Site icon Vistara News

ShareChat: ಗೂಗಲ್‌ ಬೆಂಬಲಿತ ಶೇರ್‌ಚಾಟ್‌ ಕಂಪನಿಗೆ 4,064 ಕೋಟಿ ರೂ. ನಷ್ಟ

sharechat

ನ್ಯೂಯಾರ್ಕ್‌: ಗೂಗಲ್ (Google) ಬೆಂಬಲಿತ ಸೋಶಿಯಲ್‌ ಮೀಡಿಯಾ (Social media) ವೇದಿಕೆಯಾದ ಶೇರ್‌ಚಾಟ್ (ShareChat), 2022-23ರ ಹಣಕಾಸು ವರ್ಷದಲ್ಲಿ ಗಣನೀಯ ನಷ್ಟ ಅನುಭವಿಸಿದೆ. ಮಾತ್ರವಲ್ಲ ನಷ್ಟವೂ ಏರುತ್ತ ಹೋಗಿದೆ.

ಈ ವರ್ಷ ಸಂಸ್ಥೆ ನಷ್ಟ ಏರಿಕೆಯನ್ನು ಎದುರಿಸಿದ್ದು, ಹಿಂದಿನ ವರ್ಷದ 2,941.51 ಕೋಟಿ ನಷ್ಟದಿಂದ ಈ ವರ್ಷ ರೂ. 4,064.31 ಕೋಟಿಗೆ ತಲುಪಿದೆ. ಇದರೊಂದಿಗೆ ನಷ್ಟದಲ್ಲಿ 38.17 ಶೇಕಡಾ ಜಿಗಿತವನ್ನು ದಾಖಲಿಸಿದೆ.

ನಷ್ಟದ ಹೊರತಾಗಿಯೂ, ಶೇರ್‌ಚಾಟ್‌ನ ಮೂಲ ಕಂಪನಿಯಾದ ಮೊಹಲ್ಲಾ ಟೆಕ್, ಕಾರ್ಯಾಚರಣೆಯಿಂದ 62 ಪ್ರತಿಶತದಷ್ಟು ಆದಾಯ ಹೆಚ್ಚಳವನ್ನೂ ದಾಖಲಿಸಿದೆ. FY22ರಲ್ಲಿ 332.69 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಈ ವರ್ಷ 540.21 ಕೋಟಿ ರೂಪಾಯಿಗಳಿಗೆ ತಲುಪಿದೆ.

ಒಟ್ಟು ಆದಾಯ ವರ್ಷದಿಂದ ವರ್ಷಕ್ಕೆ 54.90 ಶೇಕಡಾ ಹೆಚ್ಚಳವನ್ನು ಕಂಡಿದೆ, ಹಿಂದಿನ ಆರ್ಥಿಕ ವರ್ಷದಲ್ಲಿ 405.96 ಕೋಟಿ ರೂಪಾಯಿಗಳಿಂದ 628.85 ಕೋಟಿ ರೂಪಾಯಿಗಳಿಗೆ ತಲುಪಿದೆ. ಶೇರ್‌ಚಾಟ್‌ನ ಕಾರ್ಯಾಚರಣೆಗಳ ಆದಾಯವು 59.4 ಶೇಕಡಾ ಬೆಳವಣಿಗೆಯನ್ನು ಪ್ರದರ್ಶಿಸಿದೆ. FY22ರಲ್ಲಿ 347 ಕೋಟಿ ರೂಪಾಯಿಗಳಿಂದ FY23ರಲ್ಲಿ 533 ಕೋಟಿಗೆ ತಲುಪಿದೆ. ಈ ಹಣಕಾಸಿನ ವರ್ಷದಲ್ಲಿ USD 255 ಮಿಲಿಯ ಹಣದ ಕೊರತೆಯ ಹಾಗೂ ಹೆಚ್ಚುತ್ತಿರುವ ವೆಚ್ಚಗಳ ಮಧ್ಯೆ ಮೊಹಲ್ಲಾ ಟೆಕ್ ಆರ್ಥಿಕ ಕಾಳಜಿಯನ್ನು ಎದುರಿಸುತ್ತಿದೆ.

ಫೇಸ್‌ಬುಕ್‌, ಇನ್‌ಸ್ಟಗ್ರಾಮ್‌ ಸ್ಟೋರಿಗಳ- ರೀಲ್ಸ್‌ಗಳ ಆಗಮನ, ವಾಟ್ಸ್ಯಾಪ್‌ ಕಮ್ಯುನಿಟಿ ಸೇರಿದಂತೆ ಹೊಸ ಹೊಸ ಫೀಚರ್‌ಗಳನ್ನು ಬಿಡುತ್ತಿರುವುದರಿಂದ ಶೇರ್‌ಚಾಟ್‌ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿಯನ್ನು ಎದುರಿಸುತ್ತಿದ್ದು, ಹೊಸ ಸವಾಲುಗಳಿಗೆ ಸ್ಪಂದಿಸುವ, ಬಳಕೆದಾರರನ್ನು ಉಳಿಸಿಕೊಳ್ಳುವ ಸಂಕಷ್ಟದಲ್ಲಿದೆ.

ಇದನ್ನೂ ಓದಿ: ಡೀಪ್‌ಫೇ‌ಕ್ ಎಫೆಕ್ಟ್, ಗೂಗಲ್, ಮೆಟಾ ಜತೆ ಕೇಂದ್ರ ಉನ್ನತ ಸಭೆ!

Exit mobile version