Site icon Vistara News

Self-Healing Roads: ರಸ್ತೆಗಳಲ್ಲಿ ಹೊಂಡಗಳೇ ಇರಲ್ಲ! ಬರಲಿವೆ ಸೆಲ್ಫ್‌ ಹೀಲಿಂಗ್‌ ರೋಡ್‌ಗಳು!

Self-Healing Roads

ಭಾರತದಲ್ಲಿ (india) ಕೆಲವು ರಸ್ತೆ (road) ಪ್ರವಾಸ ಸಾಮಾನ್ಯವಾಗಿ ಪ್ರಯಾಸಕರ ಎಂಬುದು ಎಲ್ಲರ ಅಭಿಪ್ರಾಯ. ಇದಕ್ಕೆ ಮುಖ್ಯ ಕಾರಣ ರಸ್ತೆಯಲ್ಲಿರುವ ಹೊಂಡ ಗುಂಡಿಗಳು, ಉಬ್ಬು ತಗ್ಗುಗಳು. ಭಾರತದ ರಸ್ತೆಗಳಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ, (social media) ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಅಲ್ಲದೇ ಅವುಗಳ ಕುರಿತು ಸಾವಿರಾರು ಜೋಕ್‌ಗಳು ಹರಿದಾಡುತ್ತಿರುತ್ತದೆ. ಆದರೆ ಇದಕ್ಕೆ ಈಗ ಪರಿಹಾರ (SSelf-Healing Roads) ಸಿಕ್ಕಿದೆ.


ಈವರೆಗೆ ರಸ್ತೆಯ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಈ ನಿಟ್ಟಿನಲ್ಲಿ ಒಂದು ಭರವಸೆ ಹುಟ್ಟಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಸ್ತೆಗಳನ್ನು ಸರಿಪಡಿಸಲು ಮತ್ತು ಗುಂಡಿಮುಚ್ಚಲು ಗಳಿಂದ ರಸ್ತೆಗೆ ಮುಕ್ತಿ ಕೊಡಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕೆಲಸವನ್ನು ಪ್ರಾರಂಭಿಸಿದೆ. ಇದು ಯಶಸ್ವಿಯಾದರೆ ಭಾರತದ ರಸ್ತೆ ಪ್ರಯಾಣದಲ್ಲಿ ಕ್ರಾಂತಿ ಉಂಟಾಗಲಿದೆ.

ರಸ್ತೆಗಳ ಸ್ವಯಂ ರಕ್ಷಣೆ

ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ಜಾಲದ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದೇಶದಲ್ಲಿ ನಿರಂತರವಾದ ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ಸ್ವಯಂ-ಗುಣಪಡಿಸುವ ಡಾಂಬರು ಅಳವಡಿಸಿಕೊಳ್ಳಲು ಮುಂದಾಗಿದೆ.

ಯಾವ ರೀತಿ?

ರಸ್ತೆಗಳ ಬಾಳಿಕೆಯನ್ನು ಸುಧಾರಿಸಲು ಮತ್ತು ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ಅತ್ಯಧುನಿಕ ತಂತ್ರಜ್ಞಾನ ವಿಧಾನಗಳನ್ನು ಪರಿಗಣಿಸುತ್ತಿದ್ದೇವೆ ಎಂಬುದಾಗಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ವೆಚ್ಚ ಪ್ರಯೋಜನ ವಿಶ್ಲೇಷಣೆ ನಡೆಸಿದ ಬಳಿಕವೇ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು. ಇದು ರಸ್ತೆಗಳ ಬಾಳಿಕೆ ಅವಧಿಯನ್ನು ಹೆಚ್ಚಿಸುತ್ತದೆ ಮತ್ತು ರಸ್ತೆ ನಿರ್ವಹಣೆಯ ಅಗತ್ಯವನ್ನು ಪ್ರಾಯೋಗಿಕವಾಗಿ ನಿವಾರಿಸುತ್ತದೆ. ಸಂಚಾರ ಅಡಚಣೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೇಗೆ?

ರಸ್ತೆಗಳ ಗುಂಡಿ ನಿರ್ವಹಣೆಗೆ ಹಾಕುವ ಸ್ವಯಂ ರಕ್ಷಣೆ ಕಾರ್ಯವನ್ನು ಆಸ್ಫಾಲ್ಟ್ ಮಾಡುತ್ತದೆ. ಇದು ಡಾಂಬರು ರಸ್ತೆಯನ್ನು ರೂಪಿಸುವ ಪ್ರಮುಖ ಸಂಯುಕ್ತಗಳಲ್ಲಿ ಒಂದಾಗಿದೆ. ಇದು ನೈಸರ್ಗಿಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಸ್ಮಾರ್ಟ್ ಆಸ್ಫಾಲ್ಟ್ ಎಂದೂ ಕರೆಯಲಾಗುತ್ತದೆ ಮತ್ತು ಇದು ರಸ್ತೆ ದುರಸ್ತಿ ಜಗತ್ತಿನಲ್ಲಿ ಹೆಚ್ಚು ಖ್ಯಾತಿ ಪಡೆಯುತ್ತಿದೆ.

ಯಾವ ರೀತಿ?

ಸ್ಮಾರ್ಟ್ ಆಸ್ಫಾಲ್ಟ್ ಉಕ್ಕಿನ ಫೈಬರ್ ಗಳು ಮತ್ತು ಎಪಾಕ್ಸಿ ಕ್ಯಾಪ್ಸುಲ್ ಗಳಿಂದ ತುಂಬಿದೆ. ಇದು ಸಣ್ಣ ಬಿರುಕುಗಳನ್ನು ಸರಿಪಡಿಸುತ್ತದೆ ಮತ್ತು ನೀರಿನ ಒಳನುಸುಳುವಿಕೆಯನ್ನು ತಡೆಯುತ್ತದೆ. ಇಂಡಕ್ಷನ್ ಯಂತ್ರವನ್ನು ಬಳಸಿಕೊಂಡು ರಸ್ತೆಯಲ್ಲಿ ಅಳವಡಿಸುವ ಉಕ್ಕಿಗೆ ಶಾಖವನ್ನು ಸೆಳೆಯುವಂತೆ ಮಾಡಿ ಇದನ್ನು ಮಾಡಲಾಗುತ್ತದೆ. ಇದರಿಂದ ಆಸ್ಫಾಲ್ಟ್ ನೊಂದಿಗೆ ಮಾರ್ಟರ್ ಕರಗಲು ಮತ್ತು ಸ್ವತಃ ದುರಸ್ತಿ ಮಾಡಲು ಪ್ರಾರಂಭಿಸುತ್ತದೆ.

ಯಾರು ಕಂಡು ಹಿಡಿದಿರುವುದು?

ಈ ತಂತ್ರಜ್ಞಾನವನ್ನು ನೆದರ್‌ಲ್ಯಾಂಡ್‌ನ ಡೆಲ್ಫ್ಟ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಎರಿಕ್ ಶ್ಲಾಂಗೆನ್ ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ನೆದರ್ಲ್ಯಾಂಡ್ ನ ಸಂಶೋಧಕರು ಕೆಲವು ಸ್ವಯಂ ರಕ್ಷಣೆ ಹೊಂದಿರುವ ರಸ್ತೆಗಳನ್ನು ನಿರ್ಮಿಸಿದ್ದಾರೆ. ಇದು ಬಾಹ್ಯ ಸಹಾಯವಿಲ್ಲದೆ ಬಿರುಕುಗಳನ್ನು ಮುಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಈ ರಸ್ತೆಗಳನ್ನು ತಯಾರಿಸುವುದು ಹೆಚ್ಚು ದುಬಾರಿಯಾಗಿದ್ದರೂ ನಿರ್ವಹಣಾ ವೆಚ್ಚವನ್ನು ತೆಗೆದುಹಾಕುವುದರಿಂದ ದೀರ್ಘಾವಧಿಯಲ್ಲಿ ಅಗ್ಗವಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಈ ತಂತ್ರಜ್ಞಾನ ಬಳಕೆಯಿಂದ ರಸ್ತೆಗಳು ಸುಮಾರು 80 ವರ್ಷಗಳವರೆಗೆ ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಇದು ರಸ್ತೆಗಳನ್ನು ಸುಧಾರಿಸುವುದರ ಜೊತೆಗೆ ಇತರ ಪ್ರಯೋಜನಗಳನ್ನು ಹೊಂದಿದೆ ಎಂದು ಶ್ಲಾಂಗೆನ್ ಹೇಳುತ್ತಾರೆ. ಈ ರಸ್ತೆಗಳಲ್ಲಿ ಆಸ್ಫಾಲ್ಟ್‌ನಲ್ಲಿ ಸ್ಟೀಲ್ ಫೈಬರ್‌ಗಳನ್ನು ಹಾಕುವುದರಿಂದ ರಸ್ತೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಲು ಬಳಸಬಹುದು. ಮುಂದೆ ಇದು ಟ್ರಾಫಿಕ್ ದೀಪಗಳನ್ನು ಉರಿಸಲು ಪ್ರಯೋಗಗಳನ್ನು ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.


ಭಾರತದ ರಸ್ತೆ ಸಮಸ್ಯೆಗೆ ಪರಿಹಾರ

ಹೊಂಡ ಗುಂಡಿಗಳೊಂದಿಗೆ ತುಂಬಿರುವ ಭಾರತದಲ್ಲಿ ಇದನ್ನು ಅಳವಡಿಸಿದರೆ ಸಾಕಷ್ಟು ಲಾಭವಿದೆ. ದೇಶದಾದ್ಯಂತ ಹುಂಡ ಗುಂಡಿಗಳಿಂದ ಕೂಡಿದ ರಸ್ತೆಗಳು ಹಲವಾರು ರಸ್ತೆ ಅಪಘಾತಗಳಿಗೆ ಕಾರಣವಾಗಿವೆ. 2022 ರಲ್ಲಿ ಸರ್ಕಾರಿ ಅಂಕಿಅಂಶಗಳು ರಸ್ತೆಗುಂಡಿಗಳಿಂದಾಗಿ 4,446 ಅಪಘಾತಗಳು ಸಂಭವಿಸಿವೆ, ಇದು 1,856 ಜನರ ಸಾವಿಗೆ ಕಾರಣವಾಯಿತು ಮತ್ತು 3,734 ಜನರಿಗೆ ಗಾಯಗಳಾಗಿವೆ.

2021ರಲ್ಲಿ ಗುಂಡಿಗಳಿಂದಾಗಿ 3,625 ಅಪಘಾತಗಳು ಸಂಭವಿಸಿ, 1,483 ಜನರು ಸಾವನ್ನಪ್ಪಿದರು ಮತ್ತು 3,103 ಜನರು ಗಾಯಗೊಂಡಿದ್ದರು.

ಇದನ್ನೂ ಓದಿ:Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

ನೆದರ್‌ಲ್ಯಾಂಡ್‌ನಲ್ಲಿ ಯಶಸ್ವಿ

ನೆದರ್‌ಲ್ಯಾಂಡ್ಸ್‌ನ 12 ರಸ್ತೆಗಳಿಗೆ ಸ್ವಯಂ ರಕ್ಷಕ ಆಸ್ಫಾಲ್ಟ್ ಅನ್ನು ಅಳವಡಿಸಿ ಪರೀಕ್ಷಿಸಲಾಗಿದೆ. ಇವುಗಳಲ್ಲಿ ಒಂದು ಕಾರ್ಯನಿರ್ವಹಿಸುತ್ತಿದ್ದು, 2010 ರಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಈ ತಂತ್ರಜ್ಞಾನವನ್ನು ಯುನೈಟೆಡ್ ಕಿಂಗ್‌ಡಮ್ ಪರಿಶೀಲನೆ ನಡೆಸುತ್ತಿದೆ. ಭಾರತದಲ್ಲಿ ಇದನ್ನು ಅಳವಡಿಸಿಕೊಂಡರೆ ವಿಶ್ವದಲ್ಲೇ ನಾವು ರಸ್ತೆ ಸ್ವಯಂ ರಕ್ಷಣಾ ತಂತ್ರಜ್ಞಾನ ಅಳವಡಿಸಿಕೊಂಡವರಲ್ಲಿ ಎರಡನೇಯವರಾಗುತ್ತೇವೆ.

Exit mobile version