Site icon Vistara News

Deep Fakes: ಶೇ. 75 ಭಾರತೀಯರು ಡೀಪ್‌ಫೇಕ್‌ಗೆ ಒಳಗಾಗಿದ್ದಾರೆ; ಗೊತ್ತಾಗಿದ್ದು ಶೇ.22 ಮಂದಿಗೆ ಮಾತ್ರ!

deepfake

ನವದೆಹಲಿ: ಭಾರತೀಯರಲ್ಲಿ (indian’s) ಶೇ. 75ರಷ್ಟು ಮಂದಿ ಡೀಪ್‌ಫೇಕ್‌ (Deep Fakes) ಪಿಡುಗಿಗೆ ಒಳಗಾಗಿದ್ದು, ಶೇಕಡಾ 22ರಷ್ಟು ಮಂದಿಗೆ ಮಾತ್ರ ಇದು ಗಮನಕ್ಕೆ ಬಂದಿದೆ. ತಮ್ಮ ಡೀಪ್ ಫೇಕ್ ಮಾಡಿರುವ ವಿಡಿಯೋ, ಚಿತ್ರ ಅಥವಾ ರೆಕಾರ್ಡಿಂಗ್ ಅನ್ನು ಕೆಲವರು ಮಾತ್ರ ನೋಡಿ ಅದರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಕಂಪ್ಯೂಟರ್ ಭದ್ರತಾ ಕಂಪನಿ (Computer security company) ಮ್ಯಾಕ್‌ಅಫೀಯ (McAfee) ಸಂಶೋಧನೆಗಳು ತಿಳಿಸಿದೆ.

ಲೋಕಸಭಾ ಚುನಾವಣೆ (lok sabha election), ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಂತಹ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವವರು ಹೆಚ್ಚಾಗಿ ಡೀಪ್‌ಫೇಕ್‌ಗಳಿಗೆ ಒಳಗಾಗಿದ್ದಾರೆ. ಇವರ ನೈಜ್ಯ ಪ್ರಮಾಣ ಮತ್ತಷ್ಟು ಹೆಚ್ಚಾಗಿರಬಹುದು. ಅನೇಕ ಭಾರತೀಯರಿಗೆ ನಿಜ ಮತ್ತು ನಕಲಿ ಏನೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಹೀಗಾಗಿ ಈ ರೀತಿ ಆಗಿದೆ ಎನ್ನಲಾಗಿದೆ.

ಶೇ. 22ರಷ್ಟು ಮಾತ್ರ ಬಹಿರಂಗ

ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಗ್ರಾಹಕರ ದೈನಂದಿನ ಜೀವನದಲ್ಲಿ ಡೀಪ್‌ಫೇಕ್‌ಗಳ ಹೆಚ್ಚಳವನ್ನು ಕಂಡುಹಿಡಿಯಲು 2024 ರ ಆರಂಭದಲ್ಲಿ ಸಂಶೋಧನೆಯನ್ನು ನಡೆಸಲಾಯಿತು. ಈ ಸಮೀಕ್ಷೆಯ ಸಮಯದಲ್ಲಿ, ಸುಮಾರು 1ರಲ್ಲಿ 4 ಭಾರತೀಯರು ಅಂದರೆ ಸರಿಸುಮಾರು ಶೇ. 22ರಷ್ಟು ಮಂದಿ ಇತ್ತೀಚೆಗೆ ನಕಲಿ ಎಂದು ಕಂಡುಹಿಡಿದ ವಿಡಿಯೋಗಳನ್ನು ನೋಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: WhatsApp: ಭಾರತ ತೊರೆಯುವುದಾಗಿ ವಾಟ್ಸ್‌ಆ್ಯಪ್‌ ಎಚ್ಚರಿಕೆ; ಶೀಘ್ರದಲ್ಲೇ ಆ್ಯಪ್‌ ಅಲಭ್ಯ?


ವರ್ಷದಿಂದ ಹೆಚ್ಚಾಗಿದೆ ಕಾಳಜಿ

ಒಂದು ವರ್ಷದಲ್ಲಿ 10ರಲ್ಲಿ 8 ಮಂದಿ, ಅಂದರೆ ಸರಿ ಸುಮಾರು ಶೇ. 80ರಷ್ಟು ಮಂದಿ ಇದ್ದಕ್ಕಿಂತ ಡೀಪ್‌ಫೇಕ್‌ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಅರ್ಧಕ್ಕಿಂತ ಹೆಚ್ಚು ಜನರಲ್ಲಿ ಶೇ. 64ರಷ್ಟು ಮಂದಿಗೆ ಕೃತಕ ಬುದ್ಧಿಮತ್ತೆಯ ಆನ್‌ಲೈನ್ ಸ್ಕ್ಯಾಮ್‌ಗಳನ್ನು ಗುರುತಿಸಲು ಕಷ್ಟಕರವಾಗಿದೆ ಎಂದು ಹೇಳುತ್ತಾರೆ. ಆದರೆ ಸುಮಾರು ಶೇ. 30ರಷ್ಟು ಮಂದಿ ಕೃತಕ ಬುದ್ಧಿಮತ್ತೆಯೊಂದಿಗೆ ರಚಿಸಲಾದ ಧ್ವನಿ ಮೇಲ್ ಅಥವಾ ಧ್ವನಿ ಟಿಪ್ಪಣಿಯನ್ನು ಹಂಚಿಕೊಂಡರೆ ಮಾತ್ರ ನಕಲಿ ಎಂದು ಗುರುತಿಸಬಹುದು ಎಂದು ಹೇಳಿದ್ದಾರೆ.


ಶೇ. 75ರಷ್ಟು ಮಂದಿಗೆ ಗೊತ್ತಾಗಿದೆ

ಮ್ಯಾಕ್‌ಅಫೀಯ ಪ್ರಕಾರ ಕಳೆದ 12 ತಿಂಗಳುಗಳಲ್ಲಿ ಶೇ. 75ರಷ್ಟು ಮಂದಿ ತಾವು ಡೀಪ್‌ಫೇಕ್ ವಿಷಯವನ್ನು ನೋಡಿದ್ದೇವೆ ಎಂದು ಹೇಳುತ್ತಾರೆ. ಶೇ. 38ರಷ್ಟು ಮಂದಿ ಡೀಪ್‌ಫೇಕ್ ಹಗರಣವನ್ನು ಎದುರಿಸಿದ್ದಾರೆ.

ಶೇ. 57ರಷ್ಟು ಸೆಲೆಬ್ರಿಟಿಗಳು

ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು ಸೆಲೆಬ್ರಿಟಿಗಳಾಗಿದ್ದಾರೆ. ವಿಡಿಯೋ ಚಿತ್ರ ಅಥವಾ ಆಡಿಯೋವನ್ನು ನೋಡಿ ಅದು ನಿಜವೆಂದು ಭಾವಿಸಿ ಶೇ. 31 ರಷ್ಟು ಮಂದಿ ಹಣವನ್ನು ಕಳೆದುಕೊಂಡಿದ್ದಾರೆ. ಶೇ. 40ರಷ್ಟು ಮಂದಿ ಜನರು ತಮ್ಮ ಧ್ವನಿಯನ್ನು ಕಾಪಿ ಮಾಡಲಾಗಿದೆ. ವೈಯಕ್ತಿಕ ಮಾಹಿತಿ ಅಥವಾ ಹಣದ ಲೆಕ್ಕವನ್ನು ಬಹಿರಂಗಪಡಿಸಲು ತಮಗೆ ತಿಳಿದಿರುವ ಯಾರನ್ನಾದರೂ ದಾರಿತಪ್ಪಿಸಲು ಬಳಸುತ್ತಾರೆ ಎಂದು ಕಂಡುಹಿಡಿಯಲಾಗಿದೆ. ಶೇ. 39ರಷ್ಟು ಜನರು ಕರೆ, ಧ್ವನಿಮೇಲ್ ಅಥವಾ ಧ್ವನಿ ಟಿಪ್ಪಣಿಯನ್ನು ಸ್ವೀಕರಿಸಿದ್ದಾರೆಂದು ವರದಿ ಮಾಡಿದ್ದಾರೆ.

ಡೀಪ್‌ಫೇಕ್‌ ಅಪಾಯ

ಡೀಪ್‌ಫೇಕ್‌ ನಿಂದಾಗುವ ಅಪಾಯಗಳ ಬಗ್ಗೆ ಕೇಳಿದಾಗ ಶೇ. 55ರಷ್ಟು ಮಂದಿ ಸೈಬರ್‌ ವಂಚನೆಗೆ ಒಳಗಾಗುತ್ತಾರೆ ಎಂದು ಹೇಳಿದರು. ಶೇ. 52ರಷ್ಟು ಮಂದಿ ನಕಲಿ ಅಶ್ಲೀಲ ವಿಷಯವನ್ನು ರಚಿಸುತ್ತಿರುವುದಾಗಿ ಹೇಳಿದರು. ಶೇ. 37 ರಷ್ಟು ಮಂದಿ ಮಾಧ್ಯಮದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸಿರುವುದಾಗಿ ತಿಳಿಸಿದ್ದಾರೆ. ಶೇ.31ರಷ್ಟು ಮಂದಿ ಚುನಾವಣೆಯ ಮೇಲೆ ಪ್ರಭಾವ ಬೀರುವುದಾಗಿ ಹೇಳಿದ್ದು, ಶೇ.27ರಷ್ಟು ಮಂದಿ ಐತಿಹಾಸಿಕ ಸತ್ಯಗಳನ್ನು ತಿರುಚುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Exit mobile version