Site icon Vistara News

Auto Market | ವಾಹನಗಳ ಉತ್ಪಾದನೆಯಲ್ಲಿ ಜಪಾನ್​ ಹಿಂದಿಕ್ಕಿದ ಭಾರತಕ್ಕೆ ಈಗ ಎಷ್ಟನೇ ಸ್ಥಾನ?

Car production plant

ಬೆಂಗಳೂರು : ಭಾರತದ ಆಟೋಮೊಬೈಲ್​ ಕ್ಷೇತ್ರ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಲೇ ಹೋಗುತ್ತಿದೆ. ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದು, 2022ರಲ್ಲಿ ವಾಹನಗಳ ಉತ್ಪಾದನೆಯಲ್ಲಿ ಜಪಾನ್​ ಹಿಂದಿಕ್ಕಿ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಈ ಮೂಲಕ ಚೀನಾ ಮತ್ತು ಅಮೆರಿಕದ ನಂತರದ ಸ್ಥಾನವನ್ನು ಪಡೆದುಕೊಂಡಿದೆ. ಭಾರತವು ಇದೇ ಮೊದಲ ಬಾರಿಗೆ ತೃತೀಯ ಸ್ಥಾನಕ್ಕೇರುತ್ತಿದ್ದು, ಅಮೆರಿಕವನ್ನು ಹಿಂದಿಕ್ಕುವ ಎಲ್ಲ ಸಾಧ್ಯತೆಗಳಿವೆ.

ನಿಕ್ಕಿ ಏಷ್ಯಾ ಸಂಸ್ಥೆಯ ವರದಿ ಪ್ರಕಾರ 2022ರಲ್ಲಿ ಭಾರತ ಒಟ್ಟು 42,25000 ವಾಹನಗಳನ್ನು ಉತ್ಪಾದಿಸಿದೆ. ಜಪಾನ್​ ಈ ಅವಧಿಯಲ್ಲಿ 42 ಲಕ್ಷ ವಾಹಗಳನ್ನು ಉತ್ಪಾದಿಸಿ ಮಾರಾಟ ಮಾಡಿದೆ. ಇದರೊಂದಿಗೆ ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಮಗದೊಂದು ಬಡ್ತಿ ಲಭಿಸಿದೆ.

ಭಾರತದಲ್ಲಿ ಒಟ್ಟು ತಯಾರಾದ ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಎಲ್ಲ ಲಕ್ಷಣಗಳಿವೆ. ಪ್ರಯಾಣಿಕ ವಾಹನಗಳ ವರ್ಷಾಂತ್ಯದ ಮಾರಾಟದ ಲೆಕ್ಕಾಚಾರವನ್ನು ಕಂಪನಿಗಳು ಬಿಡುಗಡೆ ಮಾಡಿರುವ ಹೊರತಾಗಿಯೂ ವಾಣಿಜ್ಯ ಬಳಕೆಯ ವಾಹನಗಳ ಕುರಿತು ಮಾಹಿತಿ ಪ್ರಕಟಗೊಂಡಿಲ್ಲ. ಅದು ಪ್ರಕಟಗೊಂಡ ಬಳಿಕ ಭಾರತದ ಒಟ್ಟು ಉತ್ಪಾದನೆ ತಿಳಿದು ಬರಲಿದೆ ಎಂದು ನಿಕ್ಕಿ ಎಷ್ಯಾ ಕಂಪನಿ ಹೇಳಿದೆ.

2.6 ಕೋಟಿ ವಾಹನಗಳನ್ನು ಉತ್ಪಾದನೆ ಮಾಡಿರುವ ಚೀನಾ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, 15.4 ಕೋಟಿ ವಾಹನಗಳನ್ನು ಉತ್ಪಾದಿಸಿ ಮಾರಿದ ಅಮೆರಿಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನಿಕ್ಕಿ ಏಷ್ಯಾ ಮಾಹಿತಿ ಪ್ರಕಾರ ಭಾರತದಲ್ಲಿ 44 ಲಕ್ಷ ವಾಹನಗಳನ್ನು ಉತ್ಪಾದನೆ ಮಾಡಿತ್ತು. ಆದರೆ, ಮೂರನೇ ಸ್ಥಾನ ಪಡೆದುಕೊಂಡಿರಲಿಲ್ಲ. ನಂತರದ ವರ್ಷಗಳಲ್ಲಿ ಕೊರೊನಾ ಕಾರಣಕ್ಕೆ ಮಾರುಕಟ್ಟೆ ಇಳಿಕೆಯಾಗಿತ್ತು. 2021ರಲ್ಲಿ ಬೇಡಿಕೆ ಇದ್ದರೂ ಚಿಪ್​ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿ ಮಾರಾಟದಲ್ಲಿ ಪ್ರಗತಿ ಕಂಡಿರಲಿಲ್ಲ.

ಇದನ್ನೂ ಓದಿ | BMW Vision DEE | ಈ ಕಾರು ಮಾತನಾಡುತ್ತದೆ, ಬಣ್ಣವೂ ಬದಲಾಯಿಸುತ್ತದೆ; ಯಾವ ಕಂಪನಿಯ ಕಾರು ಇದು?

Exit mobile version