ನವ ದೆಹಲಿ: ಭಾರೀ ಸದ್ದಿನೊಂದಿಗೆ ಬಿಡುಗಡೆಯಾದ ಐಫೋನ್ 14 ಬಗ್ಗೆ ನಾನಾ ವಿಮರ್ಶೆಗಳು ಕೇಳಿ ಬರುತ್ತವೆ. ಕೆಲವರು ಈ ಫೋನ್ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಅದ್ಭುತ ಎಂದು ಹಾಡಿ ಹೊಗಳಿದ್ದಾರೆ. ಐಫೋನ್ ಬಳಕೆಯ ಅನುಭವವ ಮತ್ತೊಂದು ಲೇವಲ್‌ಗೆ ಕೊಂಡೊಯ್ಯುತ್ತದೆ ಎಂದು ತಿಳಿಸಿದ್ದಾರೆ. ಅದರಲ್ಲೂ ಐಫೋನ್ 14 ಪ್ರೋ (iPhone 14 Pro) ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆಯ ಬಗ್ಗೆಉತ್ತಮ ಅಭಿಪ್ರಾಯಗಳು ಕೇಳಿ ಬಂದಿವೆ.
ಐಫೋನ್ 14 ಪ್ರೋ ಸ್ಮಾರ್ಟ್‌ಫೋನ್ ಅನ್ನು ಈ ಹಿಂದಿನ ಐಫೋನ್ 13 ಪ್ರೋಗೆ ಹೋಲಿಸಿದರೆ ಖಂಡಿತವಾಗಿಯೂ ವಿಭಿನ್ನವಾಗಿದೆ. ಇದಕ್ಕೆ ಉದಾಹರಣೆಯಾಗಿ, ಐಫೋನ್ 14 ಪ್ರೋ ನೋಟಿಫಿಕೇಷನ್ ಸೂಚಿಸಬಹುದು. ಮೇಲ್ನೋಟಕ್ಕೆ ಸಾಮಾನ್ಯ ಕಾರ್ಯನಿರ್ವಹಣೆ ಎಂದೆನಿಸಿದರೂ, ವಾಸ್ತವದಲ್ಲಿ ಅದು ವಿಭಿನ್ನವಾಗಿದೆ.
ಡೈನಾಮಿಕ್ ಐಲ್ಯಾಂಡ್ ಡಿಸ್‌ಪ್ಲೇ, 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸರ್, ಕ್ರ್ಯಾಶ್ ಡಿಟೆಕ್ಷನ್ ಸೇರಿದಂತೆ ಕೆಲವು ಫೀಚರ್‌ಗಳು ಐಫೋನ್ 14 ಪ್ರೋ ಬಳಕೆಯ ಹೊಸ ಅನುಭವವನ್ನು ನೀಡುತ್ತವೆ. ಈ ಪೈಕಿ ಡೈನಾಮಿಕ್ ಐಲ್ಯಾಂಡ್ ಡಿಸ್‌ಪ್ಲೇ ತುಂಬ ಡಿಫರೆಂಟ್ ಆಗಿದೆ.
ಈಗಾಗಲೇ ಹೇಳಿದಂತೆ ಡೈನಾಮಿಕ್ ಐಲ್ಯಾಂಡ್ ಡಿಸ್‌ಪ್ಲೇ ತಾಂತ್ರಿಕವಾಗಿ ಶ್ರೀಮಂತವಾಗಿದೆ. ಡಿಸ್‌ಪ್ಲೇ ಯಾವ ಭಾಗದ ಮೇಲೆ ನಾವು ಹೆಚ್ಚು ಫೋಕಸ್ ಮಾಡುತ್ತೇವೆ ಎಂಬುದು ಕುರಿತಾಗಿರುವ ಫೀಚರ್ ಇದು. ಮಲ್ಪಿ ಆ್ಯಪ್ ಬಳಸುವಾಗ ಮತ್ತು ನೋಟಿಫಿಕೇಷನ್‌ಗಳನ್ನು ಸ್ವೀಕರಿಸುವಾಗ ಇದು ಹೆಚ್ಚು ಉಪಯೋಗಕಾರಿಯಾಗಿದೆ. ಡೈನಾಮಿಕ್ ಐಲ್ಯಾಂಡ್ ಸಿಸ್ಟಮ್ ಅಲರ್ಟ್ ಇಂಡಿಕೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಕ್‌ಗ್ರೌಂಡ್‌ನಲ್ಲಿ ಏನು ರನ್ ಆಗುತ್ತದೆ ಮತ್ತು ಅದಕ್ಕೆ ತಕ್ಕ ಹಾಗೆ ವೇಗವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ.
ಮತ್ತೊಂದು ಗಮನ ಸೆಳೆಯುವ ಸಂಗತಿ-ಕ್ಯಾಮೆರಾ. ಹೌದು, ಐಫೋನ್ 14 ಪ್ರೋ ಸ್ಮಾರ್ಟ್‌ಫೋನ್ ತನ್ನ ಕ್ಯಾಮೆರಾ ಸೆನ್ಸರ್‌ಗಾಗಿಯೂ ಹೆಚ್ಚು ಚರ್ಚಿತವಾಗುತ್ತಿದೆ. ಹಾಗೆ ನೋಡಿದರೆ, ಈ ರೀತಿಯ ಕ್ಯಾಮೆರಾಗಳು ಈಗಾಗಲೇ ಆಂಡ್ರಾಯ್ಡ್ ಸಾಧನಗಳಲ್ಲಿ ಬಳಕೆಯಾಗಿವೆ. ಯಾಕೆಂದರೆ, ಐಫೋನ್ ಬಳಸುವ ಕ್ಯಾಮೆರಾಗಳ ಗುಣಮಟ್ಟ ಆ ಲೇವಲಿಗೆ ಇರುತ್ತದೆ. ಸ್ಯಾಮ್ಸಂಗ್ ಮತ್ತು ಇತರ ಕಂಪನಿಗಳು 12 ಮೆಗಾಪಿಕ್ಸೆಲ್ ಕ್ಯಾಮೆರಾ ಬಳಸುತ್ತಿದ್ದಾಗ, ಆ್ಯಪಲ್ ತನ್ನ ಐಫೋನುಗಳಿಗೆ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಬಳಸುತ್ತಿತ್ತು. ಆದರೆ, ಕ್ವಾಲಿಟಿಯಲ್ಲಿ ಆ್ಯಪಲ್ ಫೋನುಗಳೇ ಮುಂದಿದ್ದವು. ಹಾಗಾಗಿ, ಈಗ ಕಂಪನಿಯ ಐಫೋನ್ 14 ಪ್ರೋದಲ್ಲಿ 48 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್ ಬಳಸಿದ್ದು, ದೊಡ್ಡ ಸಂಗತಿಯೇ ಹೌದು. ಮಜಾ ಅಂದರೆ, ಪ್ರತಿ ಸ್ಪರ್ಧಿ ಕಂಪನಿಗಳು ಈಗಾಗಲೇ ತಮ್ಮ ಫೋನುಗಳಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾಗಳನ್ನು ಬಳುಸುತ್ತಿವೆ!
ಆ್ಯಪಲ್ ಸಾಮಾನ್ಯವಾಗಿ ಬಳಸುವ ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ನಾಲ್ಕು ಪಿಕ್ಸೆಲ್‌ಗಳನ್ನು ಒಂದಾಗಿ ಸಂಯೋಜಿಸುವ ಮೂಲಕ 12 ಮೆಗಾ ಪಿಕ್ಸೆಲ್ ಫೋಟೋವನ್ನು ರಚಿಸುತ್ತದೆ. ಇದು ಕ್ಯಾಮೆರಾವನ್ನು ಹೆಚ್ಚು ಬೆಳಕನ್ನು ಸಂಗ್ರಹಿಸಲು ಅನುಮತಿಸುತ್ತದೆ. ಇದರಿಂದಾಗಿ ಬಳಕೆದಾರರಿಗೆ ಅತ್ಯುತ್ತಮ ಫೋಟೋ ಪಡೆಯಲು ಸಾಧ್ಯವಾಗುತ್ತದೆ.
ಐಫೋನ್ 13ಗೆ ಹೋಲಿಸಿದರೆ, ಐಫೋನ್ 14 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ ಬಳಸಿರುವ ಕ್ಯಾಮೆರಾ ಹೆಚ್ಚುಕಡಿಮೆ ಒಂದೇ ತೆರನಾಗಿದೆ. ಆದರೆ, ಫೋಟೋ ಮೇಲೆ ಝೂಮ್ ಮಾಡಿದಾಗ ಫೋಟೋದ ಹೆಚ್ಚು ಡಿಟೇಲ್ಸ್ ಗೊತ್ತಾಗುತ್ತದೆ. ಆದರೆ, ಇದಕ್ಕಿಂತ ಹೆಚ್ಚು ಗಮನ ಸೆಳೆಯುವುದು ಫೋಟೋನಿಕ್ ಎಂಜಿನ್ ಸಾಫ್ಟ್‌ವೇರ್. ಫೋಟೋನಿಕ್ ಎಂಜಿನ್ ಮೂಲಭೂತವಾಗಿ ಡೀಪ್ ಫ್ಯೂಷನ್ ಆಗಿದ್ದು, ಕ್ಯಾಮೆರಾವು ಒಂದು ವಿಷಯದ ಮೇಲೆ ಫೋಕಸ್ ಮಾಡಿದ ನಂತರ ಚಾಲನೆಯಲ್ಲಿರುತ್ತದೆ. ನೀವು ಶಟರ್ ಬಟನ್ ಒತ್ತಿದ ನಂತರ ಅದಕ್ಕೆ ಬರುತ್ತಿದ್ದ ಚಿತ್ರಗಳನ್ನು ಸಂಸ್ಕರಿಸುವ ಬದಲು, ಕಚ್ಚಾ ಡೇಟಾ ಕ್ರಂಚ್ ಮಾಡಲು ಅನುಮತಿಸುತ್ತದೆ. ಇದರಿಂದಾಗಿ ಒಟ್ಟಾರೆ ಫಲಿತಾಂಶದಲ್ಲಿ ಭಾರೀ ಬದಲಾವಣೆಗಳನ್ನುಕಾಣಬಹುದಾಗಿದೆ.
ಇದನ್ನೂ ಓದಿ | iPhone 14 | ಭಾರತದಲ್ಲಿ ಐಫೋನ್ 14 ಉತ್ಪಾದನೆ, ಚೀನಾಗೆ ಭಾರೀ ಹಿನ್ನಡೆ!