ಹೊಸದಿಲ್ಲಿ: ತಂತ್ರಜ್ಞಾನ ದೈತ್ಯ ಇಲಾನ್ ಮಸ್ಕ್‌ನ (Elon Musk) ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ಅಪ್ xAI ಹೊಸ ಚಾಟ್‌ಬಾಟ್ ಅನ್ನು ಪ್ರಾರಂಭಿಸಿದ್ದು, ಅದನ್ನು ಗ್ರೋಕ್ (Grok) ಎಂದು ಕರೆಯಲಾಗಿದೆ. ಇದು ಓಪನ್‌ಎಐನ ಚಾಟ್‌ಜಿಪಿಟಿಗೆ (OpenAI ChatGPT) ಪ್ರಮುಖ ಸವಾಲು ಒಡ್ಡುವ ನಿರೀಕ್ಷೆಯಿದೆ.
ಕಳೆದ ಕೆಲವು ದಿನಗಳಿಂದ ಇಲಾನ್ ಮಸ್ಕ್ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ಮೂಲಕ ಗ್ರೋಕ್‌ನ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಚಾಟ್‌ಜಿಪಿಟಿ ಮತ್ತು ಗ್ರೋಕ್ ಕೆಲವು ಅನನ್ಯ ವೈಶಿಷ್ಟ್ಯಗಳನ್ನು ಹೊಂದಿದ್ದು ಒಂದಕ್ಕಿಂತ ಇನ್ನೊಂದನ್ನು ಪ್ರತ್ಯೇಕಿಸುತ್ತವೆ. ಚಾಟ್‌ಬಾಟ್‌ಗಳ ನಡುವಿನ ಐದು ಪ್ರಮುಖ ವ್ಯತ್ಯಾಸಗಳು ಇಲ್ಲಿವೆ:
1. ಡೇಟಾ ಮೂಲಗಳು: ಓಪನ್‌ಎಐ ಅಭಿವೃದ್ಧಿಪಡಿಸಿದ ಚಾಟ್‌ಜಿಪಿಟಿ, ವಿಶಾಲ ಮತ್ತು ವೈವಿಧ್ಯಮಯ ಡೇಟಾಸೆಟ್ ಹೊಂದಿದೆ. ಇದು ಸಾಮಾನ್ಯ ಕ್ರಾಲ್, ವೆಬ್ ವಿಷಯ, ಪುಸ್ತಕಗಳು ಮತ್ತು ವಿಕಿಪೀಡಿಯಾದಂತಹ ಮೂಲಗಳಿಂದ ಮಾಹಿತಿಯನ್ನು ಸೆಳೆಯುತ್ತದೆ. ಇದಕ್ಕೆ ವಿರುದ್ಧವಾಗಿ ಗ್ರೋಕ್, X ಪ್ಲಾಟ್‌ಫಾರ್ಮ್‌ನಿಂದ ಪಡೆದ ರಿಯಲ್ ಟೈಮ್ ಡೇಟಾ ಬಳಸಿಕೊಂಡು ತರಬೇತಿ ಪಡೆದಿದೆ. ಈ ರಿಯಲ್ ಟೈಮ್ ಜ್ಞಾನವು ತಾಜಾತನ ಮತ್ತು ಪ್ರಸ್ತುತತೆಯ ವಿಷಯದಲ್ಲಿ ಗ್ರೋಕ್ ಅನ್ನು ಪ್ರತ್ಯೇಕಿಸುತ್ತದೆ.
2. ಮಾಲೀಕತ್ವ: ಗ್ರೋಕ್, ಇಲಾನ್ ಮಸ್ಕ್ ಮತ್ತು AI ಸಾಹಸೋದ್ಯಮ ʼxAIʼನಲ್ಲಿರುವ ತಜ್ಞರ ತಂಡದಿಂದ ರಚಿಸಲ್ಪಟ್ಟಿದೆ. ChatGPT, AI ಸಂಶೋಧನಾ ಸಂಸ್ಥೆಯಾದ OpenAIನ ಮೆದುಳಿನ ಕೂಸು. ಈ ವಿಶಿಷ್ಟ ಮಾಲೀಕತ್ವಗಳು AI ವ್ಯವಸ್ಥೆಗಳ ಅಭಿವೃದ್ಧಿ ಮತ್ತು ನಿರ್ದೇಶನದ ಮೇಲೆ ಪ್ರಭಾವ ಬೀರುತ್ತವೆ.
3. ಮಾರುಕಟ್ಟೆ ಲಭ್ಯತೆ: ChatGPT ಅನ್ನು ನವೆಂಬರ್ 2022ರಲ್ಲಿ ಸಾರ್ವಜನಿಕವಾಗಿ ನೀಡಲಾಯಿತು. ಅದರ ವ್ಯಾಪಕ ಸಾಮರ್ಥ್ಯಗಳು ವ್ಯಾಪಕ ಬಳಕೆದಾರರಿಗೆ ಸಿಗುವಂತೆ ಮಾಡಿತು. ಗ್ರೋಕ್ ಪ್ರಸ್ತುತ ತನ್ನ ಬೀಟಾ ಹಂತದಲ್ಲಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೆಲವೇ ಬಳಕೆದಾರರಿಗೆ ಲಭ್ಯ. ಇಲಾನ್ ಮಸ್ಕ್ ಪ್ರಕಾರ, ಇದು ಆರಂಭಿಕ ಬೀಟಾದಿಂದ ಹೊರಬಂದ ತಕ್ಷಣ, xAIನ ಗ್ರೋಕ್ ಸಿಸ್ಟಮ್ ಎಲ್ಲಾ X ಪ್ರೀಮಿಯಂ+ ಚಂದಾದಾರರಿಗೆ ಲಭ್ಯವಿರುತ್ತದೆ.
4. ಬೆಲೆ ನಿಗದಿ: ChatGPT ಬಳಕೆದಾರರಿಗೆ ಎರಡು ಆವೃತ್ತಿಗಳನ್ನು ನೀಡುತ್ತದೆ. ಇದು ರಿಯಲ್ ಟೈಮ್ ಡೇಟಾ ಅಪ್‌ಡೇಟ್‌ಗಳನ್ನು ಹೊಂದಿರದಿದ್ದರೂ ಉಚಿತವಾಗಿ ಲಭ್ಯವಿದೆ. ಮತ್ತು ತಿಂಗಳಿಗೆ $20 (₹1,664) ಬೆಲೆಯ ಪ್ರೀಮಿಯಂ ಆವೃತ್ತಿಯೂ ಇದ್ದು, ಅದು ರಿಯಲ್ ಟೈಮ್ ಮಾಹಿತಿ ಒದಗಿಸುತ್ತದೆ. ಮತ್ತೊಂದೆಡೆ ಗ್ರೋಕ್ Xನ ಪ್ರೀಮಿಯಂ+ ಬಳಕೆದಾರರಿಗೆ $16 (₹1,331) ಮಾಸಿಕ ವೆಚ್ಚದಲ್ಲಿ ಲಭ್ಯವಿರಲಿದೆ. ಹೋಲಿಸಿದರೆ ಇದು ಕಡಿಮೆ ವೆಚ್ಚದ ಪರಿಣಾಮಕಾರಿ ಆಯ್ಕೆ.
5. ಸಂವಹನ ಶೈಲಿ: ಗ್ರೋಕ್ ಅನ್ನು ಹಾಸ್ಯ ಮತ್ತು ಸ್ವಲ್ಪ ಬಂಡಾಯದ ಧ್ವನಿಯೊಂದಿಗೆ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ವಿನ್ಯಾಸಗೊಳಿಸಲಾಗಿದೆ. ಇದನ್ನು ChatGPTಯ ಸಂವಹನ ಶೈಲಿಯಿಂದ ಪ್ರತ್ಯೇಕ. ಶೈಲಿಯಲ್ಲಿನ ಈ ವ್ಯತ್ಯಾಸವು ವಿಶಿಷ್ಟವಾದ ಬಳಕೆದಾರರ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ: ChatGPT: ಚಾಟ್‌ಜಿಪಿಟಿಯಲ್ಲೀಗ ಇಂಟರ್ನೆಟ್ ಬ್ರೌಸ್ ಮಾಡಬಹುದು! ಹೊಸ ಫೀಚರ್‌ನ ಲಾಭ ಏನು?