Site icon Vistara News

BMW Bike : ಬಿಎಮ್​​ಡಬ್ಲ್ಯು ಕಂಪನಿಯ ಈ ಬೈಕ್​ಗೆ 35 ಲಕ್ಷ ರೂಪಾಯಿ; ಯಾಕೆ ಅಷ್ಟು ಬೆಲೆ?

What are the features of the 35 lakh rupees BMW bike?

#image_title

ಮುಂಬಯಿ: ಐಷಾರಾಮಿ ಕಾರುಗಳನ್ನು ತಯಾರಿಸುವ ಜರ್ಮನಿ ಮೂಲದ ಕಂಪನಿ ಬಿಎಮ್​ಡಬ್ಲ್ಯು ದುಬಾರಿ ಬೆಲೆಯ ಬೈಕ್​ಗಳನ್ನೂ (BMW Bike) ಉತ್ಪಾದಿಸುತ್ತದೆ. ಈ ಕಂಪನಿ ತಯಾರಿಸಿರುವ ಆರ್​ 18 ಟ್ರಾನ್ಸ್​ಕಾಂಟಿನೆಂಟ್​ನ ಬೈಕ್ 35 ಲಕ್ಷ ರೂಪಾಯಿ ಬೆಲೆಯೊಂದಿಗೆ ಭಾರತದಲ್ಲೂ ಬಿಡುಗಡೆಯಾಗಿದೆ. ಬೈಕ್​ ಸಂಪೂರ್ಣವಾಗಿ ವಿದೇಶದಲ್ಲಿಯೇ ತಯಾರಾಗಿ ಭಾರತದಲ್ಲಿ ಮಾರಾಟವಾಗಲಿದೆ. ಇದರ ಎಕ್ಸ್​ಶೋ ರೂಮ್​ ಬೆಲೆ 31.50 ಲಕ್ಷ ರೂಪಾಯಿ. ತೆರಿಗೆ ಹಾಗೂ ಇನ್ಸ್ಯುರೆನ್ಸ್​ ಸೇರಿಕೊಂಡು 35 ಲಕ್ಷ ರೂಪಾಯಿ ದಾಟುತ್ತದೆ. ಹಲವಾರು ವಿಶೇಷ ಫೀಚರ್​ಗಳನ್ನು ಹೊಂದಿರುವ ಈ ಬೈಕ್​ಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಇದು ಆರ್​18 ಸೆಗ್ಮೆಂಟ್​ನ ಮೂರನೇ ಬೈಕ್​. ಈ ಹಿಂದೆ ಆರ್​18, ಆರ್​18 ಕ್ಲಾಸಿಕ್​ ಎಂಬ ಬೈಕ್​ಗಳನ್ನು ಬಿಎಂಡಬ್ಲ್ಯು ಬಿಡುಗಡೆ ಮಾಡಿತ್ತು.

ಬಿಎಂಡಬ್ಲ್ಯು ಆರ್​18 ಟ್ರಾನ್​​ಕಾಂಟಿನೆಂಟನ್​​ 1802 ಸಿಸಿಯ ಎಂಜಿನ್​ನಲ್ಲಿ ಎರಡು ಸಿಲಿಂಡರ್​ಗಳಿವೆ ಹಾಗೂ ಏರ್​ಕೂಲ್ಡ್​ ತಾಂತ್ರಿಕತೆ ಹೊಂದಿದೆ. ಇದು 4750 ಆರ್​ಪಿಎಮ್​ನಲ್ಲಿ 89 ಬಿಎಚ್​​ಪಿ ಪವರ್​ ಬಿಡುಗಡೆ ಮಾಡುತ್ತದೆ. ಅದೇ ರೀತಿ 2000ರಿಂದ 4000 ಆರ್​ಪಿಎಮ್​ ಒಳಗೆ 150 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಆರು ಸ್ಪೀಡ್​ನ ಗೇರ್​ಬಾಕ್ಸ್ ಇದು ಹೊಂದಿದ್ದು, ಆ್ಯಂಟಿ ಹೋಪಿಂಗ್​ ಕ್ಲಚ್ ಕೂಡ ಇದೆ. ಹೆಚ್ಚುವರಿಯಾಗಿ ರಿವರ್ಸ್​ ಗೇರ್​ ಆಯ್ಕೆಯನ್ನೂ ನೀಡಲಾಗಿದೆ. ಇದು 427 ಕೆ.ಜಿ ಭಾರವಿದ್ದು, 24 ಲೀಟರ್​ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್​ ನೀಡಲಾಗಿದೆ. ನಾಲ್ಕು ಲೀಟರ್​ ಪೆಟ್ರೊಲ್​ನ ರಿಸರ್ವ್ ಕೆಪಾಸಿಟಿಯೂ ಇದೆ.

ಇದನ್ನೂ ಓದಿ : Hero MotoCorp : ಹೀರೋ ಸೂಪರ್​ ಸ್ಪ್ಲೆಂಡರ್​ XTEC ಭಾರತದಲ್ಲಿ ಬಿಡುಗಡೆ, ಏನಿವೆ ವಿಶೇಷತೆಗಳು?

ರೇನ್​, ರೋಲ್​ ಆ್ಯಂಡ್​ ರಾಕ್​ ಎಂಬ ಮೂರು ರೈಡಿಂಗ್​ ಮೋಡ್​ಗಳಿವೆ. ರೋಲ್​ ಮೋಡ್​ನಲ್ಲಿ ಸೆಫ್ಟಿ ಫೀಚರ್​ಗಳು ಹೆಚ್ಚು ಕೆಲಸ ಮಾಡುತ್ತವೆ. ರಾಕ್​ ಮೋಡ್​ನಲ್ಲಿ ಆಟೋಮ್ಯಾಟಿಕ್​ ಸ್ಟೆಬಿಲಿಟಿ ಕಂಟ್ರೋಲ್​ ವ್ಯವಸ್ಥೆಯಿದೆ. ಕ್ರೂಸ್​ ಕಂಟ್ರೋಲ್​, ಟ್ರ್ಯಾಕ್ಷನ್ ಕಂಟ್ರೋಲ್​, ಡೈನಾಮಿಕ್​ ಎಂಜಿನ್​ ಬ್ರೇಕ್ ಕಂಟ್ರೋಲ್​, ಹಿಲ್​ ಸ್ಟಾರ್ಟ್​ ಕಂಟ್ರೋಲ್​, ಕೀ ಲೆಸ್​ ರೈಡ್​ ಮತ್ತಿತರ ಫೀಚರ್​ಗಳಿವೆ. ಮುಂಭಾಗದಲ್ಲಿ ಟ್ವಿನ್​ ಡಿಸ್ಕ್​ ಬ್ರೇಕ್ ಇದ್ದರೆ, ಹಿಂಭಾಗದಲ್ಲಿ ಸಿಂಗಲ್​ ಡಿಸ್ಕ್​ ಬ್ರೇಕ್​ ಇದೆ.

ಆರ್​18 ಟ್ರಾನ್ಸ್​​ಕಾಂಟಿನೆಂಟಲ್​ ಬೈಕ್​ ಅನ್ನು ರಸ್ತೆಗೆ ಇಳಿಸುವ ಮೂಲಕ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ಐಷಾರಾಮಿ ಬೈಕ್​ಗಳ ಹೊಸ ಯುಗವನ್ನು ಆರಂಭಿಸಿದೆ. ಹೊಸ ತಾಂತ್ರಿಕತೆ, ಆಕರ್ಷಕ ವಿನ್ಯಾಸ ಹಾಗೂ ಅನುಕೂಲಕರ ಸವಾರಿ ಅನುಭವ ನೀಡುವ ಈ ಬೈಕ್​ಗಳು ಭಾರತದ ಬೈಕ್​ ಪ್ರಿಯರನ್ನು ಸೆಳೆಯಲಿದೆ ಎಂದು ಬಿಎಂಡಬ್ಲ್ಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಲೆ ಏಕೆ ಜಾಸ್ತಿ?

ಈ ಬೈಕ್​ಗಳು ಜಾಗತಿಕ ಮಟ್ಟದಲ್ಲಿ ಹೊಂದಿರುವ ಅತ್ಯಂತ ದಕ್ಷ ಸೇಫ್ಟಿ ಫೀಚರ್​ಗಳನ್ನು ಹೊಂದಿದೆ. ಅದೇ ರೀತಿ ಬಿಎಂಡಬ್ಲ್ಯು ಬೈಕ್​ಗಳು ಕಾರುಗಳಂತೆಯೇ ದುಬಾರಿ. ಅದಕ್ಕಿಂತ ಹೆಚ್ಚಾಗಿ ವಿದೇಶದಲ್ಲಿಯೇ ತಯಾರಾಗಿ ಭಾರತದಲ್ಲಿ ಮಾರಾಟವಾಗುವ ಬೈಕ್​ಗಳಿಗೆ ಅದರ ಮೂಲ ಬೆಲೆಯಷ್ಟೇ ತೆರಿಗೆಯನ್ನೂ ಕಟ್ಟಬೇಕಾಗುತ್ತದೆ. ಹೀಗಾಗಿ ಬೆಲೆ ದುಬಾರಿಯಾಗುತ್ತದೆ.

Exit mobile version