Site icon Vistara News

HP OmniBook X : ಕೃತಕ ಬುದ್ಧಿಮತ್ತೆ ಹೊಂದಿರುವ ಎರಡು ಲ್ಯಾಪ್​ಟಾಪ್​​ಗಳನ್ನು ಬಿಡುಗಡೆ ಮಾಡಿದ ಎಚ್​ಪಿ

HP OmniBook X,

ಬೆಂಗಳೂರು: ಜಾಗತಿಕವಾಗಿ ಮುಂಚೂಣಿಯಲ್ಲಿರುವ ಇನ್ಪಾರ್ಮೇಷನ್ ಕಂಪನಿಯಾಗಿರುವ ಎಚ್​ಪಿ ಸೋಮವಾರ ತನ್ನ ಅತ್ಯಂತ ಶಕ್ತಿಶಾಲಿ ಕೃತಕ ಬುದ್ಧಿಮತ್ತೆ (ಎಐ) ಹೊಂದಿರುವ ಪರ್ಸನಲ್ ಕಂಪ್ಯೂಟರ್​ಗಳನ್ನು ಬಿಡುಗಡೆ ಮಾಡಿದೆ. ದೊಡ್ಡ ಉದ್ದಿಮೆಗಳು, ಸ್ಟಾರ್ಟಪ್​​ಗಳು ಮತ್ತು ರೀಟೇಲ್ ಗ್ರಾಹಕರು ಹಿಂದೆಂದಿಗಿಂತಲೂ ಹೆಚ್ಚು ಉತ್ತಮ ಅನುಭವ ನೀಡುವ ಉದ್ದೇಶದೊಂದಿಗೆ ಈ ಪರ್ಸನಲ್ ಕಂಪ್ಯೂಟರ್​ಗಳನ್ನು ಬಿಡುಗಡೆ ಮಾಡಿದೆ. ಎಚ್​​ಪಿ ಎಲೈಟ್ ಬುಕ್ ಅಲ್ಟ್ರಾ ಮತ್ತು ಎಚ್​​ಪಿ ಒಮ್ನಿ ಬುಕ್ ಎಕ್ಸ್ (HP OmniBook X ) ಬಿಡುಗಡೆಗೊಂಡಿರುವ ಲ್ಯಾಪ್​ಟಾಪ್​ಗಳು. ಇವೆರಡು ಎಚ್​​​ಪಿಯ ಮೊಟ್ಟ ಮೊದಲ ಕೋಪೈಲಟ್+ ಪಿಸಿಗಳಾಗಿವೆ.

ಎರಡೂ ಲ್ಯಾಪ್ ಟಾಪ್ ಗಳನ್ನು ಸ್ನ್ಯಾಪ್ ಡ್ರಾಗನ್ ಎಕ್ಸ್ ಎಲೈಟ್ ಪ್ರೊಸೆಸರ್ ಒಳಗೊಂಡಿದೆ. ತನ್ನ ಪ್ರತ್ಯೇಕ ನ್ಯೂರಲ್ ಪ್ರೊಸೆಸಿಂಗ್ ಯುನಿಟ್ (NPU) ಹೊಂದಿದ್ದು, ಇದರಲ್ಲಿ ಸ್ಥಳೀಯ ಭಾಷಾ ಮಾದರಿಗಳು ಮತ್ತು ಪ್ರೊಡಕ್ಟಿವ್​ ಎಐ ಅನ್ನು ಚಲಾಯಿಸಲು ಪ್ರತಿ ಸೆಕೆಂಡಿಗೆ 45 ಟ್ರಿಲಿಯನ್ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದಾದ ಸಾಮರ್ಥ್ಯ ಹೊಂದಿದೆ

ಎಚ್ ಪಿ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಇಪ್ಸಿತಾ ದಾಸಗುಪ್ತಾ ಅವರು ಮಾತನಾಡಿ, ನಾವು ಎಐ ಪಿಸಿಗಳ ಹೊಸ ಯುಗಾರಂಭದಲ್ಲಿದ್ದೇವೆ. ಇದು ವೈಯಕ್ತಿಕ ಕಂಪ್ಯೂಟರ್​ನ್ಲಿ ಏನನ್ನು ಮಾಡಬಹುದು ಎಂಬುದನ್ನು ಮರುವ್ಯಾಖ್ಯಾನ ಮಾಡುತ್ತದೆ. ಈ ನಾವೀನ್ಯತೆಯು ಹೊಸ ಸಾಧ್ಯತೆಗಳನ್ನು ಅನ್ಲಾಕ್ ಮಾಡಲು ಮತ್ತು ಕೆಲಸ ಭವಿಷ್ಯವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಸಜ್ಜಾಗಿದೆ ಎಂದು ನಾವು ನಂಬುತ್ತೇವೆ. ನಮ್ಮ ಮುಂದಿನ ಪೀಳಿಗೆಯ ಎಐ ಪಿಸಿಗಳು ಕಾರ್ಯದಕ್ಷತೆ ಹೆಚ್ಚಿಸಲು, ಭದ್ರತೆಯನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ಹೈಬ್ರಿಡ್ ಕಾರ್ಯಶೈಲಿಗಳಿಗಾಗಿ ವೈಯಕ್ತೀಕರಿಸಿದ ಅನುಭವಗಳನ್ನು ನೀಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ನವೀನ ಮಾದರಿಯ ಸಾಧನಗಳು ಭಾರತದ ಡಿಜಿಟಲ್ ರೂಪಾಂತರ ಮತ್ತು ಆರ್ಥಿಕ ಬೆಳವಣಿಗೆಗೆ ಹೇಗೆ ಚಾಲನೆ ನೀಡಲಬಲ್ಲವು ಎಂಬುದನ್ನು ನಾವು ಕಾತುರದಿಂದ ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದರು.

ನಾವು ಕಾರ್ಯ ನಿರ್ವಹಿಸುವ ವಿಧಾನವು ಸಾಂಪ್ರದಾಯಿಕ ಡೆಸ್ಕ್ ಮೀರಿ ವಿಕಸನಗೊಳ್ಳುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಎಲೈಟ್ ಬುಕ್ ಅಲ್ಟ್ರಾವನ್ನು ಆಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಗ್ರಾಹಕರೊಂದಿಗೆ ನಿಯಮಿತವಾಗಿ ಸಂವಹನ ನಡೆಸುವ ಈ ವ್ಯಾಪಾರೋದ್ಯಮಿಗಳಿಗೆ ಸೊಗಸಾದ ಮತ್ತು ಮೊಬೈಲ್ ಸಾಧನಗಳ ಅಗತ್ಯವಿರುತ್ತದೆ. ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಯೋಗವನ್ನು ಹೆಚ್ಚಿಸಲು ಹಾಗೂ ಉನ್ನತ ಶ್ರೇಣಿಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅವರು ಅನನ್ಯವಾದ ಎಐ ಸಾಮರ್ಥ್ಯಗಳ ಹುಡುಕಾಟದಲ್ಲಿರುತ್ತಾರೆ. ಇಂತಹ ವರ್ಗದವರಿಗೆಂದೇ ಎಚ್ ಪಿ ಎಲೈಟ್ ಬುಕ್ ಅಲ್ಟ್ರಾವನ್ನು ವಿನ್ಯಾಸ ಮಾಡಲಾಗಿದೆ ಎಂದು ಹೇಳಿದರು.

ಎಚ್ ಪಿ ಇಂಡಿಯಾದ ಪರ್ಸನಲ್ ಸಿಸ್ಟಮ್ಸ್ ನ ಹಿರಿಯ ನಿರ್ದೇಶಕ ವಿನೀತ್ ಗೆಹಾನಿ ಅವರು ಮಾತನಾಡಿ, ಭಾರತದಲ್ಲಿ ನಮ್ಮ ಮೊಟ್ಟ ಮೊದಲ ಸಂಪೂರ್ಣ ಲೋಡ್ ಆಗಿರುವ ಎಐ ಪಿಸಿಗಳಾದ ಎಚ್ ಪಿ ಎಲೈಟ್ ಬುಕ್ ಅಲ್ಟ್ರಾ ಮತ್ತು ಎಚ್ ಪಿ ಒಮ್ನಿ ಬುಕ್ ಎಕ್ಸ್ ಅನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ರೋಮಾಂಚನಗೊಂಡಿದ್ದೇವೆ. ಈ ಎಐ ಪಿಸಿಗಳನ್ನು ಹೆಚ್ಚು ಅರ್ಥಪೂರ್ಣವಾದ ಬಳಕೆದಾರರ ಅನುಭವಗಳನ್ನು ರಚಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ನಾವು ತಂತ್ರಜ್ಞಾನದೊಂದಿಗೆ ಸಂವಹನ ನಡೆಸುವ ರೀತಿಯಲ್ಲಿ ಈ ಸಾಧನಗಳು ಕ್ರಾಂತಿಕಾರಿಯಾಗಿವೆ. ಸುಧಾರಿತ ಎಐ ಸಾಮರ್ಥ್ಯಗಳನ್ನು ಸಂಯೋಜನೆ ಮಾಡುವ ನಿಟ್ಟಿನಲ್ಲಿ ನಾವು ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುತ್ತಿದ್ದೇವೆ ಮತ್ತು ತಂತ್ರಜ್ಞಾನವನ್ನು ವೇಗವಾಗಿ ಇನ್ನಷ್ಟು ಅರ್ಥಗರ್ಭಿತವಾಗಿ ಹಾಗೂ ವೈಯಕ್ತಿಕ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವ ರೀತಿಯಲ್ಲಿ ಮಾಡುತ್ತಿದ್ದೇವೆ’’ ಎಂದು ತಿಳಿಸಿದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್ ಕ್ವಾರ್ಟರ್​ಫೈನಲ್​ಗೇರಿ ದಾಖಲೆ ಸೃಷ್ಟಿಸಿದ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್​- ಚಿರಾಗ್​

ಬೆರಳತುದಿಯಲ್ಲಿ ಎಐ

ಹೊಸ ಲ್ಯಾಪ್ ಟಾಪ್ ಗಳು ಅಂತರ್ನಿರ್ಮಿತ ಎಚ್ ಪಿ ಎಐ ಜೊತೆಯಲ್ಲೇ ಬರುತ್ತವೆ. ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವ ದಿಸೆಯಲ್ಲಿ ವೈಯಕ್ತಿಕ ಎಐ- ಸಹಾಯಕವನ್ನು ಒಳಗೊಂಡಿರುತ್ತವೆ. ಕೋಪೈಲಟ್+ ಪಿಸಿಯೊಂದಿಗೆ ಸಂಯೋಜನೆಗೊಂಡು ಈ ಪಿಸಿಗಳು ಹೆಚ್ಚು ವೈಯಕ್ತೀಕರಿಸಿದ, ಶಕ್ತಿಯುತ ಕಂಪ್ಯೂಟಿಂಗ್ ಅನುಭವ ನೀಡುತ್ತದೆ.

ಎಚ್ ಪಿ ಎಲೈಟ್ ಬುಕ್ ಅಲ್ಟ್ರಾ ಮತ್ತು ಎಚ್ ಪಿ ಒಮ್ನಿ ಬುಕ್ ಎಕ್ಸ್ ಅನ್ನು ತಂತ್ರಜ್ಞಾನ- ಬುದ್ಧಿವಂತ ಸ್ವತಂತ್ರ ಉದ್ಯೋಗಿಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ನಯವಾದ ವಿನ್ಯಾಸ ಮತ್ತು ಎಐ –ವರ್ಧಿತ ಶಕ್ತಿ ಹಾಗೂ ಚಲನಶೀಲತೆಯ ಪರಿಪೂರ್ಣವಾದ ಸಿನರ್ಜಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಕೇವಲ 1.3 ಕೆ.ಜಿ ತೂಕದ ಈ ಲ್ಯಾಪ್ ಟಾಪ್ ಗಳು 26 ಗಂಟೆಗಳ ಬ್ಯಾಟರಿ ಅವಧಿಯೊಂದಿಗೆ ವಿಶ್ವದ ಅತ್ಯಂತ ತೆಳುವಾದ ಮುಂದಿನ ಪೀಳಿಗೆಯ ಎಐ ಪಿಸಿಗಳಾಗಿವೆ.

ಎಚ್ ಪಿ ಎಲೈಟ್ ಬುಕ್ ಅಲ್ಟ್ರಾ ಎಲ್ಲಾ ಎಚ್ ಪಿ ವರ್ಲ್ಡ್ ಸ್ಟೋರ್ ಗಳು ಮತ್ತು ಎಚ್ ಪಿ ಆನ್ ಲೈನ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಅಟ್ಮಾಸ್ಫೆರಿಕ್ ಬ್ಲೂ ಬಣ್ಣದ ಇದರ ಬೆಲೆ 1,69,934 ರೂಪಾಯಿಗಳಿಂದ ಆರಂಭವಾಗುತ್ತದೆ.
• ಎಚ್ ಪಿ ಒಮ್ನಿಬುಕ್ ಎಕ್ಸ್ ಎಲ್ಲಾ ಎಚ್ ಪಿ ವರ್ಲ್ಡ್ ಸ್ಟೋರ್ ಗಳು ಮತ್ತು ಎಚ್ ಪಿ ಆನ್ ಲೈನ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಮೆಟೆ ಅಥವಾ ಸಿಲ್ವರ್ ಬಣ್ಣದ ಇದರ ಬೆಲೆ 1,39,999 ರೂಪಾಯಿಗಳಿಂದ ಆರಂಭವಾಗುತ್ತದೆ.

Exit mobile version