Site icon Vistara News

ನೋಡಲು ಚಿಕ್ಕದು, ವೆರಿವೆರಿ ಕ್ಯೂಟ್​​​; ಈ ಎಲೆಕ್ಟ್ರಿಕ್​ ಕಾರೆಂದರೆ ಯುವತಿಯರಿಗೆ ಅಚ್ಚುಮೆಚ್ಚು!

Tata Tiago EV

#image_title

ನವ ದೆಹಲಿ: ಭಾರತದ ಹೆಮ್ಮೆಯ ಆಟೋಮೊಬೈಲ್​ ಕಂಪನಿ ಟಾಟಾ ಮೋಟಾರ್ಸ್​​ನ ಟಿಯಾಗೊ ಇವಿ (Tiago EV) ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ತನ್ನ ಚಾಪು ಮೂಡಿಸುತ್ತಿದೆ. ಎಲೆಕ್ಟ್ರಿಕ್ ಕಾರುಗಳ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಿ ಹೊರಹೊಮ್ಮಿದೆ. ಈ ಕಾರು ಮಾರಾಟವಾಗಿರುವ ಒಟ್ಟು ಸಂಖ್ಯೆಯಲ್ಲಿ ಶೇಕಡಾ 50 ಸಣ್ಣ ನಗರ ಪ್ರದೇಶದಲ್ಲಿ ಸೇಲ್​ ಆಗಿವೆ. ಈ ಮೂಲಕ ಟಿಯಾಗೊ ಇವಿ ನಿರೀಕ್ಷೆಗಳನ್ನು ಮೀರುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ರಸ್ತೆಗಿಳಿದ ಅಗ್ಗದ ಎಲೆಕ್ಟ್ರಿಕ್​ ಕಾರು ಈಗಾಗಲೇ 15,000 ಮಾರಾಟವಾಗಿವೆ. ಈ ಕಾರಿನ ಯಶಸ್ಸಿನ ಬಗ್ಗೆ ಇನ್ನೂ ಆಸಕ್ತಿದಾಯಕ ವಿಷಯವೆಂದರೆ ಅದರ ಗ್ರಾಹಕರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು!

ಟಿಯಾಗೊ ಇವಿಯ ಯಶಸ್ಸಿನ ಅತ್ಯಂತ ಸ್ಫೂರ್ತಿದಾಯಕ ಅಂಶವೆಂದರೆ ಈ ಕಾರು ಸಾಂಪ್ರದಾಯಿಕ ಗ್ರಾಹಕನ್ನು ಮೀರಿ ಜನಪ್ರಿಯತೆ ಗಳಿಸಿರುವುದು. ಟಿಯಾಗೊ ಇವಿ ಖರೀದಿದಾರರಲ್ಲಿ ಶೇಕಡಾ 24 ಮಹಿಳೆಯರು. ಇದು ಮಹಿಳಾ ಕಾರು ಖರೀದಿದಾರರ ಸರಾಸರಿ ಶೇಕಡಾ 12ಕ್ಕೆ ಹೆಚ್ಚು. ಇದು ಎಲೆಕ್ಟ್ರಿಕ್ ವಾಹನಗಳನ್ನು ಇಷ್ಟಪಡುವವರಲ್ಲಿ ಮಹಿಳೆಯರೇ ಹೆಚ್ಚು ಎಂಬ ಸಂಗತಿಯನ್ನೂ ಪ್ರತಿನಿಧಿಸುತ್ತದೆ.

ಟಿಯಾಗೊ ಇವಿ ಮೊದಲ ಕಾರು ಖರೀದಿದಾರರನ್ನು ಹೆಚ್ಚು ಆಕರ್ಷಿಸುತ್ತಿದೆ. ಇದು ಅದರ ಮಾರಾಟದ ಸುಮಾರು 24% ರಷ್ಟಿದೆ. ಟಿಯಾಗೊ ಇವಿಯತ್ತ ಈ ಗುಂಪಿನ ಒಲವು ಹೆಚ್ಚಲು ಕೈಗೆಟುಕುವ ಬೆಲೆ, ಸುಧಾರಿತ ವೈಶಿಷ್ಟ್ಯಗಳು ಮತ್ತು ಪರಿಸರ ಸ್ನೇಹಿ ಸಾರಿಗೆ ಆಯ್ಕೆಯೇ ಕಾರಣವಾಗಿದೆ. ಬ್ರಾಂಡ್ ಯುವ ಪೀಳಿಗೆಯ ಆಕಾಂಕ್ಷೆಗಳು ಮತ್ತು ಮೌಲ್ಯಗಳಿಗೆ ಹೊಂದಿಕೆಯಾಗುತ್ತದೆ. ಸುಮಾರು 56% ಟಿಯಾಗೊ ಇವಿ ಗ್ರಾಹಕರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಕೂಡ ಗಮನಾರ್ಹ ಸಂಗತಿ.

ಸಣ್ಣ ಪಟ್ಟಣಗಳಲ್ಲಿ ಹೆಚ್ಚು ಆಕರ್ಷಣೆ

ಭಾರತದ ಅಗ್ರ 10 ನಗರಗಳು ಟಿಯಾಗೊ ಇವಿ ಮಾರಾಟಕ್ಕೆ ಶೇಕಡಾ 35 ಕೊಡುಗೆ ನೀಡುತ್ತಿವೆ. ನಂತರದ 10 ನಗರಗಳು ಶೇಕಡಾ 16ರನಷ್ಟು ಕೊಡುಗೆ ನೀಡುತ್ತಿವೆ. ಉಳಿದ ಶೇಕಡಾ 49 ಟಿಯಾಗೊ ಇವಿಯ ಮಾರಾಟವು ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ಆಗುತ್ತಿವೆ. ಈ ಪ್ರದೇಶಗಳಲ್ಲಿ ಈ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್​​ಗೆ ಹೆಚ್ಚಿನ ಆದ್ಯತೆ ಸಿಗುತ್ತಿವೆ.

ಇದನ್ನೂ ಓದಿ : IPL 2023 : ಟಾಟಾ ಟಿಯಾಗೊ ಇವಿ ಐಪಿಎಲ್​ನ ಅಧಿಕೃತ ಪಾಲುದಾರ ಕಾರು ಬ್ರ್ಯಾಂಡ್​

ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ಟಿಯಾಗೊ ಇವಿಗೆ ಆದ್ಯತೆಯು ಎಲೆಕ್ಟ್ರಿಕ್ ಕಾರುಗಳ ಮುಖ್ಯವಾಹಿನಿಯ ಪ್ರವೇಶದ ಸೂಚನೆ ಎನ್ನಲಾಗುತ್ತಿದೆ. ಎಂಟ್ರಿ ಲೆವೆಲ್​​ನ ಎಲೆಕ್ಟ್ರಿಕ್​ ಕಾರುಗಳು ಬೆಲೆಯ ಕಾರಣಕ್ಕೆ ಹಿನ್ನಡೆ ಅನುಭವಿಸುತ್ತಿದ್ದವು. ಟಾಟಾ ಟಿಯಾಗೊ ಇವಿಯನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡುವ ಮೂಲಕ ಈ ವ್ಯವಸ್ಥೆಯೇ ಬದಲಾಯಿತು.

ಸ್ಥಳಾವಕಾಶವೇ ಅನುಕೂಲಕರ

ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ಟಿಯಾಗೊ ಇವಿಯ ಜನಪ್ರಿಯತೆಗೆ ಹಲವಾರು ಅಂಶಗಳು ಕೊಡುಗೆ ನೀಡುತ್ತವೆ. ಅಂತಹ ಒಂದು ಅಂಶವೆಂದರೆ ಖಾಸಗಿ ಪಾರ್ಕಿಂಗ್ ಸ್ಥಳಗಳ ಸುಲಭ ಲಭ್ಯತೆ. ಇದು ಚಾರ್ಜಿಂಗ್ ಪಾಯಿಂಟ್​​ಗಳನ್ನು ಸ್ಥಾಪಿಸಲು ಅನುಕೂಲಕರವಾಗಿದೆ. ದೊಡ್ಡ ನಗರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಎತ್ತರದ ಕಟ್ಟಡಗಳಿಗಿಂತ ಭಿನ್ನವಾಗಿ, ಸಣ್ಣ ಪಟ್ಟಣಗಳು ಮತ್ತು ನಗರಗಳು ಸಾಮಾನ್ಯವಾಗಿ ಏಕಮಹಡಿ ಅಥವಾ ಕಡಿಮೆ-ಎತ್ತರದ ಮನೆಗಳನ್ನು ಹೊಂದಿರುತ್ತವೆ. ಇದು ಸುಲಭವಾಗಿ ಚಾರ್ಜಿಂಗ್ ವ್ಯವಸ್ಥೇ ಅನುಷ್ಠಾನಕ್ಕೆ ಅನುವು ಮಾಡಿಕೊಡುತ್ತದೆ.

ಟಿಯಾಗೊ ಇವಿ ಅನಿರೀಕ್ಷಿತ ಸ್ಥಳಗಳಲ್ಲಿಯೂ ಚಾಪು ಮೂಡಿಸಿದೆ ಮಹಾರಾಷ್ಟ್ರದ ಸತಾರಾ, ಕರ್ನಾಟಕದ ಶಿವಮೊಗ್ಗ ಮತ್ತು ಕೇರಳದ ವಿವಿಧ ಸಣ್ಣ ಪಟ್ಟಣಗಳು ಇದಕ್ಕೆ ಹೆಚ್ಚು ಬೇಡಿಕೆ ಇದೆ. ನೆಕ್ಸಾನ್ ಇವಿಯಂತಹ ಇತರ ಎಲೆಕ್ಟ್ರಿಕ್ ಮಾದರಿಗಳಿಗೆ ಹೋಲಿಸಿದರೆ ಈ ಸ್ಥಳಗಳಲ್ಲಿ ಟಿಯಾಗೊ ಇವಿಯ ಹೆಚ್ಚು ಮಾರಾಟಗೊಂಡಿವೆ. ಈ ಪ್ರವೃತ್ತಿಯು ಟಿಯಾಗೊ ಇವಿಯ ಸಾರ್ವತ್ರಿಕ ಆಕರ್ಷಣೆಯನ್ನು ಎತ್ತಿ ತೋರಿಸುತ್ತದೆ.

ಪವರ್​ ಎಷ್ಟಿದೆ?

ಟಾಟಾ ಟಿಯಾಗೊ ಇವಿ ಜಿಪ್ಟ್ರಾನ್ ತಂತ್ರಜ್ಞಾನದಿಂದ ಹೊಂದಿದ್ದು. ಇದು ನೆಕ್ಸಾನ್ ಇವಿಗಳನ್ನು ಇದೇ ತಾಂತ್ರಿಕತೆಯ ಮೂಲಕ ನಿರ್ಮಿಸಲಾಗಿದೆ. ವಿವಿಧ ಶ್ರೇಣಿಗಳ ಬ್ಯಾಟರಿ ಪ್ಯಾಕ್​​ಗಳು ಇದರಲ್ಲಿವೆ. 24 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಇದ್ದು, ಎಂಐಡಿಸಿ ಪ್ರಮಾಣೀಕೃತ 315 ಕಿ.ಮೀ ರೇಂಜ್​ ನೀಡುತ್ತದೆ. 260 ಕಿ.ಮೀ ನೈಜ ಪ್ರಪಂಚದ ರೇಂಜ್​ ಕೊಡುತ್ತದೆ. 19.2 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಕೂಡ ಲಭ್ಯವಿದ್ದು, ಇದು ಎಂಐಡಿಸಿ ಪ್ರಮಾಣೀಕೃತ 250 ಕಿ.ಮೀ ರೇಂಜ್​ ಓಡುತ್ತದೆ. ನೈಜ ಪ್ರಪಂಚದಲ್ಲಿ 200 ಕಿ.ಮೀ ರೇಂಜ್​ ಪಡೆಯುತ್ತದೆ.

ಈ ಕಾರಿನಲ್ಲಿ ಸಿಟಿ ಮತ್ತು ಸ್ಪೋರ್ಟ್ ಎಂಬ ಎರಡು ಡ್ರೈವ್ ಮೋಡ್​​ಗಳಿವೆ. ವ್ಯಾಪ್ತಿಯನ್ನು ಹೆಚ್ಚಿಸುವ ನಾಲ್ಕು ವಿಭಿನ್ನ ಪುನರುತ್ಪಾದನಾ ಮಟ್ಟಗಳಿವೆ. ಟಾಟಾ ಟಿಯಾಗೊ ಇವಿ ಝಡ್-ಕನೆಕ್ಟ್ ನೊಂದಿಗೆ ಟೆಲಿಮ್ಯಾಟಿಕ್ಸ್ ಅನ್ನು ನೀಡುತ್ತದೆ. ರಿಮೋಟ್ ಎಸಿ ಆನ್ – ಆಫ್, ರಿಮೋಟ್ ಜಿಯೋ-ಫೆನ್ಸಿಂಗ್, ರಿಯಲ್​ ಟೈಮ್​ ಚಾರ್ಜಿಂಗ್ ಸ್ಥಿತಿ, ಸ್ಮಾರ್ಟ್ ವಾಚ್ ಕನೆಕ್ಟಿವಿಟಿ ಮತ್ತು ಹೆಚ್ಚಿನವು ಸೇರಿದಂತೆ 65 ಕ್ಕೂ ಹೆಚ್ಚು ಫೀಚರ್​​ಗಳಿವೆ.

Exit mobile version