Site icon Vistara News

Yamaha Scooter : ಯಮಹಾದ 125 ಸಿಸಿ ಸ್ಕೂಟರ್​ಗಳು ಮಾರುಕಟ್ಟೆಗೆ ಬಿಡುಗಡೆ

Yamaha Scooter: Yamaha's 125 cc scooters are launched in the market

#image_title

ನವ ದೆಹಲಿ: ಯಮಹಾ ಮೋಟಾರ್​ ಇಂಡಿಯಾ ಕಂಪನಿಯು ತನ್ನ 125 ಸಿಸಿ ಸಾಮರ್ಥ್ಯದ ಸ್ಕೂಟರ್​ಗಳ (Yamaha Scooter) 2023ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್​ಗಳು ಭಾರತ ಸರಕಾರದ ಬಿಎಸ್​6 ಹೊಸ ಮಾನದಂಡಗಳಿಗೆ ಪೂರಕವಾಗಿ ತಯಾರಿಸಲಾಗಿದೆ. ಪ್ರಮುಖವಾಗಿ ಇದರ ಎಂಜಿನ್​ಗಳು ಎ20 ಪೆಟ್ರೋಲ್​ ಎಂಜಿನ್​ಗಳನ್ನು ಹೊಂದಿವೆ. ಫ್ಯಾಸಿನೊ 125, ರೇ ಜಡ್​ಆರ್​ 125, ರೇ ಜಡ್​ಆರ್​ ಸ್ಟ್ರೀಟ್​ ರ್ಯಾಲಿ ಸ್ಕೂಟರ್​ಗಳನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್​ಗಳು ಕಡಿಮೆ ಪ್ರಮಾಣದಲ್ಲಿ ಹೊಗೆಯುಗುಳುತ್ತವೆ ಎಂದು ಹೇಳಲಾಗಿದೆ.

ಹೊಸ ಮಾದರಿಗಳು ಸ್ಕೂಟರ್​ಗಳಲ್ಲಿ OBD2 ತಾಂತ್ರಿಕತೆಯಿದ್ದು, ಸ್ಕೂಟರ್​ ಎಂಜಿನ್​ ಅರೋಗ್ಯವನ್ನು ಸ್ಕ್ಯಾನ್​ ಮಾಡುವ ಮೂಲಕ ಮಾಹಿತಿಯನ್ನು ರವಾನಿಸಲಿದೆ. 125 ಸಿಸಿಯ ಹೈಬ್ರಿಡ್​ ಸ್ಕೂಟರ್​ಗಳು ಬ್ಲೂಟೂಥ್​ ಮೂಲಕ ವೈ ಕನೆಕ್ಟಿಂಗ್​ ಆಪ್​ ಹೊಂದಿದೆ. ಇದರ ಮೂಲಕ ಸವಾರಿ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲು ಸಾಧ್ಯವಿದೆ.

ಹೊಸ ಮಾದರಿಯ ಸ್ಕೂಟರ್​ಗಳು ಇ20 ಪೆಟ್ರೋಲ್​ನಿಂದ ಚಲಿಸಲಿದೆ. ಏರ್​ ಕೂಲ್ಡ್​, ಫ್ಯೂಯಲ್​ ಇಂಜೆಕ್ಟರ್​ 125 ಸಿಸಿ ಬ್ಲ್ಯೂ ಕೋರ್ ಎಂಜಿನ್​ ಹೊಂದಿದೆ. ಇದು 8.2 ಪಿಎಸ್​ ಪವರ್​ ಹಾಗೂ 10.3 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಸ್ಮಾರ್ಟ್​ ಮೋಟಾರ್​ ಜನರೇಟರ್​ ಕೂಡ ಇರುತ್ತದೆ.

ಇದನ್ನೂ ಓದಿ : EV Vehicles : ಸರಕಾರಿ ಇಲಾಖೆಯಲ್ಲಿ ಎಲೆಕ್ಟ್ರಿಕ್​ ವಾಹನಗಳನ್ನಷ್ಟೇ ಬಳಸಲು ಹಿಮಾಚಲ ಪ್ರದೇಶ ಸರಕಾರ ತೀರ್ಮಾನ

ಫ್ಯಾಸಿನೊ ಬೈಕ್​ನ ಬೆಲೆ 91, 030 ರೂಪಾಯಿಗಳಾಗಿದ್ದು, ರೇ ಜಡ್​ ಆರ್​ ಸ್ಕೂಟರ್​ ಬೆಲೆ 89,530 ರೂಪಾಯಿಗಳು. ಸ್ಟ್ರೀಲ್​ ರ್ಯಾಲಿ ಸ್ಕೂಟರ್​ ಬೆಲೆ 93,530 ರೂಪಾಯಿಗಳು.

Exit mobile version