Site icon Vistara News

Geyser Blast: ಬಾಂಬ್‌‌ನಂತೆ ಬ್ಲಾಸ್ಟ್ ಆಗಬಹುದು ಗೀಸರ್! ಮಳೆಗಾಲದಲ್ಲಿ ಈ ಮುನ್ನೆಚ್ಚರಿಕೆ ಇರಲಿ

Geyser Blast

ಮಳೆ ಬಂದಾಗ (rainy season) ವಿದ್ಯುತ್ ಶಾರ್ಟ್ ಸರ್ಕ್ಯೂಟ್ (electric short circuit ) ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಮನೆಯಲ್ಲಿರುವ ಪ್ರತಿಯೊಂದು ಎಲೆಕ್ಟ್ರಾನಿಕ್ ವಸ್ತುಗಳು ಅದರಲ್ಲೂ ಮುಖ್ಯವಾಗಿ ಎಸಿ, ಗೀಸರ್ ಗಳ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಗೀಸರ್ ಸ್ಫೋಟ (Geyser Blast) ಉಂಟಾಗುವ ಘಟನೆಗಳು ನಡೆಯುತ್ತಿದ್ದು, ಮುನ್ನೆಚ್ಚರಿಕೆ ವಹಿಸದೆ ಇದ್ದರೆ ಜೀವಕ್ಕೆ ಅಪಾಯ ಉಂಟಾಗಬಹುದು.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಋತುವಿನಲ್ಲಿ ತೊಟ್ಟಿಯಲ್ಲಿ ಸಂಗ್ರಹಿಸಿಟ್ಟ ನೀರು ತುಂಬಾ ತಂಪಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಮಳೆಗಾಲದಲ್ಲಿ ಗೀಸರ್ ಆನ್ ಮಾಡಲು ಯೋಚಿಸುತ್ತಾರೆ. ಆದರೆ ಮಳೆಯ ಕಾರಣದಿಂದ ಗೀಸರ್ ಅನ್ನು ಆನ್ ಮಾಡುವುದು ತುಂಬಾ ಅಪಾಯಕಾರಿ.

ಗೀಸರ್ ಬಾಂಬ್‌ನಂತೆ ಸ್ಫೋಟಗೊಳ್ಳುತ್ತದೆ. ಹೀಗಾಗಿ ಮಳೆಗಾಲದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು. ನಾವು ಮಾಡುವ ಒಂದು ಸಣ್ಣ ತಪ್ಪು ಗೀಸರ್ ಸ್ಫೋಟಕ್ಕೆ ಕಾರಣವಾಗಬಹುದು. ಗೀಸರ್ ಹಾನಿಗೊಳಗಾಗಲು ಅಥವಾ ಸ್ಫೋಟಗೊಳ್ಳಲು ಕಾರಣಗಳು ಇಲ್ಲಿವೆ.

Geyser Blast


ಶಾರ್ಟ್ ಸರ್ಕ್ಯೂಟ್ ಅಪಾಯ

ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶವು ಹೆಚ್ಚಾಗಿರುತ್ತದೆ. ಇದು ಶಾರ್ಟ್ ಸರ್ಕ್ಯೂಟ್ ಅಪಾಯವನ್ನು ಹೆಚ್ಚಿಸುತ್ತದೆ. ವೈರಿಂಗ್ ಅಥವಾ ಗೀಸರ್ ಸಂಪರ್ಕದಲ್ಲಿ ಯಾವುದೇ ದೋಷವಿದ್ದರೆ, ಆರ್ದ್ರತೆಯಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಬಹುದು ಮತ್ತು ಬೆಂಕಿಯ ಅಪಾಯವೂ ಇದೆ.

ತುಕ್ಕಿನಿಂದ ಸಮಸ್ಯೆ

ಮಳೆಗಾಲದಲ್ಲಿ ತೇವಾಂಶದಿಂದಾಗಿ ಗೀಸರ್‌ನ ಲೋಹದ ಭಾಗಗಳು ತುಕ್ಕು ಹಿಡಿಯಬಹುದು. ಇದು ಗೀಸರ್‌ನ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಕಾರ್ಯ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ.

ವಿದ್ಯುತ್ ಬಳಕೆ

ಸಾಮಾನ್ಯವಾಗಿ ಮಳೆಗಾಲದಲ್ಲಿ ತಾಪಮಾನ ಕಡಿಮೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗೀಸರ್ ನಿಂದ ಬಿಸಿ ನೀರು ಉತ್ಪಾದಿಸಲು ಹೆಚ್ಚಿನ ವಿದ್ಯುತ್ ಅಗತ್ಯವಿರುತ್ತದೆ. ವಿದ್ಯುತ್ ಪೂರೈಕೆಯಲ್ಲಿ ಉಂಟಾಗುವ ವ್ಯತ್ಯಾಸಗಳು ಗೀಸರ್ ಸ್ಫೋಟಕ್ಕೆ ಕಾರಣವಾಗುತ್ತದೆ.

ನೀರಿನ ಗುಣಮಟ್ಟ

ಮಳೆನೀರು ಸಾಮಾನ್ಯವಾಗಿ ಕಲ್ಮಶಗಳನ್ನು ಹೊಂದಿರುತ್ತದೆ. ಇದು ಗೀಸರ್ ಒಳಗೆ ಸಂಗ್ರಹಗೊಳ್ಳುತ್ತದೆ ಮತ್ತು ಅದರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

Geyser Blast


ಎಚ್ಚರಿಕೆ ವಹಿಸುವುದು ಹೇಗೆ?

ಗೀಸರ್‌ನ ವೈರಿಂಗ್ ಸರಿಯಾಗಿ ಮಾಡಲಾಗಿದೆಯೇ ಮತ್ತು ಅದರಲ್ಲಿ ಯಾವುದೇ ದೋಷವಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: Samsung Galaxy: ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ ವಾಚ್7, ಗ್ಯಾಲಕ್ಸಿ ವಾಚ್ ಅಲ್ಟ್ರಾ, ಬಡ್ಸ್ 3 ಸರಣಿ ಬಿಡುಗಡೆ

ಗೀಸರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಿ. ಇದರಿಂದ ಅದು ತುಕ್ಕು ಹಿಡಿಯುವುದಿಲ್ಲ ಮತ್ತು ಅದು ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತದೆ.

ತುಕ್ಕು ಮತ್ತು ತೇವಾಂಶಕ್ಕೆ ಹೆಚ್ಚು ನಿರೋಧಕವಾಗಿರುವ ಉತ್ತಮ ಗುಣಮಟ್ಟದ ಗೀಸರ್ ಅನ್ನು ಖರೀದಿಸಿ.
ಗೀಸರ್ ಅನ್ನು ಓವರ್‌ಲೋಡ್ ಮಾಡಬೇಡಿ. ಏಕೆಂದರೆ ಇದು ಗೀಸರ್ ಅನ್ನು ಹಾನಿಗೊಳಿಸಬಹುದು.

Exit mobile version