ಬೆಂಗಳೂರು: ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಕಂಪನಿಯು ಇದೀಗ ಯೆಜ್ಡಿ ರೋಡ್ ಸ್ಟರ್ (Yezdi Roadster) ಜೊತೆಗೆ ಅತ್ಯಾಕರ್ಷಕ ಕೊಡುಗೆಯೊಂದನ್ನು ಘೋಷಿಸಿದೆ. ಅದ್ಭುತ ಸಾಮರ್ಥ್ಯ ಮತ್ತು ಧಕ್ಷತೆ ಮೂಲಕ ಮೋಟಾರ್ ಸೈಕಲ್ ಪ್ರಿಯರ ಮನಸ್ಸು ಗೆದ್ದಿರುವ ಯೆಜ್ಡಿ ರೋಡ್‌ಸ್ಟರ್ ಜೊತೆಗೆ ಈಗ ಟ್ರಯಲ್ ಪ್ಯಾಕ್ ಕೂಡ ದೊರೆಯಲಿದೆ. ಸೀಮಿತ ಅವಧಿಗೆ ಮಾತ್ರ ದೊರೆಯಲಿರುವ ರೂ. 16,000 ಮೌಲ್ಯದ ಉಚಿತವಾಗಿದೆ. ಈ ಸ್ಟಾಂಡರ್ಡ್ ಆಕ್ಸೆಸರಿ ಮೋಟಾರ್ ಸೈಕಲ್ ಪ್ರಿಯರ ರೈಡಿಂಗ್ ಅನುಭವ ಹೆಚ್ಚಿಸುವ ಜತೆಗೆ ಬೈಕ್ ನ ಆಕರ್ಷಣೆ ಜಾಸ್ತಿ ಮಾಡಲಿದೆ.
The Yezdi Roadster stands tall, winking at the night sky and daring you to join the fun.
— yezdiforever (@yezdiforever) July 12, 2024
📷: @bigbrute99#YezdiForever #JawaYezdiMotorcycles #YezdiRoadster #RoadsterRetold #MadeofMotorcycling #RidingSeason pic.twitter.com/tkeM9J4y1M
ಭಾರತದಲ್ಲಿ ಪ್ರತಿಯೊಂದು ಸೀಸನ್ ಕೂಡ ರೈಡಿಂಗ್ ಸೀಸಸ್ ಆಗಿರುತ್ತದೆ. ಹಾಗಾಗಿ ರೈಡರ್ ಗಳು ಈ ಬೈಕ್ ಮತ್ತು ಆಕ್ಸೆಸರಿಗಳೊಂದಿಗೆ ಪ್ರಯಾಣ ಮಾಡಬಹುದು. ಹೊಸ ದಾರಿಗಳಲ್ಲಿ ಸಾಗಲು, ಅಡ್ವೆಂಚರ್ ಮಾಡಲು ಇದು ಸೂಕ್ತ ವಾಗಿದೆ. 16,000 ರೂಪಾಯಿ ಮೌಲ್ಯದ ಟ್ರಯಲ್ ಪ್ಯಾಕ್ ಅನ್ನು ಈಗ ಯೆಜ್ಡಿ ರೋಡ್‌ಸ್ಟರ್ ಜತೆಗೆ ಹೆಚ್ಚುವರಿ ವೆಚ್ಚವಿಲ್ಲದೆಯೇ ಪಡೆಯಬಹುದಾಗಿದೆ. ಈ ಟ್ರಯಲ್ ಪ್ಯಾಕ್ ಅನ್ನು ಯೆಜ್ಡಿ ರೋಡ್‌ಸ್ಟರ್‌ನ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯ ಹೆಚ್ಚಿಸಲೆಂದೇ ವಿನ್ಯಾಸಗೊಳಿಸಲಾಗಿದೆ. ಇದು ಪ್ರಯಾಣವನ್ನು ಆರಾಮದಾಯಕ ಮತ್ತು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತದೆ. ನಗರ ಪ್ರದೇಶದಲ್ಲಿ , ಹೆದ್ದಾರಿಗಳಲ್ಲಿ ಅಥವಾ ಆಫ್-ರೋಡ್‌ನಲ್ಲಿ ಅಡ್ವೆಂಚರ್ ಪ್ರಯಾಣ ಮಾಡುವಾಗಲೂ ಯೆಜ್ಡಿ ರೋಡ್ ನ ಟ್ರಯಲ್ ಪ್ಯಾಕ್ ನೆರವಾಗಲಿದೆ.
ಟ್ರಯಲ್ ಪ್ಯಾಕ್ ಈ ಕೆಳಗಿನ ಆ್ಯಕ್ಸೆಸರಿ ಹೊಂದಿದೆ
- ಸ್ಯಾಡಲ್ ಬ್ಯಾಗ್ಗಳು: ದೀರ್ಘ ಅಥವಾ ಸಣ್ಣ ಪ್ರವಾಸ ಹೀಗೆ ಯಾವುದೇ ರೀತಿಯ ಪ್ರವಾಸ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸಲು ಈ ಬ್ಯಾಗ್ ಗಳು ಪರಿಪೂರ್ಣವಾಗಿವೆ.
- ರೋಡ್‌ಸ್ಟರ್ ವೈಸರ್ ಕಿಟ್: ರೈಡಿಂಗ್ ಅನ್ನು ಆರಾಮದಾಯಕಗೊಳಿಸುವ ಸಲುವಾಗಿ ಎದುರಿನಿಂದ ಬೀಸುವ ಜೋರಾದ ಗಾಳಿಯಿಂದ ರಕ್ಷಣೆ ಪಡೆಯಬಹುದು .
- ಹೆಡ್ಲ್ಯಾಂಪ್ ಗ್ರಿಲ್: ಕಸಕಡ್ಡಿ ಕಲ್ಲು ಶಿಲೆ ಮಂಜು ಇತ್ಯಾದಿಗಳಿಂದ ಹೆಡ್ಲ್ಯಾಂಪ್ ಅನ್ನು ಈ ಗ್ರಿಲ್ ರಕ್ಷಿಸುತ್ತದೆ. ಆಫ್-ರೋಡ್ ಅಡ್ವೆಂಚರ್ ರೈಡ್ ಗಳಿಗೆ ಇದು ಅವಶ್ಯಕ.
- ಪಿಲಿಯನ್ ಬ್ಯಾಕ್ರೆಸ್ಟ್: ದೀರ್ಘ ಪ್ರಯಾಣ ಹೋಗುವಾಗ ಪಿಲಿಯನ್ ರೈಡರ್ ಗಳ ಪ್ರಯಾಣವನ್ನು ಸುಖಕರವನ್ನಾಗಿಸುತ್ತದೆ.
- ಕ್ರ್ಯಾಶ್ ಗಾರ್ಡ್: ರೈಡರ್ ಮತ್ತು ಬೈಕ್ ಇಬ್ಬರಿಗೂ ಹೆಚ್ಚುವರಿ ರಕ್ಷಣೆ ಒದಗಿಸುವ ಗಾರ್ಡ್.
- ಬೈಕ್ ಕವರ್: ಬೈಕ್ ಬಳಕೆ ಮಾಡದೇ ಇರುವಾಗ ಮೋಟಾರ್ಸೈಕಲ್ ಗೆ ಬಾಹ್ಯ ವಸ್ತುಗಳಿಂದ ಹಾನಿಯಾಗದಂತೆ ತಡೆಯಬಹುದು.
334 ಸಿಸಿ ಎಂಜಿನ್
ಶಕ್ತಿಶಾಲಿಯಾದ ಆಲ್ಫಾ 2 334ಸಿಸಿ ಎಂಜಿನ್ ಹೊಂದಿರುವ ಯೆಜ್ಡಿ ರೋಡ್‌ಸ್ಟರ್, ಆಕ್ಸಲರೇಷನ್ ನಲ್ಲಿ ಹೆಚ್ಚು ವೇಗವಾಗಿದೆ. 29.40ಎನ್ಎಂ ಟಾರ್ಕ್ ಅನ್ನು ಒದಗಿಸುವ ಮೂಲಕ ಸುಗಮ ರೈಡಿಂಗ್ ಮಾಡಲು ಅನುವು ಮಾಡಿ ಕೊಡುತ್ತದೆ. ಈ ಬೈಕ್ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಅಸಿಸ್ಟ್ ಮತ್ತು ಸ್ಲಿಪ್ ತಂತ್ರಜ್ಞಾನ ಹೊಂದಿದ್ದು, ಬಹಳ ಸುಲಭವಾಗಿ ರೈಡ್ ಮಾಡಬಹುದು. ಇದು ದೀರ್ಘ ಪ್ರಯಾಣಗಳಿಗೆ ಸೂಕ್ತವಾಗಿದೆ. 194 ಕೆಜಿ ಕರ್ಬ್ ವೇಯ್ಟ್ ಹೊಂದಿರುವ ಈ ಬೈಕ್ 12.5-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ.
ಇದನ್ನೂ ಓದಿ: Tauba Tauba : ಲಂಡನ್ ಬೀದಿಯಲ್ಲಿ ‘ತೌಬಾ ತೌಬಾ’ ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ ಬೆಡಗಿಯರು; ವಿಡಿಯೊ ವೈರಲ್
ಈ ಬೈಕ್ ಅನ್ನು ರಸ್ತೆಯಲ್ಲಿ ದೃಢವಾಗಿ ಸಾಗುವಂತೆ ಮತ್ತು ಎಲ್ಲಾ ಪರಿಸ್ಥಿತಿಗೂ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸೀಟ್ ಎತ್ತರ 790 ಎಂಎಂ ಇದ್ದು ಆರಾಮದಾಯಕವಾಗಿದೆ ಮತ್ತು ಫಾರ್ವರ್ಡ್-ಸೆಟ್ ಫೂಟ್ ಪೆಗ್‌ಗಳು ಯೆಜ್ಡಿ ರೋಡ್‌ಸ್ಟರ್ ಅನ್ನು ಉತ್ತಮ ಸವಾರಿ ಬೈಕ್ ಆಗಿ ಪರಿವರ್ತಿಸಿದೆ. ಮುಂದುಗಡೆಯ ಫೂಟ್ ಪೆಗ್ ಗಳು ಯೆಜ್ಡಿ ರೋಡ್ ಸ್ಟರ್ ರೈಡಿಂಗ್ ಅನ್ನು ಆಕರ್ಷಕಗೊಳಿಸಿವೆ.
ಬೆಲೆ ಎಷ್ಟು?
ಟ್ರಯಲ್ ಪ್ಯಾಕ್ ಜೊತೆಗೆ ಸಂಪೂರ್ಣವಾಗಿ ಲೋಡ್ ಆಗಿರುವ ಯೆಜ್ಡಿ ರೋಡ್‌ಸ್ಟರ್ ಬೆಲೆ ರೂ. 2.09 ಲಕ್ಷ (ಎಕ್ಸ್ ಶೋ ರೂಂ). ಈ ರೋಡ್‌ಸ್ಟರ್ ಬೈಕ್ ತನ್ನ ವಿಶಿಷ್ಟವಾದ ಫೀಚರ್ ಗಳು ಮತ್ತು ಸೊಗಸಾದ ವಿನ್ಯಾಸದ ಮೂಲಕ ರೈಡಿಂಗ್ ನ ಥ್ರಿಲ್ ಅನ್ನು ಮತ್ತಷ್ಟು ತೀವ್ರಗೊಳಿಸಲಿದೆ.