Site icon Vistara News

EV Vehicles : ಎಲೆಕ್ಟ್ರಿಕ್​ ವಾಹನ ಮಾಲೀಕರಿಗೆ ಭರ್ಜರಿ ಆಫರ್​ ಕೊಟ್ಟ ಯೋಗಿ ನೇತೃತ್ವದ ಯುಪಿ ಸರಕಾರ, ಏನದು?

EV charging

ಲಖನೌ: ಎಲೆಕ್ಟ್ರಿಕ್​ ವಾಹನಗಳ (EV Vehicles) ಬಳಕೆ ಹೆಚ್ಚಿಸಲು ಕೇಂದ್ರ ಸರಕಾರ ಉತ್ತೇಜನ ನೀಡುತ್ತಿರುವ ನಡುವೆ ಉತ್ತರ ಪ್ರದೇಶ ಸರಕಾರ ಈ ನಿಟ್ಟಿನಲ್ಲಿ ದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದೆ. ಮುಂದಿನ ಐದು ವರ್ಷಗಳ ಕಾಲ ಉತ್ತರ ಪ್ರದೇಶದಲ್ಲಿ ಉತ್ಪಾದನೆಯಾದ ಯಾವುದೇ ಇವಿ ವಾಹನಗಳನ್ನು ಖರೀದಿಸಿದರೆ ರೋಡ್​ ಟ್ಯಾಕ್ಸ್​ ಹಾಗೂ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲು ಮುಂದಾಗಿದೆ. ಕಳೆದ ವರ್ಷದ ಅಕ್ಟೋಬರ್​ನಿಂದ ಈ ಯೋಜನೆ ಜಾರಿಗೆ ಬಂದಿದ್ದು, ಎಲ್ಲ ಆರ್​ಟಿಒ ಕಚೇರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ.

ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರ ಪ್ರದೇಶ ಸರಕಾರ ಈ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದು, ಬ್ಯಾಟರಿ ಪವರ್​ ಬಳಸಿ ಚಾಲನೆ ಪಡೆಯುವ ಎಲೆಕ್ಟ್ರಾನಿಕ್​ ಮೋಟಾರ್ ಹೊಂದಿರುವ ಎಲ್ಲ ವಾಹನಗಳಿಗೆ ಈ ಸಬ್ಸಿಡಿ ಅನ್ವಯವಾಗಲಿದೆ ಎಂದು ಹೇಳಿದೆ. ದ್ವಿ ಚಕ್ರ, ಮೂರು ಚಕ್ರದ ವಾಹನ, ನಾಲ್ಕು ಚಕ್ರದ ವಾಹನಗಳು, ಸ್ಟ್ರಾಂಗ್ ಹೈಬ್ರಿಡ್​, ಪ್ಲಗ್​ ಇನ್​ ಹೈಬ್ರಿಡ್​ ವೆಹಿಕಲ್​, ಬ್ಯಾಟರಿ ಎಲೆಕ್ಟ್ರಿಕ್​ ವೆಹಿಕಲ್​, ಫ್ಯುಯಲ್ ಸೆಲ್ ಎಲೆಕ್ಟ್ರಿಕ್​ ವೆಹಿಕಲ್​ಗಳು ಶುಲ್ಕ ವಿನಾಯಿತಿ ಪಡೆಯಲಿವೆ.

ಇದನ್ನೂ ಓದಿ : Tata Nexon EV : ನಾಲ್ಕು ದಿನದಲ್ಲಿ 4000 ಕಿ. ಮೀ ಪ್ರಯಾಣ, ಟಾಟಾ ನೆಕ್ಸಾನ್​ ಇವಿ ಕಾರಿನ ದಾಖಲೆ

ಉತ್ತರ ಪ್ರದೇಶ ಸರಕಾರದ ಈ ನಿರ್ಧಾರದಿಂದಾಗಿ ಆಗ್ರಾದಲ್ಲಿ ಈಗಾಗಲೇ 3997 ಎಲೆಕ್ಟ್ರಿಕ್​ ವಾಹನಗಳನ್ನು ಖರೀದಿ ಮಾಡಿರುವ ಮಾಲೀಕರಿಗೆ ಸಬ್ಸಿಡಿ ಲಾಭ ಸಿಗಲಿದೆ. ಇದರಲ್ಲಿ 437 ಇ ರಿಕ್ಷಾ, 30ಕಾರುಗಳು ಹಾಗೂ ಉಳಿದವು ದ್ವಿಚಕ್ರ ವಾಹನಗಳಾಗಿವೆ.

ಹೆಚ್ಚುವರಿಯಾಗಿ ಕೇಂದ್ರ ಸರಕಾರವೂ ಸಬ್ಸಿಡಿ ನೀಡುತ್ತಿದ್ದು, ಇವೆಲ್ಲವೂ ಒಟ್ಟು ಸೇರಿದರೆ ದ್ವಿ ಚಕ್ರವಾಹನಗಳ ಬೆಲೆ 10ರಿಂದ 20 ಸಾವಿರ ರೂಪಾಯಿ ಕಡಿಮೆಯಾಗಿದೆ. ಕಾರುಗಳು ದರ 1 ಲಕ್ಷ ರೂಪಾಯಿ ಇಳಿಕೆಯಾಗಲಿದೆ.

Exit mobile version