ನವ ದೆಹಲಿ: ಮೋಟೊರೋಲಾ ಕಂಪನಿಯು ತನ್ನ ಬಜೆಟ್ ವಿಭಾಗದ Moto G42 ಸ್ಮಾರ್ಟ್‌ಫೋನ್ ಭಾರತದಲ್ಲಿ ಸೋಮವಾರ ಬಿಡುಗಡೆ ಮಾಡಿದೆ. ಇದು ಯೂರೋಪ್, ಲ್ಯಾಟಿನ್ ಅಮೆರಿಕ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಡುಗಡೆಯಾಗಿದ್ದ Moto G4೧ ಸ್ಮಾರ್ಟ್‌ಫೋನ್‌ನ ಮುಂದುವರಿದ ಸೀರಿಸ್. ಇದರ ಬೆಲೆ ೧೩,೯೯೯ ರೂಪಾಯಿ.
ಹಿಂಬದಿಯಲ್ಲಿ ೫೦ ಎಂಪಿಯ ಮೂರು ಕ್ಯಾಮೆರಾಗಳು ಹಾಗೂ 20:9 ಅಮೋಲ್ಡ್ ಡಿಸ್‌ಪ್ಲೇ ಹೊಸ Moto G42 ಸ್ಮಾರ್ಟ್‌ಫೋನ್ ಆಕರ್ಷಣೆ. ಇದು ಒಕ್ಟಾ ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ ೬೮೦ ಎಸ್‌ಒಸಿ ಚಿಪ್‌ಸೆಟ್ ಹೊಂದಿದ್ದು, ೨೦ ಡಬ್ಲ್ಯು ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನೂ ಹೊಂದಿದೆ. ಈ ಫೋನ್ ಅನ್ನು ರೆಡ್‌ಮಿ ನೋಟ್ ೧೧, ರಿಯಲ್‌ಮಿ೯ಐ, ಪೊಕೊ ಎಮ್‌೪ ಪ್ರೊ ಮೊಬೈಲ್‌ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಇಳಿಸಲಾಗಿದೆ.
ಎರಡು ಬಣ್ಣಗಳು
ಅಟ್ಲಾಂಟಿಕ್ ಗ್ರಿನ್ ಹಾಗೂ ಮೆಟಾಲಿಕ್ ರೋಸ್ ಎಂಬ ಎರಡು ಬಣ್ಣಗಳಲ್ಲಿ ಫೋನ್ ಲಭ್ಯವಿದ್ದು, ೪ ಜಿಬಿ ರ‍್ಯಾಮ್ ಹಾಗೂ ೬೪ ಜಿಬಿ ಸ್ಟೋರೇಜ್ ಸಾಮರ್ಥ್ಯದ ಮೊಬೈಲ್‌ಗೆ ೧೩,೯೯೯ ರೂಪಾಯಿಗೆ ನಿಗದಿ ಮಾಡಿದೆ. ಫ್ಲಿಪ್‌ಕಾರ್ಟ್ ಭಾರತದಲ್ಲಿ ಆನ್‌ಲೈನ್ ಡೆಲಿವರಿ ನೀಡಲಿದ್ದರೆ, ಆಯ್ದ ಕೆಲವು ಮಳಿಗೆಗಳಲ್ಲೂ ಮೊಬೈಲ್ ಲಭ್ಯವಿದೆ ಎಂದು ಮೋಟೊರೋಲಾ ಕಂಪನಿ ಹೇಳಿದೆ.
ಎಸ್‌ಬಿಐ ಕಾರ್ಡ್ ಬಳಕೆದಾರರಿಗೆ ಈ ಫೋನ್‌ಗೆ ೧೦೦೦ ರೂಪಾಯಿ ರಿಯಾಯಿತಿ ನೀಡಲಾಗಿದೆ. ಅದೇ ರೀತಿ ಜಿಯೊದ ೪೧೯ ರೂಪಾಯಿ ಯೋಜನೆ ಬಳಕೆದಾರರಿಗೆ 2,549 ರೂಪಾಯಿ ತನಕದ ನಾನಾ ಕೊಡುಗೆಗಳನ್ನು ಘೋಷಣೆ ಮಾಡಿದೆ.
ಡ್ಯಯಲ್ ಸಿಮ್ ಹೊಂದಿರುವ ಈ ಫೋನ್‌ನಲ್ಲಿ ಆಂಡ್ರಾಯ್ಡ್ ೧೨ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ೬.೪ ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೆ, 1,080×2,400 ಪಿಕ್ಸೆಲ್ ಹೊಂದಿದೆ. ೫೦ ಮೆಗಾ ಪಿಕ್ಸೆಲ್‌ನ ಟ್ರಿಪಲ್ ಕ್ಯಾಮೆರಾ ಹಿಂಬದಿಯಲ್ಲಿದ್ದು, ೮ ಮೆಗಾ ಪಿಕ್ಸೆಲ್‌ನ ಅಲ್ಟ್ರಾವೈಡ್ ಹಾಗೂ ೨ ಮೆಗಾ ಪಿಕ್ಸೆಲ್ ಮ್ಯಾಕ್ರೊ ಶೂಟರ್ ಲೆನ್ಸ್ ಸೇರಿಕೊಂಡಿದೆ. ಸೆಲ್ಫಿಗಾಗಿ ೧೬ ಮೆಗಾ ಪಿಕ್ಸೆಲ್‌ನ ಕ್ಯಾಮೆರಾ ನೀಡಲಾಗಿದೆ.
೪ಜಿ ಎಲ್‌ಟಿಇ ವೈಫೈ ೮೦೨, ಬ್ಲೂಟೂತ್ ವಿ೫.೦, ಸೇರಿದಂತೆ ಸಾಮಾನ್ಯ ಫೀಚರ್‌ಗಳಿವೆ. ಈ ಫೋನ್‌ನಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ.
ಇದನ್ನೂ ಓದಿ: Poco F4 5G ಸ್ಮಾರ್ಟ್ ಫೋನ್ ನಾಳೆ ಬಿಡುಗಡೆ