ನವದೆಹಲಿ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ -ಇನ್) ಭಾರತದಲ್ಲಿ ಐಫೋನ್ (Apple Iphone) ಬಳಕೆದಾರರಿಗೆ ಭದ್ರತಾ ಎಚ್ಚರಿಕೆ ನೀಡಿದೆ. ಐಫೋನ್ 6ಎಸ್, ಐಫೋನ್ 7 ಸರಣಿ, ಐಫೋನ್ 8 ಸರಣಿ ಮತ್ತು ಐಫೋನ್ ಎಸ್ಇ ಮೊದಲ ತಲೆಮಾರಿನ ಸೇರಿದಂತೆ ಹಳೆಯ ಮಾದರಿಗಳು ದುರ್ಬಲವಾಗಿವೆ ಎಂದು ಸಿಇಆರ್ಟಿ -ಇನ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಉಲ್ಲೇಖಿಸಿದೆ. ಐಪ್ಯಾಡ್ ಏರ್, ಪ್ರೊ ಮತ್ತು ಮಿನಿ ಸೇರಿದಂತೆ ಐಪ್ಯಾಡ್ ಬಳಕೆದಾರರು ಐಪ್ಯಾಡ್ ಒಎಸ್ಗಳನ್ನು ಅಪ್ಡೇಟ್ ಮಾಡುವಂತೆ ಸೂಚಿಸಲಾಗಿದೆ.
ನಿಮ್ಮ ಐಫೋನ್ ಅನ್ನು ಅಪ್ಡೇಡ್ ಮಾಡಲು ಸೆಟ್ಟಿಂಗ್ಸ್ > ಜನರಲ್ > ಸಾಫ್ಟ್ ವೇರ್ ಅಪ್ಡೇಡ್ ಆಯ್ಕೆ ಮಾಡಿಕೊಳ್ಳಬೇಕು . ಇದೇ ವಿಧಾನವು ಐಪ್ಯಾಡ್ ಬಳಕೆದಾರರಿಗೂ ಅನ್ವಯಿಸುತ್ತದೆ.
ಕೆರ್ನಲ್ನಲ್ಲಿ ಅಸಮರ್ಪಕ ಇನ್ಪುಟ್ ವ್ಯಾಲಿಡೇಷನ್ ” ಮತ್ತು “ವೆಬೆ್ಕಿಟ್ನ ಸಮಸ್ಯೆಗಳಲ್ಲಿ ಅಸಮರ್ಪಕ ಸ್ಟೇಟ್ ಮ್ಯಾನೇಜ್ಮೆಂಟ್ ಕಾರಣದಿಂದಾಗಿ ಆಪಲ್ ಐಒಎಸ್ ಮತ್ತು ಐಪ್ಯಾಡ್ ಒಎಸ್ಗಳು ದುರ್ಬಲಗೊಂಡಿವೆ ಎಂದು ಸಿಇಆರ್ಟಿ -ಇನ್ ಹೇಳಿದೆ. ಕೆರ್ನಲ್ ಯಾವುದೇ ಆಪರೇಟಿಂಗ್ ಸಿಸ್ಟಮ್ಸ್ ಕೇಂದ್ರವಾಗಿದೆ, ಆದರೆ ವೆಬ್ಕಿಟ್ ಆಪಲ್ ಸಫಾರಿ ಬ್ರೌಸರ್ನ ಹಿಂದಿರುವ ಪ್ರಮುಖ ತಂತ್ರಜ್ಞಾನವಾಗಿದೆ. ಸದ್ಯದ ದೌರ್ಬಲ್ಯಗಳನ್ನು ಬಳಸಿಕೊಂಡರೆ, ಸೈಬರ್ ಅಪರಾಧಿಯು, ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಬಹುದು ಮತ್ತು ಸಂಪೂರ್ಣ ಸಿಸ್ಟಮ್ ಮೇಲೆ ದಾಳಿ ಮಾಡಬಹುದು. ಅಂದರೆ ಹ್ಯಾಕರ್ ಸಾಧನದ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಭದ್ರತಾ ಸಂಸ್ಥೆ ಹೇಳಿದೆ. ಸಿಇಆರ್ಟಿ-ಇನ್ ಈ ಅನುಕೂಲವನ್ನು ಅತ್ಯಂತ ಅಪಾಯಕಾರಿ ಎಂದು ಹೇಳಿದೆ.
ಯಾವುದಕ್ಕೆಲ್ಲ ಅಪ್ಡೇಟ್
ಆಪಲ್ ಐಫೋನ್ಗಳಿಗಾಗಿ ಹೊಸ ಐಒಎಸ್ ಅಪ್ಡೇಟ್ಗಳನ್ನನು ಹೊರತರಲು ಪ್ರಾರಂಭಿಸಿದ ಕೆಲವು ದಿನಗಳ ನಂತರ ಸರ್ಕಾರದ ಎಚ್ಚರಿಕೆ ಬಂದಿದೆ. ಆಪಲ್ ಐಫೋನ್ 6ಎಸ್ (ಎಲ್ಲಾ ಮಾದರಿಗಳು), ಐಫೋನ್ 7 (ಎಲ್ಲಾ ಮಾದರಿಗಳು), ಐಫೋನ್ ಎಸ್ಇ (1 ನೇ ಪೀಳಿಗೆ ), ಐಪ್ಯಾಡ್ ಏರ್ 2, ಐಪ್ಯಾಡ್ ಮಿನಿ (4 ನೇ ಪೀಳಿಗೆ) ಮತ್ತು ಐಪಾಡ್ ಟಚ್ ಗಾಗಿ (7ನೇ ಪೀಳಿಗೆ) ಐಒಎಸ್ 15.7.7 ಮತ್ತು ಐಪ್ಯಾಡ್ ಒಎಸ್ 15.7.7 ಅಪ್ಡೇಟ್ಗಳನ್ನು ಬಿಡುಗಡೆ ಮಾಡಿದೆ. ಐಫೋನ್ 8 ಮತ್ತು ನಂತರದ ಐಒಎಸ್ 16.5.1 ಮತ್ತು ಐಪ್ಯಾಡ್ ಒಎಸ್ 16.5.1 ಅಪ್ಡೇಟ್ಗಳುನ್ನು ನೀಡಿದೆ. ಐಪ್ಯಾಡ್ ಪ್ರೊ (ಎಲ್ಲಾ ಮಾದರಿಗಳು), ಐಪ್ಯಾಡ್ ಏರ್ 3ನೇ ಪೀಳಿಗೆ ಮತ್ತು ಐಪ್ಯಾಡ್ 5ನೇ ಪೀಳಿಗೆ ಮತ್ತು ಐಪ್ಯಾಡ್ ಮಿನಿ 5 ನೇ ಪೀಳಿಗೆ ಮತ್ತು ನಂತರದ ಫೋನ್ಗಳಿಗೆ ಅಪ್ಡೇಟ್ ನೀಡಲಾಗಿದೆ. ಆಂಟಿ ವೈರಸ್ ಕ್ಯಾಸ್ಪರ್ಕಿ ಸಂಶೋಧಕರು ಈ ದೌರ್ಬಲ್ಯಗಳನ್ನು ಕಂಡುಹಿಡಿದಿದ್ದಾರೆ ಎಂದು ಆ್ಯಪಲ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ : iPhone: ಇನ್ನು 11 ತಿಂಗಳಲ್ಲಿ ಬೆಂಗಳೂರಲ್ಲೇ ಐಫೋನ್ ಉತ್ಪಾದನೆ: ವರ್ಷಕ್ಕೆ 2 ಕೋಟಿ ಮೊಬೈಲ್ ತಯಾರಿ!
ಐಒಎಸ್ ಅಪ್ಡೇಟ್ಗಳನ್ನು ಬಿಡುಗಡೆ ಮಾಡುವ ಮೂಲಕ ಹ್ಯಾಕಿಂಗ್ ಕಳವಳಗಳನ್ನು ಪರಿಹರಿಸಲು ಆಪಲ್ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ, ಇದು ನಿರ್ದಿಷ್ಟವಾಗಿ ಗುರುತಿಸಲಾದ ದುರ್ಬಲತೆಗಳನ್ನು ಗುರಿಯಾಗಿಸುತ್ತದೆ. ಐಫೋನ್ಗಳಲ್ಲಿನ ಭದ್ರತಾ ನ್ಯೂನತೆಗಳನ್ನು ಮೊದಲು ರಷ್ಯಾದ ಭದ್ರತಾ ಸಾಫ್ಟ್ವೇರ್ ತಯಾರಕ ಕ್ಯಾಸ್ಪರ್ಕ್ಸಿ ಲ್ಯಾಬ್ ಎತ್ತಿ ತೋರಿಸಿದೆ ಎಂದು ಆಪಲ್ ಒಪ್ಪಿಕೊಂಡಿದೆ.