Site icon Vistara News

Google Maps : ಗೂಗಲ್​ ಮ್ಯಾಪ್ಸ್​ನಲ್ಲಿ ಈಗ ಇಂಡಿಯಾ ಜತೆಗೆ ‘ಭಾರತ್​​ ‘

Google Maps

ಬೆಂಗಳೂರು: ದೇಶಕ್ಕೆ ‘ಭಾರತ್’ ಎಂದು ಮರುನಾಮಕರಣ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿರುವಂತೆಯೇ, ಗೂಗಲ್ ಮ್ಯಾಪ್ಸ್​ ಈ ವಿಚಾರದಲ್ಲಿ ಹೊಸ ಅಪ್​ಡೇಟ್ ಮಾಡಿದೆ. ವರದಿಗಳ ಪ್ರಕಾರ, ಗೂಗಲ್ ಮ್ಯಾಪ್ಸ್​ (Google Maps) ಈಗ ಭಾರತೀಯ ಧ್ವಜ ಮತ್ತು ಡಿಜಿಟಲ್ ಕೋಡ್ ಜೊತೆಗೆ “ಭಾರತ್” ಅನ್ನು “ದಕ್ಷಿಣ ಏಷ್ಯಾದ ದೇಶ” ಎಂದು ತೋರಿಸುತ್ತಿದೆ. ಇತ್ತೀಚೆಗೆ ಭಾರತದ ಆತಿಥ್ಯದಲ್ಲಿ ನಡೆದ ಜಿ 20 ಶೃಂಗಸಭೆಯ ಆತಿಥ್ಯ ವಹಿಸಿದ್ದ ಭಾರತವು ತನ್ನ ಅಧಿಕೃತ ಸಂವಹದನ ವೇಳೆ “ಪ್ರೆಸಿಡೆಂಟ್ ಆಫ್​​ ಇಂಡಿಯಾ ” ಬದಲಿಗೆ “ಭಾರತದ ರಾಷ್ಟ್ರಪತಿ” ಎಂದು ಬಳಸಿತ್ತು. ಅಲ್ಲಿಂದ ಬಳಿಕ ದೇಶದ ಹೆಸರನ್ನು ಭಾರತ್​ ಎಂದು ಬದಲಿಸುವ ಚರ್ಚೆ ಆರಂಭಗೊಂಡಿದ್ದು ಪರ- ವಿರೋಧ ಜೋರಾಗಿದೆ. ಏನನ್ಮಧ್ಯೆ ಗೂಗಲ್​ ಈ ನಿಟ್ಟಿನಲ್ಲಿ ತನ್ನ ಕೆಲಸವನ್ನು ಆರಂಭಿಸಿದೆ.

ಹಿಂದಿ ಅಥವಾ ಇಂಗ್ಲಿಷ್​​ನಲ್ಲಿ ಗೂಗಲ್ ನಕ್ಷೆಗಳನ್ನು ಬಳಸುತ್ತಿದ್ದರೂ, “ಇಂಡಿಯಾ ಎಂದು ಹುಡುಕಿದಾಗದು “ಭಾರತ” ಎಂದು ಹುಡುಕುವಂತೆಯೇ ಫಲಿತಾಂಶಗಳನ್ನು ನೀಡುತ್ತದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಎರಡೂ ಪದಗಳೊಂದಿಗೆ ಹುಡುಕಿದರೆ ಗೂಗಲ್ ನಕ್ಷೆಗಳು ಭಾರತವನ್ನು “ದಕ್ಷಿಣ ಏಷ್ಯಾದ ದೇಶ” ಎಂದು ಉಲ್ಲೇಖಿಸುತ್ತವೆ. ಹುಡುಕಾಟದ ವೇಳೆ ಗೂಗಲ್ ನಕ್ಷೆಗಳ ಬಳಕೆದಾರರಿಗೆ ಅಧಿಕೃತ ಭಾರತೀಯ ನಕ್ಷೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುವ ಫಲಿತಾಂಶಗಳನ್ನು ನೀಡುತ್ತದೆ.

ಈ ಸುದ್ದಿಯನ್ನೂ ಓದಿ : Science News: 800 ಕೋಟಿ ವರ್ಷ ಹಳೆಯ ರೇಡಿಯೋ ಅಲೆಗಳ ಪತ್ತೆ

ಗೂಗಲ್ ನಕ್ಷೆಗಳಲ್ಲಿ ಪಠ್ಯ ವಿವರಣೆಗಳು (ಟೆಸ್ಟ್​ ಡಿಸ್ಕ್ರಿಪ್ಷನ್​) ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸ್ಥಿರವಾಗಿರುತ್ತವೆ. ಅಂದ ಹಾಗೆ ಗೂಗಲ್ ಮ್ಯಾಪ್ಸ್​ನ ಬದಲಾವಣೆಯು “ಭಾರತ್” ಅನ್ನು ಬಳಸುವತ್ತ ಕೇಂದ್ರ ಸರ್ಕಾರದ ಯೋಜನೆಗೆ ಪೂರಕವಾಗಿದೆ. ಇದು ಗೂಗಲ್ ನಕ್ಷೆಗಳಿಗೆ ಮಾತ್ರ ಸೀಮಿತವಾಗಿರದೇ, ಗೂಗಲ್​ನ ಇತರ ಉತ್ಪನ್ನಗಳಿಗೂ ಅನ್ವಯವಾಗಬಹುದು. ಸರ್ಚ್, ಟ್ರಾನ್ಸ್​​ಲೇಟರ್​ ಮತ್ತು ನ್ಯೂಸ್ ಸೇರಿದಂತೆ ಇತರ ಗೂಗಲ್ ಉತ್ಪನ್ನಗಳು ಬಳಕೆದಾರರಿಗೆ “ಭಾರತ್” ಮತ್ತು “ಇಂಡಿಯಾ” ಎರಡನ್ನೂ ಬಳಸುವ ಆಯ್ಕೆಯನ್ನು ನೀಡಲಿದೆ.

ಅಧಿಕೃತ ದೃಢೀಕರಣ ನೀಡಿಲ್ಲ

ಗೂಗಲ್ ಈ ಬದಲಾವಣೆಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ ಎಂಬುದನ್ನು ಗಮನಿಸಬೇಕು. ಸರಳ ಹುಡುಕಾಟವು ಗೂಗಲ್ ನಿಂದ ಬ್ಯಾಕ್​ಗ್ರೌಂಡ್ ಬದಲಾವಣೆಯೂ ಆಗಿರಬಹುದು ಎನ್ನಲಾಗಿದೆ ಭಾರತದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್ಸಿಇಆರ್​ಟಿ ) ಸಮಿತಿಯು ಎಲ್ಲಾ ಶಾಲಾ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಪದವನ್ನು ‘ಭಾರತ್’ ಎಂದು ಬದಲಾಯಿಸಲು ಶಿಫಾರಸು ಮಾಡಿದ ನಂತರ ಗೂಗಲ್ ಭಾರತ ಸರ್ಕಾರದ ನಿಲುವಿಗೆ ಹೊಂದಿಕೊಳ್ಳುತ್ತಿರುವುದಾಗಿ ಹೇಳಲಾಗಿದೆ.

ಭಾರತೀಯ ಸಂವಿಧಾನದ ಆರ್ಟಿಕಲ್​ (1) ರ ಪ್ರಕಾರ ದೇಶದ ಹೆಸರನ್ನು ” ಇಂಡಿಯಾ ಅಂದರೆ ಭಾರತವು ರಾಜ್ಯಗಳ ಒಕ್ಕೂಟವಾಗಿರುತ್ತದೆ” ಎಂದು ಉಲ್ಲೇಖಿಸಲಾಗಿದೆ.

ಎಲ್ಲ ಪಠ್ಯಪುಸ್ತಕಗಳಲ್ಲಿ ದೇಶದ ಹೆಸರನ್ನು ಭಾರತ್ ಎಂದು ಬದಲಾಯಿಸುವ ಬಗ್ಗೆ ಮಾಧ್ಯಮ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಎನ್​ಸಿಇಆರ್​​ಟಿ , “ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ಅಭಿವೃದ್ಧಿ ಪ್ರಕ್ರಿಯೆಯಲ್ಲಿದೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸುವುದು ಸಾಧ್ಯವಿಲ್ಲ” ಎಂದು ಹೇಳಿದೆ.

Exit mobile version