ನವದೆಹಲಿ: ಅಲ್ಗಾರಿದಮ್‌ಗಳು ಮತ್ತು ಕಾಪಿರೈಟ್ಸ್ ಪಕ್ಷಪಾತ ಒಳಗೊಂಡಂತೆ ಚಾಟ್‌ಜಿಪಿಟಿ (ChatGPT) ಸೇರಿ ಕೃತಕ ಬುದ್ಧಿಮತ್ತೆ ಆಧರಿತ ಸ್ಮಾರ್ಟ್ ಟೆಕ್ನಾಲಜಿ ವೇದಿಕೆಗಳ ನಿಯಂತ್ರಣಕ್ಕೆ ವ್ಯವಸ್ಥೆಯನ್ನು ರೂಪಿಸುವತ್ತ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ರೂಪಿಸಲಾಗುವ ಯಾವುದೇ ಕಾನೂನು ಕುರಿತು ಇದೇ ನಿಟ್ಟಿನಲ್ಲಿ ಯೋಚಿಸುತ್ತಿರುವ ಸಮಾನಮನಸ್ಕ ರಾಷ್ಟ್ರಗಳ ಜತೆ ಚರ್ಚಿಸಲು ಭಾರತವು ಮುಂದಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಹಂಚಿಕೊಂಡಿದ್ದಾರೆ.
ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು, ಕೃತಕ ಬುದ್ಧಿಮತ್ತೆ ವೇದಿಕೆಗಳು ಪ್ರಭಾವ ಕುರಿತು ಸಾಕಷ್ಟು ರಾಷ್ಟ್ರಗಳು ಚರ್ಚಿಸುತ್ತಿವೆ. ಹಾಗಾಗಿ, ಅಂತಾರಾಷ್ಟ್ರೀಯ ಮಾತುಕತೆಗಳ ಬಳಿಕ ನಿಯಂತ್ರಣಾ ಚೌಕಟ್ಟು ರೂಪಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಇಡೀ ಜಗತ್ತು ಒಂದು ನಿಯಂತ್ರಣ ಚೌಕಟ್ಟು ಹಾಗೂ ನಿಯಂತ್ರಣಾ ವ್ಯವಸ್ಥೆ ಹೇಗಿರಬೇಕೆಂದು ಎದುರು ನೋಡುತ್ತಿದೆ. ಜಿ7 ಸಮೂಹದಲ್ಲಿ ಎಲ್ಲ ಡಿಜಿಟಲ್ ಸಚಿವರು, ನಿಯಂತ್ರಣಾ ಚೌಕಟ್ಟು ಹೇಗಿರಬೇಕೆಂಬ ಎಂಬ ಆತಂಕವನ್ನು ಹೊಂದಿದ್ದಾರೆ. ಹಾಗಾಗಿ, ಇದೊಂದು ಜಾಗತಿಕ ವಿಷಯವಾಗಿದ್ದು, ಯಾವುದೇ ಒಂದು ದೇಶಕ್ಕೆ ಸಂಬಂಧಿಸಿದ್ದಲ್ಲ. ಇದನ್ನು ನಾವು ಅಂತಾರಾಷ್ಟ್ರೀಯ ದೃಷ್ಟಿಯಿಂದಲೇ ನೋಡಬೇಕಾಗಿದೆ ಎಂದು ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ChatGPT : ಚಾಟ್‌ಜಿಪಿಟಿ ಮನುಷ್ಯರಿಗೆ ಪರ್ಯಾಯವೇ? ನಾರಾಯಣ ಮೂರ್ತಿ ಹೇಳಿದ್ದೇನು?
ಇದೇ ವೇಳೆ, ಎಐ ಆಧರಿತ ತಂತ್ರಜ್ಞಾನ ವೇದಿಕೆಗಳಿಗೆ ಸಂಬಂಧಿಸಿದಂತೆ ಐಪಿಆರ್, ಕಾಪಿ ರೈಟ್ಸ್ ಮತ್ತು ಅಲ್ಗಾರಿದಮ್‌ಗಳ ಪಕ್ಷಪಾತ ಕುರಿತು ಆತಂಕಗಳಿವೆ. ಇದೊಂದು ದೊಡ್ಡ ಕ್ಷೇತ್ರವಾಗಿದ್ದು, ಸಾಕಷ್ಟು ಆತಂಕಗಳಿಗೆ ಜಾಗವಿದೆ ಎಂದು ವೈಷ್ಣವ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.