆ ಅಚ್ಚರಿ ಗ್ಯಾರಂಟಿ!
ಆರ್ ಆರ್ 310 ಬೈಕಿನಲ್ಲಿರುವ ಪೋರ್ಟ್ರೇಟ್ ಆಧಾರಿತ ಟಿಎಫ್ ಟಿ ಡ್ಯಾಶ್ ಗಿಂತ ಭಿನ್ನವಾಗಿದೆ. ಲ್ಯಾಂಡ್ ಸ್ಕೇಪ್-ಆಧಾರಿತ 5.0-ಇಂಚಿನ ಟಿಎಫ್ ಟಿ ಪರದೆಯ ರೂಪದಲ್ಲಿ ಈ ಹೊಸ ಟಿವಿಎಸ್ ನಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ನೀಡಲಾಗಿದೆ. ಎಲ್ಇಡಿ ಹೆಡ್ ಲೈಟ್ ಮತ್ತು ಟೈಲ್ ಲೈಟ್, ಕ್ರೂಸ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಜೊತೆಗೆ ಕೂಲ್ಡ್ ಸೀಟುಗಳನ್ನು ನೀಡಲಾಗಿದೆ. ಆರ್ ಟಿಆರ್ 310 ಬೈಕ್ ,ರೇಸ್ ಟ್ಯೂನ್ಡ್ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಲೀನಿಯರ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ. ಅಡ್ಜಸ್ಟ್ ಮಾಡಬಹುದಾದ ಸಸ್ಪೆನ್ಷನ್ ನೀಡಲಾಗಿದೆ.
ಪ್ರತಿಸ್ಪರ್ಧಿಗಳು ಬೈಕ್ಗಳು?
ಬೆಲೆಯ ವಿಚಾರದಲ್ಲಿ ಆರ್ ಟಿಆರ್ 310 ತನ್ನ ಎಲ್ಲಾ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುತ್ತದೆ. ಕೆಟಿಎಂ 390 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.97 ಲಕ್ಷಗಳಾದರೆ, ಟ್ರಯಂಫ್ ಸ್ಪೀಡ್ 400 ಬೈಕಿನ ಬೆಲೆಯು ರೂ.2.33 ಲಕ್ಷಗಳಾಗಿದೆ. ಟಿವಿಎಸ್ನದ್ದೇ ಆರ್ ಆರ್ 310 ಬೈಕಿನ ಬೆಲೆಯು ರೂ.2.72 ಲಕ್ಷಗಳಾಗಿದೆ.